ಕೊರೋನಾ ಸಂಪರ್ಕ ಪತ್ತೆಗಾಗಿ ಹೊಸ ಫೀಚರ್ಸ್‌ ಪರಿಚಯಿಸಿದ ಆರೋಗ್ಯಾ ಸೇತು!

|

ದೇಶದಲ್ಲಿ ಕೊರೋನಾ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಮತ್ತು ಕೋವಿಡ್‌-19 ನಿಂದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಆರೋಗಾ ಸೇತು ಅಪ್ಲಿಕೇಶನ್ ಅನ್ನು ಪರಿಚಯಿಸಿತ್ತು. ಜನರ ಟ್ರಾವೆಲ್‌ ಹಿಸ್ಟರಿ ಹಾಗೂ ಬಳಕೆದಾರರ ಇರುವ ಪ್ರದೇಶದಲ್ಲಿ ಕೊರೋನಾ ಸೊಂಕು ಇದೆಯಾ ಇಲ್ಲವೋ ಅನ್ನೊ ಮಾಹಿತಿಯನ್ನ ಈ ಆಪ್‌ ನಿಡುತ್ತಿತ್ತು. ಸದ್ಯ ಕೊರೋನಾ ವೈರಸ್‌ ಸೊಂಕು ಇದೆಯಾ ಇಲ್ಲವೊ ಅನ್ನೊದರ ಬಗ್ಗೆ ಮಾಹಿತಿ ನೀಡುವ ಆರೋಗ್ಯಾ ಸೇತು ಆಪ್‌ ಇದೀಗ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ಅನ್ನು ಪರಿಚಯಿಸಿದೆ.

ಆರೋಗ್ಯಾ ಸೇತು ಆಪ್

ಹೌದು, ಆರೋಗ್ಯಾ ಸೇತು ಆಪ್‌ ಅತ್ಯಂತ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಸದ್ಯ ಇದನ್ನು ಈ ವರ್ಷದ ಏಪ್ರಿಲ್‌ನಲ್ಲಿ ಪ್ರಾರಂಭಿಸಿದಾಗಿನಿಂದ 12 ಕೋಟಿಗೂ ಹೆಚ್ಚು ಜನರು ಡೌನ್‌ಲೋಡ್ ಮಾಡಿದ್ದಾರೆ. ಜನರ ಚಲನೆಯನ್ನು ಪತ್ತೆಹಚ್ಚಲು ಅಪ್ಲಿಕೇಶನ್ ಜಿಪಿಎಸ್ ಮತ್ತು ಬ್ಲೂಟೂತ್ ಅನ್ನು ಬಳಸುತ್ತದೆ. ಅಲ್ಲದೆ ಕೊರೋನಾ ಸೋಂಕು ಇರುವ ವ್ಯಕ್ತಿ ನಿಮ್ಮ ಪಕ್ಕ ಸುಳಿದಾಡಿದ್ದಲ್ಲಿ ಬಳಕೆದಾರರಿಗೆ ಎಚ್ಚರಿಕೆ ನೀಡುತ್ತದೆ. ಇದಲ್ಲದೆ, ಬಳಕೆದಾರರ 500-ಮೀ, 1-ಕಿಮೀ, 2-ಕಿಮೀ, 5 ಕಿಮೀ ಮತ್ತು 10 ಕಿಮೀ ವ್ಯಾಪ್ತಿಯಲ್ಲಿ ಕಳೆದ ತಿಂಗಳೊಳಗೆ COVID-19 ಪಾಸಿಟಿವ್‌ ಇರುವವರ ಸಂಖ್ಯೆಯ ವಿವರಗಳನ್ನು ಸಹ ಇದು ನೀಡುತ್ತದೆ. ಸದ್ಯ ಈ ಅಪ್ಲಿಕೇಶನ್ ಪರಿಚಯಿಸಿರುವ ಹೊಸ ಫೀಚರ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಪ್ಲಿಕೇಶನ್

ಆರೋಗ್ಯಾ ಸೇತು ಅಪ್ಲಿಕೇಶನ್ ಈಗ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ.ಇದು ಬಳಕೆದಾರರು ತಮ್ಮ ಬ್ಲೂಟೂತ್ ಸಾಮೀಪ್ಯದಲ್ಲಿರುವ ಜನರನ್ನು ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ. ಅಲ್ಲದೆ ತಮ್ಮದೇ ಆದ ಅಪಾಯದ ಮಟ್ಟವನ್ನು ನಿರ್ಣಯಿಸಲು ಅನುವು ಮಾಡಿಕೊಡುತ್ತದೆ. ಬಳಕೆದಾರರು ತಮ್ಮ ಅಪ್ಲಿಕೇಶನ್‌ಗಳನ್ನು ನವೀಕರಿಸಿದ ನಂತರ ಈ ಫೀಚರ್ಸ್‌ ಲಭ್ಯವಿರುತ್ತದೆ ಎನ್ನಲಾಗ್ತಿದೆ.

ಆರೋಗ್ಯಾ ಸೇತು

ಇನ್ನು ಆರೋಗ್ಯಾ ಸೇತು ಅಪ್ಲಿಕೇಶನ್ ಅನ್ನು ಆಪ್ಡೇಟ್‌ ಮಾಡಿದ ನಂತರ, ಬಳಕೆದಾರರು ಇತ್ತೀಚಿನ ಕಂಟ್ಯಾಕ್ಟ್‌ಗಳನ್ನು ನೋಡಿ ಆಯ್ಕೆ ಕಾಣುತ್ತದೆ. ಆ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ, ಬಳಕೆದಾರರನ್ನು ಹೊಸ ಡಿಸ್‌ಪ್ಲೇ ಕಡೆಗೆ ಕರೆದೊಯ್ಯಲಾಗುತ್ತದೆ, ಅಲ್ಲಿ ಬಳಕೆದಾರರ ಬ್ಲೂಟೂತ್ ಸಾಮೀಪ್ಯದಲ್ಲಿರುವ ಬಳಕೆದಾರರ ಸಂಖ್ಯೆಯನ್ನು ಅಪ್ಲಿಕೇಶನ್ ಹುಡುಕುತ್ತದೆ. ಬ್ಲೂಟೂತ್ ಸಮೀಪ ಇರುವ ಕಂಟ್ಯಾಕ್ಟ್‌ಗಳ ಸ್ಥಿತಿಯನ್ನು ನಿರ್ಣಯಿಸಲು, ಬಳಕೆದಾರರು ತಮ್ಮ ಡೇಟಾವನ್ನು ಸುರಕ್ಷಿತ ಸರ್ಕಾರಿ ಸರ್ವರ್‌ಗಳಲ್ಲಿ ಅಪ್‌ಲೋಡ್ ಮಾಡಲು ಅನುಮತಿ ನೀಡಬೇಕಾಗುತ್ತದೆ.

ಬ್ಲೂಟೂತ್

ನಂತರ ಬಳಕೆದಾರರಿಗೆ ಬ್ಲೂಟೂತ್ ಸಂಪರ್ಕಗಳ ಸ್ಥಿತಿಯನ್ನು ತೋರಿಸಲಾಗುತ್ತದೆ ಮತ್ತು ಅವುಗಳಲ್ಲಿ ಎಷ್ಟು ಕಡಿಮೆ ಅಪಾಯ ಅಥವಾ ಆರೋಗ್ಯಕರ, ಎಷ್ಟು ಸೋಂಕಿಗೆ ಒಳಗಾಗಿದೆ ಮತ್ತು ಎಷ್ಟು ಮಧ್ಯಮ ಅಪಾಯವಿದೆ ಎಂಬುದನ್ನು ತೋರಿಸುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದ ದಿನಾಂಕ, ಸಮಯದ ಅವಧಿ ಮತ್ತು ಅಂದಾಜು ಸ್ಥಳವನ್ನು ಸಹ ಅಪ್ಲಿಕೇಶನ್ ತೋರಿಸುತ್ತದೆ ಎಂದು ಅಪ್ಲಿಕೇಶನ್ ಘೋಷಿಸಿದೆ. ಈ ಫೀಚರ್ಸ್ ಜೊತೆಗೆ, ಸಂಪರ್ಕದ ಅವಧಿ ಮತ್ತು ಸಮೀಪದ ಸಮಯದಲ್ಲಿ ಇಬ್ಬರು ಬಳಕೆದಾರರು ಅನುಸರಿಸುತ್ತಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಅವಲಂಬಿಸಿ ಬಳಕೆದಾರರು ತಮ್ಮದೇ ಆದ ಅಪಾಯವನ್ನು ನಿರ್ಣಯಿಸಲು ಸಾಧ್ಯವಾಗುತ್ತದೆ.

Most Read Articles
Best Mobiles in India

English summary
Government’s Aarogya Setu app introduces a new feature to ensure safety from COVID-19.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X