ಸೂರ್ಯನತ್ತ ಸಾಗಿದ ಆದಿತ್ಯ L1; ಇದು ಪ್ರತಿದಿನ ಕಳುಹಿಸುವ ಫೋಟೋಗಳು ಎಷ್ಟು ಗೊತ್ತೆ?
ಇಸ್ರೋನ ಮಹತ್ವಾಕಾಂಕ್ಷೆ ಮಿಷನ್ ಆದಿತ್ಯ-L1 ಯಶಸ್ವಿಯಾಗಿ ಉಡಾವಣೆಯಾಗಿದೆ. ಸೂರ್ಯ ಶಿಕಾರಿಗೆ ಹೊರಟಿರುವ ಆದಿತ್ಯ-L1 ಇದೀಗ ಯಶಸ್ಸಿನ ಹಾದಿಯಲ್ಲಿದೆ. ಇಸ್ರೋ ವಿಜ್ಞಾನಿಗಳು ನಿಗಧಿ ಪಡಿಸಿರುವ ಕಕ್ಷೆಯಲ್ಲಿಯೇ ಆದಿತ್ಯ-L1 ರಾಕೆಟ್ ಸಾಗುತ್ತಿದೆ. ಇನ್ನು ಈ ಮಿಷನ್ ಸೂರ್ಯನ ಮೇಲ್ಮೈ ಹಾಗೂ ಸೌರ ಮಾರುತಗಳನ್ನು ಅಧ್ಯಯನ ಮಾಡುವ ಗುರಿಯನ್ನು ಹೊಂದಿದೆ.
ಹೌದು, ಇಸ್ರೋ ಆದಿತ್ಯ-L1 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸೂರ್ಯನನ್ನು ಅಧ್ಯಯನ ಮಾಡಲು ಹೊರಟಿರುವ ಈ ನೌಕೆ ಬಾಹ್ಯಕಾಶ ಕ್ಷೇತ್ರದಲ್ಲಿ ಹೊಸ ಸಾಧನೆ ಬರೆಯುವ ಸೂಚನೆ ಸಿಕ್ಕಿದೆ. ಈಗಾಗಲೇ ಮೂರನೇ ಹಂತವನ್ನು ಕೂಡ ಯಶಸ್ವಿಯಾಗಿ ದಾಟಿರುವ ಆದಿತ್ಯ L1 ಇಸ್ರೋ ನಿಗದಿಪಡಿಸಿರುವ ಲಾಂಗ್ರೇಜ್ ಪಾಯಿಂಟ್ ಕಡೆಗೆ ಪಯಣ ಬೆಳಿಸಿದೆ. ಈ ಪಯಣ ಸುದಿರ್ಘವಾಗಿದ್ದು 125 ದಿನಗಳ ನಂತರ ಲಾಂಗ್ರೇಜ್ ಪಾಯಿಂಟ್ ಸೇರಲಿದೆ. ಹಾಗಾದ್ರೆ ಆದಿತ್ಯ-L1 ಮಿಷನ್‌ನ ಉದ್ದೇಶಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೂರ್ಯನನ್ನೇ ಅಧ್ಯಯನ ಮಾಡುವ ಸಾಹಸಕ್ಕೆ ಕೈ ಹಾಕಿರುವ ಇಸ್ರೋ ಆದಿತ್ಯ-L1 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆದಿತ್ಯ-L1 ಯಶಸ್ವಿಯಾಗಿ ನಭಕ್ಕೆ ಚಿಮ್ಮಿದ್ದು, ಮೂರನೇ ಹಂತವನ್ನು ಯಶಸ್ವಿಯಾಗಿ ದಾಟಿ ಸೂರ್ಯ ಶಿಕಾರಿಯತ್ತ ದಾಪುಗಾಲಿಟ್ಟಿದೆ. ಇದು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಸೂರ್ಯನ ಲಾಂಗ್ರೇಜ್ ಪಾಯಿಂಟ್‌ನಲ್ಲಿ ಇದು ನೆಲೆಗೊಳ್ಳಲಿದೆ. ಈ ಪಾಯಿಂಟ್‌ನಲ್ಲಿದ್ದುಕೊಂಡು ಸೂರ್ಯನ ಮೇಲ್ಮೈಯನ್ನು ಅಧ್ಯಯನ ಮಾಡಲಿದೆ. ಜೊತೆಗೆ ಸೌರ ಮಾರುತದ ಬಗ್ಗೆ ಕೂಡ ಅಧ್ಯಯನ ನಡೆಸಲಿದೆ.
ಇನ್ನು ಈ ಇಡೀ ಮಿಷನ್‌ನ ಅಧ್ಯಯನದ ಕಂಟ್ರೋಲ್ ಇಸ್ರೋದ ಬೆಂಗಳೂರು ಪ್ರಧಾನ ಕಚೇರಿಯಿಂದ ನಡೆಯಲಿದೆ. ಸೂರ್ಯನ ಕಡೆಗೆ ಸಾಗಿರುವ ಭಾರತದ ಮೊದಲ ಯಾನ ಬಹುತೇಕ ಯಶಸ್ವಿಯಾಗಲಿದೆ ಎಂದೇ ಭಾವಿಸಲಾಗಿದೆ. ಅದರಂತೆ ಆದಿತ್ಯ-L1 ಕೂಡ ಪ್ರಯಾಣ ಬೆಳೆಸಿದೆ. ಮೊದಲ ಮೂರು ಹಂತಗಳನ್ನು ಯಶಸ್ವಿಯಾಗಿ ದಾಟಿರುವ ಆದಿತ್ಯ-L1 ಸೂರ್ಯನ ಕಡೆಗೆ ಸುಧೀರ್ಘ ಪ್ರಯಾಣ ನಡೆಸಲಿದೆ. ಈ ಹಂತದಲ್ಲಿ ಬರೋಬ್ಬರು ನಾಲ್ಕು ತಿಂಗಳುಗಳ ಕಾಲ ಪ್ರಯಾಣ ನಡೆಸಲಿದೆ.
ಆದಿತ್ಯ-L1 ಅನ್ನು ಸೂರ್ಯ ಹಾಗೂ ಭೂಮಿಯ ನಡುವೆ ಸುಮಾರು 1.5 ಮಿಲಿಯನ್ ಕಿಮೀ ಪ್ರಯಾಣಿಸಲು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಲಾಂಗ್ರೇಜ್ ಪಾಯಿಂಟ್ ಅನ್ನು ಗುರುತಿಸಲಾಗಿದೆ. ಈ ಪಾಯಿಂಟ್‌ನಲ್ಲಿ ಗುರುತ್ವಾಕರ್ಷಣೆಯ ಬಲವನ್ನು ಸಮತೋಲನವಾಗಿರಲಿದೆ ಎಂದು ಹೇಳಲಾಗಿದೆ. ಭಾರತ ಈಗಾಗಲೇ ಚಂದ್ರಯಾನ 3 ಯಶಸ್ವಿಯಾಗಿರುವುದರಿಂದ ಸೂರ್ಯಯಾನದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.
ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 ಸಂಗ್ರಹಿಸುವ ಡೇಟಾವನ್ನು ವಿಶ್ವದ ಬಹುತೇಕ ರಾಷ್ಟ್ರಗಳು ವಿಶ್ಲೇಷಿಸಲಿವೆ. ಇದರಿಂದ ಸೂರ್ಯನ ಭೂತ, ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಹೊಸ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ಇದರಿಂದ ಮುಂದಿನ ದಶಕಗಳಲ್ಲಿ ಮತ್ತು ಶತಮಾನಗಳಲ್ಲಿ ಭೂಮಿಯ ಮೇಲಿನ ಸಂಭವನೀಯ ಹವಾಮಾನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಈ ಡೇಟಾವು ಮುಖ್ಯವಾಗಿದೆ ಎಂದು ಹೇಳಲಾಗುತ್ತಿದೆ.
ಎಲ್ಲವೂ ಅಂದುಕೊಂಡತೆ ನಡೆದರೆ ಆದಿತ್ಯ ಎಲ್-1 ಸುಮಾರು 120 ರಿಂದ 125 ದಿನಗಳ ಬಳಿಕ ನಿಗದಿತ ಕಕ್ಷೆ ತಲುಪಲಿದೆ. ಅಂದರೆ ನಾಲ್ಕು ತಿಂಗಳು ಆದಿತ್ಯ-ಎಲ್1 ಯೋಜನೆಯ ಅವಧಿಯಾಗಿದ್ದು, ಜನವರಿ ಮೊದಲ ವಾರದಲ್ಲಿ ಸೂರ್ಯಯಾನದ ನೌಕೆಯು ಎಲ್-1ಗೆ ಸೇರುವ ನಿರೀಕ್ಷೆ ಇದೆ. ಇನ್ನು ಈ ನೌಕೆ ಒಟ್ಟು ಏಳು ವೈಜ್ಞಾನಿಕ ಉಪಕರಣಗಳು ಹೊತ್ತು ಸಾಗಿದೆ. ಇದರಲ್ಲಿ ಮೂರು ಉಪಕರಣಗಳು ಸೂರ್ಯನ ಕಡೆಗೆ ಅಧ್ಯಯನ ಮಾಡಲಿವೆ.
ಸೂರ್ಯನ ಅಧ್ಯಯನ ಯಾಕೆ ಅವಶ್ಯಕ?
ಸೂರ್ಯನ ಕಿರಣ, ತಾಪಮಾನ, ಸೌರಜ್ವಾಲೆ, ಸೂರ್ಯನ ಸುತ್ತಲಿನ ವಾತಾವರಣದ ಬಗ್ಗೆ ಮೊದಲಿನಿಂದಲೂ ಕೌತುಕವಿದೆ. ಅದರಲ್ಲೂ ಬೆಂಕಿಯುಂಡೆಯಂತೆ ಸುಡುವ ಸೂರ್ಯನ ಸುತ್ತ ಏನಿದೆ ಅನ್ನೊದರ ಬಗ್ಗೆ ಎಲ್ಲರಲ್ಲೂ ಸಹಜ ಕೂತುಹಲವಿದೆ. ಇದನ್ನು ಅಧ್ಯಯನ ಮಾಡುವ ನಿಟ್ಟಿನಲ್ಲಿ ಈ ಸೌರಯಾನ ಅತಿ ಅವಶ್ಯಕವಾಗಿದೆ.


Click it and Unblock the Notifications








