Home
ಸುದ್ದಿಜಾಲ

ಏಸರ್ ಆಸ್ಪೈರ್ 7 ಗೇಮಿಂಗ್ ಲ್ಯಾಪ್‌ಟಾಪ್ ಸರಣಿ ಬಿಡುಗಡೆ!

ಟೆಕ್‌ ವಲಯದಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಮಾತ್ರವಲ್ಲ, ಲ್ಯಾಪ್‌ಟಾಪ್‌ ವಲಯವೂ ಕೂಡ ಸಾಕಷ್ಟು ಪ್ರಾಬಲ್ಯವನ್ನ ಸಾದಿಸಿದೆ. ಈಗಾಗಲೇ ಹಲವು ಕಂಪೆನಿಗಳ ಲ್ಯಾಪ್‌ಟಾಪ್‌ಗಳು ಲಭ್ಯವಿವೆ. ಸಾಕಷ್ಟು ವೈವಿಧ್ಯಮಯವಾದ ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಗ್ರಾಹಕರು ತಮ್ಮ ನೆಚ್ಚಿನ ಲ್ಯಾಪ್‌ಟಾಪ್‌ ಮಾದರಿಯಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ಕೇವಲ ವೈಯುಕ್ತಿಕ ಬಳಕೆಯ ಲ್ಯಾಪ್‌ಟಾಪ್‌ಗಳು ಮಾತ್ರವಲ್ಲ ಗೇಮಿಂಗ್‌ ಲ್ಯಾಪ್‌ಟಾಪ್‌ಗಳು ಕೂಡ ಈಗಾಗಲೇ ಪ್ರಸಿದ್ದಿಯನ್ನ ಪಡೆದುಕೊಂಡಿವೆ. ಇವುಗಳಲ್ಲಿ ಏಸರ್‌ ಕಂಪೆನಿಯ ಗೇಮಿಂಗ್‌ ಲ್ಯಾಪ್‌ಟಾಪ್‌ಗಳು ಕೂಡ ಜನಪ್ರಿಯತೆಯನ್ನ ಪಡೆದುಕೊಂಡಿವೆ.

ಲ್ಯಾಪ್‌ಟಾಪ್‌

ಹೌದು, ಗೇಮಿಂಗ್‌ ಲ್ಯಾಪ್‌ಟಾಪ್‌ಗಳ ಮಾರುಕಟ್ಟೆಯಲ್ಲಿ ಏಸರ್‌ ಕಂಪೆನಿ ತನ್ನದೇ ಆದ ಪ್ರಾಬಲ್ಯವನ್ನ ಹೊಂದಿದೆ. ಈಗಾಗಲೇ ತನ್ನ ಜನಪ್ರಿಯ ಗೇಮಿಂಗ್‌ ಲ್ಯಾಪ್‌ಟಾಪ್‌ಗಳ ಸರಣಿಯನ್ನ ಪರಿಚಯಿಸಿರುವ ಏಸರ್‌ ಇದೀಗ ತನ್ನ ಏಸರ್‌ ಆಸ್ಪೈರ್ 7 ಸರಣಿಯ ಗೇಮಿಂಗ್ ಲೈನ್ ಅನ್ನು ಪರಿಚಯಿಸಿದೆ. ಸದ್ಯ ಈ ಹೊಸ ಸರಣಿಯ ಲ್ಯಾಪ್‌ಟಾಪ್‌ಗಳನ್ನ ಬಾರತದ ಮಾರುಕಟ್ಟೆಗೆ ಪರಿಚಯಿಸಿದ್ದು, ಇದು ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ವಿನ್ಯಾಸ ಹಾಗೂ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏಸರ್‌ ಆಸ್ಪೈರ್‌7 ಗೇಮಿಂಗ್‌ ಲ್ಯಾಪ್‌ಟಾಪ್

ಏಸರ್‌ ಕಂಪೆನಿಯ ಏಸರ್‌ ಆಸ್ಪೈರ್‌7 ಗೇಮಿಂಗ್‌ ಲ್ಯಾಪ್‌ಟಾಪ್‌ 15.6 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದ್ದು, 81.61% ಸ್ಕ್ರೀನ್-ಟು-ಬಾಡಿ ಅನುಪಾತವನ್ನ ಹೊಂದಿದೆ. ಇನ್ನು ಏಸರ್ ಆಸ್ಪೈರ್ 7 ಸರಣಿಯು ಇಂಟೆಲ್ ಅಥವಾ AAMW ಸಿಪಿಯುಗಳನ್ನು ಹೊಂದಿದ್ದು, ಎನ್ವಿಡಿಯಾದ ಜಿಟಿಎಕ್ಸ್ ಸರಣಿ ಜಿಪಿಯುಗಳನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ನ ಸಂರಚನೆಯ ಆಧಾರದ ಮೇಲೆ ಇದು ಬದಲಾಗಬಹುದಾದರೂ, ಇದು ಸಿಂಗಲ್‌ ಚಾರ್ಜಿಂಗ್‌ನಲ್ಲಿ 8.5-ಗಂಟೆಗಳ ರನ್‌ಟೈಂ ಅನ್ನು ಬರಲಿದೆ ಎನ್ನುವ ಭರವಸೆಯನ್ನ ಏಸರ್‌ ಕಂಪೆನಿ ನೀಡಿದೆ.

ಆಸ್ಪೈರ್ 7

ಇನ್ನು ಏಸರ್‌ ಕಂಪೆನಿಯ ಆಸ್ಪೈರ್ ಶ್ರೇಣಿಯಲ್ಲಿನ ಇತರ ಲ್ಯಾಪ್‌ಟಾಪ್‌ಗಳಂತೆಯೇ, ಆಸ್ಪೈರ್ 7 ಕೂಡ ಎಲ್‌ಇಡಿ ಲೈಟ್‌ಗಳು ಉಬ್ಬು ಮಾದರಿಗಳನ್ನ ಹೊಂದಿದೆ. ಅಲ್ಲದೆ ಹೆಚ್ಚುವರಿ ಅಲಂಕಾರಗಳಿಲ್ಲದೆ ಕಡಿಮೆ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ನಲ್ಲಿ ಇಂಟೆಲ್ 9 ನೇ ತಲೆಮಾರಿನ ಕೋರ್ ಸಿಪಿಯುಗಳನ್ನು ನಿಡಲಾಗಿದೆ. ಆದರೆ AAMW ಆವೃತ್ತಿಯ ರೈಜೆನ್ 3000 ಸರಣಿ ಸಿಪಿಯುಗಳೊಂದಿಗೆ ಸಹ ಅಳವಡಿಸಲಾಗುವುದು ಎಂದು ಹೇಳಲಾಗಿದೆ. ಇದಲ್ಲದೆ ಆಸ್ಪೈರ್ 7 ಅನ್ನು 32GB RAM ಮತ್ತು 1TB M.2 PCIe SSD ಸಂಗ್ರಹ ಸಾಮರ್ಥ್ಯವನ್ನ ಹೊಂದಿದೆ. ಅಲ್ಲದೆ ಈ ಲ್ಯಾಪ್‌ಟಾಪ್‌ಗಳು ವೈ-ಫೈ 6, ಯುಎಸ್‌ಬಿ ಟೈಪ್-ಸಿ, ಮತ್ತು ಏಸರ್‌ನ ಟ್ರೂಹಾರ್ಮನಿ ಆಡಿಯೊ ತಂತ್ರಜ್ಞಾನವನ್ನು ಸಹ ಹೊಂದಿವೆ ಎಂದು ಹೇಳಲಾಗಿದೆ.

ಬೆಲೆ

ಏಸರ್ ಆಸ್ಪೈರ್ 7 ಭಾರತದಲ್ಲಿ ಬಿಡುಗಡೆ ಆಗಿದ್ದು, ಇದರ ಬೆಲೆ ಫ್ಲಿಪ್‌ಕಾರ್ಟ್‌ನಲ್ಲಿ 54,990 ರೂ.ಆಗಿದೆ. ಸದ್ಯ ಶೀಘ್ರದಲ್ಲೇ ಏಸರ್ ಇಂಡಿಯಾದ ಆನ್‌ಲೈನ್ ತಾಣದಲ್ಲಿಯೂ ಈ ಲ್ಯಾಪ್‌ಟಾಪ್‌ಗಳು ಖರೀದಿಗೆ ಲಬ್ಯವಾಗಲಿದೆ. ಇನ್ನು ಈ ಲ್ಯಾಪ್‌ಟಾಪ್‌ ಬ್ಲ್ಯಾಕ್‌ ಕಲರ್‌ ಆಯ್ಕೆಯಲ್ಲಿ ಮಾತ್ರ ಲಭ್ಯವಿರುತ್ತದೆ.

Best Mobiles in India

English summary
Acer has expanded its gaming portfolio in India and is introducing a new value-series gaming line with the Aspire 7.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+