ಭಾರತದಲ್ಲಿ ಏಸರ್ H ಪ್ರೊ ಸರಣಿ ಸ್ಮಾರ್ಟ್‌ಟಿವಿ ಅನಾವರಣ! ಟವಿ ಡಿಸೈನ್ ಹೇಗಿದೆ ಗೊತ್ತಾ?
ಏಸರ್ ಕಂಪೆನಿಯ ಸ್ಮಾರ್ಟ್‌ಟಿವಿಗಳಿಗೆ ಭಾರತದಲ್ಲಿ ಉತ್ತಮ ಮಾರುಕಟ್ಟೆಯಿದೆ. ತನ್ನ ವಿಭಿನ್ನ ಶೈಲಿಯ ಸ್ಮಾರ್ಟ್‌ಟಿವಿಗಳಿಂದಾಗಿ ಸ್ಮಾರ್ಟ್‌ಟಿವಿ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಒಂದೆನಿಸಿಕೊಂಡಿದೆ. ಅದರ ಮುಂದುವರೆದ ಭಾಗವೆಂಬಂತೆ ಇದೀಗ ಏರ್ ಕಂಪೆನಿ ಭಾರತದಲ್ಲಿ ಹೊಸ ಏಸರ್ H ಪ್ರೊ ಸರಣಿಯನ್ನು ಬಿಡುಗಡೆ ಮಾಡಿದೆ.
ಹೌದು, ಏಸರ್ H ಪ್ರೊ ಸರಣಿ ಸ್ಮಾರ್ಟ್‌ಟಿವಿಗಳು ಭಾರತದಲ್ಲಿ ಬಿಡುಗಡೆ ಆಗಿದೆ. ಈ ಸರಣಿಯ ಟಿವಿಗಳು 43 ಇಂಚಿನ, 50 ಇಂಚಿನ ಮತ್ತು 55-ಇಂಚಿನ ಗಾತ್ರದ ಮೂರು ಆಯ್ಕೆಗಳಲ್ಲಿ ಬರಲಿವೆ. ಇನ್ನು ಈ ಎಲ್ಲಾ ಸ್ಮಾರ್ಟ್‌ಟಿವಿಗಳು 4K ರೆಸಲ್ಯೂಶನ್ LCD ಪ್ಯಾನೆಲ್ ಅನ್ನು ಹೊಂದಿದ್ದು, LED ಬ್ಯಾಕ್‌ಲೈಟಿಂಗ್‌ನೊಂದಿಗೆ ಬರುತ್ತವೆ. ಇದಲ್ಲದೆ ಸ್ಮಾರ್ಟ್‌ಟಿವಿಗಳು ತುಂಬಾ ತೆಳುವಾದ ಬೆಜೆಲ್‌ಗಳೊಂದಿಗೆ ಫ್ರೇಮ್‌ಲೆಸ್ ವಿನ್ಯಾಸವನ್ನು ಹೊಂದಿವೆ. ಇನ್ನು ಈ ಸ್ಮಾರ್ಟ್‌ಟಿವಿ ಸರಣಿಯು ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏಸರ್ H ಪ್ರೊ ಸರಣಿ ಸ್ಮಾರ್ಟ್‌ಟಿವಿ ವಿಶೇಷ
ಏಸರ್ H ಪ್ರೊ ಸ್ಮಾರ್ಟ್‌ಟಿವಿ ಸರಣಿ ಮೂರು ವಿಭಿನ್ನ ಗಾತ್ರದ ಆಯ್ಕೆಗಳಲ್ಲಿ ಎಂಟ್ರಿ ನೀಡಿದೆ. ಇವುಗಳು 43-ಇಂಚಿನ, 50-ಇಂಚಿನ ಮತ್ತು 55-ಇಂಚಿನ ಆಯ್ಕೆಗಳಲ್ಲಿ ಬರಲಿದೆ. ಇನ್ನು ಈ ಸ್ಮಾರ್ಟ್‌ಟಿವಿಗಳು ತೆಳು-ಬಿಜೆಲ್ ಫ್ರೇಮ್‌ಲೆಸ್ ವಿನ್ಯಾಸವನ್ನು ಹೊಂದಿದ್ದು, 4K UHD ರೆಸಲ್ಯೂಶನ್ VA-LCD ಪ್ಯಾನೆಲ್‌ನೊಂದಿಗೆ ಬರಲಿದೆ. ಈ ಸ್ಮಾರ್ಟ್‌ಟಿವಿಯಲ್ಲಿ LED ಬ್ಯಾಕ್‌ಲೈಟಿಂಗ್‌ನೊಂದಿಗೆ ಬರುತ್ತದೆ. ಇನ್ನು ಸ್ಮಾರ್ಟ್‌ಟಿವಿ ಡಿಸ್‌ಪ್ಲೇ ಡಾಲ್ಬಿ ವಿಷನ್‌ಗಾಗಿ ಪ್ರಮಾಣೀಕರಿಸಲ್ಪಟ್ಟಿದೆ. ಇದನ್ನು 380 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಬರಲಿದೆ.
ಇನ್ನು ಏಸರ್ H ಪ್ರೊ ಸರಣಿ ಸ್ಮಾರ್ಟ್‌ಟಿವಿ ರಿಫ್ರೆಶ್ ರೇಟ್ ಪ್ರಮಾಣಿತ 60Hz ಆಗಿದೆ. ಈ ಸ್ಮಾರ್ಟ್‌ಟಿವಿಗಳು ಆಂಡ್ರಾಯ್ಡ್ 11 ಆಧಾರಿತ ಗೂಗಲ್ ಟಿವಿಯೊಂದಿಗೆ ಬರುತ್ತವೆ. ಇದಲ್ಲದೆ ಸ್ಮಾರ್ಟ್‌ಟಿವಿಗಳು ಆಂಡ್ರಾಯ್ಡ್ ಟಿವಿ ಅಪ್ಲಿಕೇಶನ್‌ಗಳಿಗೆ ಬೆಂಬಲ ನೀಡಲಿದೆ. ಇದಕ್ಕಾಗಿ ಇನ್‌ಬಿಲ್ಟ್ ಕ್ರೋಮ್‌ಕಾಸ್ಟ್ ಅನ್ನು ಸಹ ಒಳಗೊಂಡಿದೆ. ಇದರೊಂದಿಗೆ ಮೃದುವಾದ ಫ್ರೇಮ್ ರೇಟ್‌ಗೆ ಸಹಾಯ ಮಾಡಲು ಟಿವಿ MEMC ಬೆಂಬಲದೊಂದಿಗೆ ಬರುತ್ತದೆ.
ಏಸರ್ H ಪ್ರೊ ಸ್ಮಾರ್ಟ್‌ಟಿವಿಗಳು ARM ಕಾರ್ಟೆಕ್ಸ್-A55 ಕೋರ್‌ಗಳೊಂದಿಗೆ ಕ್ವಾಡ್-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 2GB RAM ಜೊತೆಗೆ 16GB ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಇದು ಡ್ಯುಯಲ್-ಬ್ಯಾಂಡ್ ವೈಫೈ ಮತ್ತು ಇಂಟರ್‌ನೆಟ್ ಸಂಪರ್ಕಕ್ಕಾಗಿ ಈಥರ್ನೆಟ್ ಬೆಂಬಲಿಸಲಿದೆ. ಇದಲ್ಲದೆ ಸ್ಮಾರ್ಟ್‌ಟಿವಿಗಳು ಬ್ಲೂಟೂತ್ ಸಂಪರ್ಕವನ್ನು ಸಹ ಬೆಂಬಲಿಸುತ್ತವೆ.
ಇನ್ನು ಏಸರ್ H ಪ್ರೊ ಸ್ಮಾರ್ಟ್‌ಟಿವಿಗಳು ಡಾಲ್ಬಿ ಅಟ್ಮಾಸ್ ಪ್ರಮಾಣೀಕರಣ ಹೊಂದಿರುವ 76W ಪ್ರೊ ಸ್ಪೀಕರ್‌ಗಳೊಂದಿಗೆ ಬರಲಿದೆ. ಇದು ಏಸರ್ ಡ್ಯುಯಲ್-ಆಂಪ್ಲಿಫೈಯರ್ ಮತ್ತು ಡ್ಯುಯಲ್-ಟ್ವೀಟರ್ ವಿನ್ಯಾಸವನ್ನು ಸ್ಪೀಕರ್‌ಗಳಲ್ಲಿ ಅಳವಡಿಸಲಾಗಿದೆ. ಸ್ಮಾರ್ಟ್‌ಟಿವಿಗಳಲ್ಲಿನ ರಿಮೋಟ್ ವಾಯ್ಸ್ ಕಂಟ್ರೋಲ್ ಅನ್ನು ಬೆಂಬಲಿಸಲಿದೆ. ಗೂಗಲ್ ಅಸಿಸ್ಟೆಂಟ್ ಅನ್ನು ಪ್ರಾರಂಭಿಸಲು ಮೀಸಲಾದ ಬಟನ್‌ನೊಂದಿಗೆ ಬರಲಿದೆ. ಇದು ನೆಟ್‌ಫ್ಲಿಕ್ಸ್, ಯೂಟ್ಯೂಬ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ+ಹಾಟ್‌ಸ್ಟಾರ್ ಅಪ್ಲಿಕೇಶನ್ ಬಳಕೆಗೆ ಪ್ರತ್ಯೇಕ ಬಟನ್‌ಗಳನ್ನು ಸಹ ನೀಡಲಾಗಿದೆ. ಇದು ಹೊಸ ರೀತಿಯ ಅನುಭವವನ್ನು ನೀಡಲಿದೆ ಎಂದು ಹೇಳಲಾಗಿದೆ.
ಏಸರ್ H ಪ್ರೊ ಸ್ಮಾರ್ಟ್‌ಟಿವಿಗಳು ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಏಸರ್ H ಪ್ರೊ ಸ್ಮಾರ್ಟ್‌ಟಿವಿ 43 ಇಂಚಿನ ಆಯ್ಕೆಯ ಬೆಲೆ 26,999ರೂ ಆಗಿದೆ.
ಭಾರತದಲ್ಲಿ ಏಸರ್ H ಪ್ರೊ ಸ್ಮಾರ್ಟ್‌ಟಿವಿ 50 ಇಂಚಿನ ಆಯ್ಕೆಯ ಬೆಲೆ 32,999ರೂ ಆಗಿದೆ.
ಭಾರತದಲ್ಲಿ ಏಸರ್ H ಪ್ರೊ ಸ್ಮಾರ್ಟ್‌ಟಿವಿ 55 ಇಂಚಿನ ಆಯ್ಕೆಯ ಬೆಲೆ 38,999ರೂ ಆಗಿದೆ.


Click it and Unblock the Notifications








