Home
ಸುದ್ದಿಜಾಲ

ACT Fibernet ಹೊಸ ಪ್ಲಾನ್ಸ್ ಪರಿಚಯ: ಹೆಚ್ಚು OTT ಈಗ ಕಡಿಮೆ ಬೆಲೆಗೆ!

ACT Fibernet ತನ್ನ ಬ್ರಾಡ್‌ಬ್ಯಾಂಡ್ ಪ್ಲಾನ್ಸ್‌ಗಳನ್ನು ಪುನರ್ ರೂಪಗೊಳಿಸಿ ಹೊಸ ದರ ಮತ್ತು ಹೊಸ ಫೀಚರ್‌ಗಳನ್ನು ಒದಗಿಸಿದೆ. ನಗರದ ಬಳಕೆದಾರರು ಈಗ ₹499 ರಿಂದ ಪ್ರಾರಂಭವಾಗುವ ವೇಗದ ಫೈಬರ್ ಇಂಟರ್ನೆಟ್ ಪ್ಲಾನ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. 50Mbps ರಿಂದ 1Gbpsವರೆಗೆ ಲಭ್ಯವಿರುವ ಹೊಸ ಪ್ಲಾನ್ಸ್‌ಗಳಲ್ಲಿ ಹೆಚ್ಚು ಮೌಲ್ಯ, ಹೆಚ್ಚು OTT ಪ್ರಯೋಜನಗಳು ಮತ್ತು ಹೆಚ್ಚು ಸ್ಥಿರವಾಗಿರುವ SmartWiFi ತಂತ್ರಜ್ಞಾನದ ಅನುಭವ ಸಿಗುತ್ತದೆ ಎಂದು ಕಂಪೆನಿ ತಿಳಿಸಿದೆ.

ACT Fibernet ಗುರುವಾರ ಪತ್ರಿಕಾ ಪ್ರಕಟಣೆಯ ಮೂಲಕ 30 ಕ್ಕೂ ಹೆಚ್ಚು ಭಾರತೀಯ ನಗರಗಳಲ್ಲಿ ತನ್ನ ಪರಿಷ್ಕೃತ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದರಲ್ಲಿ ಇತ್ತೀಚಿನ ಗ್ರಾಹಕರ ಪ್ರತಿಕ್ರಿಯೆ ಆಧರಿಸಿ ಬೆಂಗಳೂರಿನ ಬಳಕೆದಾರರ ಅಗತ್ಯಗಳಿಗೆ ತಕ್ಕಂತೆ ಪ್ಲಾನ್ಸ್‌ಗಳನ್ನು ಮರುರಚಿಸಲಾಗಿದೆ. ನಗರದಲ್ಲಿನ ವಿಭಿನ್ನ ಪ್ರದೇಶಗಳ ಇಂಟರ್ನೆಟ್ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ವ್ಯಾಲ್ಯೂ ಪ್ಲಾನ್‌ಗಳಿಂದ ಪ್ರೀಮಿಯಂ ಸ್ಪೀಡ್ ಪ್ಯಾಕೇಜ್‌ಗಳವರೆಗೆ ವಿವಿಧ ಆಯ್ಕೆಗಳಿವೆ.

ಬೆಂಗಳೂರು ಬಳಕೆದಾರರಿಗೆ ವ್ಯಾಲ್ಯೂ ಪ್ಲಾನ್ ₹749ರಿಂದ ಆರಂಭವಾಗುತ್ತದೆ. ಈ ಪ್ಲಾನ್‌ನಲ್ಲಿ, ಗ್ರಾಹಕರುAmazon Prime Video (Prime Lite), JioHotstar, Zee5, SunNXT ಮತ್ತು Yupp TV OTT ಗಳಿಗೆ ಉಚಿತ ಚಂದಾದಾರಿಕೆ ಪಡೆಯಬಹುದು. ಜೊತೆಗೆ 450+ ಲೈವ್ ಚಾನಲ್‌ಗಳ ಪ್ರವೇಶ ಲಭ್ಯವಿದೆ. ಇದು ಮನರಂಜನೆ, ಕ್ರೀಡೆ ಮತ್ತು ಟಿವಿ ವಿಷಯಗಳನ್ನು ಹೆಚ್ಚು ಖರ್ಚು ಇಲ್ಲದೆ ಮನೆಯಲ್ಲೇ ಆನಂದಿಸಬಹುದಾದ ಪ್ಯಾಕೇಜ್ ಆಗಿದೆ ಎಂದು ACT Fibernet ತಿಳಿಸಿದೆ.

ACT Fibernet ಹೊಸ ಪ್ಲಾನ್ಸ್ ಪರಿಚಯ: ಹೆಚ್ಚು OTT ಈಗ ಕಡಿಮೆ ಬೆಲೆಗೆ!

₹499ರಿಂದ ₹1,999ವರೆಗೆ : Work From Home‌ಗೆ ಸೂಕ್ತವಾದ ಆಯ್ಕೆಗಳು
ನಗರದಲ್ಲಿ ACT Fibernet ₹499 ಸ್ಟಾರ್ಟರ್ ಪ್ಲಾನ್ 50Mbps ಸ್ಪೀಡ್ ಅನ್ನು ಒದಗಿಸುತ್ತದೆ. ಇದು ಲೈಟ್ ಸ್ಟ್ರೀಮಿಂಗ್ ಮತ್ತು ಮೂಲ ಇಂಟರ್ನೆಟ್ ಬಳಕೆಗೆ ಸೂಕ್ತ. ಹೆಚ್ಚು ಸ್ಪೀಡ್ ಬಯಸುವ ಮನೆಯ ಬಳಕೆದಾರರು, ಗೇಮರ್ಸ್ ಅಥವಾ Work From Home ಪ್ರೊಫೆಷನಲ್ಸ್‌ಗಳಿಗೆ 300Mbps, 500Mbps ಮತ್ತು 1Gbps ಪ್ಲಾನ್ಸ್‌ಗಳೂ ಲಭ್ಯ. ಟಾಪ್-ಟಿಯರ್ 1Gbps ಪ್ಲಾನ್ ₹1,999ಗೆ ಲಭ್ಯವಿದ್ದು, ನಗರದಲ್ಲಿನ ಹೆಚ್ಚಿನ ಇಂಟರ್ನೆಟ್ ಬಳಕೆದಾರರಿಗೆ ಇದು ಪರ್ಫೆಕ್ಟ್ ಆಯ್ಕೆಯಾಗಲಿದೆ.

ACT SmartWiFi - ಬೆಂಗಳೂರಿನ ಮನೆಗಳಿಗೆ ಹೆಚ್ಚು ಸ್ಥಿರವಾದ ಕವರೆಜ್
ಹೊಸ ಪ್ಲಾನ್ಸ್‌ಗಳ ಪ್ರಮುಖ ಅಪ್‌ಗ್ರೇಡ್ ಎಂದರೆ ACT SmartWiFi. ಈ ತಂತ್ರಜ್ಞಾನ ಮನೆ ಅಥವಾ ಆಫೀಸ್‌ನ ಪ್ರತಿ ಕೋನದಲ್ಲೂ ಸಮಾನ ಸ್ಪೀಡ್ ನೀಡಲು ವಿನ್ಯಾಸಗೊಳಿಸಲ್ಪಟ್ಟಿದೆ. ನೆಟ್‌ವರ್ಕ್ ನಿಲುವು ನೋಡಿಕೊಂಡು ರಿಯಲ್ ಟೈಮ್‌ನಲ್ಲಿ ಸ್ವಯಂಚಾಲಿತವಾಗಿ ತಿದ್ದುಪಡಿಗಳು ನಡೆಯುವುದರಿಂದ, ಅಡ್ಡಿ-ತೊಡಕುಗಳಿಲ್ಲದ ಬ್ರಾಡ್‌ಬ್ಯಾಂಡ್ ಅನುಭವ ದೊರೆಯುತ್ತದೆ. ಆಯ್ದ ಪ್ಲಾನ್ಸ್‌ಗಳಲ್ಲಿ Smart Mesh ರೂಟರ್‌ಗಳನ್ನೂ ಒದಗಿಸಲಾಗುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. .

ACT ಫೈಬರ್‌ನೆಟ್‌ನ ಹೊಸ ಬ್ರಾಡ್‌ಬ್ಯಾಂಡ್ ಯೋಜನೆಗಳು 30 ನಗರಗಳಲ್ಲಿ ಲಭ್ಯವಿದೆ
ACT ಫೈಬರ್‌ನೆಟ್ ಗುರುವಾರ ಪತ್ರಿಕಾ ಪ್ರಕಟಣೆಯ ಮೂಲಕ 30 ಕ್ಕೂ ಹೆಚ್ಚು ಭಾರತೀಯ ನಗರಗಳಲ್ಲಿ ತನ್ನ ಪರಿಷ್ಕೃತ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ನವೀಕರಿಸಿದ ಯೋಜನೆಗಳು ಗ್ರಾಹಕರ ಪ್ರತಿಕ್ರಿಯೆಯ ಮೇಲೆ ನಿರ್ಮಿಸಲ್ಪಟ್ಟಿವೆ ಮತ್ತು ವಿವಿಧ ಬಜೆಟ್‌ಗಳು ಮತ್ತು ಬಳಕೆಯ ಅಗತ್ಯಗಳಿಗೆ ಅನುಗುಣವಾಗಿ ಪರಿಹಾರಗಳನ್ನು ಒದಗಿಸುವ ಗುರಿಯನ್ನು ಹೊಂದಿವೆ ಎಂದು ಕಂಪನಿ ಹೇಳುತ್ತದೆ. ಹೊಸ ಪೋರ್ಟ್‌ಫೋಲಿಯೊ ಮಹಾನಗರಗಳು ಮತ್ತು ಹೊಸ ಮಾರುಕಟ್ಟೆಗಳಿಂದ ಸಂಗ್ರಹಿಸಿದ ಪ್ರತಿಕ್ರಿಯೆಯನ್ನು ಪ್ರತಿಬಿಂಬಿಸುತ್ತದೆ ಎಂದು ACT ಹೇಳಿಕೊಂಡಿದೆ. ಇನ್ನು ಈ ಹೊಸ ಪ್ಲಾನ್ಸ್‌ಗಳು ಈಗ ಬೆಂಗಳೂರಿನ ಎಲ್ಲ ಸೇವಾ ಪ್ರದೇಶಗಳಲ್ಲಿ ಲೈವ್ ಆಗಿವೆ. ಮನೆ, ಆಫೀಸ್ ಅಥವಾ ಹೈ-ಸ್ಪೀಡ್ ಬಳಕೆಗೆ ಹುಡುಕುತ್ತಿರುವವರಿಗೆ, ಈ ಅಪ್‌ಡೇಟೆಡ್ ಪ್ಲಾನ್ಸ್ ನಗರದಲ್ಲಿ ಹೆಚ್ಚು ಮೌಲ್ಯ ಒದಗಿಸುತ್ತವೆ ಎನ್ನಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು?, ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
The Value plan for Bengaluru users starts at ₹749. With this plan, customers receive a free subscription to Amazon Prime Video (Prime Lite), JioHotstar, Zee5, SunNXT and Yupp TV, along with access to 450+ live TV channels.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+