Subscribe to Gizbot

ವಾವ್... ಏಸರ್ ಐಕೋನಿಯಾ ವೈಫೈ 4 ರೂ. 29,999

Written By:

ವಿಂಡೋಸ್ ಆಧಾರಿತ ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು ಇದೀಗ ಸಂಖ್ಯೆಯಲ್ಲಿ ಕಡಿಮೆಯಾಗಿದ್ದು ವಿಂಡೋಸ್ 8.1 ಟ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಯಲ್ಲಿ ಖರೀದಿಸುವುದು ಈಗ ತುಸು ಕಷ್ಟವಾಗಿದೆ. ವಿಂಡೋಸ್ 8 ಆಧಾರಿತ ಟ್ಯಾಬ್ಲೆಟ್‌ನಲ್ಲಿ ಏಸರ್ ಮಾತ್ರವೇ ಹೆಸರಾಗಿರುವುದಿಲ್ಲ. ಡೆಲ್ ಎಚ್‌ಪಿ, ಏಸರ್ ಮುಂತಾದ ಕಂಪೆನಿಗಳೂ ಕೂಡಾ ಇಂತಹ ಟ್ಯಾಬ್ಲಟ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿವೆ.

ಏಸರ್‌ನ 8.1 ಟ್ಯಾಬ್ಲೆಟ್ ಐಕೋನಿಯಾ ವೈಫೈ 4 3ಜಿ, ರೂ 29,999 ಕ್ಕೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಭಾರತದಲ್ಲದೆ ಇತರ ದೇಶಗಳಲ್ಲೂ ಈಗಾಗಲೇ ಸ್ಥಾಪನೆಯಾಗಿರುವ 8.1 ಟ್ಯಾಬ್ಲೆಟ್ ಐಕೋನಿಯಾ ವೈಫೈ 4 3ಜಿ, ಉತ್ತಮ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

ವಾವ್... ಏಸರ್ ಐಕೋನಿಯಾ ವೈಫೈ 4 ರೂ. 29,999

ಇದರ ಮುಖ್ಯ ವೈಶಿಷ್ಟ್ಯಗಳು:
ಏಸರ್ 8.1 ಟ್ಯಾಬ್ಲೆಟ್ ಐಕೋನಿಯಾ ವೈಫೈ 4 3ಜಿ
8 ಇಂಚಿನ 720 ಪಿ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ
1.8 GHz ಕ್ವಾಡ್ - ಕೋರ್ ಇಂಟೆಲ್ ಅಟೋಮ್ ಬೇ ಟ್ರೈಯಲ್ ಪ್ರೊಸೆಸರ್
ಎಚ್‌ಡಿ ಗ್ರಾಫಿಕ್ಸ್‌ನೊಂದಿಗೆ 2 ಜಿಬಿ ರ್‌ಯಾಮ್
64ಜಿಬಿ ಆಂತರಿಕ ಮೆಮೊರಿ, ಮೈಕ್ರೋ ಕಾರ್ಡ್ ಸ್ಲಾಟ್ ಬಳಸಿ ಇದನ್ನು 128ಜಿಬಿವರೆಗೆ ವಿಸ್ತರಿಸಬಹುದಾಗಿದೆ.
ವಿಂಡೋಸ್ 8.1 ನಲ್ಲಿ ಡಿವೈಸ್ ರನ್ ಆಗುತ್ತದೆ.
ಟ್ಯಾಬ್ಲೆಟ್ 5- ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದ್ದು ಸ್ವಯಂ ಫೋಕಸ್ ಮತ್ತು ಎಚ್‌ಡಿ ಸ್ವರೂಪದಲ್ಲಿ ವೀಡಿಯೋವನ್ನು ದಾಖಲಿಸುವ ಸಾಮರ್ಥ್ಯವನ್ನು ಹೊಂದಿದೆ.
ದೀರ್ಘ ವೀಡಿಯೋ ಚಾಟ್‌ಗಾಗಿ 2MP ಫ್ರಂಟ್ ಫೇಸಿಂಗ್ ವೀಡಿಯೋ ಕ್ಯಾಮೆರಾವನ್ನು ಕೂಡ ಹೊಂದಿದೆ.

ಡಿವೈಸ್ 4960mAh ಬ್ಯಾಟರಿ ಅಳವಡಿತವಾಗಿದ್ದು 10 ಗಂಟೆಗಳ ಬ್ರೌಸಿಂಗ್ ಶಕ್ತಿಯಿರುವ ಸಿಂಗಲ್ ಚಾರ್ಜ್ ಇದಕ್ಕಿದೆ.
3ಜಿ, ವೈ-ಫೈ, ಬ್ಲೂಟೂತ್ 4.0, ಮೈಕ್ರೋ HDMI, ಮತ್ತು microUSB ಇದರಲ್ಲಿದೆ.
ಏಸರ್ ಈಗಾಗಲೇ ಫೇಸ್‌ಬುಕ್‌ನಲ್ಲಿ ತನ್ನ ಗ್ರಾಹಕರಿಗಾಗಿ ಇದನ್ನು ಪೂರ್ವ ನಿಗದಿ ಪಡಿಸುವ ವ್ಯವಸ್ಥೆಯನ್ನು ಮಾಡಿದ್ದು ಇದರಿಂದ ಬಳಕೆದಾರರು ಆನ್‌ಲೈನ್‌ನಲ್ಲಿ ಬುಕ್ ಮಾಡಿ ಕೊಳ್ಳಬಹುದಾಗಿದೆ. ಇದರ ವಿಶೇಷ ಕೊಡುಗೆಯಾಗಿದೆ ರೂ 2,999 ಇದರೊಂದಿಗೆ ಕ್ರಂಚ್ ಕವರ್ ಅನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot