ಭಾರತದಲ್ಲಿ ಎರಡು ಹೊಸ ಸ್ಮಾರ್ಟ್ ಟ್ಯಾಬ್ ಅನಾವರಣ.. ಇವುಗಳ ಬೆಲೆ ಇಷ್ಟೇನಾ?
ಇಂದಿನ ದಿನಗಳಲ್ಲಿ ಸ್ಮಾರ್ಟ್ ಟ್ಯಾಬ್ಲೆಟ್‌ಗಳಿಗೆ ಭಾರಿ ಬೇಡಿಕೆಯಿದೆ. ಸ್ಮಾರ್ಟ್ ಟ್ಯಾಬ್ಲೆಟ್‌ಗಳ ಬಳಕೆ ಬ್ಯುಸಿನೆಸ್ ವಲಯಕ್ಕೆ ಮಾತ್ರವಲ್ಲದೆ ಶಿಕ್ಷಣ ಸೇರಿದಂತೆ ಹಲವು ವಲಯಗಳಿಗೂ ವಿಸ್ತರಿಸಿದೆ. ಇದಕ್ಕೆ ತಕ್ಕಂತೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ಕೂಡ ಸ್ಮಾರ್ಟ್ ಟ್ಯಾಬ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇದರಲ್ಲಿ ಏಸರ್ ಕಂಪೆನಿ ಕೂಡ ಒಂದೆನಿಸಿಕೊಂಡಿದೆ.
ಹೌದು, ಏಸರ್ ಕಂಪೆನಿ ಹೊಸದಾಗಿ ಏಸರ್ ಒನ್ 10 ಮತ್ತು ಏಸರ್ ಒನ್ 8 ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡಿದೆ. ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಈ ಎರಡು ಟ್ಯಾಬ್ಲೆಟ್‌ಗಳು ಆಕ್ಟಾ-ಕೋರ್ ಮೀಡಿಯಾ ಟೆಕ್ MT8768 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಹಾಗಾದ್ರೆ ಏಸರ್ ಕಂಪೆನಿ ಪರಿಚಯಿಸಿರುವ ಹೊಸ ಟ್ಯಾಬ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏಸರ್ ಒನ್ 10 ಮತ್ತು ಏಸರ್ ಒನ್ 8 ವಿಶೇಷತೆ ಏನು?
ಏಸರ್ ಒನ್ 10.1 ಇಂಚಿನ WUXGA ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 1920 x 1200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇನ್ನು ಈ ಟ್ಯಾಬ್ 350 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಲೆವೆಲ್ ಅನ್ನು ನೀಡಲಿದೆ. ಆದರೆ ಏಸರ್ ಒನ್ 8 ಸ್ಮಾರ್ಟ್ ಟ್ಯಾಬ್ 8.7 ಇಂಚಿನ WXGA+ IPS ಡಿಸ್‌ಪ್ಲೇಯನ್ನು ಹೊಂದಿದೆ.
ಇನ್ನು ಈ ಎರಡೂ ಟ್ಯಾಬ್ಲೆಟ್‌ಗಳು ಆಕ್ಟಾ-ಕೋರ್ ಮೀಡಿಯಾ ಟೆಕ್ MT8768 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಏಸರ್ ಒನ್ 10 ಟ್ಯಾಬ್ 6GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಆದರೆ ಏಸರ್ ಒನ್ 8 ಸ್ಮಾರ್ಟ್ ಟ್ಯಾಬ್ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ. ಈ ಎರಡೂ ಟ್ಯಾಬ್ಲೆಟ್‌ಗಳು ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ಸ್ಟೋರೇಜ್ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಕಲ್ಪಿಸಿವೆ.
ಏಸರ್ ಒನ್ 10 ಟ್ಯಾಬ್ಲೆಟ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಎರಡು ಕ್ಯಾಮೆರಾಗಳು ಕೂಡ 13 ಮೆಗಾಪಿಕ್ಸೆಲ್ ಸೋನಿ IMX ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸ್ಥಿರ-ಫೋಕಸ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಏಸರ್ ಒನ್ 8 ಟ್ಯಾಬ್ಲೆಟ್ 8 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದು 2 ಮೆಗಾಪಿಕ್ಸೆಲ್ ಸ್ಥಿರ-ಫೋಕಸ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಏಸರ್ ಒನ್ 10 ಟ್ಯಾಬ್ 7,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಆದರೆ ಏಸರ್ 8 ಟ್ಯಾಬ್ 5,100mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಈ ಎರಡೂ ಟ್ಯಾಬ್‌ಗಳು ಸ್ಟಿರಿಯೊ ಔಟ್‌ಪುಟ್‌ನೊಂದಿಗೆ ಡ್ಯುಯಲ್ ಸ್ಪೀಕರ್‌ಗಳನ್ನು ಸಹ ಹೊಂದಿವೆ. ಈ ಟ್ಯಾಬ್‌ಗಳು ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G (SIM), Wi-Fi 5, ಬ್ಲೂಟೂತ್ 5.0, USB ಟೈಪ್-C ಮತ್ತು GPS ಸಂಪರ್ಕವನ್ನು ಬೆಂಬಲಿಸಲಿವೆ.
ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
ಏಸರ್ ಒನ್ 10 ಟ್ಯಾಬ್‌ನ ಬೇಸ್ ಮಾಡೆಲ್ 4GB + 64GB ರೂಪಾಂತರದ ಆಯ್ಕೆಯು ಭಾರತದಲ್ಲಿ 17,990ರೂ. ಬೆಲೆಯಲ್ಲಿ ಬರಲಿದೆ. ಇನ್ನು ಏಸರ್ ಒನ್ 8 ಟ್ಯಾಬ್ 3GB + 32GB ರೂಪಾಂತರದ ಆಯ್ಕೆಗೆ 12,990ರೂ.ಬೆಲೆಯಲ್ಲಿ ಲಭ್ಯವಾಗಲಿದೆ. ಈ ಎರಡೂ ಟ್ಯಾಬ್ಲೆಟ್‌ಗಳು ದೇಶದ ಪ್ರಮುಖ ಎಲೆಕ್ಟ್ರಾನಿಕ್ಸ್ ಆನ್‌ಲೈನ್ ಸ್ಟೋರ್‌ಗಳು ಮತ್ತು ವಿಶೇಷ ಏಸರ್ ರಿಟೇಲ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿದೆ.


Click it and Unblock the Notifications








