Home
ಸುದ್ದಿಜಾಲ

ಏಸರ್‌ ಕಂಪೆನಿಯಿಂದ ಹೊಸ ಮಾನಿಟರ್‌ ಬಿಡುಗಡೆ: ಗೇಮಿಂಗ್‌ ಪ್ರಿಯರೇ ಮೇನ್‌ ಟಾರ್ಗೆಟ್‌!

ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಮಾನಿಟರ್‌ಗಳಿಗೆ ಭಾರಿ ಡಿಮ್ಯಾಂಡ್‌ ಇದೆ. ವಿಭಿನ್ನ ಶೈಲಿಯ ಮಾನಿಟರ್‌ಗಳ ಮೂಲಕ ತನ್ನ ಮಾನಿಟರ್‌ಗಳ ಶ್ರೇಣಿಯನ್ನು ವಿಸ್ತರಿಸಿದೆ. ಇದೀಗ ಭಾರತದಲ್ಲಿ ಹೊಸ ಏಸರ್‌ SA272U E ಮಾನಿಟರ್ ಅನ್ನು ಪರಿಚಯಿಸಿದೆ. ಇದು ಹೆಚ್ಚಿನ ರಿಫ್ರೆಶ್ ರೇಟ್‌, ಫಾಸ್ಟರ್‌ ರೆಸ್ಪಾನ್ಸ್‌ ಟೈಂ, ಐ ಕೇರ್‌ ಟೆಕ್ನಾಲಜಿ ಸೇರಿದಂತೆ ಹೆಚ್ಚಿನ ಪ್ರೀಮಿಯಂ ವಿಶೇಷತೆಗಳನ್ನು ಹೊಂದಿದೆ.

ಹೌದು, ಏಸರ್‌ SA272U E ಮಾನಿಟರ್ ಭಾರತದಲ್ಲಿ ಬಿಡುಗಡೆ ಆಗಿದೆ. ಈ ಮಾನಿಟರ್ ಮನೆ-ಕಚೇರಿ ಮತ್ತು ಗೇಮಿಂಗ್ ಉದ್ದೇಶಗಳಿಗಾಗಿ ಸೂಕ್ತವಾಗಿದೆ. ಇದು ಬಳಕೆದಾರರಿಗೆ ಆರಾಮದಾಯಕವಾದ ವೀಕ್ಷಣೆಯ ಅನುಭವವನ್ನು ನೀಡಲು ವಿಷನ್‌ಕೇರ್ ತಂತ್ರಜ್ಞಾನ ಮತ್ತು ಬ್ಲೂ ಲೈಟ್ ಶೀಲ್ಡ್ ಅನ್ನು ಸಹ ಹೊಂದಿದೆ. ಹಾಗಾದ್ರೆ ಈ ಸ್ಮಾರ್ಟ್‌ ಮಾನಿಟರ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏಸರ್‌ ಕಂಪೆನಿಯಿಂದ ಹೊಸ ಮಾನಿಟರ್‌ ಬಿಡುಗಡೆ: ಗೇಮಿಂಗ್‌ ಪ್ರಿಯರೇ ಮೇನ್‌ ಟಾರ್ಗೆಟ್

Acer SA272U E ಮಾನಿಟರ್ ವಿಶೇಷತೆ ಏನು?
Acer SA272U E ಮಾನಿಟರ್ 27 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 2560 x 1440 ಪಿಕ್ಸೆಲ್‌ WQHD ರೆಸಲ್ಯೂಶನ್ ಸ್ಕ್ರೀನ್‌ ಹೊಂದಿದೆ. ಇದಲ್ಲದೆ ಮಾನಿಟರ್‌ LED IPS ಬ್ಯಾಕ್‌ಲಿಟ್ ಪ್ಯಾನೆಲ್ ಅನ್ನು ಹೊಂದಿದೆ. ಇನ್ನು ಮಾನಿಟರ್ ನಯವಾದ ದೃಶ್ಯ ಅನುಭವಕ್ಕಾಗಿ 100Hz ರಿಫ್ರೆಶ್ ರೇಟ್‌, 1ms ಪ್ರತಿಕ್ರಿಯೆ ಸಮಯ ಮತ್ತು 250 nits ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದ್ದು, HDR10 ಗೆ ಬೆಂಬಲವನ್ನು ಸಹ ಪಡೆದಿದೆ.

Acer SA272U E ಮಾನಿಟರ್ ಕಣ್ಣಿನ ಆಯಾಸವನ್ನು ಕಡಿಮೆ ಮಾಡಲು ಮತ್ತು ಆರಾಮದಾಯಕವಾದ ವೀಕ್ಷಣೆಯ ಅನುಭವವನ್ನು ನೀಡಲು ವಿಷನ್‌ಕೇರ್ ತಂತ್ರಜ್ಞಾನ ಮತ್ತು ಬ್ಲೂ ಲೈಟ್ ಶೀಲ್ಡ್ ಅನ್ನು ಸಹ ಹೊಂದಿದೆ. ಇದರಲ್ಲಿ ಮಂದಗತಿ-ಮುಕ್ತ ಮತ್ತು ತೊದಲುವಿಕೆ-ಮುಕ್ತ ಗೇಮಿಂಗ್ ಅನುಭವಕ್ಕಾಗಿ AMD ಫ್ರೀಸಿಂಕ್‌ ಟೆಕ್ನಾಲಜಿಯನ್ನು ನೀಡಲಾಗಿದೆ. ಇದರ ವಿನ್ಯಾಸ-ವೈಸ್, ಮಾನಿಟರ್ ಕೇವಲ 7.2mm ನ ಅಲ್ಟ್ರಾ-ಥಿನ್ ಪ್ರೊಫೈಲ್ ಅನ್ನು ಹೊಂದಿದೆ. ಜೊತೆಗೆ ಐಚ್ಛಿಕ VESA ಗೋಡೆಯ ಆರೋಹಣವೂ ಸಹ ಇದರಲ್ಲಿ ನೀಡಲಾಗಿದೆ.

ಇನ್ನು ಈ ಮಾನಿಟರ್‌ ಆಡಿಯೊ ವಿಭಾಗದಲ್ಲಿಯೂ ಮುಂಚೂಣಿಯಲ್ಲಿದೆ. ಅದರಂತೆ ಇದರಲ್ಲಿ ಎರಡು ಸ್ಟಿರಿಯೊ ಸ್ಪೀಕರ್‌ಗಳನ್ನು ನೀಡಲಾಗಿದ್ದು, 1W ಧ್ವನಿ ಉತ್ಪಾದನೆಯನ್ನು ಉತ್ಪಾದಿಸುತ್ತದೆ. ಅಲ್ಲದೆ ಮಾನಿಟರ್‌ಗಳಲ್ಲಿನ ಸಂಪರ್ಕ ಆಯ್ಕೆಗಳಲ್ಲಿ ಎರಡು HDMI ಪೋರ್ಟ್‌ಗಳು, ಒಂದು ಡಿಸ್‌ಪ್ಲೇ ಪೋರ್ಟ್ ಮತ್ತು ಆಡಿಯೊ ಔಟ್ ಅನ್ನು ಒಳಗೊಂಡಿದೆ.

Acer SA272U E ಮಾನಿಟರ್‌ ಅನ್ನು ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 12,799ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ಡಿವೈಸ್‌ ಮೇಲೆ ಏಸರ್‌ ಬ್ರ್ಯಾಂಡ್ ಮೂರು ವರ್ಷಗಳ ವಾರಂಟಿಯನ್ನು ಒದಗಿಸುತ್ತಿದ್ದು, ಶೀಘ್ರದಲ್ಲೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮತ್ತು ಅಮೆಜಾನ್‌ನಿಂದ ಖರೀದಿಗೆ ಲಭ್ಯವಾಗಲಿದೆ.

ಇನ್ನು ಕಳೆದ ವರ್ಷದ ಅಂತ್ಯದಲ್ಲಿ ಏಸರ್‌ ಕಂಪೆನಿ ಹೊಸದಾಗಿ ಏಸರ್‌ ನೈಟ್ರೋ V 16 ಲ್ಯಾಪ್‌ಟಾಪ್‌ ಪರಿಚಯಿಸಿತ್ತು. ಈ ಲ್ಯಾಪ್‌ಟಾಪ್‌ 16 ಇಂಚಿನ WQXGA ಹಾಗೂ WUXGA ಎರಡು ಆಯ್ಕೆಯಲ್ಲಿ ಈ ಲ್ಯಾಪ್‌ಟಾಪ್ ಕಂಡುಬಂದಿದೆ. ಇದು 165 Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದಿದ್ದು, ಈ ಮೂಲಕ ಗೆಮಿಂಗ್‌ನಲ್ಲಿ ಉತ್ತಮ ಅನುಭವ ಪಡೆದುಕೊಳ್ಳಬಹುದು. ಇದರ ಆಕಾರ ಅನುಪಾತ 16:10 ಇದ್ದು, ಪ್ರತಿಕ್ರಿಯೆ ಸಮಯ 3 ms ಆಗಿದೆ. ಇದರಿಂದಾಗಿ ಯಾವುದೇ ಕಾರ್ಯಗಳನ್ನು ಸಹ ಸರಳವಾಗಿ ಮಾಡಬಹುದಾಗಿದೆ.

ಇದು ರೈಜೆನ್ 8040 ಸೀರಿಸ್‌ ಪ್ರೊಸೆಸರ್‌(Ryzen 8040 Series CPU) ಬಲ ಪಡೆದುಕೊಂಡಿದ್ದು, ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಉತ್ತಮ ಗ್ರಾಫಿಕ್‌ ಬೆಂಬಲ ಹಾಗೂ 2 TB ವರೆಗಿನ ಸ್ಟೋರೇಜ್‌ ಆಯ್ಕೆ ಇದಕ್ಕೆ ಇನ್ನಷ್ಟು ಶಕ್ತಿ ನೀಡಿದೆ.

Best Mobiles in India

English summary
Acer SA272U E Monitor Launched In India: Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+