Aditya L1 mission success: ಆದಿತ್ಯ-L1 ಕಳುಹಿಸಿದ ಸೆಲ್ಫಿಯಲ್ಲಿ ಏನಿದೆ ಗೊತ್ತಾ?..ಇದು ಇಸ್ರೋದ ಅಚ್ಚರಿ!
ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ISRO) ಸೂರ್ಯನ ಮೇಲೆ ಅಧ್ಯಯನ ಮಾಡಲು ಆದಿತ್ಯ-ಎಲ್ 1 ಅನ್ನು ಕಳೆದ ವಾರ ಉಡಾವಣೆ ಮಾಡಿದೆ. ಭೂಮಿಯಿಂದ 1.5 ಮಿಲಿಯನ್ ಕಿಮೀ ದೂರದಲ್ಲಿರುವ ತನ್ನ ಗಮ್ಯಸ್ಥಾನವಾದ ಲ್ಯಾಂಗ್ರೇಜ್ ಪಾಯಿಂಟ್ ಕಡೆಗೆ ತನ್ನ ಪ್ರಯಾಣ ಬೆಳೆಸಿದೆ. ಈ ಹಾದಿಯಲ್ಲಿ ಭೂಮಿ ಮತ್ತು ಚಂದ್ರನ ಫೋಟೋ ತೆಗೆದು ಇಸ್ರೋಗೆ ರವಾನಿಸಿದೆ.
ಹೌದು, ಇಸ್ರೋದ ಬಾಹ್ಯಕಾಶ ನೌಕೆ ಆದಿತ್ಯ-L1 (Aditya L1)ಮಹತ್ತರವಾದ ಫೋಟೋವೊಂದನ್ನು ಕಳುಹಿಸಿದೆ. ಈ ಮೂಲಕ ಸೂರ್ಯನೆಡೆಗೆ ಸಾಗುವಾಗ ಭೂಮಿ ಹೇಗೆ ಕಾಣಲಿದೆ ಅನ್ನೊದನ್ನ ತೆರೆದಿಟ್ಟಿದೆ. ಅಲ್ಲದೆ ತಾನು ನಿಗಧಿತ ಕಕ್ಷೆಯಲ್ಲಿ ಸಾಗುತ್ತಿರುವುದನ್ನು ಸ್ಪಷ್ಟಪಡಿಸಿದೆ. ಅಷ್ಟಕ್ಕೂ ಆದಿತ್ಯ-L1 ನೌಕೆ ತೆಗೆದಿರುವ ಭೂಮಿಯ ಫೋಟೋ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆದಿತ್ಯ-L1 ಭೂಮಿಯಿಂದ ಸೂರ್ಯನೆಡೆಗೆ ಸಾಗುತ್ತಿದೆ. ಇದು ಭೂಮಿಯಿಂದ ಮಿಲಿಯನ್ ಕಿಮೀ ದೂರದಲ್ಲಿರುವ ತನ್ನ ಗಮ್ಯಸ್ಥಾನವಾದ ಲ್ಯಾಗ್ರೇಂಜ್ ಪಾಯಿಂಟ್ನಲ್ಲಿದ್ದುಕೊಂಡು ಸೂರ್ಯನ ಮೆಲ್ಮೈ ಬಗ್ಗೆ ಅಧ್ಯಯನ ನಡೆಸಲಿದೆ. ಇದು ಈ ಲ್ಯಾಂಗ್ರೇಜ್ ಪಾಯಿಂಟ್ ಕಡೆಗೆ ಹೊರಟಿರುವ ಆದಿತ್ಯ-L1 ನೌಕೆಯ ಎರಡು ಹಂತಗಳು ಯಶಸ್ವಿಯಾಗಿದೆ. ಭೂಮಿಗೆ ಸುತ್ತುವರಿದ ಎರಡು ಕಕ್ಷೆಯನ್ನು ಪೂರ್ಣಗೊಳಿಸಿದೆ. ಇನ್ನು ಲ್ಯಾಗ್ರೇಂಜ್ ಪಾಯಿಂಟ್ ತಲುಪಲು 125 ದಿನಗಳ ಅವಕಾಶ ಬೇಕಿದೆ ಎನ್ನಲಾಗಿದೆ.
ಸೂರ್ಯ ಶಿಕಾರಿ ಸಾಗಿರುವ ಆದಿತ್ಯ-L1 ಬಗ್ಗೆ ಇಡೀ ದೇಶವೇ ಸಾಖಷ್ಟು ಕುತೂಹಲವಿಟ್ಟುಕೊಂಡಿದೆ. ಇದೀಗ ಇಸ್ರೋ ಬಿಡುಗಡೆ ಮಾಡಿರುವ ವೀಡಿಯೋ ಆದಿತ್ಯ-L1 ನೌಕೆಯ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಏಕೆಂದರೆ ಆದಿತ್ಯ-L1 ಭೂಮಿ ಮತ್ತು ಚಂದ್ರನ ನಡುವೆ ಸೆಲ್ಫಿ ಕ್ಲಿಕ್ಕಿಸಿ ಕಳುಹಿಸಿದೆ. ಇದರಲ್ಲಿ ಭೂಮಿಯ ಫೋಟೋ ಎಲ್ಲರ ಗಮನಸೆಳೆಯುವಂತೆ ಮಾಡಿದೆ. ಇಸ್ರೋ ಈ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ (ಟ್ವಿಟರ್)ನಲ್ಲಿ ಅಪ್‌ಲೋಡ್ ಮಾಡಿದೆ.
ಇನ್ನು ಆದಿತ್ಯ-ಎಲ್1 ನೌಕೆ ಭಾರತದ ಮೊದಲ ಸೌರ ಮಿಷನ್ ಆಗಿದೆ. ಆದಿತ್ಯ-L1 ನೌಕೆಯನ್ನು ಇಸ್ರೋದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C57) ನಲ್ಲಿ ಸೆಪ್ಟೆಂಬರ್ 2, 2023 ರಂದು ಉಡಾವಣೆ ಮಾಡಲಾಗಿದೆ. ಈ ವಾರದ ಪ್ರಾರಂಭದಲ್ಲಿ, ಆದಿತ್ಯ-L1 ಭೂಮಿಯ ಎರಡನೇ ಭೂ-ಬೌಂಡ್ ಅನ್ನು ಯಶಸ್ವಿಯಾಗಿಸಿದ್ದು, ಮಿಷನ್‌ನ ಪ್ರಗತಿಯಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಇಸ್ರೋ ಹೇಳಿದೆ.
ಆದಿತ್ಯ-L1 ನೌಕೆ ಸೂರ್ಯನ ಸುತ್ತ ಸೌರಮಾರುತಗಳು, ಸೂರ್ಯನ ಮೇಲ್ಮೈ ರಚನೆ, ಸೂರ್ಯನಲ್ಲಿ ಆಗುತ್ತಿರುವ ಬದಲಾವಣೆಗಳು ಇದೆಲ್ಲದರ ಬಗ್ಗೆ ಅಧ್ಯಯನ ನಡೆಸುವ ಗುರಿಯನ್ನು ಹೊಂದಿದೆ. ಇದರಿಂದ ಸೂರ್ಯನ ಬಗ್ಗೆ ಶತಮಾನಗಳಿಂದಲೂ ಇರುವ ಹಲವು ಕುತೂಹಲಗಳಿಗೆ ಉತ್ತರ ಸಿಗಲಿದೆ ಎನ್ನಲಾಗಿದೆ. ಅಲ್ಲದೆ ಭವಿಷ್ಯದಲ್ಲಿ ಸೂರ್ಯನಲ್ಲಾಗುವ ಬದಲಾವಣೆಯಿಂದ ಭೂಮಿಯ ಮೇಲಾಗಬಹುದಾದ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಈ ಮಿಷನ್ ಪೂರಕವಾಗಲಿದೆ ಎಂದು ಭಾವಿಸಲಾಗಿದೆ.
ಅಂದರೆ ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 ಸಂಗ್ರಹಿಸುವ ಡೇಟಾವನ್ನು ವಿಶ್ವದ ಬಹುತೇಕ ರಾಷ್ಟ್ರಗಳು ವಿಶ್ಲೇಷಿಸಲಿವೆ. ಇದರಿಂದ ಸೂರ್ಯನ ಭೂತ, ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಹೊಸ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ಇದರಿಂದ ಮುಂದಿನ ದಶಕಗಳಲ್ಲಿ ಮತ್ತು ಶತಮಾನಗಳಲ್ಲಿ ಭೂಮಿಯ ಮೇಲಿನ ಸಂಭವನೀಯ ಹವಾಮಾನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಈ ಡೇಟಾವು ಮುಖ್ಯವಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನು ಆದಿತ್ಯ ಎಲ್-1 ಸುಮಾರು 120 ರಿಂದ 125 ದಿನಗಳ ಬಳಿಕ ನಿಗದಿತ ಕಕ್ಷೆ ತಲುಪಲಿದೆ. ಅಂದರೆ ನಾಲ್ಕು ತಿಂಗಳು ಆದಿತ್ಯ-ಎಲ್1 ಯೋಜನೆಯ ಅವಧಿಯಾಗಿದ್ದು, ಜನವರಿ ಮೊದಲ ವಾರದಲ್ಲಿ ಸೂರ್ಯಯಾನದ ನೌಕೆಯು ಎಲ್-1ಗೆ ಸೇರುವ ನಿರೀಕ್ಷೆ ಇದೆ. ಇನ್ನು ಈ ನೌಕೆ ಒಟ್ಟು ಏಳು ವೈಜ್ಞಾನಿಕ ಉಪಕರಣಗಳು ಹೊತ್ತು ಸಾಗಿದೆ. ಇದರಲ್ಲಿ ಮೂರು ಉಪಕರಣಗಳು ಸೂರ್ಯನ ಕಡೆಗೆ ಅಧ್ಯಯನ ಮಾಡಲಿವೆ.


Click it and Unblock the Notifications








