ಕ್ಯಾನ್ಸರ್ ಹುಟ್ಟಿನಲ್ಲೇ ತಿಳಿಸುವ 'AI ತಂತ್ರಜ್ಞಾನ' ಈಗ ಬೆಂಗಳೂರಿಗೂ ಬಂದಿದೆ!!

|

ಓರ್ವ ರೋಗಿಗೆ ಕ್ಯಾನ್ಸರ್‌ ಕೋಶಗಳಿವೆ ಎಂದು ತಿಳಿಯುವ ವೇಳೆಗೆ ಆತನ ಕ್ಯಾನ್ಸರ್ ರೋಗ ಮಿತಿಮೀರಿಬಿಟ್ಟಿರುತ್ತದೆ. ಆ ತರಹದ ರೋಗಿಯನ್ನು ಪರೀಕ್ಷಿಸಿದ ವೈದ್ಯರು ನೀವಿನ್ನು ಹೆಚ್ಚುದಿನ ಬಹದುಕುವುದಿಲ್ಲ ಎಂದು ಷರಾ ಬರೆದುಬಿಡುತ್ತಾರೆ. ಆದರೆ ಇನ್ಮುಂದೆ ಹೀಗೆ ಆಗುವುದಿಲ್ಲ. ಏಕೆಂದರೆ, ಕೃತಕ ಬುದ್ಧಿಮತ್ತೆ ಆಧಾರಿತ ಡಿಜಿಟಲ್‌ ತಂತ್ರಜ್ಞಾನ ಈ ಸಮಸ್ಯೆಗೆ ಪರಿಹಾರ ನೀಡಿದೆ.

ಹೌದು, ಓರ್ವ ರೋಗಿಯು ಕ್ಯಾನ್ಸರ್‌ ಪೀಡಿತ ಹೌದೋ ಅಲ್ಲವೋ ಎಂಬುದನ್ನು ಕೆಲವೇ ಗಂಟೆಗಳಲ್ಲಿ ಖಚಿತವಾಗಿ ಹೇಳಬಹುದಾದ ಡಿಜಿಟಲ್‌ ಇಮೇಜಿಂಗ್ ತಂತ್ರಜ್ಞಾನ ಇದೀಗ ಬಳಕೆಗೆ ಬಂದಿದೆ. ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಡಿಜಿಟಲ್‌ ತಂತ್ರಜ್ಞಾನ ಬಳಕೆ ಮಾಡಿಕೊಂಡು, ಕ್ಯಾನ್ಸರ್‌ ಇರುವ ದೇಹದ ಕೋಶವನ್ನು ಪರೀಕ್ಷೆ ಮಾಡಿ ಕೆಲವೇ ಗಂಟೆಗಳಲ್ಲಿ ಅಭಿಪ್ರಾಯ ಪಡೆಬಹುದಾಗಿದೆ.

ಕ್ಯಾನ್ಸರ್ ಹುಟ್ಟಿನಲ್ಲೇ ತಿಳಿಸುವ 'AI ತಂತ್ರಜ್ಞಾನ' ಈಗ ಬೆಂಗಳೂರಿಗೂ ಬಂದಿದೆ!!

ವ್ಯಕ್ತಿಯೊಬ್ಬ ಕ್ಯಾನ್ಸರ್‌ ಕಾಯಿಲೆಯ ಸಂದೇಹದಿಂದ ದೇಹದ ಕೋಶವನ್ನು ಪರೀಕ್ಷೆಗೆ ಒಳಪಡಿಸಿದರೆ, ಕೋಶದ ಸ್ಯಾಂಪಲ್ ಆನ್ನು ವಿಶ್ವದ ಅತಿರಥ ಮಹಾರಥ ತಜ್ಞರು ಏಕಕಾಲದಲ್ಲಿ ಪರಿಶೀಲಿಸಿ ಅದು ಕ್ಯಾನ್ಸರ್‌ ಕೋಶ ಹೌದೋ ಅಲ್ಲವೋ ಎಂಬ ನಿರ್ಧಾರಕ್ಕೆ ಬರಬಹುದು. ಕೆಲವೇ ಗಂಟೆಗಳಲ್ಲಿ ಅಭಿಪ್ರಾಯ ಪಡೆಯುವುದರಿಂದ, ಬೇಗನೇ ಚಿಕಿತ್ಸೆ ಆರಂಭಿಸಲು ಸಾಧ್ಯವಿದೆ.

ಈ ಹೊಸ ತಂತ್ರಜ್ಞಾನವನ್ನು ಡಿಜಿಟಲ್‌ ಪೆಥಾಲಜಿ ಸಲ್ಯುಷನ್ ಎಂದು ಕರೆಯಲಾಗಿದ್ದು, ಫಿಲಿಪ್ಸ್‌ ಕಂಪನಿ ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನ ಇದೀಗ ಭಾರತದಲ್ಲೂ ಸಹ ಬಳಕೆಯಲ್ಲಿದೆ. ಡಿಜಿಟಲ್‌ ಇಮೇಜ್‌ ಮೂಲಕ ಕ್ಯಾನ್ಸರ್‌ ಕೋಶ ಹೌದೋ ಅಲ್ಲವೋ ಎಂಬುದನ್ನು ಎಲ್ಲಿಯೋ ಕುಳಿತ ಡಾಕ್ಟರ್ ಓರ್ವರು ರಿಪೋರ್ಟ್ ಪರಿಶೀಲಿಸಿ ಖಚಿತ ಅಭಿಪ್ರಾಯ ನೀಡಬಹುದಾಗಿದೆ.

ಕ್ಯಾನ್ಸರ್ ಹುಟ್ಟಿನಲ್ಲೇ ತಿಳಿಸುವ 'AI ತಂತ್ರಜ್ಞಾನ' ಈಗ ಬೆಂಗಳೂರಿಗೂ ಬಂದಿದೆ!!

ಈ ತಂತ್ರಜ್ಞಾನವನ್ನು 'ಎಚ್‌ಸಿಜಿ' ಕ್ಯಾನ್ಸರ್‌ ಆಸ್ಪತ್ರೆ ದೇಶದಲ್ಲೇ ಮೊದಲ ಬಾರಿಗೆ ಅಳವಡಿಸಿಕೊಂಡಿದ್ದು, ಕೃತಕ ಬುದ್ಧಿಮತ್ತೆ ಆಧಾರಿತ ಈ ತಂತ್ರಜ್ಞಾನ ಕ್ಯಾನ್ಸರ್ ರೋಗಿಗಳಿಗೆ ವರದಾನ. ಎಚ್‌ಸಿಜಿ ಅಲ್ಲದೇ, ಇತರ ಆಸ್ಪತ್ರೆಗಳೂ ಸಹ ಇದರ ಸೌಲಭ್ಯ ಬಳಸಿಕೊಳ್ಳಬಹುದು ಎಂದು ಎಚ್‌ಸಿಜಿ ಕ್ಯಾನ್ಸರ್‌ ಆಸ್ಪತ್ರೆಯ ಅಧ್ಯಕ್ಷ ಡಾ.ಬಿ.ಎಸ್‌.ಅಜಯ್‌ಕುಮಾರ್‌ ಅವರು ತಿಳಿಸಿದ್ದಾರೆ.

Best Mobiles in India

English summary
Digital pathology is an image-based information environment which is enabled by computer technology that allows for the management of information generated from a digital slide. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X