ನಟಿ ಸೌಂದರ್ಯ ವೆಬ್ಸೈಟ್ ಇನ್ನೂ ಜೀವಂತ!

Posted By: Varun
ನಟಿ ಸೌಂದರ್ಯ ವೆಬ್ಸೈಟ್ ಇನ್ನೂ ಜೀವಂತ!

ದಕ್ಷಿಣ ಭಾರತದ ಖ್ಯಾತ ನಟಿ, ಅಣ್ಣಾವ್ರಿಂದಲೇ "ಹೆಸರಿಗೆ ತಕ್ಕ ಸೌಂದರ್ಯ ಅವರದು" ಅಂತ ಹೋಗಳಿಸಿಕೊಂಡಿದ್ದ ನಮ್ಮ ಅಚ್ಚುಮೆಚ್ಚಿನ ಕನ್ನಡತಿ ಸೌಂದರ್ಯ ನಮ್ಮನ್ನಗಲಿ ಆಗಲೇ 8 ವರ್ಷ.

ಕೇವಲ 31 ವರ್ಷಕ್ಕೆ ಅಗಾಧ ಸಾಧನೆ ಮಾಡಿದ ಆಕೆ ದುರದೃಷ್ಟವಶಾತ್ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದು ಇಂದಿಗೂ ಮರೆಯಲು ನಮಗೆ ಮರೆಯಲು ಸಾಧ್ಯವಿಲ್ಲ. ತನ್ನ ಮುಗ್ಧ ಸೌಂದರ್ಯದಿಂದ ಎಲ್ಲರ ಮನಗೆದ್ದು ಅಜಾತ ಶತ್ರುವಾಗಿದ್ದ ಆಕೆ ಎಷ್ಟರ ಮಟ್ಟಿಗೆ ಅಭಿಮಾನಿಗಳ ಮೇಲೆ ಪ್ರಭಾವ ಬೀರಿದ್ದರು ಎನ್ನುವುದಕ್ಕೆ, ಇಂದಿಗೂ ಜೀವಂತವಿರುವ ಆಕೆಯ ವೆಬ್ಸೈಟೇ ಸಾಕ್ಷಿ.

ಕಲಾವಿದರಿಗೆ ಸಾವಿಲ್ಲ ಎನ್ನುತ್ತಾರೆ. ಆಕೆಯ www.soundarya.8m.com ನೋಡಿದರೆ ಹಾಗೇ ಅನ್ನಿಸುತ್ತೆ ನಿಮಗೆ. ಬದುಕಿದ್ದರೆಇಂದಿಗೆ 40 ವಸಂತಗಳನ್ನು ಪೂರೈಸುತ್ತಿದ್ದ ಆಕೆ ಇನ್ನೂ ಜೀವಂತವಾಗಿದ್ದಾರೆ ಎನ್ನುವಂತೆಯೇ ಇದೆ. ವೆಬ್ಸೈಟ್ nalli ಆಕೆಯ ವಾಲ್ ಪೇಪರ್, ಸೌಂದರ್ಯ ಬಗೆಗಿನ ಮಾಹಿತಿ, ಸ್ಕ್ರೀನ್ ಸೇವರ್,ಅವರಿಗೆ ಹುಟ್ಟು ಹಬ್ಬದ ಶುಭಾಷಯ ಕೋರುವ ಇ-ಗ್ರೀಟಿಂಗ್, ಆಕೆ ಕೊಟ್ಟ ಸಂದರ್ಶನಗಳ ಮಾಹಿತಿಯೂ ಇದೆ.

ಇದುವರೆಗೂ ಸುಮಾರು ಮೂರೂವರೆ ಲಕ್ಷಕ್ಕೂ ಹೆಚ್ಚು ಮಂದಿ ಈ ವೆಬ್ಸೈಟ್ ಅನ್ನು ಭೇಟಿ ಮಾಡಿರುವುದು ಆಕೆಯ ಜನಪ್ರಿಯತೆಗೆ ಸಾಕ್ಷಿ. ಒಮ್ಮೆ ವೆಬ್ಸೈಟ್ ಗೆ ಭೇಟಿ ಕೊಟ್ಟು ಸೌಂದರ್ಯ ದರ್ಶನ ಮಾಡಿಬನ್ನಿ. ಹ್ಯಾಪ್ಪಿ ಬರ್ತ್ ಡೇ ಸೌಂದರ್ಯ.

ಸೌಂದರ್ಯ ಗ್ಯಾಲರಿ

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot