Home
ಸುದ್ದಿಜಾಲ

ಸೂರ್ಯ ಶಿಕಾರಿಗೆ ಸಜ್ಜಾದ ಇಸ್ರೋ..ತಿಮ್ಮಪ್ಪನ ಮೊರೆ ಹೋದ ವಿಜ್ಞಾನಿಗಳು!

ಚಂದ್ರಯಾನ-3 ಯಶಸ್ಸಿನಲ್ಲಿರುವ ಇಸ್ರೋ ಇದೀಗ ಸೂರ್ಯನ ಅಧ್ಯಯನಕ್ಕಾಗಿ ಸಿದ್ಧತೆ ನಡೆಸಿದೆ. ಸೂರ್ಯನನ್ನು ಅಧ್ಯಯನ ಮಾಡುವ ಆದಿತ್ಯ L-1 ಅನ್ನು ಇದೇ ಸೆಪ್ಟೆಂಬರ್‌ 2ರಂದು ಉಡಾವಣೆ ಮಾಡುವುದಕ್ಕೆ ಸಿದ್ಧತೆ ನಡೆಸಿದೆ. ಇದೀಗ ಸೂರ್ಯನ ಬಳಿಗೆ ಆದಿತ್ಯ L-1 ಅನ್ನು ಕಳುಹಿಸುವುದಕ್ಕೂ ಮುನ್ನ ಇಸ್ರೋ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ.

ಹೌದು, ಇಸ್ರೋ ವಿಜ್ಞಾನಿಗಳು ಮತ್ತೊಮ್ಮೆ ತಿರುಪತಿ ತಿಮ್ಮಪನ್ನ ಮೊರೆ ಹೋಗಿದ್ದಾರೆ. ಈಗಾಗಲೇ ಚಂದ್ರಯಾನ ಯಶಸ್ಸು ಕಂಡಿರುವ ಇಸ್ರೋ ಆದಿತ್ಯ L-1 (Aditya L1) ಉಡಾವಣೆಯನ್ನು ಸಹ ಯಶಸ್ಸು ಮಾಡುವಂತೆ ಕಲಿಯುಗ ದೈವ ತಿರುಪತಿ ತಿಮ್ಮಪ್ಪನ ಬೇಡಿಕೊಂಡಿದ್ದಾರೆ. ಚಂದ್ರನ ಅಂಗಳದಲ್ಲಿ ಯಶಸ್ವಿಯಾದಂತೆ ಸೂರ್ಯ ಶಿಕಾರಿ ಕೂಡ ಯಶಸ್ವಿಯಾಗಲಿದೆ ಅನ್ನೋ ವಿಶ್ವಾಸದಲ್ಲಿ ಇಸ್ರೋ ವಿಜ್ಞಾನಿಗಳಿದ್ದಾರೆ. ಹಾಗಾದ್ರೆ ಸೂರ್ಯನ ಅಧ್ಯಯನ ಮಾಡುವ ಆದಿತ್ಯ L-1 ರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೂರ್ಯ ಶಿಕಾರಿಗೆ ಸಜ್ಜಾದ ಇಸ್ರೋ..ತಿಮ್ಮಪ್ಪನ ಮೊರೆ ಹೋದ ವಿಜ್ಞಾನಿಗಳು!

ಇಸ್ರೋ ವಿಜ್ಞಾನಿಗಳು ಸೂರ್ಯನ ಹತ್ತಿರಕ್ಕೆ ಆದಿತ್ಯ L-1 ಅನ್ನು ಕಳುಹಿಸುವುದಕ್ಕೂ ಮುನ್ನ ತಿಮ್ಮಪ್ಪನ ಮೊರೆ ಹೋಗಿದ್ದಾರೆ. ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಆದಿತ್ಯ-ಎಲ್1 ಮಿಷನ್ ಉಡಾವಣೆಗೂ ಮುನ್ನವೇ ತಿರುಪತಿ ಬಳಿಯಿರುವ ಸುಳ್ಳೂರುಪೇಟೆಯ ಶ್ರೀ ಚೆಂಗಾಲಮ್ಮ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿದ್ದಾರೆ. ಈ ದೇವಸ್ಥಾನಕ್ಕೆ ಇಸ್ರೋ ಮುಖ್ಯಸ್ಥರು ಬೇಟಿ ನೀಡುತ್ತಿರುವುದು ಇದೇ ಮೊದಲೇನಲ್ಲ. ಇಸ್ರೋ ಯಾವುದೇ ರಾಕೆಟ್‌ ಉಡಾವಣೆ ಮಾಡಬೇಕಾದರೂ ಮೊದಲು ತಿಮ್ಮಪ್ಪನ ಮೊರೆ ಹೋಗುವುದು ಸಾಮಾನ್ಯವಾಗಿದೆ.

ಇನ್ನು ಸೂರ್ಯನ ಮೇಲೆ ಅಧ್ಯಯನ ಮಾಡಲಿದ್ದೇವೆ, ಈ ಮಾತು ಕೇಳಿದರೆ ಸಾಕು ಎಲ್ಲರ ಕಿವಿ ಒಮ್ಮೆಲೆ ನೆಟ್ಟಗಾಗುತ್ತದೆ. ಬೆಂಕಿಯುಂಡೆಯಂತಿರುವ ಸೂರ್ಯನ ಮೇಲೆ ಅಧ್ಯಯನ ನಡೆಸುವುದಾ? ಹೇಗೆ ಸಾಧ್ಯ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನಕ್ಕೆ ಇಸ್ರೋ ವಿಜ್ಞಾನಿಗಳು ಕೈ ಹಾಕಿದ್ದಾರೆ. ಇದರ ಫಲವಾಗಿ ನಾಳೆ (ಸೆ.2) ಆದಿತ್ಯ L-1 ಉಡಾವಣೆ ಮಾಡುತ್ತಿದೆ. ಇನ್ನು ಆದಿತ್ಯ L-1 ಅಧ್ಯಯನ ಮಾಡುವ L1 ಪಾಯಿಂಟ್ ಸೂರ್ಯ ಮತ್ತು ಭೂಮಿಯ ನಡುವಿನ ಗುರುತ್ವಾಕರ್ಷಣೆಯ ಸ್ಥಿರ ಸ್ಥಳವಾಗಿದೆ. ಈ ಸ್ಥಳ ಸೂರ್ಯನನ್ನು ಅಧ್ಯಯನ ಮಾಡುವುದಕ್ಕೆ ಉತ್ತಮವಾದ ಸ್ಥಳವಾಗಿದೆ ಎಂದು ನಂಬಲಾಗಿದೆ.

ಆದಿತ್ಯ L-1 ಅಧ್ಯಯನ ಮಾಡಲಿರುವ ಪಾಯಿಂಟ್‌ನಲ್ಲಿರುವ ಪರಿಸರವು ಹೆಚ್ಚಿನ ಮಟ್ಟದ ವಿಕಿರಣ ಮತ್ತು ಚಾರ್ಜ್ಡ್ ಕಣಗಳಿಂದ ಕೂಡಿದೆ ಎನ್ನಲಾಗಿದೆ. ಆದರಿಂದ ಈ ಪ್ರದೇಶದಲ್ಲಿರುವ ಪರಿಸ್ಥಿತಿಗೆ ಆದಿತ್ಯ-L1 ಹೊಂದಿಕೊಂಡರೆ ಇದರ ಅಧ್ಯಯನವೂ ಯಶಸ್ವಿಯಾಗಲಿದೆ ಎನ್ನಲಾಗಿದೆ. ಇಸ್ರೋ ವಿಜ್ಞಾನಿಗಳು ನಾಳೆ ಬೆಳಗ್ಗೆ 11.50ಕ್ಕೆ ಅಧಿತ್ಯ-L1 ಉಡಾವಣೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಇದು ಆಂಧ್ರದ ಶ್ರೀಹರಿಕೋಟದಿಂದ ಉಡಾವಣೆಯಾಗಲಿದೆ.

ಸೂರ್ಯನ ಅಧ್ಯಯನಕ್ಕೆ ಸಾಗುವ ಆದಿತ್ಯ L-1 ಅನ್ನು PSLV-C-57 ಹೊತ್ತು ಸಾಗಲಿದೆ. ಇನ್ನು ಇಸ್ರೋ ಅಂದುಕೊಂಡತೆ ಅಧಿತ್ಯ L-1 ಸೂರ್ಯನ ಅಧ್ಯಯನ ಮಾಡುವ ನಿಖರವಾದ ಸ್ಥಳವನ್ನು ತಲುಪುವುದಕ್ಕೆ 125 ದಿನಗಳು ಆಗಲಿದೆ ಎನ್ನಲಾಗಿದೆ. ಅಂದರೆ ಆದಿತ್ಯ-L1 ಅನ್ನು ಸೂರ್ಯನ ದೂರಸ್ಥ ಅವಲೋಕನಗಳನ್ನು ಒದಗಿಸಲು ಮತ್ತು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ L1 ಪಾಯಿಂಟ್‌ನಲ್ಲಿ ಅಧ್ಯಯನ ಮಾಡಲು ಉದ್ದೇಶಿಸಲಾಗಿದೆ.

ಸೂರ್ಯನ ಅಧ್ಯಯನದಿಂದಾಗುವ ಪ್ರಯೋಜನಗಳು?
ಅಧಿತ್ಯ L-1 ನೌಕೆಯು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಸೂರ್ಯನ ಲಾಂಗ್ರೇಜ್ ಪಾಯಿಂಟ್‌ನಲ್ಲಿ ಅಧ್ಯಯನ ನಡೆಸಲಿದೆ. ಈ ಪ್ರದೇಶದಲ್ಲಿದ್ದುಕೊಂಡು ಸೌರ ಮಾರುತದ ಬಗ್ಗೆ ಅಧ್ಯಯನ ನಡೆಸಲಿದೆ. ಇನ್ನು ಸೂರ್ಯನ ಮೇಲೆ ಅಧ್ಯಯನಕ್ಕಾಗಿ ಭಾರತ ನಡೆಸುತ್ತಿರುವ ಮೊದಲ ಕಾರ್ಯಚರಣೆಯಾಗಿದೆ ಅನ್ನೊದು ವಿಶೇಷ. ಈಗಾಗಲೇ ಚಂದ್ರನ ಬಳಿ ಹೋಗಿರುವ ಭಾರತ ಸೂರ್ಯನ ಸಮೀಪ ಸುತ್ತು ಹೊಡೆದು ಬರುವ ಸಾಹಸಕ್ಕೆ ಕೈ ಹಾಕಿದೆ. ಇದು ಯಶಸ್ವಿಯಾದರೆ ಸೂರ್ಯನ ಭೂತ ವರ್ತಮಾ ಮತ್ತು ಭವಿಷ್ಯದ ಬಗ್ಗೆ ಮಾಹಿತಿ ದೊರೆಯಲಿದೆ.

Best Mobiles in India

English summary
Aditya L1: ISRO chief S Somnath on special puja at Tirupati ahead of the launch of Aditya L1 mission
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+