ಟ್ರಾಫಿಕ್ ಪೋಲೀಸರ ಕಿರುಕುಳಕ್ಕೆ ಆಪ್ ಮೂಲಕ ಪರಿಹಾರ

|

ಡ್ರೈವಿಂಗ್ ಲೈಸೆನ್ಸ್ ಮತ್ತು ವೆಹಿಕಲ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಸೇರಿದಂತೆ ಇತರೆ ದಾಖಲಾತಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರವನ್ನು ಶಿಫಾರಸು ಮಾಡಿದೆ.

ವಾಹನ ದಾಖಲಾತಿಗಳಿಗೆ ಆನ್ ಲೈನ್ ರೂಪ:

ವಾಹನ ದಾಖಲಾತಿಗಳಿಗೆ ಆನ್ ಲೈನ್ ರೂಪ:

ವಾಹನ ಮಾಲೀಕರು ಇನ್ನು ಮುಂದೆ ತಮ್ಮ ದಾಖಲಾತಿಗಳನ್ನು ಉದಾಹರಣೆಗೆ ಡ್ರೈವಿಂಗ್ ಲೈಸೆನ್ಸ್, ಆರ್ ಸಿ ಮತ್ತು ಇನ್ಸುರೆನ್ಸ್ ಸರ್ಟಿಫಿಕೇಟ್ ಸೇರಿದಂತೆ ಇತರೆ ಎಲ್ಲಾ ವೆಹಿಕಲ್ ಗೆ ಸಂಬಂಧಿಸಿದ ದಾಖಲಾತಿಗಳನ್ನು ಮೊಬೈಲ್ ಆಪ್ ಗಳಾದ ಡಿಜಿಲಾಕರ್(Digilocker) ಮತ್ತು ಎಂಪರಿವಾಹನ್ (mParivahan) ಆಪ್ ಮೂಲಕ ತೋರಿಸುವುದಕ್ಕೆ ಅವಕಾಶವಿರುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಂಗಳವಾರ ರಾಜ್ಯಗಳಿಗೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್(SOP )ಯನ್ನು ನೀಡುತ್ತಿರುವ ಸಂದರ್ಬದಲ್ಲಿ ತಿಳಿಸಿದೆ.

ಆಪ್ ಮೂಲಕ ಆಕ್ಸಿಸ್:

ಆಪ್ ಮೂಲಕ ಆಕ್ಸಿಸ್:

ಟ್ರಾಫಿಕ್ ಮತ್ತು ಟ್ರಾನ್ಸ್ ಪೋರ್ಟ್ ಇಲಾಖೆಗಳಂತ ಎನ್ಫೋರ್ಸ್ಮೆಂಟ್ ಏಜೆನ್ಸಿಗಳು ಈ ವಿವರಗಳನ್ನು ಇಚಲನ್ (eChallan)ಆಪ್ ಮೂಲಕ ಆಕ್ಸಿಸ್ ಮಾಡಬಹುದು. ಇದರಲ್ಲಿ ವೆಹಿಕಲ್ ನ ಆನ್ ಲೈನ್ ವೆರಿಫಿಕೇಷನ್ ಮತ್ತು ಲೈಸನ್ಸ್ ಸ್ಟೇಟಸ್ ನ ಡಾಟಾಗಳು ಇರುತ್ತದೆ.

ಲಂಚಕ್ಕೆ ಕಡಿವಾಣ:

ಲಂಚಕ್ಕೆ ಕಡಿವಾಣ:

ಸರ್ಕಾರಿ ಕೆಲಸಕ್ಕಾಗಿ ಲಂಚ ಪಡೆಯುತ್ತಿರುವ ಏಜೆನ್ಸಿಗಳಿಗೆ ಕಡಿವಾಣ ಹಾಕುವುದು ಇದರ ಪ್ರಮುಖ ಉದ್ದೇಶವಾಗಿದೆ ಅಷ್ಟೇ ಅಲ್ಲ ಡಾಕ್ಯುಮೆಂಟ್ ಗಳನ್ನು ಹಿಡಿದು ಪ್ರಯಾಣಿಸುವುದು ವೆಹಿಕಲ್ ಮಾಲೀಕರಿಗೂ ಕೂಡ ಕಿರಿಕಿರಿಯೇ ಆಗಿರುವುದರಿಂದಾಗಿ ಈ ಪರಿಹಾರವನ್ನು ಕಂಡುಹಿಡಿಯಲಾಗುತ್ತಿದೆ ಅಷ್ಟೇ ಅಲ್ಲ ಚಲನ್ ಪಾವತಿಯಲ್ಲಿ ನಡೆಯುತ್ತಿರುವ ಕಿರುಕುಳವನ್ನು ಅಂದರೆ ಲಂಚ ವಸೂಲಾತಿ ತಪ್ಪಿಸುವುದಕ್ಕೂ ಕೂಡ ಇದು ನೆರವಾಗಲಿದೆ.

ಎಲೆಕ್ಟ್ರಾನಿಕ್ ಫಾರ್ಮೆಟ್ ನಲ್ಲಿ ಡಾಕ್ಯುಮೆಂಟ್ ಗಳು:

ಎಲೆಕ್ಟ್ರಾನಿಕ್ ಫಾರ್ಮೆಟ್ ನಲ್ಲಿ ಡಾಕ್ಯುಮೆಂಟ್ ಗಳು:

ವಾಹನ ಮಾಲೀಕಲು ತಮ್ಮ ವೆಹಿಕಲ್ ಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳು ರಿಜಿಸ್ಟ್ರೇಷನ್ ಸರ್ಟಿಫಿಕೇಟ್, ಇನ್ಸುರೆನ್ಸ್, ಫಿಟ್ ನೆಸ್ ಮತ್ತು ಪರ್ಮಿಟ್, ಡ್ರೈವಿಂಗ್ ಲೈಸೆನ್ಸ್, ಪಲ್ಯೂಷನ್ ಸರ್ಟಿಫಿಕೇಟ್ ಇತ್ಯಾದಿ ಸಂಬಂಧಿತ ದಾಖಲಾತಿಗಳನ್ನು ಎಲೆಕ್ಟ್ರಾನಿಕ್ ಫಾರ್ಮೆಟ್ ನಲ್ಲಿ ನೀಡುವುದಕ್ಕೆ ಇದು ಅವಕಾಶ ನೀಡುತ್ತದೆ.

ವಾಹನ ಮಾಲೀಕರಿಗೆ ಅನುಕೂಲ:

ವಾಹನ ಮಾಲೀಕರಿಗೆ ಅನುಕೂಲ:

ಹಾರ್ಡ್ ಫಾರ್ಮೆಟ್ ಅಥವಾ ಪೇಪರ್ ನ ಬಂಡಲ್ ನ್ನು ಹಿಡಿದು ಇನ್ನು ಮುಂದೆ ವಾಹನ ಮಾಲೀಕರು ಸಾಲುಗಟ್ಟಿ ನಿಲ್ಲುವ ಅಗತ್ಯವಿಲ್ಲ.ಎಲೆಕ್ಟ್ರಾನಿಕ್ ಫಾರ್ಮ್ ಅಂದರೆ ನಿಮಗೆ ಸಂಬಂಧಿಸಿದ ಮಾಹಿತಿಗಳು ಜನರೇಟ್ ಆಗಿರುವುದು, ಸೆಂಟ್ ಆಗಿರುವುದು, ರಿಸೀವ್ ಆಗಿರುವುದು ಅಥವಾ ಸ್ಟೋರ್ ಆಗಿರುವುದು ಮೀಡಿಯಾ, ಮ್ಯಾಗ್ನೆಟಿಕ್, ಆಪ್ಟಿಕಲ್, ಕಂಪ್ಯೂಟರ್ ಮೆಮೊರಿ, ಮೈಕ್ರೋ ಫಿಲ್ಮ್ ಯಾವುದೂ ಕೂಡ ಆಗಿರಬಹುದು.

ಆಪ್ ನಿಂದ ಸಹಾಯ:

ಆಪ್ ನಿಂದ ಸಹಾಯ:

ಸೆಂಟ್ರಲ್ ಮೋಟಾರ್ ವೆಹಿಕಲ್ ರೂಲ್ಸ್ 1989 ರ ನಿಯಮ 139 ರ ಅನ್ವಯ SOP ಯನ್ನು ಅಳವಡಿಸಬಹುದು ಎಂಬುದಾಗಿ ರಾಜ್ಯಗಳು ಹೇಳಿವೆ. ಜನರು ತಮ್ಮ ಡಾಕ್ಯುಮೆಂಟ್ ನ್ನು ಡಿಜಿಲಾಕರ್ ಅಥವಾ ಎಂಪರಿವಾಹನ್ ಆಪ್ ಮೂಲಕ ನೀಡಬಹುದು.

ಡೌನ್ ಲೋಡ್ ಮಾಡಲು ಅನುಕೂಲ:

ಡೌನ್ ಲೋಡ್ ಮಾಡಲು ಅನುಕೂಲ:

ಅಷ್ಟೇ ಅಲ್ಲ ಅವರು ಈ ಆಪ್ ಗಳ ಮೂಲಕ ತಮ್ಮ ಡ್ರೈವಿಂಗ್ ಲೈಸೆನ್ಸ್ ಮತ್ತು ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಗಳನ್ನು ಡೌನ್ ಲೋಡ್ ಮಾಡಿಕೊಂಡು ಮೊಬೈಲ್ ಡಿವೈಸ್ ನಲ್ಲಿ ಸೇವ್ ಕೂಡ ಮಾಡಿ ಇಟ್ಟುಕೊಳ್ಳಬಹುದು.

ಆಫ್ ಲೈನ್ ವೆರಿಫಿಕೇಷನ್:

ಆಫ್ ಲೈನ್ ವೆರಿಫಿಕೇಷನ್:

ಈ ಫ್ಲ್ಯಾಟ್ ಫಾರ್ಮ್ ನಲ್ಲಿ ಎಂಪರಿವಾಹನ್ ಕ್ಯೂಆರ್ ಕೋಡ್ ನ ಆಫ್ ಲೈನ್ ವೆರಿಫಿಕೇಷನ್ ಕೂಡ ಸಾಧ್ಯವಿದೆ. ಈ ಕಾರಣಕ್ಕಾಗಿ ಎನ್ಫೋರ್ಸ್ಮೆಂಟ್ ಏಜೆನ್ಸಿಯವರು ಸಾಮಾನ್ಯ ಆಂಡ್ರಾಯ್ಡ್ ಮೊಬೈಲ್ ಆಪ್ ನ್ನು ಬಳಕೆ ಮಾಡಬಹುದು.

ನೊಂದಣಿ ಪ್ರಕ್ರಿಯೆ ಸುಲಭ:

ನೊಂದಣಿ ಪ್ರಕ್ರಿಯೆ ಸುಲಭ:

ರಾಜ್ಯವು ವಾಹನ್ ಸಾರಥಿಯನ್ನು ಅನುಷ್ಟಾನಗೊಳಿಸಿರಲಿ ಅಥವಾ ಇಲ್ಲದೇ ಇರಲಿ ನ್ಯಾಷನಲ್ ರಿಜಿಸ್ಟರ್ ನಲ್ಲಿ ಈ ಡಾಟಾಗಳನ್ನು ನಿಯಮಿತವಾಗಿ ಅಪ್ ಡೇಟ್ ಮಾಡಲಾಗುತ್ತದೆ. ಎನ್ಫೋರ್ಸ್ಮೆಂಟ್ ಏಜೆನ್ಸಿಗಳು ಕೂಡ ಸಂಪೂರ್ಣ ಡ್ರೈವಿಂಗ್ ಲೈಸನ್ಸ್ ಟ್ಯಾಗಿಂಗ್ ಅಥವಾ ಅಮಾನತುಗೊಳಿಸುವಿಕೆ ಅಥವಾ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ನ್ನು ನೊಂದಣಿ ಇತ್ಯಾದಿ ಎಲ್ಲಾ ಕೆಲಸಗಳನ್ನು ಸುಲಭದಲ್ಲಿ ನಡೆಸಬಹುದು.

ಮೋಸಕ್ಕೆ ಆನ್ ಲೈನ್ ವ್ಯವಹಾರದ ಮೂಲಕ ಕಡಿವಾಣ:

ಮೋಸಕ್ಕೆ ಆನ್ ಲೈನ್ ವ್ಯವಹಾರದ ಮೂಲಕ ಕಡಿವಾಣ:

ದೈಹಿಕವಾಗಿ ಡಾಕ್ಯುಮೆಂಟ್ ಗಳನ್ನು ಹಿಡಿದು ಓಡಾಡುವುದು ಮತ್ತು ಆ ಪತ್ರಗಳನ್ನು ಇಡುವುದಕ್ಕೆ ವಿಶೇಷ ಆಫೀಸ್ ಗಳ ಅಗತ್ಯತೆ ಇದರಲ್ಲಿ ಇರುವುದಿಲ್ಲ.ಅಷ್ಟೇ ಅಲ್ಲ ನಾಗರೀಕರ ಬಳಿ ಸುಳ್ಳುಸುಳ್ಳು ಹಣ ವಸೂಲು ಮಾಡುವಿಕೆಯೂ ಕೂಡ ತಪ್ಪುತ್ತದೆ. ಎಲ್ಲವೂ ಆನ್ ಲೈನ್ ಆಗುವುದರಿಂದ ಮೋಸಗೊಳಿಸುವುದಕ್ಕೆ ಸಾಧ್ಯವಾಗುವುದಿಲ್ಲ.

ಪಾರದರ್ಶಕ ಮತ್ತು ವೇಗವಾಗಿರುತ್ತದೆ:

ಪಾರದರ್ಶಕ ಮತ್ತು ವೇಗವಾಗಿರುತ್ತದೆ:

ಇದು ವೇಗವಾಗಿರುತ್ತದೆ, ಪಾರದರ್ಶಕವಾಗಿರುತ್ತದೆ ಮತ್ತು ಟ್ರಾಫಿಕ್ ಎನ್ಫೋರ್ಸ್ ಮೆಂಟ್ ಅಧಿಕಾರಿಗಳು ಮತ್ತು ನಾಗರೀಕರ ನಡುವೆ ನೈಜ ಸ್ಥಿತಿಯ ಅಪರಾಧ ಪ್ರಕ್ರಿಯೆಯನ್ನು ಕಾನೂನು ರೀತಿಯಲ್ಲಿ ಪರಿಹರಿಸುವುದಕ್ಕೆ ನೆರವಾಗುತ್ತದೆ. ಕೇಂದ್ರ ಮೋಟಾರು ವೆಹಿಕಲ್ ನಿಯಮ 1989 ನ್ನು ತಿದ್ದುಪಡಿ ಮಾಡುವ ಅಧಿಸೂಚನೆಯನ್ನು ಕಳೆದ ತಿಂಗಳು ನೀಡಲಾಯಿತು.

Best Mobiles in India

Read more about:
English summary
Accept vehicle documents, driving licence in electronic format: Centre asks states

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X