Home
ಸುದ್ದಿಜಾಲ

ಭಾರತದಲ್ಲಿ ಏಸರ್ ಜಿ ಸಿರೀಸ್ ಗೂಗಲ್ ಟಿವಿ ಅನಾವರಣ! ಅದ್ದೂರಿ ಫೀಚರ್ಸ್‌..ಕಡಿಮೆ ಬೆಲೆ!

ಟೆಕ್‌ ಮಾರುಕಟ್ಟೆಯಲ್ಲಿ ಏಸರ್‌ ಕಂಪೆನಿಯ ಸ್ಮಾರ್ಟ್‌ಟಿವಿಗಳಿಗೆ ಉತ್ತಮ ಬೇಡಿಕೆಯಿದೆ. ತನ್ನ ವಿಭಿನ್ನ ಶೈಲಿಯ ಸ್ಮಾರ್ಟ್‌ಟಿವಿಗಳಿಂದ ಭಾರತದಲ್ಲಿ ಸಾಕಷ್ಟು ಸದ್ದು ಮಾಡಿದೆ. ಇದೀಗ ಹೊಸದಾಗಿ ಏಸರ್ ಜಿ ಸಿರೀಸ್ ಗೂಗಲ್ ಟಿವಿಯನ್ನು ಅನಾವರಣಗೊಳಿಸಿದೆ. ಈ ಸರಣಿಯು 32 ಇಂಚಿನ HD ಟಿವಿಗಳಿಂದ 65 ಇಂಚಿನ ಅಲ್ಟ್ರಾ HD ಟಿವಿಗಳವರೆಗಿನ ಆಯ್ಕೆಗಳನ್ನು ಹೊಂದಿದೆ.

ಹೌದು, ಏಸರ್ ಜಿ ಸಿರೀಸ್ ಗೂಗಲ್ ಟಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸರಣಿಯ ಟಿವಿಗಳು ಡಾಲ್ಬಿ ಅಟ್ಮಾಸ್ ಸೌಂಡ್, ಮೋಷನ್ ಎಸ್ಟಿಮೇಶನ್, ಮೋಷನ್ ಕಾಂಪೆನ್ಸೇಶನ್ (ಎಂಇಎಂಸಿ) ತಂತ್ರಜ್ಞಾನ, ಎಚ್‌ಡಿಆರ್ 10 ಬೆಂಬಲವನ್ನು ಒಳಗೊಂಡಿವೆ. ಹಾಗಾದ್ರೆ ಏಸರ್ ಜಿ ಸಿರೀಸ್ ಗೂಗಲ್ ಟಿವಿಯ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಏಸರ್ ಜಿ ಸಿರೀಸ್ ಗೂಗಲ್ ಟಿವಿ ಅನಾವರಣ!ಅದ್ದೂರಿ ಫೀಚರ್ಸ್‌.ಕಡಿಮೆ ಬೆಲೆ

ಏಸರ್ ಜಿ ಸಿರೀಸ್ ಗೂಗಲ್ ಟಿವಿ ಫೀಚರ್ಸ್‌ ಹೇಗಿದೆ?
ಈ ಸರಣಿಯ ಸ್ಮಾರ್ಟ್‌ಟಿವಿಗಳು ಬಳಕೆದಾರರ ಅನುಕೂಲಕ್ಕೆ ಹೇಳಿ ಮಾಡಿಸಿದ ವಿನ್ಯಾಸವನ್ನು ಹೊಂದಿವೆ. ನಿಮ್ಮ ಅಭಿರುಚಿಗೆ ತಕ್ಕಂತೆ ಹಲವು ವಿಭಿನ್ನ ಗಾತ್ರದ ಸ್ಕ್ರೀನ್‌ ಆಯ್ಕೆಗಳನ್ನು ಸಹ ನೀಡಲಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳು ಡಾಲ್ಬಿ ಅಟ್ಮೋಸ್‌ ಸೌಂಡ್‌ನೊಂದಿಗೆ ಮೂರು ಆಯಾಮದ ಸೌಂಡ್‌ ಅನ್ನು ನೀಡಲಿವೆ. ಇದು ಬಳಕೆದಾರರ ವೀಕ್ಷಣೆಯ ಅನುಭವವನ್ನು ಹೆಚ್ಚಿಸಲಿದೆ.

ಈ ಸ್ಮಾರ್ಟ್‌ಟವಿಗಳು MEMC ಟೆಕ್ನಾಲಜಿಯನ್ನು ಹೊಂದಿವೆ. ಇದರಿಂದ ವೇಗದ ಗತಿಯ ದೃಶ್ಯಗಳಲ್ಲಿ ಮೃದುವಾದ ಮತ್ತು ಸ್ಪಷ್ಟವಾದ ಚಲನೆಯನ್ನು ನೀಡಲು ಸಾಧ್ಯವಾಗಲಿದೆ. ಇದಲ್ಲದೆ ವಿಶಾಲ ಬಣ್ಣದ ಹರವು ಒಂದು ಶತಕೋಟಿಗೂ ಹೆಚ್ಚು ಬಣ್ಣದ ಛಾಯೆಗಳನ್ನು ನೀಡಲಿದೆ ಎಂದು ಏಸರ್‌ ಕಂಪೆನಿ ಹೇಳಿಕೊಂಡಿದೆ. ಇದರಿಂದ ರಿಯಲ್‌ ಲೈಪ್‌ ಕಲರ್‌ಗಳನ್ನು ಪ್ರೊಡ್ಯೂಸ್‌ ಮಾಡುವುದಕ್ಕೆ ಸಹಾಯ ಮಾಡಲಿದೆ.

ಭಾರತದಲ್ಲಿ ಏಸರ್ ಜಿ ಸಿರೀಸ್ ಗೂಗಲ್ ಟಿವಿ ಅನಾವರಣ!ಅದ್ದೂರಿ ಫೀಚರ್ಸ್‌.ಕಡಿಮೆ ಬೆಲೆ

ಇನ್ನು ಈ ಸರಣಿಯ ಟಿವಿಗಳನ್ನು HDR10 ಎನ್‌ಕೋಡಿಂಗ್ ಮತ್ತು HLG ಬೆಂಬಲದೊಂದಿಗೆ ಟ್ಯೂನ್ ಮಾಡಲಾಗಿದೆ. ಇದು ಓವರ್-ದಿ-ಟಾಪ್ (OTT) ಪ್ಲಾಟ್‌ಫಾರ್ಮ್‌ಗಳು ಮತ್ತು ಪ್ರಸಾರ ಚಾನಲ್‌ಗಳಿಂದ ಹೈ ಡೈನಾಮಿಕ್ ರೇಂಜ್ ವಿಷಯವನ್ನು ಖಚಿತಪಡಿಸುತ್ತದೆ. ಜೊತೆಗೆ ಸ್ಮಾಟಿವಿಗಳು 24W ಸೌಂಡ್‌ ಔಟ್‌ ನೀಡುವ ಹೈ ಫಿಡೆಲಿಟಿ ಸ್ಪೀಕರ್‌ಗಳನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ಟಿವಿಗಳು ARM ಕಾರ್ಟೆಕ್ಸ್ A55 CPU ನಿಂದ ರನ್‌ ಆಗಲಿದ್ದು, 2GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿವೆ.

ಏಸರ್ ಜಿ ಸಿರೀಸ್ ಗೂಗಲ್ ಟಿವಿಗಳು ಭಾರತದಲ್ಲಿಯೇ ತಯಾರಿಸಲ್ಪಟ್ಟಿದೆ. ಭಾರತದಲ್ಲಿ ವೈವಿಧ್ಯಮಯ ಹಾಗೂ ಏಸರ್‌ ಟಿವಿಗಳ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವುದಕ್ಕೆ ನಾವು ದೃಢವಾಗಿ ನಿರ್ಧರಿಸಿದ್ದೇವೆ ಎಂದು ಇಂದ್ಕಲ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಆನಂದ್ ದುಬೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಏಸರ್ ಜಿ ಸಿರೀಸ್ ಗೂಗಲ್ ಟಿವಿ ಅನಾವರಣ!ಅದ್ದೂರಿ ಫೀಚರ್ಸ್‌.ಕಡಿಮೆ ಬೆಲೆ

ಬೆಲೆ ಮತ್ತು ಲಭ್ಯತೆ

ಇನ್ನು Acer G ಸರಣಿಯ ಬೆಲೆ 32 ಇಂಚಿನ TV ಮಾದರಿಗೆ 21,999 ರೂ. ಆಗಿದೆ. ಇದರ 43 ಇಂಚಿನ ಜಿ ಸರಣಿಯ ಟಿವಿ ರೂಪಾಂತರವು 42,999ರೂ ಬೆಲೆಯಲ್ಲಿ ಬರಲಿದೆ. ಇದಲ್ಲದೆ ಈ ಸರಣಿಯ 55 ಇಂಚಿನ ಟಿವಿ ಮಾದರಿಯ ಬೆಲೆ 62,999 ರೂ.ಆಗಿದೆ.

ಇದಲ್ಲದೆ ಏಸರ್‌ ಕಂಪೆನಿ ಇದೇ ವರ್ಷ ಏಸರ್‌ H ಪ್ರೊ ಸರಣಿ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿತ್ತು. ಈ ಸರಣಿಯ ಟಿವಿಗಳು 43 ಇಂಚಿನ, 50 ಇಂಚಿನ ಮತ್ತು 55-ಇಂಚಿನ ಗಾತ್ರದ ಮೂರು ಆಯ್ಕೆಗಳಲ್ಲಿ ಲಭ್ಯವಿದೆ. ಇನ್ನು ಈ ಎಲ್ಲಾ ಸ್ಮಾರ್ಟ್‌ಟಿವಿಗಳು 4K ರೆಸಲ್ಯೂಶನ್ LCD ಪ್ಯಾನೆಲ್ ಅನ್ನು ಹೊಂದಿದ್ದು, LED ಬ್ಯಾಕ್‌ಲೈಟಿಂಗ್‌ನೊಂದಿಗೆ ಬರುತ್ತವೆ. ಇದಲ್ಲದೆ ಸ್ಮಾರ್ಟ್‌ಟಿವಿಗಳು ತುಂಬಾ ತೆಳುವಾದ ಬೆಜೆಲ್‌ಗಳೊಂದಿಗೆ ಫ್ರೇಮ್‌ಲೆಸ್ ವಿನ್ಯಾಸವನ್ನು ಹೊಂದಿವೆ.

Best Mobiles in India

English summary
Acer G Series Google TV with Dolby Atmos sound Launched In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+