ACT ಫೈಬರ್‌ನೆಟ್‌ನಿಂದ ಹೊಸ ಬ್ರಾಂಡ್‌ಬ್ಯಾಡ್ ಪ್ಲಾನ್ ಬಿಡುಗಡೆ! ವಿಶೇಷತೆ ಏನು?
ಪ್ರಸ್ತುತ ದಿನಗಳಲ್ಲಿ ತಡೆರಹಿತ ಇಂಟರ್‌ನೆಟ್ ಅನುಭವಕ್ಕಾಗಿ ಹೆಚ್ಚಿನ ಜನರು ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳನ್ನು ಬಳಸುತ್ತಿದ್ದಾರೆ. ವೇಗದ ಇಂಟರ್‌ನೆಟ್ ನೀಡುವ ಬ್ರಾಡ್‌ಬ್ಯಾಂಡ್‌ಪ್ಲಾನ್‌ಗಳು ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇದೇ ಕಾರಣಕ್ಕೆ ಹಲವು ಖಾಸಗಿ ಕಂಪೆನಿಗಳು ಸೇರಿದಂತೆ ಪ್ರಮುಖ ಟೆಲಿಕಾಂ ಸಂಸ್ಥೆಗಳು ಕೂಡ ಬ್ರಾಡ್‌ಬ್ಯಾಂಡ್ ಸೇವೆಯನ್ನು ನೀಡುತ್ತಿವೆ. ಈ ಪೈಕಿ ACT ಸಂಸ್ಥೆ ಕೂಡ ಸೇರಿದೆ. ACT ಫೈಬರ್‌ನೆಟ್ ಹಲವು ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳನ್ನು ಪರಿಚಯಿಸಿದೆ. ಇದೀಗ 50Mbps ಮತ್ತು 1Gbps ವೇಗ ನೀಡುವ ಹೊಸ ಬ್ರಾಡ್‌ಬ್ಯಾಂಡ್ ಪ್ಲಾನ್ ಲಾಂಚ್ ಮಾಡಿದೆ.

ಹೌದು, ACT ಫೈಬರ್‌ನೆಟ್ ಹೊಸದಾಗಿ ದೆಹಲಿಯಲ್ಲಿ 50Mbps ಮತ್ತು 1Gbps ವೇಗ ನೀಡುವ ಹೊಸ ಬ್ರಾಡ್‌ಬ್ಯಾಂಡ್ ಪ್ಲಾನ್ ಲಾಂಚ್ ಮಾಡಿದೆ. ಇನ್ನು ಈ ಹೊಸ ಬ್ರಾಡ್‌ಬ್ಯಾಂಡ್ ಯೋಜನೆಗಳು ಈಗಾಗಲೇ ಅಧಿಕೃತ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಆಗಿವೆ. ಇದಲ್ಲದೆ ಈ ಪ್ಲಾನ್ ಜೊತೆಗೆ ವಿಶೇಷ ಆಫರ್ ಅನ್ನು ಕೂಡ ಪರಿಚಯಿಸಲಾಗಿದೆ. ಗ್ರಾಹಕರು 50Mbps ವಾರ್ಷಿಕ ಯೋಜನೆಯನ್ನು ಖರೀದಿಸಿದರೆ, ACT Fibernet ಎರಡು ತಿಂಗಳ ಉಚಿತ Wi-Fi ಅನ್ನು ನೀಡುವುದಾಗಿ ಹೇಳಿದೆ. ಹಾಗಾದ್ರೆ ACT ಫೈಬರ್‌ನೆಟ್ ಪರಿಚಯಿಸಿರುವ ಹೊಸ ಬ್ರಾಡ್‌ಬ್ಯಾಂಡ್ ಪ್ಲಾನ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ACT ಫೈಬರ್‌ನೆಟ್ ಹೊಸದಾಗಿ ಪರಿಚಯಿಸಿರುವ ಹೊಸ 50Mbps ಬ್ರಾಡ್‌ಬ್ಯಾಂಡ್ ಪ್ಲಾನ್ ಬೆಲೆ ತಿಂಗಳಿಗೆ 549ರೂ. ಆಗಿದೆ. ಆದರೆ ಗ್ರಾಹಕರು ದೀರ್ಘಾವಧಿಯ ಯೋಜನೆಯನ್ನು ಆಯ್ಕೆ ಮಾಡಿದರೆ ACT ಫೈಬರ್‌ನೆಟ್ ಸೈಟ್ ಪ್ರಕಾರ 471ರೂ. ವೆಚ್ಚವಾಗುತ್ತದೆ. ಇನ್ನು ಈ ಆಫರ್ ಯಾವಾಗ ಮುಕ್ತಾಯಗೊಳ್ಳುತ್ತದೆ ಅನ್ನೊದು ಇನ್ನು ಖಚಿತವಾಗಿಲ್ಲ. ಸದ್ಯ 50Mbps ಬ್ರಾಡ್‌ಬ್ಯಾಂಡ್ ಪ್ಲಾನ್ ಅನಿಯಮಿತ ಡೇಟಾವನ್ನು ನೀಡಲಿದ್ದು, 1Gbps ಯೋಜನೆಯನ್ನು ಸಹ ಹೊಂದಿದೆ.

ACT Fibernet ಪ್ರಸ್ತಾಪಿಸಲಾದ ಪ್ರದೇಶದಲ್ಲಿ ಎಲ್ಲಾ ಬ್ರಾಡ್‌ಬ್ಯಾಂಡ್ ಯೋಜನೆಗಳೊಂದಿಗೆ 'ಅನಿಯಮಿತ' ಡೇಟಾವನ್ನು ನೀಡುತ್ತದೆ, ಆದರೆ ಇದು ನ್ಯಾಯಯುತ ಬಳಕೆಯ ನೀತಿಯನ್ನು (FUP) ಹೊಂದಿದೆ, ಆದರಿಂದ ಬಳಕೆದಾರರು ತಿಂಗಳಿಗೆ ಗರಿಷ್ಠ 3,300GB ಡೇಟಾವನ್ನು ಪಡೆಯುತ್ತಾರೆ. ಒಮ್ಮೆ FUP ಮಿತಿಯನ್ನು ದಾಟಿದರೆ, ಒಬ್ಬರು 512 Kbps ವೇಗವನ್ನು ಪಡೆಯಲಿದ್ದಾರೆ. ಇನ್ನು 1Gbps ಬ್ರಾಡ್‌ಬ್ಯಾಂಡ್ ಯೋಜನೆಯ ಬೆಲೆ 1,999ರೂ. ಆಗಿದೆ. ಈ ಎಲ್ಲಾ ಬ್ರಾಡ್‌ಬ್ಯಾಂಡ್ ಯೋಜನೆಯು ಒಂದು ತಿಂಗಳ ಉಚಿತ Zee5 ಚಂದಾದಾರಿಕೆ, SonyLiv ಸದಸ್ಯತ್ವ, ಹಂಗಾಮಾ ಪ್ಲೇ ಗೆ ಪ್ರವೇಶವನ್ನು ನೀಡಲಿದೆ.

ಇನ್ನು ACT ಫೈಬರ್‌ನೆಟ್ ದೆಹಲಿಯಲ್ಲಿ 1 Gbps ವೇಗದ ಬ್ರಾಡ್‌ಬ್ಯಾಂಡ್ ಪ್ಲಾನ್ ಮೂಲಕ ಹೆಚ್ಚಿನ ಗ್ರಾಹಕರಿಗೆ ತಡೆರಹಿತ ಇಂಟರ್ನೆಟ್ ಅನುಭವವನ್ನು ನೀಡಲು ಮುಂದಾಗಿದೆ. ಹೆಚ್ಚಿನ ಡೇಟಾ ವರ್ಗಾವಣೆ, ರಿಯಲ್ ಟೈಂ ಕ್ಲೌಡ್ ಕನೆಕ್ಟಿವಿಟಿ, ಗ್ರಾಫಿಕ್ಸ್ ಮತ್ತು ಅನಿಮೇಷನ್‌ಗಳು ಮತ್ತು ಇತರ ಹೊಸ-ಯುಗದ ಉದ್ಯಮಗಳು ಕೆಲಸ ಮಾಡಲು ಅನುಕೂಲವಾಗುವ ಇಂಟರ್‌ನೆಟ್ ಅನ್ನು ನೀಡಲಿದೆ.

ಇದಲ್ಲದೆ ACT ಫೈಬರ್‌ನೆಟ್ ಇನ್ನು ಅನೇಕ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳನ್ನು ಈಗಾಗಲೇ ಪರಿಚಯಿಸಿದೆ. ಈ ಪೈಕಿ ACT 5999ರೂ. ಬ್ರಾಡ್‌ಬ್ಯಾಂಡ್ ಪ್ಲಾನ್ ಹೆಚ್ಚಿನ ಗಮನ ಸೆಳೆದಿದೆ. ಇನ್ನು ACT ಬ್ರಾಡ್‌ಬ್ಯಾಂಡ್ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಸೇರಿದಂತೆ ಕೆಲವು ನಗರಗಳಲ್ಲಿ 1Gbps ಯೋಜನೆಯನ್ನು ನೀಡುತ್ತದೆ. ಈ ಯೋಜನೆಯು ತಿಂಗಳಿಗೆ 5,999 ರೂಪಾಯಿ ವೆಚ್ಚವಾಗುತ್ತದೆ. ಅಲ್ಲದೆ ತಿಂಗಳಿಗೆ 2,500GB ಡೇಟಾವನ್ನು ಬಂಡಲ್ ಮಾಡುತ್ತದೆ. ಇದು 5500GB ಯ FUP ಮಿತಿಯನ್ನು ಹೊಂದಿದೆ.

ಇನ್ನು ACT ಫೈಬರ್‌ನೆಟ್ ಮಾತ್ರವಲ್ಲದೆ ಜಿಯೋ, ಏರ್‌ಟೆಲ್, ಬಿಎಸ್‌ಎನ್‌ಎಲ್ ಟೆಲಿಕಾಂಗಳು ಕೂಡ ಅನೇಕ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳನ್ನು ಪರಿಚಯಿಸಿವೆ. ಇವುಗಳಲ್ಲಿ 1Gbps ವೇಗವನ್ನು ನೀಡುವ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳ ಇಲ್ಲಿವೆ ಓದಿರಿ.

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ 3999ರೂ ಬ್ರಾಡ್‌ಬ್ಯಾಂಡ್ ಪ್ಲಾನ್
ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ 3,999ರೂ ವಿಐಪಿ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಹೊಂದಿದೆ. ಈ ಪ್ಲಾನ್ ಇದೀಗ 4X4 ರೂಟರ್‌ನೊಂದಿಗೆ ಬರುತ್ತದೆ, ಅದು ಬಳಕೆದಾರರಿಗೆ ಸಣ್ಣ ಮನೆಗಳು ಮತ್ತು ಕಚೇರಿಗಳಲ್ಲಿ 1Gbps ಕವರೇಜ್‌ನೊಂದಿಗೆ ವೈಫೈ ಕವರೇಜ್ ನೀಡುತ್ತದೆ. ಇದು 1 Gbps ವೇಗ, ಅನಿಯಮಿತ ಡೇಟಾವನ್ನು ತಿಂಗಳಿಗೆ 3.3TB ಅಥವಾ 3300GB ಮತ್ತು ತನ್ನ ಲ್ಯಾಂಡ್‌ಲೈನ್ ಸೇವೆಯ ಮೂಲಕ ಅನಿಯಮಿತ ವಾಯಿಸ್ ಕರೆಗಳನ್ನು ನೀಡುತ್ತದೆ. ಈ ಯೋಜನೆ ನೀಡುವ ಒಟಿಟಿ ಚಂದಾದಾರಿಕೆಗಳಲ್ಲಿ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್ ಪ್ರೀಮಿಯಂ ಮತ್ತು ವಿಂಕ್ ಮ್ಯೂಸಿಕ್ ಚಂದಾದಾರಿಕೆ ಸೇರಿವೆ. ಹಾಗೆಯೇ ಆಂಡ್ರಾಯ್ಡ್ ಟಿವಿ ಆಧಾರಿತ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಬಾಕ್ಸ್ ಅನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆಯ್ಕೆ ಮಾಡುವ ಆಯ್ಕೆಯನ್ನು ಗ್ರಾಹಕರು ಪಡೆಯುತ್ತಾರೆ. ಎಕ್ಸ್‌ಸ್ಟ್ರೀಮ್ ಬಾಕ್ಸ್‌ನೊಂದಿಗೆ, ಬಳಕೆದಾರರು ಉಚಿತ ZEE5 ಪ್ರೀಮಿಯಂ ಮತ್ತು ಅಮೆಜಾನ್ ಪ್ರೈಮ್ ಚಂದಾದಾರಿಕೆಗಳನ್ನು ಪಡೆಯುತ್ತಾರೆ.

JioFiber 3999ರೂ ಬ್ರಾಡ್‌ಬ್ಯಾಂಡ್ ಪ್ಲಾನ್
ಜಿಯೋ ಫೈಬರ್ 3,999ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್ 1Gbps ಇಂಟರ್ನೆಟ್ ವೇಗವನ್ನು ಹೊಂದಿದೆ. ಈ ಯೋಜನೆಯು ಅನಿಯಮಿತ ಡೇಟಾ ಸೌಲಭ್ಯ ಪಡೆದಿದೆ (3.3 ಟಿಬಿ ಎಫ್‌ಯುಪಿ ಡೇಟಾ). ಇದರೊಂದಿಗೆ ನೆಟ್‌ಫ್ಲಿಕ್ಸ್ (ಸ್ಟ್ಯಾಂಡರ್ಡ್), ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ಜೀ 5, ಸೋನಿ ಲಿವ್, ಸನ್‌ನೆಕ್ಸ್ಟ್, ವೂಟ್, ಎಎಲ್‌ಟಿ ಬಾಲಾಜಿ, ಹೊಯ್ಚೊಯ್, ಶೆಮರೂ ಮಿ, ಲಯನ್ಸ್ ಗೇಟ್ ಪ್ಲೇ, ಜಿಯೋ ಸಿನೆಮಾ ಮತ್ತು ಜಿಯೋಸಾವ್ನ್ OTT ಪ್ರಯೋಜನಗಳು ಲಭ್ಯವಾಗಲಿವೆ.

ಟಾಟಾ ಸ್ಕೈ 3600ರೂ. ಬ್ರಾಡ್‌ಬ್ಯಾಂಡ್ ಪ್ಲಾನ್
ಟಾಟಾ ಸ್ಕೈ 3600ರೂ. ಬ್ರಾಡ್‌ಬ್ಯಾಂಡ್ ಪ್ಲಾನ್ 1Gbps ಇಂಟರ್‌ನೆಟ್ ವೇಗವನ್ನು ನೀಡಲಿದೆ. ಇದು ಒಂದು ತಿಂಗಳು, ಮೂರು ತಿಂಗಳು, ಆರು ತಿಂಗಳು ಮತ್ತು ಒಂದು ವರ್ಷದ ಅವಧಿಗೆ ಬರುತ್ತದೆ. ಒಂದು ತಿಂಗಳ ಯೋಜನೆಯು 3600ರೂ.ಬೆಲೆ ಹೊಂದಿದ್ದರೆ, ಮೂರು ತಿಂಗಳ ಪ್ಲಾನ್ 10,800ರೂ.ಬೆಲೆ ಹೊಂದಿದೆ. ಆರು ತಿಂಗಳ ಪ್ಲಾನ್ 19,800ರೂ ಬೆಲೆ ಹೊಂದಿದೆ. ಹಾಗೆಯೇ ವಾರ್ಷಿಕ ಯೋಜನೆ 36,000ರೂ.ಬೆಲೆ ಹೊಂದಿದೆ. ಈ ಪ್ಲಾನ್‌ಗಳಲ್ಲಿ ಯಾವುದೇ ಒಟಿಟಿ ಪ್ರಯೋಜನಗಳಿಲ್ಲ, ಆದರೆ ಬಳಕೆದಾರರು 3.3 ಟಿಬಿ ಅಥವಾ 3,300 ಜಿಬಿ ಡೇಟಾವನ್ನು ಅನಿಯಮಿತ ವಾಯಿಸ್ ಕರೆಗಳೊಂದಿಗೆ ಪಡೆಯುತ್ತಾರೆ.


Click it and Unblock the Notifications








