Subscribe to Gizbot

ಸ್ಮಾರ್ಟ್‌ಫೋನ್ ಬ್ಯಾಟರಿಯ ಎಲ್ಲಾ ಸಮಸ್ಯೆಗಳಿಗೆ ಇದೊಂದೇ ಪರಿಹಾರ!..ಎಲ್ಲರೂ ತಿಳಿಯಲೇಬೇಕು!!

Written By:

ಸ್ಮಾರ್ಟ್‌ಫೋನ್ ಬ್ಯಾಟರಿ ಉಳಿಸಲು ಆಪ್ ಹಾಕಿಕೊಳ್ಳಿ ಎಂದು ಯಾವಾಗಲೂ ಟೆಕ್ ತಜ್ಞರು ಸಲಹೆ ನೀಡುವುದಿಲ್ಲ.! ಏಕೆಂದರೆ, ಬ್ಯಾಟರಿ ಕಾಪಾಡುತ್ತೇವೆ ಎಂದು ಮೊಬೈಲ್ ಸೇರುವ ಇಂತಹ ಆಪ್‌ಗಳೇ ಬ್ಯಾಟರಿಯನ್ನು ತಿನ್ನುತ್ತವೆ ಎನ್ನುವುದು ಅವರ ಅಭಿಪ್ರಾಯ.! ಕೇವಲ ಅಭಿಪ್ರಾಯವೇನು ಇದು ಎಲ್ಲಾ ಟೆಕ್ ತಜ್ಞರ ಒಮ್ಮತ ಎನ್ನಬಹುದು.!!

ಸ್ಮಾರ್ಟ್‌ಫೋನ್ ಬ್ಯಾಟರಿಯ ಎಲ್ಲಾ ಸಮಸ್ಯೆಗಳಿಗೆ ಇದೊಂದೇ ಪರಿಹಾರ!!.

ಆದರೆ, ಬ್ಯಾಟರಿಯ ಸುರಕ್ಷತೆಯನ್ನು ಕಾಪಾಡಲು ಗ್ರಾಹಕನಿಗೆ ಬಹಳ ವಿಶಿಷ್ಟ ಸೇವೆ ನೀಡುತ್ತಿರುವ ಆಪ್‌ ಒಂದು ಟೆಕ್ ತಜ್ಞರನ್ನು ಸಹ ಸೆಳೆದಿದೆ.! ಒಂದೇ ಆಪ್‌ನಲ್ಲಿ ಬ್ಯಾಟರಿಯ ಹಲವು ಸಮಸ್ಯೆಗಳನ್ನು ದೂರವಿರಿಸಲು ಅತ್ಯದ್ಬುತ ಆಪ್ ಒಂದು ಸಹಾಯಕವಾಗಿದೆ.!! ಹಾಗಾದರೆ, ಟೆಕ್ ತಜ್ಞರನ್ನು ಸೆಳೆದಿರುವ ಆಪ್ ಯಾವುದು? ಆ ಆಪ್‌ನ ವಿಶೇಷತೆಗಳೇನು ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
'ಅಕ್ಯು ಬ್ಯಾಟರಿ' ಅಪ್ಲಿಕೇಶನ್!!

'ಅಕ್ಯು ಬ್ಯಾಟರಿ' ಅಪ್ಲಿಕೇಶನ್!!

ಮೊದಲೇ ಹೇಳಿದಂತೆ ಬ್ಯಾಟರಿಯ ಸುರಕ್ಷತೆಯನ್ನು ಕಾಪಾಡಲು ಗ್ರಾಹಕನಿಗೆ ಬಹಳ ವಿಶಿಷ್ಟ ಸೇವೆ ನೀಡುತ್ತಿರುವ ಆಪ್‌ ಈ 'ಅಕ್ಯು ಬ್ಯಾಟರಿ' ಅಪ್ಲಿಕೇಶನ್.!! ಇದು ಒಂದು ಅನನ್ಯ ವಿದ್ಯುತ್ ನಿರ್ವಹಣೆ ಆಪ್ ಆಗಿದ್ದು, ಬ್ಯಾಟರಿಯನ್ನು ಕಾಪಾಡುವ, ಬ್ಯಾಟರಿಯನ್ನು ರಕ್ಷಿಸುವ ಜವಬ್ದಾರಿಯನ್ನು ಹೊತ್ತಿಕೊಳ್ಳಿದೆ.!!

ಬ್ಯಾಟರಿ ಬಳಕೆ ಬಗ್ಗೆ ಪೂರ್ಣ ಮಾಹಿತಿ!!

ಬ್ಯಾಟರಿ ಬಳಕೆ ಬಗ್ಗೆ ಪೂರ್ಣ ಮಾಹಿತಿ!!

ನಾವು ಬ್ಯಾಟರಿಯನ್ನು ಎಷ್ಟು ಬಾರಿ ಚಾರ್ಜಿಂಗ್ ಮಾಡಿದ್ದೇವೆ. ಪ್ರತಿ ಬಾರಿ ಎಷ್ಟು ಕಾಲ ಚಾರ್ಜಿಂಗ್ ಮಾಡಿದೆವು ಮತ್ತು ಬ್ಯಾಟರಿ ಎಷ್ಟು ಚಾರ್ಜ್ ಮಾಡಬೇಕು ಎಂಬೆಲ್ಲಾ ಮಾಹಿತಿಯನ್ನು ಈ ಆಪ್‌ನಲ್ಲಿನ ಹಿಸ್ಟರಿ ಸೆಕ್ಷನ್ ತಿಳಿಸುತ್ತದೆ. ಇದರಿಂದ ನಿಮ್ಮ ಫೋನ್ ಬ್ಯಾಟರಿಯ ಪೂರ್ಣ ಮಾಹಿತಿ ನಿಮಗೆ ತಿಳಿಯುತ್ತದೆ.!!

ಹೈ-ವೋಲ್ಟೇಜ್ ಚಾರ್ಜ್ ಎಚ್ಚರಿಕೆ.!!

ಹೈ-ವೋಲ್ಟೇಜ್ ಚಾರ್ಜ್ ಎಚ್ಚರಿಕೆ.!!

ಹೈ-ವೋಲ್ಟೇಜ್ ಚಾರ್ಜ್ ಬ್ಯಾಟರಿಗೆ ಅಪಾಯವನ್ನು ತರುತ್ತದೆ. ಕಳಪೆ ಚಾರ್ಜರ್‌ಗಳಿಂದ ಇಂತಹ ತೊಂದರೆ ಎದುರಾಗುವುದರಿಂದ ನಾವು ಬಳಸುತ್ತಿರುವ ಚಾರ್ಜರ್ ನಮ್ಮ ಬ್ಯಾಟರಿಗೆ ಒಳ್ಳೆಯದೇ ಅಥವಾ ಕೆಟ್ಟದ್ದೋ ಎಂಬುದನ್ನು ನಿರ್ಧರಿಸಲು ಸಹ ಈ ಅಪ್ ಸಹಾಯಕವಾಗಿದೆ.!!

ಬ್ಯಾಟರಿ ವರ್ತನೆಯನ್ನು ತಿಳಿಸುತ್ತದೆ.!!

ಬ್ಯಾಟರಿ ವರ್ತನೆಯನ್ನು ತಿಳಿಸುತ್ತದೆ.!!

ಬ್ಯಾಟರಿಯು ಚಾರ್ಜ್ ಆಗುತ್ತಿದ್ದಾಗ ಹೇಗೆ ವರ್ತಿಸುತ್ತದೆ? ಬಳಕೆಯಲ್ಲಿದ್ದಾಗ ಹೇಗೆ ವರ್ತಿಸುತ್ತದೆ? ಚಾರ್ಜಿಂಗ್ ಸರಾಸರಿ ವೇಗ, ತಾಪಮಾನ, ಪೂರ್ಣ ಬ್ಯಾಟರಿ ಚಾರ್ಜ್‌ಗೆ ಉಳಿದಿರುವ ಸಮಯ ಎಲ್ಲಾ ಮಾಹಿತಿಗಳನ್ನು ಈ ಆಪ್ ಒದಗಿಸುತ್ತದೆ.! ಈ ರೀತಿಯ ಬ್ಯಾಟರಿ ವರ್ತನೆಯನ್ನು ನಿಖರವಾಗಿ ತಿಳಿಸುವ ಮೊದಲು ಆಪ್ ಇದಾಗಿದೆ.!!

ಡೀಪ್ ಸ್ಲೀಪಿಂಗ್ ಮಾಹಿತಿ ಸಿಗಲಿದೆ.!!

ಡೀಪ್ ಸ್ಲೀಪಿಂಗ್ ಮಾಹಿತಿ ಸಿಗಲಿದೆ.!!

ಸ್ಮಾರ್ಟ್‌ಫೋನ್ ಸ್ಕ್ರೀನ್ ಆಫ್ ಆಗಿದ್ದರೂ ಸಹ ಫೋನ್‌ ಸಾಫ್ಟ್ ವೇರ್ ಕಾರ್ಯನಿರ್ವಹಿಸುತ್ತಿರುತ್ತದೆ ಎಂಬುದು ನಿಮಗೆಲ್ಲಾ ತಿಳಿದೇ ಇರುತ್ತದೆ. ಇದನ್ನು ಡೀಪ್ ಸ್ಲೀಪಿಂಗ್ ಎನ್ನುತ್ತಾರೆ. ಇಂತಹ ವಿವಿಧ ಸ್ಥಿತಿಗಳಲ್ಲಿಯೂ ಕೂಡ ಬ್ಯಾಟರಿ ಬಳಕೆಯು ಹೇಗೆ ಎಂಬುದನ್ನು ಈ ಆಪ್ ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ.!!

How to Sharing a Mobile Data Connection with Your PC (KANNADA)
ಈಗಲೇ ಡೌನ್‌ಲೋಡ್ ಮಾಡಿ.!!

ಈಗಲೇ ಡೌನ್‌ಲೋಡ್ ಮಾಡಿ.!!

ಶೇ. 80%ಕ್ಕಿಂತ ಹೆಚ್ಚು ಬ್ಯಾಟರಿ ಚಾರ್ಜ್ ಮಾಡಿದಾಗ ನೋಟಿಫಿಕೇಷನ್‌ಗಳ ಮೂಲಕ ಗ್ರಾಹಕರನ್ನು ಎಚ್ಚರಿಸುವ ಹಾಗೂ ಬ್ಯಾಟರಿ ಜೀವನ ಚಕ್ರದ ಬಗೆಗಿನ ಇತರ ಎಲ್ಲಾ ಮಾಹಿತಿಗಳನ್ನು ನೀಡುವ ಈ ಆಪ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ವರವಾಗಿದ್ದು, ಗೂಗಲ್ ಪ್ಲೇ ಸ್ಟೋರ್‌ಗೆ ತೆರಳಿ ಅಕ್ಯು ಬ್ಯಾಟರಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.!!

ಓದಿರಿ:ಸ್ಮಾರ್ಟ್‌ಫೋನ್ ಮೂಲಕ ಎಲ್ಲಿಯೋ ಇರುವ ಕಂಪ್ಯೂಟರ್ ಬಳಸುವುದು ಹೇಗೆ?..ಆಶ್ಚರ್ಯವೇ!?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Accu​Battery is a battery life monitor on steroids, helps you get longer life out of your battery.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot