ಆಕ್ಟ್ ನಿಂದ ಡಬ್ಬಲ್ ಡೇಟಾ ಆಫರ್: ಯಾಕೆ ಗೊತ್ತಾ?
ಫೈಬರ್ ಬ್ರಾಡ್ ಬ್ಯಾಂಡ್ ಸೇವೆಯಲ್ಲ ಗುರುತಿಸಿಕೊಂಡಿರುವ ಆಕ್ಟಾ ಫೈಬರ್ ಈಗಾಗಲೇ ತನ್ನ ಬಳಿ ಇರುವ ಗ್ರಾಹಕರನ್ನು ಉಳಿಸಿಕೊಂಡು ಹೆಚ್ಚಿನ ಹೊಸ ಬಳಕೆದಾರರನ್ನು ಸೆಳೆಯುವ ಸಲುವಾಗಿ ತನ್ನ ಪ್ಲಾನ್ ಗಳನ್ನು ಬದಲಾಯಿಸಿದೆ.
ದೇಶದಲ್ಲಿ ಜಿಯೋ ಅಬ್ಬರ ಅತೀಯಾಗಿದೆ ಎಂದರೆ ತಪ್ಪಾಗುವುದಿಲ್ಲ. ಟೆಲಿಕಾಂ ಲೋಕದಲ್ಲಿ ಮಾಡಿದಂತಹ ಕ್ರಾಂತಿಕಾರಕ ಬದಲಾವಣೆಗಳು ಎಲ್ಲಾ ಕಂಪನಿಗಳ ನಿದ್ದೆಗೆಡಿಸಿದ್ದು, ಸದ್ಯ ಬ್ರಾಂಡ್ ಬ್ಯಾಂಡ್ ಲೋಕಕ್ಕೆ ಕಾಲಿಟ್ಟಿದೆ. ಇಲ್ಲಿಯೂ ಗ್ರಾಹಕರನ್ನು ಸೆಳೆಯುವ ಸಲುವಾಗಿ ಕ್ರಾಂತಿಕಾರಕ ಆಫರ್ ಗಳನ್ನು ಘೋಷಣೆ ಮಾಡುವ ಸಾಧ್ಯತೆ ಇರುವುದರಿಂದ ಇತರೆ ಕಂಪನಿಗಳು ಈಗಾಗಲೆ ಎಚ್ಚೇತ್ತು ಕೊಂಡಿವೆ.

ಓದಿರಿ: ಪ್ರೀಪೆಯ್ಡ್ ಗ್ರಾಹಕರಿಗೆ ಭರ್ಜರಿ ಲಾಭ: ಏರ್‌ಟೆಲ್‌ನಿಂದ ಪ್ರತಿ ನಿತ್ಯ 3GB ಡೇಟಾ!!
ಫೈಬರ್ ಬ್ರಾಡ್ ಬ್ಯಾಂಡ್ ಸೇವೆಯಲ್ಲ ಗುರುತಿಸಿಕೊಂಡಿರುವ ಆಕ್ಟ್ ಫೈಬರ್ ಈಗಾಗಲೇ ತನ್ನ ಬಳಿ ಇರುವ ಗ್ರಾಹಕರನ್ನು ಉಳಿಸಿಕೊಂಡು ಹೆಚ್ಚಿನ ಹೊಸ ಬಳಕೆದಾರರನ್ನು ಸೆಳೆಯುವ ಸಲುವಾಗಿ ತನ್ನ ಪ್ಲಾನ್ ಗಳನ್ನು ಬದಲಾಯಿಸಿದ್ದು, ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ.

ಡಬ್ಬಲ್ ಡೇಟಾ:
ಈಗಾಗಲೇ ತಿಂಗಳ ಪ್ಲಾನ್ ಪಡೆದುಕೊಂಡಿರುವ ಆಕ್ಟ್ ಗ್ರಾಹಕರಿಗೆ ಡಬ್ಬಲ್ ಡೇಟಾವನ್ನು ಬಳಕೆಗೆ ನೀಡುತ್ತಿದ್ದು, ಅದಕ್ಕೆ ಯಾವುದೇ ದರವನ್ನು ವಿಧಿಸುತ್ತಿಲ್ಲ ಎನ್ನಲಾಗಿದೆ. ಪ್ರತಿ ಪ್ಲಾನ್ ನಲ್ಲಿಯೂ ಬಳಕೆ ಮಾಡಿಕೊಳ್ಳುತ್ತಿದ್ದ ಡೇಟಾ ಡಬ್ಬಲ್ ಆಗಿರಲಿದೆ.

ಏರ್‌ಟೆಲ್ ಸಹ:
ಜಿಯೋ ಮಾರುಕಟ್ಟೆಗೆ ಬರುತ್ತಿರುವ ಹಿನ್ನಲೆಯಲ್ಲಿ ಏರ್‌ಟೆಲ್ ಸಹ ಈ ಹಿಂದೆಯೇ ತನ್ನ ಬಳಕೆದಾರರಿಗೆ ಡಬ್ಬಲ್ ಡೇಟಾ ಅಲ್ಲದೇ ಸರ್ಪ್ರೈಸ್ ಆಫರ್ ಹೆಸರಿನಲ್ಲಿ ಅತೀ ಹೆಚ್ಚಿನ ಡೇಟಾವನ್ನು ಬಳಕೆಗೆ ನೀಡಲು ಮುಂದಾಗಿತ್ತು.

ಜಿಯೋ ಪ್ರಭಾವ:
ಈಗಾಗಲೆ ಟೆಸ್ಟಿಂಗ್ ಆರಂಭಿಸಿರುವ ಜಿಯೋ ಶೀಘ್ರವೇ ದೇಶದಲ್ಲಿ ತನ್ನ ಸೇವೆಯನ್ನು ಆರಂಭಿಸಲಿದ್ದು, ಇದರಿಂದಾಗಿ ಹೆಚ್ಚಿನ ಗ್ರಾಹಕರು ಜಿಯೋ ಫೈಬರ್ ಸೇವೆಯ ಮೊರೆಹೋಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಈ ಕಂಪನಿಗಳು ಡಬ್ಬಲ್ ಡೇಟಾ ನೀಡಲು ಮುಂದಾಗಿವೆ,


Click it and Unblock the Notifications








