ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದ ಏಸರ್‌ ವೆರಿಟನ್‌ N ಸರಣಿಯ ಕಂಪ್ಯೂಟರ್‌!

|

ಟೆಕ್ನಾಲಜಿ ಮುಂದುವರೆದಂತೆ ಸಾಕಷ್ಟು ವೈವಿಧ್ಯಮಯವಾದ ಸ್ಮಾರ್ಟ್‌ ಪ್ರಾಡಕ್ಟಗಳನ್ನ ನಾವಿಂದು ಕಾಣಬಹುದಾಗಿದೆ. ಟೆಕ್‌ ವಲಯವೇ ಹಾಗೇ ನವೀನ ಮಾದರಿಯ ಸ್ಮಾರ್ಟ್‌ ಪ್ರಾಡಕ್ಟ್‌ಗಳು ಇಲ್ಲಿ ಬಿಡುಗಡೆ ಆಗುತ್ತಲೇ ಇರುತ್ತವೇ. ಇನ್ನು ಟೆಕ್‌ ವಲಯದಲ್ಲಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ಸೇರದಿಂತೆ ವೈವಿಧ್ಯಮಯವಾದ ಸ್ಮಾರ್ಟ್‌ಪ್ರಾಡಕ್ಟ್‌ಗಳು ಲಬ್ಯವಿವೆ. ಇನ್ನು ಲ್ಯಾಪ್‌ಟಾಪ್‌ ವಲಯದಲ್ಲಿ ಸಾಕಷ್ಟು ವಿಭಿನ್ನ ಬಗೆಯ ಕಂಪೆನಿಗಳು ತಮ್ಮ ಹಲವು ಲ್ಯಾಪ್‌ಟಾಪ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿವೆ. ಇವುಗಳಲ್ಲಿ ಏಸರ್‌ ಕಂಪೆನಿ ಕೂಡ ಒಂದಾಗಿದ್ದು, ಇದೀಗ ತನ್ನ ಮತ್ತೊಂದು ಕಂಪ್ಯೂಟರ್ ಅನ್ನು ಬಿಡುಗಡೆ ಮಾಡಿದೆ.

ಏಸರ್‌

ಹೌದು, ಏಸರ್‌ ಕಂಪೆನಿ ತನ್ನ ಹೊಸ ಏಸರ್‌ ವೆರಿಟನ್‌ N ಸರಣಿಯ ಕಂಪ್ಯೂಟರ್‌ ಗಳನ್ನ ಬಿಡುಗಡೆ ಮಾಡಿದೆ. ಸದ್ಯ ಕೊವಿಡ್‌-19 ಕಾರಣದಿಂದಾಗಿ ಬಹುತೇಕ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಹೇಳಿವೆ. ಸದ್ಯ ಇದೇ ಕಾರಣದಿಂದಲೇ ಇ-ಲರ್ನಿಂಗ್ ಮತ್ತು ವ್ಯವಹಾರವನ್ನು ಬೆಂಬಲಿಸಲು ಏಸರ್ ತನ್ನ ವೆರಿಟನ್ ಎನ್ ಸರಣಿಯ ಬಜೆಟ್ ಸ್ನೇಹಿ ಕಂಪ್ಯೂಟರ್‌ ಗಳನ್ನು ಭಾರತದಲ್ಲಿ ಪ್ರಾರಂಭಿಸಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಹಾಗೂ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏಸರ್ ವೆರಿಟನ್ N

ಏಸರ್ ವೆರಿಟನ್ N

ಏಸರ್ ವೆರಿಟನ್ N ಸರಣಿಯ ಕಂಪ್ಯೂಟರ್ ಗಳು ಉತ್ತಮ ವಿನ್ಯಾಸವನ್ನ ಹೊಂದಿದ್ದು, ಬಜೆಟ್‌ ಬೆಲೆಯನ್ನ ಹೊಮದಿವೆ. ವರ್ಕ್‌ಫ್ರಮ್‌ ಹೋಮ್‌ ಕೆಲಸಕ್ಕೆ ಸೂಕ್ತವಾದ ಲ್ಯಾಪ್‌ಟಾಪ್‌ಗಳು ಇದಾಗಿದ್ದು, ಡ್ಯುಯಲ್-ಕೋರ್ ಅಥವಾ ಕ್ವಾಡ್-ಕೋರ್ ಇಂಟೆಲ್ ಪ್ರೊಸೆಸರ್‌ ಅನ್ನು ಒಳಗೊಂಡಿವೆ. ಹಾಗೇಯೇ ಈ ಲ್ಯಾಪ್‌ಟಾಪ್‌ 4GB RAM ಅನ್ನು ಹೊಂದಿದೆ. ಅಲ್ಲದೆ ಇದನ್ನು 8GB ವರೆಗೆ ವಿಸ್ತರಿಸಬಹುದಾಗಿದೆ. ಇನ್ನು ಈ ಕಂಪ್ಯೂಟರ್ ಪ್ರಾರಂಭದಲ್ಲಿಯೇ ವಿಂಡೋಸ್ 10ಅನ್ನು ಹೊಂದಿರಲಿದ್ದು, ಮುಂದಿನ ಆಪ್ಡೇಟ್‌ಗಳಿಗೆ ಸೂಕ್ತವಾದ ಅವಕಾಶವನ್ನ ಸಹ ಒಳಗೊಂಡಿದೆ.

ಕಂಪ್ಯೂಟರ್

ಇದಲ್ಲದೆ ಈ ಕಂಪ್ಯೂಟರ್ ‌ನಲ್ಲಿ ಹೆಚ್ಚಿನ ವೇಗದ ಡೇಟಾ ವರ್ಗಾವಣೆಗಾಗಿ ಎರಡು ಯುಎಸ್‌ಬಿ 3.1 ಜನ್ 1 ಪೋರ್ಟ್‌ಗಳನ್ನು ಒಳಗೊಂಡಂತೆ ಆರು ಯುಎಸ್‌ಬಿ ಪೋರ್ಟ್‌ಗಳನ್ನು ಒಳಗೊಂಡಿರುವ ವೈ-ಫೈ ಅನ್ನು ಬೆಂಬಲಿಸಲಿದೆ. ಅಲ್ಲದೆ ಇದರಲ್ಲಿ ಸಣ್ಣ ಫಾರ್ಮ್ ಫ್ಯಾಕ್ಟರ್ ಡೆಸ್ಕ್‌ಟಾಪ್ ವೆಸಾ ವಿನ್ಯಾಶವನ್ನ ನೀಡಲಾಗಿದೆ. ಜೊತೆಗೆ ಇದು ವೆಸಾ ಬೆಂಬಲವನ್ನು ಹೊಂದಿರುವ ಮಾನಿಟರ್‌ನ ಹಿಂದೆ ಆರೋಹಿಸಲು ಸಹ ಅನುವು ಮಾಡಿಕೊಡುತ್ತದೆ. ಇದರಿಂದ ಸೂಕ್ತವಾದ ಜಾಗದಲ್ಲಿ ಅಂದರೆ ಕಡಿಮೆ ಸ್ಪೇಸ್‌ ಹೊಂದಿರುವ ಜಾಗದಲ್ಲಿಯೂ ಕಾರ್ಯನಿರ್ವಹಿಸಲು ಉತ್ತಮ ಲ್ಯಾಪ್‌ಟಾಪ್‌ ಆಗಿದೆ.

ಕಂಪ್ಯೂಟರ್

ಇನ್ನು ಈ ಕಂಪ್ಯೂಟರ್ ವೆಸಾ ಆರೋಹಣ ಹೊಂದಿರುವುದರಿಂದ ಮಾನಿಟರ್‌ನ ಹಿಂಭಾಗದಲ್ಲಿ ಜೋಡಿಸಬಹುದಾಗಿದೆ. ಇದರಿಂದಾಗಿ ಇದು ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು ಬಳಸಲು ಸೂಕ್ತವಾದ ಲ್ಯಾಪ್‌ಟಾಪ್‌ ಆಗಿದೆ ಎಂದು ಹೇಳಲಾಗ್ತಿದೆ. ಇನ್ನು ಏಸರ್ ವೆರಿಟನ್ ಎನ್ ಸರಣಿಯ ಬೆಲೆ ರೂ. 9,999 ರೂ. ಆಗಿದ್ದು, ಏಸರ್ ಇಂಡಿಯಾ ವೆಬ್‌ಸೈಟ್ ಮತ್ತು ಭಾರತದಾದ್ಯಂತ 1500 ಕ್ಕೂ ಹೆಚ್ಚು ಏಸರ್ ಚಾನೆಲ್ ಪಾಲುದಾರ ಮಳಿಗೆಗಳಿಂದ ಖರೀದಿಸಲು ಲಭ್ಯವಿರುತ್ತದೆ ಎಂದು ಏಸರ್ ಹೇಳಿದೆ.

Best Mobiles in India

English summary
Acer Veriton N series is powered by dual-core or quad-core Intel processors.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X