ಕಂಪ್ಯೂಟರ್ ಪ್ರೋಗ್ರಾಮ್ ಅರ್ಥವಾಗುವುದಿಲ್ಲ ಎಂಬುದಕ್ಕೆ ಒಂದು ಸ್ವಾರಸ್ಯಕರ ಕಥೆ ಇದೆ!

|

ಕಂಪ್ಯೂಟರ್ ಇತಿಹಾಸವನ್ನು ಕೆದಕುತ್ತಾ ಹೋದಂತೆ ಎಲ್ಲರಿಗೂ(ಬಹುತೇಕ) ತಿಳಿದಿರುವ ಒಂದೇ ಒಂದು ಹೆಸರೆಂದರೇ ಅದು ಕಂಪ್ಯೂಟರ್ ಪಿತಾಮಹ ಚಾರ್ಲ್ಸ್‍ ಬ್ಯಾಬೇಜ್ ಮಾತ್ರ ಎಂದು ನಾನು ಖಡಾಖಂಡಿತವಾಗಿ ಹೇಳುತ್ತೇನೆ. ಏಕೆಂದರೆ, ಅದನ್ನು ಬಿಟ್ಟು ಹೆಚ್ಚಿನದನ್ನು ಯಾರೂ ತಿಳಿದೂ ಇರುವುದಿಲ್ಲ ಮತ್ತು ತಿಳಿಯಲೂ ಪ್ರಯತ್ನಿಸಿರುವುದಿಲ್ಲ.!

ಇದು ಸಾಮಾನ್ಯರ ಕಥೆಯಾದರೆ, ಕಪ್ಯೂಂಟರ್ ಅರೆದುಕುಡಿದಿದ್ದೇವೆ ಎನ್ನುವರನ್ನೊಮ್ಮೆ ಮಾತನಾಡಿಸಿ ನೋಡಿದೆ. ವಿಶ್ವದಲ್ಲಿ ಮೊದಲ ಕಂಪ್ಯೂಟರ್ ಪ್ರೋಗ್ರಾಮ್ ಅನ್ನು ರಚಿಸಿದ್ದು ಯಾರು ಎಂಬ ಪ್ರಶ್ನೆ ಕೇಳಿದರೆ ಅದಕ್ಕೆ ಅವರ ಬಳಿ ಉತ್ತರವಿಲ್ಲ. ಈ ತಪ್ಪು ನಮ್ಮೆಲ್ಲರದ್ದೂ ಅಲ್ಲ. ಏಕೆಂದರೆ, ನಮಗೆ ಶಿಕ್ಷಣ ನೀಡುವ ವ್ಯವಸ್ಥೆಯೇ ಶಿಕ್ಷಣವನ್ನು ಅಣುಕಿಸುವಂತೆ ಮಾಡಿಬಿಟ್ಟಿದೆ.!

ಕಂಪ್ಯೂಟರ್ ಪ್ರೋಗ್ರಾಮ್ ಅರ್ಥವಾಗುವುದಿಲ್ಲ ಎಂಬುದಕ್ಕೆ ಒಂದು ಸ್ವಾರಸ್ಯಕರ ಕಥೆ ಇದೆ

ಕಂಪ್ಯೂಟರ್ ಎಂಬ ಪರಿಕಲ್ಪನೆಯ ಇತಿಹಾಸವನ್ನು ನೋಡಲು ಹೊರಟರೆ ಕಾಣುವ ಚಿತ್ರಣ ಬೇರೆಯೇ. ನಿಮಗೆ ಗೊತ್ತಾ? ಮೊದಲ ಕಂಪ್ಯೂಟರ್ ಪ್ರೋಗ್ರಾಮ್ ಅನ್ನು ರಚಿಸಿದ್ದು ಓರ್ವ ಯುವತಿ.! ಅದು ಕೂಡ ಕಂಪ್ಯೂಟರ್ ಎಂಬ ಪರಿಕಲ್ಪನೆ ನಿಜವಾಗುವುದಕ್ಕೆ ಒಂದು ಶತಮಾನಕ್ಕೆ ಮುನ್ನವೇ.! ಆಶ್ಚರ್ಯವೇ?, ಹಾಗಿದ್ದರೆ ಈ ಕುತೋಹಲದ ವಿಷಯವನ್ನು ಮುಂದೆ ತಿಳಿಯಿರಿ.!

ಮೊದಲ ಕಂಪ್ಯೂಟರ್ ಪ್ರೋಗ್ರಾಮ್!!

ಮೊದಲ ಕಂಪ್ಯೂಟರ್ ಪ್ರೋಗ್ರಾಮ್!!

ಕಂಪ್ಯೂಟರ್ ಕಂಡುಹಿಡಿದದ್ದು ಪಿತಾಮಹಾ ಆದರೂ ಕಂಪ್ಯೂಟರ್ ಪ್ರೋಗ್ರಾಮಿಂಗ್ ರೂಪುಗೊಂಡದ್ದು ಓರ್ವ ಯುವತಿಯಿಂದ. ಮೊದಲ ಕಂಪ್ಯೂಟರ್ ಪ್ರೋಗ್ರಾಮ್ ಅನ್ನು ರಚಿಸಿದ್ದು ಎಡಾ ಬೈರನ್ ಅಥವಾ ಎಡಾ ಲವ್ಲೇಸ್ ಬೈರನ್ ಎಂಬ ಯುವತಿ. ಅದೂ ಕೂಡ ಕಂಪ್ಯೂಟರ್ ಎಂಬ ಪರಿಕಲ್ಪನೆ ನಿಜವಾಗುವುದಕ್ಕೆ ಒಂದು ಶತಮಾನಕ್ಕೆ ಮುನ್ನವೇ.!!

ಯಾರೀಕೆ ಎಡಾ ಲವ್ಲೇಸ್ ಬೈರನ್?

ಯಾರೀಕೆ ಎಡಾ ಲವ್ಲೇಸ್ ಬೈರನ್?

ಗೂಗಲ್‌ನಲ್ಲಿ ಒಮ್ಮೆ ಕಂಪ್ಯೂಟರ್ ಪ್ರೋಗ್ರಾಮಿಂಗ್ ರೂಪಿಸಿದ್ದು ಯಾರು ಎಂದು ನೀವು ಸರ್ಚ್ ಮಾಡಿದರೆ ಎಡಾ ಲವ್ಲೇಸ್ ಬೈರನ್ ಅವರ ಚಿತ್ರ ಸಮೇತ ಅವರ ಕಾರ್ಯಗಳು ನಿಮಗೆ ಸಿಗುತ್ತವೆ. ಇಂಗ್ಲಿಷ್ ಕಾವ್ಯವಾದ ರಮ್ಯ ಪಂಥದ ಪ್ರಮುಖ ಕವಿಗಳಲ್ಲಿ ಒಬ್ಬರಾದ ಖ್ಯಾತ ಕವಿ ಬೈರನ್ ಅವರ ಅವರ ಪುತ್ರಿ ಎಡಾ ಲವ್ಲೇಸ್ ಬೈರನ್.!

ಕವಿ ಮನೆಯಿಂದ ಕಂಪ್ಯೂಟರ್!!

ಕವಿ ಮನೆಯಿಂದ ಕಂಪ್ಯೂಟರ್!!

ಖ್ಯಾತ ಕವಿ ಬೈರನ್ ಅವರ ಅವರ ಪುತ್ರಿ ಎಂಬ ಪದನಾಮವು ಎಡಾ ಲವ್ಲೇಸ್ ಬೈರನ್‌ಗೆ ಸಿಕ್ಕಿದರೂ ಕೂಡ ಅಪ್ಪನಿಂದ ಅವಳಿಗೆ ಮತ್ತೇನು ದೊರೆಯಲಿಲ್ಲ. ಮಗಳು ಹುಟ್ಟಿದ ಐದೇ ವಾರಕ್ಕೆ ಬೈರನ್ ತನ್ನ ಪತ್ನಿ ಆನಿ ಇಸಬೆಲ್ಲಾ ಮಿಲ್‌ಬೇಂಕ್‌ಗೆ ವಿಚ್ಛೇದನ ನೀಡಿದ. ಹಾಗಾಗಿ, ಎಡಾಳನ್ನು ಸಾಕಿದ್ದು ತಾಯಿಯೇ.!

ಸಿಟ್ಟಿನಿಂದ ಮಗಳಿಗೆ ಗಣಿತ ಕಲಿಸಿದಳು!!

ಸಿಟ್ಟಿನಿಂದ ಮಗಳಿಗೆ ಗಣಿತ ಕಲಿಸಿದಳು!!

ಬೈರನ್ ತನ್ನ ಪತ್ನಿ ಆನಿ ಇಸಬೆಲ್ಲಾ ಮಿಲ್‌ಬೇಂಕ್‌ಗೆ ವಿಚ್ಛೇದನ ನೀಡಿದ ನಂತರ ಅನೆಬೆಲ್ಲಾಳಿಗೆ ಬೈರನ್‌ನ ಮೇಲೆ ಎಷ್ಟು ಕೋಪವಿತ್ತು. ಹಾಗಾಗಿ, ಮಗಳು ಯಾವುದೇ ಕಾರಣಕ್ಕೂ ತಂದೆಯಂತೆ ಕವಿತೆಯ ಹಾದಿಯಲ್ಲಿ ಸಾಗಬಾರದೆಂದು ಇಸಬೆಲ್ಲಾ ನಿರ್ಧರಿಸಿದ್ದಳು.ಮಾಜಿ ಗಂಡನ ಕಾವ್ಯ ಮತ್ತು ‘ರಸಿಕತೆ'ಗಳ ಮೇಲಿನ ಸಿಟ್ಟಿನಿಂದ ಮಗಳಿಗೆ ಗಣಿತ ಕಲಿಸಿದಳು.

ಕಂಪ್ಯೂಟರ್ ಪ್ರೋಗ್ರಾಮಿಂಗ್ ಬರೆದದ್ದು ಹೇಗೆ?

ಕಂಪ್ಯೂಟರ್ ಪ್ರೋಗ್ರಾಮಿಂಗ್ ಬರೆದದ್ದು ಹೇಗೆ?

1840ರಲ್ಲಿ ತತ್ವಜ್ಞಾನಿ ಮತ್ತು ಮೆಕಾನಿಕಲ್ ಎಂಜಿನಿಯರ್ ಚಾರ್ಲ್ಸ್ ಬ್ಯಾಬೇಜ್, ‘ವಿಶ್ಲೇಷಣಾ ಯಂತ್ರ' ಎಂದು ಆತ ಹೆಸರಿಟ್ಟಿದ್ದ ಕಂಪ್ಯೂಟರ್ ಬಗ್ಗೆ ಒಂದು ಉಪನ್ಯಾಸ ನೀಡಿದ್ದರು. ಆ ಉಪನ್ಯಾಸವನ್ನು ಯುವ ಎಂಜಿನಿಯರ್‌ ಲ್ಯೂಗಿ ಮೆನಾಬ್ರಿಯಾ ಫ್ರೆಂಚ್‌ನಲ್ಲಿ ಬರೆದುಕೊಂಡ. ನಂತರ, ಬ್ಯಾಬೇಜ್‌ನ ಗೆಳೆಯ ವ್ಹೀಟ್ಸ್ಟೋನ್ ಎಂಬಾತ ಇದನ್ನು ಇಂಗ್ಲಿಷ್‌ಗೆ ಅನುವಾದಿಸಲು ಲವ್ಲೇಸ್‌ಗೆ ನೀಡಿದ.

ಅನುವಾಗದೇ ಕೆಲಸವಾಯಿತು!!

ಅನುವಾಗದೇ ಕೆಲಸವಾಯಿತು!!

ಇಂಗ್ಲಿಷ್‌ಗೆ ಅನುವಾದಿಸಲು ಪಡೆದುಕೊಂಡ ಎಡಾ ಲವ್ಲೇಸ್ ಇದನ್ನು ಅನುವಾದಿಸಿ ಕೊಡುವ ಬದಲಿಗೆ ಅಲ್ಲಿದ ಪರಿಕಲ್ಪನಾತ್ಮಕ ಟಿಪ್ಪಣಿಗಳಿಗೆ ತನ್ನ ಆಲೋಚನೆಗಳ ಟಿಪ್ಪಣಿಯನ್ನೂ ಸೇರಿಸುತ್ತಾ ಹೋದಳು. ಇಡೀ ಒಂದು ವರ್ಷ ಈ ಕೆಲಸದಲ್ಲಿಯೇ ಮುಳುಗಿದ ಈಕೆ ಬ್ಯಾಬೇಜ್‌ನ ಜೊತೆ ಸಂಪರ್ಕ ಬೆಳೆಸಿ ಚರ್ಚಿಸಿ ಮೆನಾಬ್ರಿಯಾ ಬರೆದುಕೊಂಡಿದ್ದ ಟಿಪ್ಪಣಿಯನ್ನು ವಿಸ್ತಾರಗೊಳಿಸಿದಳು.

110 ವರ್ಷಗಳ ಕಾಲ ಬೇಕಾಯಿತು.!!

110 ವರ್ಷಗಳ ಕಾಲ ಬೇಕಾಯಿತು.!!

ಬ್ಯಾಬೇಜ್ ಕಂಪ್ಯೂಟರ್‌ನ ರೂಪವನ್ನು ಕಲ್ಪಿಸಿದ್ದ. ಹಾಗೆಯೇ, ಅದಕ್ಕೆ ಬೇಕಿರುವ ಪ್ರೋಗ್ರಾಮ್ ಅನ್ನು ಎಡಾ ಲವ್ಲೇಸ್ ರಚಿಸಿದ್ದಳು ಎಂಬುದು ಹೊರಜಗತ್ತಿಗೆ ತಿಳಿಯುವುದಕ್ಕೆ 110 ವರ್ಷಗಳ ಕಾಲ ಬೇಕಾಯಿತು. 1953ರಲ್ಲಿ ಬ್ಯಾಬೇಜ್ ಮುಂದಿಟ್ಟ ಪರಿಕಲ್ಪನೆಗೆ ಮೊದಲ ಕಂಪ್ಯೂಟರ್ ಮತ್ತು ಎಡಾ ರಚಿಸಿದ ಗಣನವಿಧಾನಕ್ಕೆ ಮೊದಲ ಪ್ರೊಗ್ರಾಮ್ ಎಂಬ ಮಾನ್ಯತೆ ದೊರೆಯಿತು.

ಗಣನವಿಧಾನ!!

ಗಣನವಿಧಾನ!!

ಕಂಪ್ಯೂಟರ್ ಎಂಬ ಪರಿಕಲ್ಪನೆ ನಿಜವಾಗುವುದಕ್ಕೆ ಒಂದು ಶತಮಾನಕ್ಕೆ ಮುನ್ನವೇ ಎಡಾ ಲವ್ಲೇಸ್ ಬರ್ನೌಲಿ ಸಂಖ್ಯೆಗಳನ್ನು ಯಂತ್ರವೊಂದರಲ್ಲಿ ಲೆಕ್ಕ ಹಾಕುವುದಕ್ಕೆ ಬೇಕಿರುವ ಗಣನವಿಧಾನ (Algorithm) ಎಂದು ಕರೆಯುವ ಕ್ರಮವನ್ನು ಒದಗಿಸಿದಳು. ಗಣಕ ಯಂತ್ರದ ಕುರಿತಂತೆ ಬರೆದ ಟಿಪ್ಪಣಿಯ ಭಾಗವಾಗಿ ಈ ಗಣನ ವಿಧಾನವನ್ನು ಆಕೆ ರಚಿಸಿದ್ದಳು.

ಭವಿಷ್ಯವನ್ನು ನುಡಿದಿದ್ದಳು!!

ಭವಿಷ್ಯವನ್ನು ನುಡಿದಿದ್ದಳು!!

ಎಡಾ ಲವ್ಲೇಸ್ ಹೆಗ್ಗಳಿಕೆ ಇರುವುದು ಕೇವಲ ಈ ಗಣನವಿಧಾನವನ್ನು ರೂಪಿಸಿದ್ದರಲ್ಲಷ್ಟೇ ಅಲ್ಲ. ‘ವಿಶ್ಲೇಷಣಾ ಯಂತ್ರಗಳ' ಸಾಮರ್ಥ್ಯವನ್ನು ಆಕೆ ಗುರುತಿಸಿದ್ದರಲ್ಲಿ. ಕೇವಲ ಸಂಖ್ಯೆಗಳನ್ನು ಲೆಕ್ಕ ಹಾಕುವುದಷ್ಟೇ ಅಲ್ಲದೆ ಈ ಯಂತ್ರಗಳು ಸಂಗೀತವನ್ನೂ ಸೃಷ್ಟಿಸಬಲ್ಲವು ಎಂಬ ಭವಿಷ್ಯವನ್ನು ಆಕೆ ಅಂದೇ ನುಡಿದಿದ್ದಳು. ಅಂದರೆ, ನೂರು ವರ್ಷಗಳಿಗೂ ಮೊದಲೇ.!!

Most Read Articles
Best Mobiles in India

English summary
Ada Lovelace has been called the world's first computer programmer. What she did was write the world's first machine algorithm for. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more