ಭಾರತದಲ್ಲಿ ಏಸರ್ ಸ್ವಿಫ್ಟ್ ಲ್ಯಾಪ್‌ಟಾಪ್ ಸರಣಿ ಬಿಡುಗಡೆ!
ಜನಪ್ರಿಯ ಲ್ಯಾಪ್‌ಟಾಪ್ ತಯಾರಕ ಏಸರ್ ಕಂಪೆನಿ ತನ್ನ ಪ್ರೀಮಿಯಂ ವಿಂಡೋಸ್ ಲ್ಯಾಪ್‌ಟಾಪ್‌ಗಳ ನವೀಕರಿಸಿದ ಶ್ರೇಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಶ್ರೇಣಿಯ ಲ್ಯಾಪ್‌ಟಾಪ್‌ಗಳು 11 ನೇ ಜನ್ ಇಂಟೆಲ್ ಕೋರ್ ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇನ್ನು 11 ನೇ ತಲೆಮಾರಿನ ನವೀಕರಣವನ್ನು ಆಸ್ಪೈರ್ 5, ಸ್ವಿಫ್ಟ್ 3 ಎಕ್ಸ್, ಸ್ವಿಫ್ಟ್ 3 14, ಸ್ವಿಫ್ಟ್ 3 ಮತ್ತು ಸ್ವಿಫ್ಟ್ 5ಗೆ ಅನ್ವಯಿಸಲಾಗಿದೆ. ಅಲ್ಲದೆ ಏಸರ್ ಈ ಎಲ್ಲಾ ಮಾದರಿಗಳ ಬೆಲೆಗಳನ್ನು ಪರಿಷ್ಕರಿಸಿದ್ದು, ನವೆಂಬರ್ ಮೊದಲ ವಾರದಿಂದ ಮಾರಾಟಕ್ಕೆ ಇಡಲಿದೆ.

ಹೌದು, ಏಸರ್ ಸಂಸ್ಥೆ ತನ್ನ 11 ನೇ ತಲೆಮಾರಿ ಪ್ರೊಸೆಸರ್ ಒಳಗೊಂಡ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿದೆ. ಈ ಲ್ಯಾಪ್‌ಟಾಪ್‌ಗಳಲ್ಲಿ ಕೆಲವು ಇಂಟೆಲ್ ಇವೊ ಪ್ರೋಗ್ರಾಂಗೆ ಅನುಗುಣವಾಗಿರುತ್ತವೆ ಮತ್ತು ಅವುಗಳಲ್ಲಿ ಕೆಲವು ಇಂಟೆಲ್ ಐರಿಸ್ ಎಕ್ಸ್‌ಇ ಮತ್ತು ಇಟೆಲ್ ಎಕ್ಸ್‌ಇ ಮ್ಯಾಕ್ಸ್ ಆಧಾರಿತ ಲ್ಯಾಪ್‌ಟಾಪ್‌ಗಳನ್ನು ಸಹ ಪರಿಚಯಿಸುತ್ತವೆ. ಈ ಪ್ರೊಸೆಸರ್‌ಗಳು ತ್ವರಿತ ವೇಕ್, ಇಂಟೆಲ್ ಐರಿಸ್ ಕ್ಸೆ ಗ್ರಾಫಿಕ್ಸ್‌ನೊಂದಿಗೆ ಶಕ್ತಿಯುತವಾದ ಗ್ರಾಫಿಕ್ಸ್ ಕಾರ್ಯಕ್ಷಮತೆ, ಬೆಸ್ಟ್-ಇನ್-ಕ್ಲಾಸ್ ವಾಯರ್‌ಲೆಸ್ ಮತ್ತು ಥಂಡರ್ಬೋಲ್ಟ್ 4 ಸಂಪರ್ಕವನ್ನು ಹೊಂದಿವೆ. ಹಾಗಾದ್ರೆ ಏಸರ್ 11 ನೇ ತಲೆಮಾರಿನ ಲ್ಯಾಪ್‌ಟಾಪ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏಸರ್ ಸ್ವಿಫ್ಟ್ 5
ಏಸರ್ ಸ್ವಿಫ್ಟ್ 5 ಲ್ಯಾಪ್‌ಟಾಪ್ ಹಗುರವಾದ ವಿನ್ಯಾಸ, ಶಕ್ತಿಯುತ ಕಾರ್ಯಕ್ಷಮತೆ ಯನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ 11ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ಗಳನ್ನು ಹೊಂದಿದ್ದು, ಇದನ್ನು ಇಂಟೆಲ್ ಇವೊ ಪ್ಲಾಟ್‌ಫಾರ್ಮ್‌ಗೆ ಪರಿಶೀಲಿಸಲಾಗುತ್ತದೆ. ಆದ್ದರಿಂದ, ಲ್ಯಾಪ್ಟಾಪ್ 17 ಗಂಟೆಗಳ ಬ್ಯಾಟರಿ ಅವಧಿಯನ್ನು ಒದಗಿಸುತ್ತದೆ ಎಂದು ಏಸರ್ ಕಂಪೆನಿ ಹೇಳಿಕೊಂಡಿದೆ. ಈ ಲ್ಯಾಪ್‌ಟಾಪ್ 14 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 340 ನಿಟ್ಸ್ ಬ್ರೈಟ್‌ನೆಶ್ ಮಟ್ಟ ಮತ್ತು 100% sRGB ಬಣ್ಣದ ಹರವು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ ಬೆಲೆ 79,999 ರೂ ಬೆಲೆಯನ್ನು ಹೊಂದಿದೆ.

ಏಸರ್ ಸ್ವಿಫ್ಟ್ 3X
ಸ್ವಿಫ್ಟ್ 3X ಹೊಸ ಇಂಟೆಲ್ ಐರಿಸ್ ಎಕ್ಸ್ ಮ್ಯಾಕ್ಸ್ ಗ್ರಾಫಿಕ್ಸ್ ಜೊತೆಗೆ 11ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ಗಳನ್ನು ಹೊಂದಿದೆ. ಇದು ಫೋಟೋ ಮತ್ತು ವಿಡಿಯೋ ಎಡಿಟಿಂಗ್‌ನಂತಹ ಗ್ರಾಫಿಕ್ಸ್-ತೀವ್ರವಾದ ಕಾರ್ಯಗಳಿಗೆ ಸಹಾಯ ಮಾಡುತ್ತದೆ. ಇನ್ನು ಈ ಲ್ಯಾಪ್‌ಟಾಪ್ 14 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 72% ಎನ್‌ಟಿಎಸ್‌ಸಿ ಬಣ್ಣದ ಹರವು ಬೆಂಬಲಿಸುತ್ತದೆ. ಅಲ್ಲದೆ 84% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ನೀಡುತ್ತದೆ. ಜೊತೆಗೆ ಈ ಲ್ಯಾಪ್‌ಟಾಪ್ 58.7Wh ಬ್ಯಾಟರಿಯನ್ನು ಹೊಂದಿದ್ದು, 17.5 ಗಂಟೆಗಳವರೆಗೆ ಇರುತ್ತದೆ. ಇನ್ನು ಈ ಲ್ಯಾಪ್‌ಟಾಪ್ ಬೆಲೆ 79,999 ರೂಗಳಿಂದ ಪ್ರಾರಂಭವಾಗುತ್ತದೆ.

ಏಸರ್ ಸ್ವಿಫ್ಟ್ 3
ಏಸರ್ ಸ್ವಿಫ್ಟ್ 3 ಲ್ಯಾಪ್‌ಟಾಪ್ ಕೂಡ 11 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಇದು ಇಂಟೆಲ್ ಇವೊ ಪ್ಲಾಟ್‌ಫಾರ್ಮ್ ಲ್ಯಾಪ್‌ಟಾಪ್ ವಿನ್ಯಾಸವೆಂದು ಪ್ರಮಾಣೀಕರಿಸಲ್ಪಟ್ಟಿದೆ. ಈ ಲ್ಯಾಪ್‌ಟಾಪ್ 13.5-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 3: 2 ರಚನೆಯ ಅನುಪಾತವನ್ನು ಹೊಂದಿದೆ. ಅಲ್ಲದೆ 400-ನಿಟ್ ಬ್ರೈಟ್‌ನೆಸ್ ರೇಟಿಂಗ್ ಹೊಂದಿದೆ. ಇದು 16 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಮತ್ತು 4 ಗಂಟೆಗಳ ಬ್ಯಾಟರಿ ಅವಧಿಯನ್ನು ಒದಗಿಸಲು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇನ್ನು ಈ ಲ್ಯಾಪ್‌ಟಾಪ್ ಬೆಲೆ 67,999 ರೂಗಳಿಂದ ಪ್ರಾರಂಭವಾಗುತ್ತದೆ.


Click it and Unblock the Notifications