ಭಾರತದ ಮಾರುಕಟ್ಟೆಯಲ್ಲಿ ಏಸರ್ ನೈಟ್ರೋ 5 ಗೇಮಿಂಗ್ ಲ್ಯಾಪ್‌ಟಾಪ್ ಬಿಡುಗಡೆ!

|

ಟೆಕ್‌ ವಲಯದಲ್ಲಿ ಹಲವು ವಿಭಿನ್ನ ಬಗೆಯ ಲ್ಯಾಪ್‌ಟಾಪ್‌ಗಳು ಲಭ್ಯವಿವೆ. ಗ್ರಾಹಕರಿಗೆ ತಕ್ಕಂತೆ ವೈವಿಧ್ಯಮಯವಾದ ಫೀಚರ್ಸ್‌ಗಳನ್ನ ಒಳಗೊಂಡಿರುವ ಲ್ಯಾಪ್‌ಟಾಪ್‌ಗಳನ್ನ ಹಲವು ಕಂಪೆನಿಗಳು ಬಿಡುಗಡೆ ಮಾಡಿವೆ. ಇವುಗಳಲ್ಲಿ ಏಸರ್‌ ಕಂಪೆನಿ ಕೂಡ ಒಂದಾಗಿದ್ದು, ವಿಭಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿದೆ. ಅಲ್ಲದೆ ಗೇಮಿಂಗ್‌ ಮಾದರಿಯ ಲ್ಯಾಪ್‌ಟಾಪ್‌ಗಳನ್ನ ಸಹ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಮತ್ತೊಂದು ಹೊಸ ಮಾದರಿಯ ಗೇಮಿಂಗ್‌ ಲ್ಯಾಪ್‌ಟಾಪ್‌ ಅನ್ನು ಬಿಡುಗಡೆ ಮಾಡಿದೆ.

ಏಸರ್‌

ಹೌದು, ಏಸರ್‌ ಕಂಪೆನಿ ತನ್ನ ಹೊಸ ಏಸರ್‌ ನೈಟ್ರೋ 5 ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಲ್ಯಾಪ್‌ಟಾಪ್‌ ಇತ್ತೀಚಿನ 10 ನೇ ತಲೆಮಾರಿನ ಇಂಟೆಲ್ ಕೋರ್ ಎಚ್-ಸೀರಿಸ್ ಪ್ರೊಸೆಸರ್‌ಗಳನ್ನು ಒಳಗೊಂಡಿದೆ. ಇನ್ನು ಏಸರ್ ನೈಟ್ರೋ 5 ಲ್ಯಾಪ್‌ಟಾಪ್‌ ಕೋರ್I7 CPU ಮತ್ತು NVIDIA ಜೀಫೋರ್ಸ್ RTX2060 GPUವರೆಗೆ ಹೋಗುವ ಅನೇಕ ಸಂರಚನೆಗಳನ್ನ ಹೊಂದಿದೆ. ಇದಲ್ಲದೆ ಈ ಲ್ಯಾಪ್‌ಟಾಪ್‌ ಹೆಚ್ಚಿನ ರಿಫ್ರೆಶ್ ರೇಟ್‌ ಸ್ಕ್ರೀನ್‌ ಆಯ್ಕೆಯನ್ನ ಹೊಂದಿರಲಿವೆ ಎಂದು ಹೇಳಿದೆ.

ಏಸರ್ ನೈಟ್ರೊ 5

ಏಸರ್ ನೈಟ್ರೊ 5 ಲ್ಯಾಪ್‌ಟಾಪ್‌ ನೀವು 15-ಇಂಚಿನ ಮತ್ತು 17-ಇಂಚಿನ ಸ್ಕ್ರೀನ್‌ ಪಡೆಯಬಹುದಾಗಿದೆ. ಇನ್ನು ಈ ಹೊಸ ಗೇಮಿಂಗ್ ಲ್ಯಾಪ್‌ಟಾಪ್‌ಗಳು ಹಿಂದಿನ ನೈಟ್ರೊ ಸರಣಿಯ ಲ್ಯಾಪ್‌ಟಾಪ್‌ಗಳ ‘ಗೇಮರ್' ಥೀಮ್ ಅನ್ನು ಉಳಿಸಿಕೊಂಡಿದೆ. ಇದಲ್ಲದೆ ಏಸರ್‌ ನೈಟ್ರೊ 5 ಲ್ಯಾಪ್‌ಟಾಪ್‌ 15-ಇಂಚಿನ ಮತ್ತು 17-ಇಂಚಿನ ಪರದೆಯ ಆಯ್ಕೆಗಳಲ್ಲಿ ವಿಂಡೋಸ್ 10 ಹೋಮ್‌ನ 64-ಬಿಟ್ ಆವೃತ್ತಿಯನ್ನು ಇನ್‌ಸ್ಟಾಲ್‌ ಮಾಡಲಾಗಿರುತ್ತದೆ ಎಂದು ಹೇಳಲಾಗ್ತಿದೆ. ಇದಲ್ಲದೆ ಈ ಡಿಸ್‌ಪ್ಲೇ 1,920x1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ.

ನೈಟ್ರೊ 5

ಇದಲ್ಲದೆ ಈ ಡಿಸ್‌ಪ್ಲೇ IPS ಸ್ಕ್ರೀನ್‌ ವಿನ್ಯಾಸವನ್ನ ಹೊಂದಿದೆ. ಅಲ್ಲದೆ ಇದು ಸ್ಕ್ರೀನ್-ಟು-ಬಾಡಿ 80% ಅನುಪಾತವನ್ನು ಹೊಂದಿದೆ. 3ms ಕಡಿಮೆ ಲೇಟೆನ್ಸಿ ಹೊಂದಿರುವ ನೀವು 144Hz ರಿಫ್ರೆಶ್ ರೇಟ್‌ ಸ್ಕ್ರೀನ್‌ ಅನ್ನು ಒಳಗೊಂಡಿದೆ. ನೈಟ್ರೊ 5 ಅನ್ನು 10ನೇ ತಲೆಮಾರಿನ ಇಂಟೆಲ್ ಕೋರ್ I7 H-ಸೀರಿಸ್ ಪ್ರೊಸೆಸರ್ ಹೊಂದಿದೆ. ಅಲ್ಲದೆ ಇದು ಎರಡು ಸೋಡಿ IMM ಮಾಡ್ಯೂಲ್‌ಗಳನ್ನು ಬಳಸಿಕೊಂಡು 32GB RAM ಅನ್ನು ಹೊಂದಿದೆ. ಅಲ್ಲದೆ ಇದರಲ್ಲಿ RAID 0 ಟೆಕ್ನಾಲಜಿಯನ್ನ ನೀಡಲಾಗಿದ್ದು, ಡ್ಯುಯಲ್ m2 pcie ssd ಬೆಂಬಲವನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 6, ಬ್ಲೂಟೂತ್ v5.0, ಒಂದು HDMI ಪೋರ್ಟ್, ಎರಡು ಯುಎಸ್‌ಬಿ 3.2 ಜನ್ 1 ಪೋರ್ಟ್‌, ಒಂದು ಯುಎಸ್‌ಬಿ ಟೈಪ್-ಸಿ ಪೋರ್ಟ್, ಒಂದು ಯುಎಸ್‌ಬಿ 3.2 ಜನ್ 2 ಪೋರ್ಟ್ ಅನ್ನು ಬೆಂಬಲಿಸಲಿದೆ.

ಏಸರ್ ನೈಟ್ರೊ 5

ಇನ್ನು ಏಸರ್ ನೈಟ್ರೊ 5 ಲ್ಯಾಪ್‌ಟಾಪ್‌ 57.5Wh ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿದ್ದು, ಕಂಪ್ಲಿಟ್‌ ಚಾರ್ಜಿಂಗ್‌ನಲ್ಲಿ 10 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಇದಲ್ಲದೆ 720p ರೆಸಲ್ಯೂಶನ್‌ ಹೊಂದಿರುವ ಎಚ್‌ಡಿ ವೆಬ್‌ಕ್ಯಾಮ್ ಅನ್ನು ಸಹ ಹೊಂದಿದೆ. ಇನ್ನು ಭಾರತದಲ್ಲಿ ಏಸರ್ ನೈಟ್ರೋ 5 ಬೆಲೆ ರೂ. 72,990 ಆಗಿದ್ದು. ಇದು ಲ್ಯಾಪ್‌ಟಾಪ್ ಏಸರ್ ಇಂಡಿಯಾ ವೆಬ್‌ಸೈಟ್, ಅಧಿಕೃತ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಿಂದ ಖರೀದಿಸಲು ಲಭ್ಯವಿದೆ.

Best Mobiles in India

English summary
Acer Nitro 5 gaming laptop has been launched in India, featuring the latest 10th generation Intel Core H-series processors.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X