Home
ಸುದ್ದಿಜಾಲ

ಲ್ಯಾಪ್‌ಟಾಪ್‌ ವಲಯದಲ್ಲಿ ಧೂಳೆಬ್ಬಿಸಿದ ಏಸರ್‌ ನೈಟ್ರೋ 16! ಭಾರತದಲ್ಲಿ ಬೆಲೆ ಎಷ್ಟು?

ಏಸರ್‌ ಕಂಪೆನಿಯ ಲ್ಯಾಪ್‌ಟಾಪ್‌ಗಳಿಗೆ ಭಾರಿ ಡಿಮ್ಯಾಂಡ್‌ ಇದೆ. ಲ್ಯಾಪ್‌ಟಾಪ್‌ ಖರೀದಿಸುವವರ ಸಾಲಿನಲ್ಲಿ ಏಸರ್‌ ಮುಂಚೂಣಿ ಸಾಲಿನಲ್ಲಿದೆ. ಇದಕ್ಕೆ ಅನುಗುಣವಾಗಿ ಅನೇಕ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಸದ್ಯ ಇದೀಗ ತನ್ನ ಹೊಸ ಏಸರ್‌ ನೈಟ್ರೋ 16 ಲ್ಯಾಪ್‌ಟಾಪ್‌ ಅನ್ನು ಬಿಡುಗಡೆ ಮಾಡಿದೆ.

ಹೌದು, ಏಸರ್‌ ನೈಟ್ರೋ 16 ಲ್ಯಾಪ್‌ಟಾಪ್‌ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇನ್ನು ಈ ಲ್ಯಾಪ್‌ಟಾಪ್‌ 165Hz ರಿಫ್ರೆಶ್‌ ರೆಟ್‌ ಬೆಂಬಲವನ್ನು ಪಡೆದುಕೊಂಡಿದೆ. ಜೊತೆಗೆ 3ms ರೆಸ್ಪಾನ್ಸ್‌ ಟೈಂ ಅನ್ನು ಹೊಂದಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ ಡ್ಯುಯಲ್‌ 2W ಸ್ಟೀರಿಯೋ ಸ್ಪೀಕರ್‌ಗಳನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ಲ್ಯಾಪ್‌ಟಾಪ್‌ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲ್ಯಾಪ್‌ಟಾಪ್‌ ವಲಯದಲ್ಲಿ ಧೂಳೆಬ್ಬಿಸಿದ ಏಸರ್‌ ನೈಟ್ರೋ 16!ಭಾರತದಲ್ಲಿ ಬೆಲೆ ಎಷ್ಟು

ಏಸರ್ ನೈಟ್ರೋ 16 ವಿಶೇಷತೆ ಏನು?
ಏಸರ್ ನೈಟ್ರೋ 16 ಲ್ಯಾಪ್‌ಟಾಪ್‌ 16 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 165Hz ರಿಫ್ರೆಶ್‌ ರೇಟ್‌ ಅನ್ನು ಬೆಂಬಲಿಸಲಿದೆ. ಜೊತೆಗೆ ಡಿಸ್‌ಪ್ಲೇ WUXGA ರೆಸಲ್ಯೂಶನ್ ಮತ್ತು 400 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 4 ವಲಯ RGB ಬ್ಯಾಕ್‌ಲಿಟ್ ಕೀಬೋರ್ಡ್ ಮತ್ತು ನೈಟ್ರೋ ಸೆನ್ಸ್ ಕೀಯನ್ನು ಒಳಗೊಂಡಿದೆ.

ಇನ್ನು ಈ ಲ್ಯಾಪ್‌ಟಾಪ್‌ AMD Ryzen 7 7840 ಆಕ್ಟಾ-ಕೋರ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಬಾಕ್ಸ್ ಹೊರಗೆ ವಿಂಡೋಸ್‌ 11 OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಲ್ಯಾಪ್‌ಟಾಪ್‌ ಎರಡು GPU ಆಯ್ಕೆಗಳಲ್ಲಿ ಬರಲಿದೆ. ಇದರಲ್ಲಿ ಒಂದು GeForce RTX 4050 ಆಯ್ಕೆಯಲ್ಲಿ 6GB GDDR6 VRAM ಮತ್ತು GeForce RTX 4060 ಜೊತೆಗೆ 8GB GDDR6 VRAM ಹೊಂದಿರಲಿದೆ. ಇನ್ನು ಈ ಲ್ಯಾಪ್‌ಟಾಪ್ 32GB RAM ಮತ್ತು 512GB SSD ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಲ್ಯಾಪ್‌ಟಾಪ್‌ ಬಿಸಿಯಾಗುವುದನ್ನು ತಡೆಯುವುದಕ್ಕಾಗಿ ಡ್ಯುಯಲ್ ಫ್ಯಾನ್‌ಗಳು, ಡ್ಯುಯಲ್ ಇನ್‌ಟೇಕ್, ಕ್ವಾಡ್ ಎಕ್ಸಾಸ್ಟ್ ಮತ್ತು ಲಿಕ್ವಿಡ್ ಮೆಟಲ್ ಗ್ರೀಸ್‌ಗಳನ್ನು ಒಳಗೊಂಡಿರುವ ಪವರ್‌ಫುಲ್‌ ಕೂಲಿಂಗ್ ಸಿಸ್ಟಂ ಅನ್ನು ಹೊಂದಿದೆ.

ಇನ್ನು ಲ್ಯಾಪ್‌ಟಾಪ್ ಡ್ಯುಯಲ್ 2W ಸ್ಟೀರಿಯೋ ಸ್ಪೀಕರ್‌ಗಳು ಮತ್ತು 720p HD ವೆಬ್‌ಕ್ಯಾಮ್ ಅನ್ನು ಹೊಂದಿದೆ. ಇದು 4-ಸೆಲ್ 90Wh ಬ್ಯಾಟರಿಯನ್ನು ಒಳಗೊಂಡಿದ್ದು, 10 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ HDMI 2.1 ಪೋರ್ಟ್, ಮೈಕ್ರೊ SD ಕಾರ್ಡ್ ಸ್ಲಾಟ್, ಎರಡು USB 3.2 Gen 2 ಪೋರ್ಟ್‌ಗಳು, ಒಂದು USB 3.2 Gen 2 ಟೈಪ್-C ಪೋರ್ಟ್, ಒಂದು USB 2.0 ಪೋರ್ಟ್, ಒಂದು USB 4.0 ಪೋರ್ಟ್, ಈಥರ್ನೆಟ್, ಬ್ಲೂಟೂತ್ v5.1, ಮತ್ತು Wi-Fi 6E ಅನ್ನು ಬೆಂಬಲಿಸಲಿದೆ.

ಲ್ಯಾಪ್‌ಟಾಪ್‌ ವಲಯದಲ್ಲಿ ಧೂಳೆಬ್ಬಿಸಿದ ಏಸರ್‌ ನೈಟ್ರೋ 16!ಭಾರತದಲ್ಲಿ ಬೆಲೆ ಎಷ್ಟು

ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
ಏಸರ್‌ ನೈಟ್ರೋ 16 ಲ್ಯಾಪ್‌ಟಾಪ್‌ ಭಾರತದಲ್ಲಿ ತನ್ನ 8GB RAM ಮತ್ತು 512GB ಸ್ಟೋರೇಜ್‌ ನೊಂದಿಗೆ RTX 4050 GPU ಆಯ್ಕೆಗೆ 1,14,999ರೂ. ಬೆಲೆ ಹೊಂದಿದೆ. ಇದರ RTX 4060 ಜೊತೆಗೆ 16GB + 512GB ಕಾನ್ಫಿಗರೇಶನ್ ಆಯ್ಕೆಯು 1,43,558 ರೂ. ಬೆಲೆಯನ್ನು ಪಡೆದುಕೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ ಅಬ್ಸಿಡಿಯನ್ ಕಪ್ಪು ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದನ್ನು ನೀವು ದೇಶಾದ್ಯಂತದ ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಸಬಹುದಾಗಿದೆ.

Best Mobiles in India

English summary
Acer Nitro 16 With Ryzen 7 7840 SoC Launched In India: Price details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+