ದೀಪಾವಳಿ ಸಂಭ್ರಮ: ಅ.31 ರವರೆಗೆ Acer ಉತ್ಪನ್ನಗಳ ಮೇಲೆ ಭರ್ಜರಿ ಆಫರ್ಸ್!
ದೀಪಾವಳಿ ಹಬ್ಬದ ಪ್ರಯುಕ್ತ ಏಸರ್ ಇಂಡಿಯಾ (Acer India) ತನ್ನ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳ ಮಹಾಪೂರವನ್ನೇ ಘೋಷಿಸಿದೆ. ಗ್ರಾಹಕರಿಗೆ ತಮ್ಮ ಬಜೆಟ್‌ಗೆ ಅನುಗುಣವಾಗಿ ಹೊಸ ತಂತ್ರಜ್ಞಾನವನ್ನು ಕೈಗೆಟಕುವ ಬೆಲೆಯಲ್ಲಿ ಪಡೆಯಲು ಉತ್ತಮ ಅವಕಾಶ ನೀಡುವ ನಿಟ್ಟಿನಲ್ಲಿ, ಲ್ಯಾಪ್‌ಟಾಪ್‌ಗಳು, ಡೆಸ್ಕ್‌ಟಾಪ್‌ಗಳು, ಮಾನಿಟರ್‌ಗಳು ಮತ್ತು ಇತರೆ ಪರಿಕರಗಳ ಖರೀದಿಗೆ ಭಾರಿ ರಿಯಾಯಿತಿ, ಆಕರ್ಷಕ ಕ್ಯಾಶ್‌ಬ್ಯಾಕ್ ಮತ್ತು ವಿಸ್ತೃತ ಖಾತರಿಯಂತಹ ಹಲವಾರು ಪ್ರಯೋಜನಗಳನ್ನು ಒದಗಿಸುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ.
ದೀಪಾವಳಿ ಹಬ್ಬದ ವಿಶೇಷವಾಗಿ ಏಸರ್ ಇಂಡಿಯಾದಿಂದ ಅಕ್ಟೋಬರ್ 31, 2025ರವರೆಗೆ ಆಯ್ದ ಲ್ಯಾಪ್‌ಟಾಪ್ ಮಾದರಿಗಳ ಮೇಲೆ ₹20,000 ವರೆಗೆ ತತ್‌ಕ್ಷಣ ಬ್ಯಾಂಕ್ ರಿಯಾಯಿತಿ, No-Cost EMI ಸೌಲಭ್ಯಗಳು ಮತ್ತು ಉಚಿತ ಬಂಡಲ್ ಆಫರ್‌ಗಳನ್ನು ನೀಡುತ್ತಿದೆ. ಇವುಗಳ ಜೊತೆಗೆ ಆಕರ್ಷಕ ಕ್ಯಾಶ್‌ಬ್ಯಾಕ್ ಮತ್ತು ವಿಸ್ತೃತ ಖಾತರಿ ಹಾಗೂ ಆಕಸ್ಮಿಕ ಹಾನಿ ರಕ್ಷಣಾ ಹಾನಿಯಂತಹ ಪ್ರಯೋಜನಗಳನ್ನು ನೀಡುತ್ತಿದೆ. ಏಸರ್ ಮಾಲ್ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿರುವ ಈ ಆಫರ್‌ಗಳು ಹೊಸ ತಂತ್ರಜ್ಞಾನವನ್ನು ಕೈಗೆಟಕುವ ಬೆಲೆಯಲ್ಲಿ ಪಡೆಯಲು ಉತ್ತಮ ಅವಕಾಶ ನೀಡುತ್ತವೆ.
ಗೇಮರ್‌ಗಳಿಗೆ ವಿಶೇಷ ಆಫರ್ಸ್
ಅಕ್ಟೋಬರ್ 31, 2025ರವರೆಗೆ ಗೇಮಿಂಗ್ ಉತ್ಸಾಹಿಗಳಿಗಾಗಿ ಏಸರ್ ಎರಡು ಪ್ರಮುಖ ಗೇಮಿಂಗ್ ಸರಣಿಗಳಲ್ಲಿ ವಿಶೇಷ ರಕ್ಷಣಾ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ.
1. ಪ್ರಿಡೇಟರ್ (Predator) ಗೇಮಿಂಗ್ ಸರಣಿ: ಇದೀಗ ಗೇಮರ್‌ಗಳು ಕೇವಲ ₹2,499 ಕ್ಕೆ ಏಸರ್‌ನಿಂದ ಎರಡು ವರ್ಷಗಳ ವಿಸ್ತೃತ ಖಾತರಿ, ಒಂದು ವರ್ಷದ ಆಕಸ್ಮಿಕ ಹಾನಿ ರಕ್ಷಣೆ ಮತ್ತು ಖರೀದಿ ಮರುಪಡೆಯುವಿಕೆ ಗ್ಯಾರಂಟಿ (Buy Back) ಯೋಜನೆಯನ್ನು ಪಡೆಯಬಹುದು. ಇದು ಗೇಮಿಂಗ್ ಅನುಭವದ ಜೊತೆಗೆ ಸಂಪೂರ್ಣ ಭರವಸೆಯನ್ನು ನೀಡುತ್ತದೆ.
2. ನೈಟ್ರೋ (Nitro) ಗೇಮಿಂಗ್ ಸರಣಿ: ಇದೇ ರೀತಿಯ ರಕ್ಷಣಾ ಯೋಜನೆಗಳನ್ನು ನೈಟ್ರೋ ಸರಣಿ ಕೂಡ ಒಳಗೊಂಡಿದೆ. ಎರಡು ವರ್ಷಗಳ ವಿಸ್ತೃತ ಖಾತರಿ, ಒಂದು ವರ್ಷದ ಆಕಸ್ಮಿಕ ಹಾನಿ ರಕ್ಷಣೆ ಮತ್ತು ಬೈ ಬ್ಯಾಕ್ ಗ್ಯಾರಂಟಿ ಕೇವಲ ₹1,499 ಕ್ಕೆ ಲಭ್ಯವಿದೆ.

ದೀಪಾವಳಿ ಹಬ್ಬದ ವಿಶೇಷವಾಗಿ, ಸ್ಟೈಲ್ ಮತ್ತು ಕಾರ್ಯಕ್ಷಮತೆಯನ್ನು ಬಯಸುವವರಿಗೆ ಸ್ವಿಫ್ಟ್ (Swift) ಸರಣಿಯ ಮೇಲು ಸಹ ಅತ್ಯಂತ ಆಕರ್ಷಕ ಡೀಲ್‌ಗಳನ್ನು ನೀಡಲಾಗುತ್ತಿದೆ. ಇವುಗಳಲ್ಲಿ,
ಪ್ರತಿ ಸ್ವಿಫ್ಟ್ ಲ್ಯಾಪ್‌ಟಾಪ್ ಖರೀದಿಯ ಮೇಲೆ ಉಚಿತ ಸ್ಲಿಂಗ್ ಬ್ಯಾಗ್ ಸಿಗಲಿದೆ.
ಗ್ರಾಹಕರು ಕೇವಲ ₹999 ಪಾವತಿಸಿ ಎರಡು ವರ್ಷಗಳ ವಿಸ್ತೃತ ಖಾತರಿ, ಒಂದು ವರ್ಷದ ಆಕಸ್ಮಿಕ ಹಾನಿ ರಕ್ಷಣೆ ಮತ್ತು ಬೈ ಬ್ಯಾಕ್ ಗ್ಯಾರಂಟಿ ಯೋಜನೆಯನ್ನು ಸೇರಿಸಿಕೊಳ್ಳಬಹುದು.
ಇನ್ನು ಆಸ್ಪೈರ್ ಲೈಟ್ (Aspire Lite) i7 ಮಾದರಿಗಳನ್ನು ಖರೀದಿಸುವವರಿಗೆ ಉಚಿತ ಕನ್ವರ್ಟಿಬಲ್ ಬ್ಯಾಗ್ ನೀಡಲಾಗುತ್ತಿದೆ. ಜೊತೆಗೆ ಆಯ್ದ ಮಾದರಿಗಳ ಮೇಲೆ ಉಚಿತ ಆಕಸ್ಮಿಕ ಹಾನಿ ರಕ್ಷಣೆ ಮತ್ತು ವಿಸ್ತೃತ ಖಾತರಿ ಕೂಡ ಲಭ್ಯವಿದೆ.
ಏಸರ್ ಇಂಡಿಯಾದ ಹಬ್ಬದ ಕೊಡುಗೆಗಳು ಇಷ್ಟಕ್ಕೇ ನಿಲ್ಲುವುದಿಲ್ಲ. ಗ್ರಾಹಕರಿಗೆ ಸುಲಭವಾಗಿಸಲು ಏಸರ್ ಹಲವಾರು ಆರ್ಥಿಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಈ ದೀಪಾವಳಿಯನ್ನು ಅತ್ಯಾಕರ್ಷಕ ಡಿಸ್ಪ್ಲೇ ಮತ್ತು ಸ್ಮಾರ್ಟ್ ತಂತ್ರಜ್ಞಾನ ಹೊಂದಿರುವ ಏಸರ್ ಸಾಧನಗಳೊಂದಿಗೆ ಆಚರಿಸಲು ಬಯಸುವವರು, ತಕ್ಷಣವೇ ಹತ್ತಿರದ ಏಸರ್ ಮಾಲ್ ಚಿಲ್ಲರೆ ಅಂಗಡಿಗಳಿಗೆ ಭೇಟಿ ನೀಡಿ ಈ ಭರ್ಜರಿ ಕೊಡುಗೆಗಳನ್ನು ಪಡೆದುಕೊಳ್ಳಬಹುದು. ಇದು ನಿಮ್ಮ ಸಾಧನಗಳನ್ನು ಅಪ್‌ಗ್ರೇಡ್ ಮಾಡಲು ಅಥವಾ ಹೊಸ ಗ್ಯಾಜೆಟ್‌ಗಳನ್ನು ಖರೀದಿಸಲು ಇರುವ ಅತ್ಯುತ್ತಮ ಸಮಯ ಎಂಬುದು ನಮ್ಮ ಅಭಿಪ್ರಾಯ. ಆದರೆ, ಈ ಮೇಲೆ ತಿಳಿಸಲಾದ ಎಲ್ಲಾ ಕೊಡುಗೆಗಳನ್ನು ಏಸರ್ ಮಾಲ್ ಚಿಲ್ಲರೆ ಅಂಗಡಿಗಳಲ್ಲಿ ಪುನರ್ ಪರೀಶೀಲಿಸಿ ಮತ್ತು ನಿಮ್ಮ ಆಯ್ದ ಸಾಧನದ ಮೇಲೆ ಏನೆಲ್ಲಾ ಕೊಡುಗೆಗಳು ಲಭ್ಯವಾಗಲಿವೆ ಎಂಬುದನ್ನು ಕೇಳಿ ಖಚಿತಪಡಿಸಿಕೊಳ್ಳಿ.


Click it and Unblock the Notifications








