ಕಂಪ್ಯೂಟರ್ ಲಾಗಿನ್ ಮಾಡಿ ಈ ಐಓಎಸ್ ಅಪ್ಲಿಕೇಶನ್‌ನಿಂದ

By Shwetha
|

ಆಂಡ್ರಾಯ್ಡ್ ಡಿವೈಸ್‌ಗಳ ನಂತರ, ಗೂಗಲ್ ಇದೀಗ ಐಓಎಸ್ ಡಿವೈಸ್‌ಗಳಿಗಾಗಿ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿದ್ದು, ನಿಮ್ಮ ಐಫೋನ್ ಅಥವಾ ಐಪ್ಯಾಡ್‌ನಿಂದ ನಿಮ್ಮ ಕಂಪ್ಯೂಟರ್ ಅನ್ನು ಲಾಗಿನ್ ಮಾಡಬಹುದಾಗಿದೆ.

ಕ್ರೋಮ್ ರಿಮೋಟ್ ಡೆಸ್ಕ್‌ಟಾಪ್ ಎಂಬ ಹೆಸರಿನ ಈ ಅಪ್ಲಿಕೇಶನ್, ಐಓಎಸ್ ಆವೃತ್ತಿಯಾಗಿದ್ದು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಅನ್ನು ಬಳಸಿಕೊಂಡು ನಿಮ್ಮ ಕಂಪ್ಯೂಟರ್ ಅನ್ನು ನಿಯಂತ್ರಿಸಬಹುದಾಗಿದೆ.

ಇದನ್ನೂ ಓದಿ: ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ಮನೆ ಅಥವಾ ಕಚೇರಿಯಿಂದ ನೀವು ಹೊರಗಿದ್ದಾಗ ಕೆಲವೊಂದು ಮುಖ್ಯ ಮಾಹಿತಿಗಳು ಬೇಕೆಂಬ ಸಂದರ್ಭದಲ್ಲಿ ನಿಮ್ಮ ಡೆಸ್ಕ್‌ಟಾಪ್‌ಗೆ ತಾತ್ಕಾಲಿಕ ಪ್ರವೇಶವನ್ನು ನಿಮ್ಮ ಮನೆಯ ಸದಸ್ಯರಿಗೆ ಇದು ಒದಗಿಸಿ ನಿಮಗೆ ಮುಖ್ಯ ಮಾಹಿತಿಯನ್ನು ತಲುಪಿಸುತ್ತದೆ.

ಕಂಪ್ಯೂಟರ್ ಲಾಗಿನ್ ಮಾಡಿ ಈ ಐಓಎಸ್ ಅಪ್ಲಿಕೇಶನ್‌ನಿಂದ

ನಿಮ್ಮ ಕಂಪ್ಯೂಟರ್‌ನಲ್ಲಿ, ಕ್ರೋಮ್ ವೆಬ್‌ ಸ್ಟೋರ್‌ನಿಂದ ಕ್ರೋಮ್ ರಿಮೋಟ್ ಡೆಸ್ಕ್‌ಟಾಪ್ ಅಪ್ಲಿಕೇಶನ್ ಬಳಸಿಕೊಂಡು ರಿಮೋಟ್ ಏಕ್ಸಸ್ ಅನ್ನು ಹೊಂದಿಸಿ. ನಿಮ್ಮ ಐಓಎಸ್ ಡಿವೈಸ್‌ನಲ್ಲಿ, ಅಪ್ಲಿಕೇಶನ್ ತೆರೆಯಿರಿ ಮತ್ತು ಸಂಪರ್ಕ ಪಡೆದುಕೊಳ್ಳಲು ಆನ್‌ಲೈನ್ ಕಂಪ್ಯೂಟರ್‌ಗಳನ್ನು ಸ್ಪರ್ಶಿಸಿ.

ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ಗೆ ಇನ್‌ಪುಟ್ ಮಾಡಿರುವ ಕೋಡ್ ಅನ್ನು ರಚಿಸುವ ಮೂಲಕ ಅಪ್ಲಿಕೇಶನ್ ಅಧಿಕಾರಿಗಳು ಸಂಪರ್ಕವನ್ನು ಒದಗಿಸುತ್ತಾರೆ.

ಅಪ್ಲಿಕೇಶನ್ ಆಪಲ್‌ನ ಅಪ್ಲಿಕೇಶನ್ ಸ್ಟೋರ್‌ನಲ್ಲಿ ಲಭ್ಯವಿರುತ್ತದೆ.

Best Mobiles in India

English summary
After Android devices, Google has now launched an app for iOS devices that can log into your computer from your iPhone or iPad.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X