Home
ಸುದ್ದಿಜಾಲ

ಏಸರ್‌ ಕಂಪೆನಿಯಿಂದ ಅತ್ಯಾಕರ್ಷಕ ಸ್ಮಾರ್ಟ್‌ಟಿವಿ ಲಾಂಚ್‌! ಏನಿದರ ವಿಶೇಷ!

ಜನಪ್ರಿಯ ಸ್ಮಾರ್ಟ್‌ಟಿವಿ ತಯಾರಕ ಕಂಪೆನಿಗಳಲ್ಲಿ ಏಸರ್‌ ಕಂಪೆನಿ ಕೂಡ ಒಂದಾಗಿದೆ. ಏಸರ್‌ ಕಂಪೆನಿ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಟಿವಿಗಳ ಮೂಲಕ ಸೈ ಎನಿಸಿಕೊಂಡಿದೆ. ಇದೀಗ ಭಾರತದಲ್ಲಿ ಹೊಸ W ಸಿರೀಸ್‌ 4K ಅಲ್ಟ್ರಾ HD QLED ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿ ಎರಡು ಗಾತ್ರಗಳಲ್ಲಿ ಲಭ್ಯವಾಗಲಿದೆ.

ಹೌದು, ಏಸರ್‌ W ಸರಣಿ 4K ಅಲ್ಟ್ರಾ HD QLED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಭಾರತಕ್ಕೆ ಎಂಟ್ರಿ ನೀಡಿದೆ. ಈ ಸರಣಿಯಲ್ಲಿ 55 ಇಂಚಿನ ಮತ್ತು 65 ಇಂಚಿನ ಎರಡು ಗಾತ್ರಗಳಲ್ಲಿ ಸ್ಮಾರ್ಟ್‌ಟಿವಿ ಲಭ್ಯವಾಗಲಿದೆ. ಇನ್ನು ಈ ಸರಣಿಯ ಸ್ಮಾರ್ಟ್‌ಟಿವಿಗಳು ಅಸಾಧಾರಣ ವೀಕ್ಷಣೆಯ ಅನುಭವವನ್ನು ನೀಡುವ ಅಡ್ವಾನ್ಸ್ಡ್‌ ಫೀಚರ್ಸ್‌ ಮತ್ತು ಟೆಕ್ನಾಲಜಿ ಶ್ರೇಣಿಯನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ಏನೆಲ್ಲಾ ಫೀಚರ್ಸ್‌ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏಸರ್‌ ಕಂಪೆನಿಯಿಂದ ಅತ್ಯಾಕರ್ಷಕ ಸ್ಮಾರ್ಟ್‌ಟಿವಿ ಲಾಂಚ್‌! ಏನಿದರ ವಿಶೇಷ!

ಏಸರ್ W ಸಿರೀಸ್‌ ಸ್ಮಾರ್ಟ್‌ಟಿವಿಯ ವಿಶೇಷತೆ ಎಂದರೆ QLED ಪ್ಯಾನೆಲ್‌ ಒಳಗೊಂಡಿರುವುದು. ಇದರಿಂದ ಸ್ಮಾರ್ಟ್‌ಟಿವಿಯಲ್ಲಿ ನಿಖರ ಮತ್ತು ರೋಮಾಂಚಕ ಬಣ್ಣಗಳನ್ನು ಖಚಿತಪಡಿಸುತ್ತದೆ. ಇದರಿಂದ ಸಿನಿಮಾ ಮತ್ತು ಸ್ಪೋರ್ಟ್ಸ್‌ ಪ್ರಿಯರಿಗೆ ಸ್ಮಾರ್ಟ್‌ಟಿವಿ ಉತ್ತಮ ಆಯ್ಕೆ ಎನಿಸಿಕೊಳ್ಳಲಿದೆ. ಇದರೊಂದಿಗೆ ಸ್ಮಾರ್ಟ್‌ಟಿವಿ ಡಿಸ್‌ಪ್ಲೇ ಸೂಪರ್ ಆಂಟಿ-ಗ್ಲೇರ್ ಟೆಕ್ನಾಲಜಿಯನ್ನು ಹೊಂದಿರುವುದರಿಂದ ಬ್ರೈಟ್‌ ಎನ್ವಿರಾನ್ಮೆಂಟ್ ಅನ್ನು ನೀಡಲಿದೆ.

ಇನ್ನು ಈ ಸ್ಮಾರ್ಟ್‌ಟಿವಿಯು ಸೊಗಸಾದ ಫ್ರೇಮ್‌ಲೆಸ್ ಅನ್ನು ಹೊಂದಿದ್ದು, ಎಡ್ಜ್-ಟು-ಎಡ್ಜ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಸ್ಮಾರ್ಟ್‌ಟಿವಿ ಸಾಕಷ್ಟು ಮಾಡ್ರನ್‌ ಆಗಿದ್ದು, ಹೈ ಎಂಡ್‌ ವ್ಯೂ ಅನ್ನು ನೀಡಲಿದೆ. ಜೊತೆಗೆ ಇದು ಫುಲ್‌-ಮೋಶನ್‌ ಸ್ಲಿಮ್ ವಾಲ್ ಮೌಂಟ್‌ನೊಂದಿಗೆ ಬರಲಿದೆ. ಆದರಿಂದ ಇದನ್ನು ವಾಲ್‌ನಲ್ಲಿ ಭದ್ರವಾಗಿಡಬಹುದಾಗಿದೆ. ಇದು 30W ಆರಲ್ ಸೌಂಡ್ ಮತ್ತು ಡಾಲ್ಬಿ ಅಟ್ಮಾಸ್ ಬೆಂಬಲವನ್ನು ಪಡೆದಿರುವುದರಿಂದ ಪವರ್‌ಫುಲ್‌ ಸೌಂಡ್‌ ಸಿಸ್ಟಂ ಅನ್ನು ನೀಡಲಿದೆ.

ಏಸರ್‌ ಕಂಪೆನಿಯಿಂದ ಅತ್ಯಾಕರ್ಷಕ ಸ್ಮಾರ್ಟ್‌ಟಿವಿ ಲಾಂಚ್‌! ಏನಿದರ ವಿಶೇಷ!

ಇದೊರಂದಿಗೆ ಸ್ಮಾರ್ಟ್‌ಟಿವಿ 64 ಬಿಟ್ ಕ್ವಾಡ್-ಕೋರ್ ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ TV 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 2GB RAM ಮತ್ತು 16GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಜೊತೆಗೆ ಸ್ಮಾರ್ಟ್‌ಟಿವಿ ಗೂಗಲ್‌ ಆ್ಯಪ್ಸ್‌, ಫಾರ್ ಫೀಲ್ಡ್ ಮೈಕ್, ಮೋಷನ್ ಸೆನ್ಸರ್ ಮತ್ತು ವಾಯ್ಸ್‌-ಕಂಟ್ರೋಲ್‌ ಸ್ಮಾರ್ಟ್ ರಿಮೋಟ್ ಅನ್ನು ಸಹ ಒಳಗೊಂಡಿದೆ.

ಇನ್ನು ಭಾರತದಲ್ಲಿ ಬಿಡುಗಡೆಯಾಗಿರುವ ಏಸರ್‌ W ಸರಣಿಯ 55 ಇಂಚಿನ ಮಾದರಿಯು 69,999ರೂ. ಬೆಲೆಯನ್ನು ಹೊಂದಿದೆ. ಅಲ್ಲದೆ 65 ಇಂಚಿನ ಮಾದರಿಯು 89,999ರೂ. ಬೆಲೆಯನ್ನು ಪಡೆದುಕೊಂಡಿದೆ. ಈ ಎರಡೂ ಸ್ಮಾರ್ಟ್‌ಟಿವಿಗಳು ಕೂಡ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌.ಇನ್‌ ನಂತಹ ವಿವಿಧ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಗೆ ಲಭ್ಯವಾಗಲಿದೆ.

ಏಸರ್‌ ಕಂಪೆನಿಯಿಂದ ಅತ್ಯಾಕರ್ಷಕ ಸ್ಮಾರ್ಟ್‌ಟಿವಿ ಲಾಂಚ್‌! ಏನಿದರ ವಿಶೇಷ!

ಇದಲ್ಲದೆ ಇತ್ತೀಚಿಗೆ ಏಸರ್‌ ಕಂಪೆನಿ ಮೂರು ಹೊಸ ಲ್ಯಾಪ್‌ಟಾಪ್‌ಗಳನ್ನು ಅನಾವರಣಗೊಳಿಸಿದೆ. ಈ ಮೂರು ಲ್ಯಾಪ್‌ಟಾಪ್‌ಗಳು ಯುಎಸ್‌ಬಿ ಟೈಪ್-ಸಿ ಪೋರ್ಟ್, ಹೆಚ್‌ಡಿಎಂಐ 2.1 ಪೋರ್ಟ್‌ಗಳು ಮತ್ತು ವೈ-ಫೈ 6E ಕನೆಕ್ಟಿವಿಟಿಯನ್ನು ಬೆಂಬಲಿಸಲಿವೆ. ಇದಲ್ಲದೆ ಈ ಲ್ಯಾಪ್‌ಟಾಪ್‌ಗಳು HD ವೆಬ್‌ಕ್ಯಾಮ್, ಮೈಕ್ರೊಫೋನ್ ಮತ್ತು ಸ್ಟಿರಿಯೊ ಸ್ಪೀಕರ್‌ಗಳನ್ನು ಕೂಡ ಒಳಗೊಂಡಿವೆ. ಏಸರ್‌ ಕಂಪೆನಿ ಬಿಡುಗಡೆ ಮಾಡಿರುವ ಮೂರು ಲ್ಯಾಪ್‌ಟಾಪ್‌ಗಳಲ್ಲಿ ಏಸರ್‌ ಅಸ್ಪೈರ್‌ 3 (A314-36P) ಲ್ಯಾಪ್‌ಟಾಪ್‌ ಮತ್ತು ಏಸರ್‌ ಅಸ್ಪೈರ್‌ 3 (A314-36P)14 ಇಂಚಿನ ಫುಲ್‌ HD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,920x1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಆದರೆ ಆಸ್ಪೈರ್ 3 (A315-510P) ಲ್ಯಾಪ್‌ಟಾಪ್‌ 15.6 ಇಂಚಿನ ಫುಲ್‌ ಹೆಚ್‌ಡಿ ಐಪಿಎಸ್‌ ಡಿಸ್‌ಪ್ಲೇಯನ್ನು ಪಡೆದಿದೆ.

Best Mobiles in India

English summary
Acer has expanded its range of Android Smart TVs in India with the launch of its latest W Series 4K Ultra HD QLED Smart Android TV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+