Adobe ಮತ್ತು YouTube ಕೈಜೋಡಣೆ: ಶಾರ್ಟ್ಸ್ ವೀಡಿಯೊ ಕ್ರಿಯೇಟರ್ಸ್ ಇಲ್ಲಿ ನೋಡಿ!
ಜಾಗತಿಕ ಕ್ರಿಯೇಟಿವಿಟಿ ವೇದಿಕೆ Adobe MAX 2025 ನಲ್ಲಿ ಅಡೋಬ್ (Adobe) ಮತ್ತು ಯೂಟ್ಯೂಬ್ (YouTube) ಹೊಸ ಸಹಯೋಗವನ್ನು ಘೋಷಿಸಿವೆ. ಈ ಕೈಜೋಡಣೆಯು ವಿಶ್ವದ ಕ್ರಿಯೇಟರ್‌ಗಳಿಗೆ ಹೊಸ ಸೃಜನಾತ್ಮಕ ಶಕ್ತಿ ನೀಡುವ ಜೊತೆಗೆ, ಶಾರ್ಟ್ಸ್ ವಿಡಿಯೋ ನಿರ್ಮಾಣವನ್ನು ಸುಲಭಗೊಳಿಸಲು ಉದ್ದೇಶಿಸಲಾಗಿದೆ. ಇದರ ಮೂಲಕ ಪ್ರತಿಯೊಬ್ಬರೂ ತಮ್ಮ ವಿಡಿಯೋಗಳನ್ನು ವೃತ್ತಿಪರ ಮಟ್ಟದಲ್ಲಿ ತಯಾರಿಸಿ ಹೆಚ್ಚು ವೀಕ್ಷಣೆ ಮತ್ತು ಪ್ರೇಕ್ಷಕರ ತಲುಪುವಂತೆ ಮಾಡುವುದು ಗುರಿಯಾಗಿದೆ ಎಂದು ಅಡೋಬ್ ಸಂಸ್ಥೆ ತಿಳಿಸಿದೆ. ಹಾಗಾದರೆ, ಏನಿದು ಹೊಸ ಸಹಯೋಗ ಎಂಬುದನ್ನು ನೋಡೋಣ ಬನ್ನಿ.
ಈ ಸಹಕಾರದ ಅಡಿಯಲ್ಲಿ, ಅಡೋಬ್ ತನ್ನ Premiere Mobile Appನಲ್ಲಿ ಹೊಸ ವೈಶಿಷ್ಟ್ಯವಾದ 'Create for YouTube Shorts' ವಿಭಾಗವನ್ನು ಪರಿಚಯಿಸುತ್ತಿದೆ. ಇದರ ಮೂಲಕ ಬಳಕೆದಾರರು ನೇರವಾಗಿ ಯೂಟ್ಯೂಬ್ ಶಾರ್ಟ್ಸ್‌ಗೆ ವಿಡಿಯೋಗಳನ್ನು ಎಡಿಟ್ ಮಾಡಿ ಅಪ್‌ಲೋಡ್ ಮಾಡಬಹುದು. ಈ ವಿಭಾಗವು ಕ್ರಿಯೇಟರ್‌ಗಳಿಗೆ ಅಡೋಬ್‌ನ ಪ್ರೊ-ಗ್ರೇಡ್ ಎಡಿಟಿಂಗ್ ಟೂಲ್‌ಗಳು, ಆಕರ್ಷಕ ಎಫೆಕ್ಟ್‌ಗಳು, ಟ್ರಾನ್ಸಿಷನ್‌ಗಳು ಮತ್ತು ಕಸ್ಟಮ್ ಟೆಂಪ್ಲೇಟ್‌ಗಳ ಪ್ರವೇಶವನ್ನು ಒದಗಿಸುತ್ತದೆ. ಈ ಎಲ್ಲ ಪರಿಕರಗಳನ್ನು ಕಂಟೆಂಟ್ ಕ್ರಿಯೇಟರ್‌ಗಳು ಅತ್ಯಂತ ಸುಲಭವಾಗಿ ಉಪಯೋಗಿಸಲು ಸಾಧ್ಯವಾಗಲಿದೆ.
ಹೊಸ Create for YouTube Shorts ವಿಭಾಗವನ್ನು ಯೂಟ್ಯೂಬ್‌ನಲ್ಲಿರುವ "Edit in Adobe Premiere" ಆಯ್ಕೆಯ ಮೂಲಕ ನೇರವಾಗಿ ತೆರೆಯಬಹುದು. ಈ ವಿಭಾಗದಲ್ಲಿ ಲಭ್ಯವಿರುವ ಪ್ರಮುಖ ವೈಶಿಷ್ಟ್ಯಗಳು ಇಂತಿವೆ,
- ವಿಶಿಷ್ಟ ಎಫೆಕ್ಟ್‌ಗಳು, ಟ್ರಾನ್ಸಿಷನ್‌ಗಳು ಮತ್ತು ಶೀರ್ಷಿಕೆ ಶೈಲಿಗಳು
- ಸಿದ್ಧ ಟೆಂಪ್ಲೇಟ್‌ಗಳನ್ನು ಬಳಸಿ ತಕ್ಷಣ ವೃತ್ತಿಪರ ಮಟ್ಟದ ಶಾರ್ಟ್ಸ್ ಸೃಷ್ಟಿಸುವ ವ್ಯವಸ್ಥೆ
- ಸ್ವಂತ ಟೆಂಪ್ಲೇಟ್‌ಗಳನ್ನು ರಚಿಸಿ ಇತರರೊಂದಿಗೆ ಹಂಚಿಕೊಳ್ಳುವ ಅವಕಾಶ
- ಕೇವಲ ಒಂದು ಟ್ಯಾಪ್‌ನಲ್ಲೇ ವಿಡಿಯೋವನ್ನು ಯೂಟ್ಯೂಬ್ ಶಾರ್ಟ್ಸ್‌ಗೆ ಅಪ್‌ಲೋಡ್ ಮಾಡುವ ಸೌಲಭ್ಯ
ಈ ಮೇಲಿನ ವೈಶಿಷ್ಟ್ಯಗಳ ಸಹಾಯದಿಂದ ಪ್ರತಿಯೊಬ್ಬರೂ ತಮ್ಮ ವಿಡಿಯೋಗಳನ್ನು ವೃತ್ತಿಪರ ಮಟ್ಟದಲ್ಲಿ ಸಿದ್ಧಪಡಿಸಿ ಹೆಚ್ಚು ವೀಕ್ಷಣೆ ಮತ್ತು ಪ್ರೇಕ್ಷಕರ ತಲುಪುವಿಕೆಯನ್ನು ಪಡೆಯಬಹುದು ಎಂದು ಅಡೋಬ್ ಸಂಸ್ಥೆ ತಿಳಿಸಿದೆ.

ಈ ಸಹಯೋಗದ ಕುರಿತಂತೆ ಮಾತನಾಡಿರುವ, ಅಡೋಬ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಎಲಿ ಗ್ರೀನ್‌ಫೀಲ್ಡ್ ಅವರು: "ಯೂಟ್ಯೂಬ್‌ನಂತಹ ದೊಡ್ಡ ವೇದಿಕೆಯೊಂದಿಗೆ ಕೆಲಸ ಮಾಡುವುದರಿಂದ ಕ್ರಿಯೇಟರ್‌ಗಳಿಗೆ ಹೊಸ ಅವಕಾಶಗಳು ಸಿಗುತ್ತವೆ. ಪ್ರೀಮಿಯರ್ ಮೊಬೈಲ್‌ನ ಪ್ರೊ-ಲೇವೆಲ್ ಎಡಿಟಿಂಗ್ ಸಾಧನಗಳು ಈಗ ನೇರವಾಗಿ ಯೂಟ್ಯೂಬ್ ಶಾರ್ಟ್ಸ್ ಕ್ರಿಯೇಟರ್‌ಗಳ ಕೈಗೆ ದೊರೆಯುತ್ತಿವೆ." ಎಂದು ಹೇಳಿದ್ದಾರೆ.
ಹಾಗೆಯೇ, ಯೂಟ್ಯೂಬ್‌ನ ಎಂಜಿನಿಯರಿಂಗ್ ಉಪಾಧ್ಯಕ್ಷರಾದ ಸ್ಕಾಟ್ ಸಿಲ್ವರ್ ಅವರು: "ನಾವು ಕ್ರಿಯೇಟರ್‌ಗಳನ್ನು ಅವರ ಸ್ಥಳದಲ್ಲೇ ಬೆಂಬಲಿಸಲು ಬಯಸುತ್ತೇವೆ. ಅಡೋಬ್ ಜೊತೆಗೆ ಈ ಸಹಕಾರವು ಶಾರ್ಟ್ಸ್ ನಿರ್ಮಾಣಕ್ಕೆ ಹೊಸ ಆಯ್ಕೆಗಳನ್ನು ನೀಡುತ್ತದೆ. ಇದರ ಮೂಲಕ ಕ್ರಿಯೇಟರ್‌ಗಳು ತಮ್ಮ ಕಥೆಗಳನ್ನು ಸೃಜನಾತ್ಮಕವಾಗಿ ಹೇಳಿ, ವಿಶ್ವದಾದ್ಯಂತ ಹೊಸ ಪ್ರೇಕ್ಷಕರನ್ನು ತಲುಪಬಹುದು." ಎಂದು ಹೇಳಿದ್ದಾರೆ.
Adobe ಪ್ರೀಮಿಯರ್ ಮೊಬೈಲ್ ಈಗ Generative Sound Effects, Firefly AI ತಂತ್ರಜ್ಞಾನ ಮತ್ತು ಪ್ರೊಫೆಷನಲ್ ಎಡಿಟಿಂಗ್ ಉಪಕರಣಗಳೊಂದಿಗೆ ಬರುರುವುದು ನಿಜಕ್ಕೂ ಸಂತಸದ ಸುದ್ದಿ ಎನ್ನಬಹುದು. ಇದರಿಂದ ಕಂಟೆಂಟ್ ಕ್ರಿಯೇಟರ್‌ಗಳು ಎಲ್ಲೆಡೆ ತಮ್ಮ ಸೃಜನಶೀಲತೆಯನ್ನು ತೋರಿಸಲು ಸಾಧ್ಯವಾಗುತ್ತದೆ.ಈ ವೈಶಿಷ್ಟ್ಯವು ಶೀಘ್ರದಲ್ಲೇ ಲಭ್ಯವಾಗಲಿದ್ದು, ಇದು ಭಾರತ ಸೇರಿದಂತೆ ವಿಶ್ವದ ಕ್ರಿಯೇಟರ್‌ಗಳಿಗೆ ಹೊಸ ಬಾಗಿಲು ತೆರೆದಿಡಲಿದೆ. ಯೂಟ್ಯೂಬ್ ಶಾರ್ಟ್ಸ್‌ನಲ್ಲಿ ಹೆಚ್ಚು ಪ್ರೇಕ್ಷಕರನ್ನು ತಲುಪಲು ಬಯಸುವ ಯುವ ಕಂಟೆಂಟ್ ಕ್ರಿಯೇಟರ್‌ಗಳಿಗೆ ಇದು ಸಹಾಯವಾಗಬಹುದು.
ಮೂಲ: Adobe MAX 2025 ಘೋಷಣೆ


Click it and Unblock the Notifications








