ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಗ್ಗೆ ತಂತ್ರಜ್ಞಾನ ದಿಗ್ಗಜರಿಗೆ ಭಯ ಕಾಡುತ್ತಿರುವುದೇಕೆ?

|

ತಂತ್ರಜ್ಞಾನದ ಪರಾಕಾಷ್ಠೆ ಎಂದು ಕರೆಸಿಕೊಳ್ಳುತ್ತಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್-ಎಐ) ಬಳಕೆ ಅಲ್ಪಸ್ವಲ್ಪ ಅಭಿವೃದ್ದಿಯಾಗಿ ಈಗಾಗಲೇ ಬಳಕೆಯಲ್ಲಿರುವುದು ನಿಮಗೆಲ್ಲಾ ಗೊತ್ತಿದೆ .ಇದು ಇಲ್ಲಿಗೆ ನಿಂತರೆ ಸಮಸ್ಯೆಯಲ್ಲ. ಆದರೆ, ಇದರ ಅಭಿವೃದ್ದಿಯಾದಂತೆ ಮನುಷ್ಯನನ್ನೇ ಮೂಲೆಗುಂಪು ಮಾಡಬಹುದಾದ ಅಪಾಯ ಈ ತಂತ್ರಜ್ಞಾನದಲ್ಲಿದೆ.

ನಮ್ಮ ಮೆದುಳಿಗೆ ಕೆಲಸವೇ ಇರದಂತೆ ಮಾಡುವ ಈ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಗ್ಗೆ ಭಯವಿದ್ದರೂ ಇದರ ಅಭಿವೃದ್ದಿ ನಡೆಯುತ್ತಲೇ ಇದೆ. ಮಾನವನ ಬುದ್ಧಿಶಕ್ತಿಯಿಂದಲೇ ಜನ್ಮತಾಳಿದ ಈ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಈಗ ಮಾನವನಿಗೇ ಸವಾಲೆಸೆಯುತ್ತಿದೆ. ಮುಂದಿನ 15 ವರ್ಷಗಳಲ್ಲಿ ಇದು ಮನುಷ್ಯನ ಬುದ್ಧಿಶಕ್ತಿ ಸಾಮರ್ಥ್ಯವನ್ನು ಮೀರಿಸುತ್ತದೆಯಂತೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಗ್ಗೆ ತಂತ್ರಜ್ಞಾನ ದಿಗ್ಗಜರಿಗೆ ಭಯ!

ಇನ್ನು 100 ವರ್ಷಗಳಲ್ಲಿ ವಿಶ್ವದ ಒಟ್ಟಾರೆ ಜನರ ಬುದ್ಧಿಶಕ್ತಿಯನ್ನು ಒಟ್ಟುಗೂಡಿಸಿದರೂ ಇದಕ್ಕೆ ಸರಿಸಾಟಿಯಾಗಲಾರದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.! ಈ ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಬಗ್ಗೆ ದಿಗ್ಗಜರು ಸಹ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದು, ಹಾಗಾದರೆ, ಕೃತಕ ಬುದ್ಧಿಮತ್ತೆ ಇತಿಹಾಸ ಏನು? ಸಾಧಕ ಬಾಧಕಗಳೇನು ಎಂಬುದನ್ನು ಮುಂದೆ ತಿಳಿಯಿರಿ.!!

ಏನಿದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ?

ಏನಿದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ?

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಸರಳವಾಗಿ ಹೇಳುವುದಾದರೆ ಇದು ಕೇವಲ ಒಂದು ಕಂಪ್ಯೂಟರ್ ಪ್ರೋಗ್ರಾಮ್. ಆದರೆ, ಇದು ಇಷ್ಟಕ್ಕೇ ಸೀಮಿತವಾಗಿದ್ದರೆ ಇದರ ಬಗ್ಗೆ ಹೆಚ್ಚು ಚರ್ಚಿಸುವ ಅವಶ್ಯಕತೆ ಇರುತ್ತಿರಲಿಲ್ಲ. ಆದರೆ, ಇದು ಸಾಮಾನ್ಯ ಕಂಪ್ಯೂಟರ್ ಪ್ರೋಗ್ರಾಮ್‌ ಅಲ್ಲ. ಪರಿಸ್ಥಿತಿಗಳಿಗೆ ಅನುಗುಣವಾಗಿ ತಾನೇ ನಿರ್ಣಯಗಳನ್ನು ತೆಗೆದುಕೊಳ್ಳುವಪ ಪ್ರೋಗ್ರಾಮ್!!

'ಆರ್ಟಿಫಿಶಿಯಲ್ ಇಂಟಲಿಜೆನ್ಸ್' ಹುಟ್ಟಿದ್ದು ಯಾವಾಗ?

'ಆರ್ಟಿಫಿಶಿಯಲ್ ಇಂಟಲಿಜೆನ್ಸ್' ಹುಟ್ಟಿದ್ದು ಯಾವಾಗ?

ಇತ್ತೀಚಿಗೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) 1956ರಿಂದಲೇ ಬಳಕೆಗೆ ಬಂದಿದೆ. ಎಲ್‌ಐಎಸ್‌ಪಿ ಎನ್ನುವ ಪ್ರೊಗ್ರಾಮಿಂಗ್ ಲಾಂಗ್ವೇಜ್ ಅಭಿವೃದ್ಧಿಪಡಿಸಿದ ಜಾನ್ ಮೆಕ್‌ಕಾರ್ತಿ ಎನ್ನುವ ವಿಜ್ಞಾನಿ ಇದಕ್ಕೆ ‘ಆರ್ಟಿಫಿಶಿಯಲ್‌ ಇಂಟಲಿಜೆನ್ಸ್' ಎಂಬ ಹೆಸರನ್ನು ಸೂಚಿಸಿದರು.!!

ಪ್ರಚಲಿತವಾಗಿದ್ದು ಚೆಸ್‌ನಿಂದ!!

ಪ್ರಚಲಿತವಾಗಿದ್ದು ಚೆಸ್‌ನಿಂದ!!

ಮಾನವನನ್ನು ಬಿಟ್ಟರೆ ಇತರರಿಂದ ಚೆಸ್ ಆಡಲು ಸಾಧ್ಯವೇ ಇಲ್ಲ ಎನ್ನುವ ಕಾಲದಲ್ಲಿ ಐಬಿಎಂನ ‘ಡೀಪ್‌ ಬ್ಲೂ' ಸೂಪರ್ ಕಂಪ್ಯೂಟರ್‌ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ವಿಶ್ವ ಚೆಸ್‌ ಚಾಂಪಿಯನ್ ಆಗಿದ್ದ ಗ್ಯಾರಿ ಕಾಸ್ಪೆರೆಸೊ ಅವರನ್ನು ಸೋಲಿಸಿತು. ಈ ಘಟನೆ ನಂತರ ಕೃತಕ ಬುದ್ಧಿಮತ್ತೆಯ ಶಕ್ತಿ ಏನೆಂಬುದು ವಿಶ್ವಕ್ಕೆ ತಿಳಿಯಿತು.!!

ನಮಗೆ ಅರಿವಿಲ್ಲದಂತೆಯೇ ಹಾಸುಹೊಕ್ಕಾಗಿದೆ.!!

ನಮಗೆ ಅರಿವಿಲ್ಲದಂತೆಯೇ ಹಾಸುಹೊಕ್ಕಾಗಿದೆ.!!

ನಮ್ಮ ಆಲೋಚನೆಗಳನ್ನು ಗ್ರಹಿಸಿ ಅದಕ್ಕೆ ಅನುಗುಣವಾದ ಕೆಲಸಗಳನ್ನು ಮಾಡುತ್ತಿರುವ ಇವೆಲ್ಲಾ ಕೃತಕ ಬುದ್ಧಿಮತ್ತೆಯ ರೂಪಗಳೇ. ಹೀಗೆ ನಮಗೆ ಅರಿವಿಲ್ಲದಂತೆ ಇದು ನಮ್ಮ ಜೀವನಕ್ಕೆ ಕಾಲಿಟ್ಟಿದೆ. ಯಾವುದಾದರೂ ಮಾಹಿತಿಗಾಗಿ ಗೂಗಲ್‌ನಲ್ಲಿ ಎರಡು ಅಕ್ಷರಗಳನ್ನು ಟೈಪ್‌ ಮಾಡುತ್ತಿದ್ದಂತೇ ನಾವು ಏನು ಹುಡುಕಲು ಪ್ರಯತ್ನಿಸುತ್ತಿದ್ದೇವೆ ಎಂದು ಊಹಿಸಿಸುವುದು ಇದರಿಂದಲೇ.!

'ಆರ್ಟಿಫಿಶಿಯಲ್ ಇಂಟಲಿಜೆನ್ಸ್' ವಿಶೇಷವೇನು?

'ಆರ್ಟಿಫಿಶಿಯಲ್ ಇಂಟಲಿಜೆನ್ಸ್' ವಿಶೇಷವೇನು?

ವೈದ್ಯ, ವಿಜ್ಞಾನ, ವಾಣಿಜ್ಯ, ಸೇನೆ, ಸೇವೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಇದರದ್ದೇ ಮೇಲುಗೈ.!! ಸ್ವಯಂಚಾಲಿತ ವಾಹನ, ಯಂತ್ರಗಳು, ಚಾಟ್‌ಬೋಟ್ಸ್, ಪರ್ಸನಲ್ ಡಿಜಿಟಲ್ ಅಸಿಸ್ಟಂಟ್ ಎಲ್ಲವೂ ಕೂಡ 'ಆರ್ಟಿಫಿಶಿಯಲ್ ಇಂಟಲಿಜೆನ್ಸ್' ವಿಶೇಷತೆಗಳೆ.! ಸ್ವಯಂ ಆಗಿ ಕಲಿಯುವ ಯಂತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಕೆಲಸ ನಿರ್ವಹಿಸಲಿದ್ದು, ಪರಿಸ್ಥಿತಿಗಳಿಗೆ ಅನುಗುಣವಾಗಿ ಪ್ರೋಗ್ರಾಮಿಂಗ್ ಮಾಡಿಕೊಂಡು ಅದರ ಅಧಾರವಾಗಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕೆಲಸ ಮಾಡುತ್ತದೆ!!

'ಆರ್ಟಿಫಿಶಿಯಲ್ ಇಂಟಲಿಜೆನ್ಸ್' ಪರಿಣಾಮಗಳೇನು?

'ಆರ್ಟಿಫಿಶಿಯಲ್ ಇಂಟಲಿಜೆನ್ಸ್' ಪರಿಣಾಮಗಳೇನು?

ಮಾನವನ ಕೆಲಸ ಮತ್ತು ಜೀವನವನ್ನೇ ಬಹಳ ಸುಲಭಗೊಳಿಸುವ ಈ ಕೃತಕ ಬುದ್ಧಿಮತ್ತೆ ಮಾನವನ ಒಳಿತಿಗೆ ಕಾರಣವಾಗಬಲ್ಲದು. ಆದರೆ, ಇದೇ ವಿಜೃಂಭಿಸಿದರೆ ಹಲವರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.ಭಯೋತ್ಪಾದಕರು, ಕಳ್ಳರು ದುರುದ್ದೇಶಗಳಿಗೆ ಇದರ ಶಕ್ತಿಯಿಂದ ಕೆಲಸ ಮಾಡುವ ಸ್ವಯಂಚಾಲಿತ ಯಂತ್ರಗಳು ಸಿಕ್ಕರೆ ಆಗಬಹುದಾದ ಪರಿಣಾಮಗಳನ್ನು ಸಹ ಯೋಚಿಸಬೇಕಿದೆ.!

ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ವಿರುದ್ದ ಯಾರಿದ್ದಾರೆ.?

ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ವಿರುದ್ದ ಯಾರಿದ್ದಾರೆ.?

ಎಲಾನ್ ಮಸ್ಕ್ ಪ್ರಕಾರ ಕೃತಕ ಬುದ್ಧಿಮತ್ತೆ ಮನುಕುಲದ ಅಂತ್ಯಕ್ಕೆ ಕಾರಣವಾಗುತ್ತದೆ ಎಂದರೆ, ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಸಹ ಕೃತಕ ಬುದ್ಧಿಮತ್ತೆಯನ್ನು ಮನುಕುಲ ಕೊನೆಗೊಳಿಸಬಹುದಾದ ಪರಿಕಲ್ಪನೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕಾಳಜಿ ವಹಿಸಬೇಕಾದ ವಿಚಾರ ಎಂದಿದ್ದಾರೆ.!!

ಕೃತಕ ಬುದ್ಧಿಮತ್ತೆ ಪರ ಯಾರಿದ್ದಾರೆ?

ಕೃತಕ ಬುದ್ಧಿಮತ್ತೆ ಪರ ಯಾರಿದ್ದಾರೆ?

ಮಾರ್ಕ್ ಝುಕರ್‌ಬರ್ಗ್ ರೀತಿಯಲ್ಲಿಯೇ ಇತರ ಹೆಸರಾಂತ ತಂತ್ರಜ್ಞರು ಅಭಿಪ್ರಾಯಪಟ್ಟಿದ್ದು, ಗೂಗಲ್ ಡೀಪ್ ಮೈಂಡ್‌ನ ಸಂಸ್ಥಾಪಕ ಡೆಮಿಸ್ ಹಸಾಬಿಸ್ ಪ್ರಕಾರ ಕೃತಕ ಬುದ್ಧಿಮತ್ತೆ ಮನುಕುಲ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೊಂದು ‘ಅಂತಿಮ ಪರಿಹಾರ' ಎಂದು ಹೇಳಿದ್ದಾರೆ. ಮೈಕ್ರೋಸಾಫ್ಟ್ ರೆಡ್ಮಂಡ್ ಲ್ಯಾಬ್ ನಿರ್ದೇಶಕ ಎರಿಕ್ ಹಾರ್ವಿಟ್ಜ್ ಅವರು ಸಹ ಮನುಷ್ಯನನ್ನು ಇನ್ನಿಲ್ಲದಷ್ಟು ಸಬಲನನ್ನಾಗಿ ಮಾಡಬಲ್ಲ ಸಾಧನ ಕೃತಕ ಬುದ್ಧಿಮತ್ತೆ ಎಂದಿದ್ದಾರೆ.!!

ಇದಕ್ಕಾಗಿ ಜಗಳವಾಡಿಕೊಂಡಿದ್ದರು ದೈತ್ಯರು.

ಇದಕ್ಕಾಗಿ ಜಗಳವಾಡಿಕೊಂಡಿದ್ದರು ದೈತ್ಯರು.

ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಹಾಗೂ ಸ್ಪೇಸ್‌ ಎಕ್ಸ್ ಮತ್ತು ಟೆಲ್ಸಾ ಮುಖ್ಯಸ್ಥ ಎಲಾನ್ ಮಸ್ಕ್ ತಂತ್ರಜ್ಞಾನ ಪ್ರಪಂಚದಲ್ಲಿ ಒಂದೇ ಸಮ ತೂಗುತ್ತಾರೆ. ಆದರೆ, ಎಲಾನ್ ಮಸ್ಕ್ ಅವರ ಈ ಅಭಿಪ್ರಾಯಕ್ಕೆ ಜುಕರ್‌ಬರ್ಗ್ 'ಇದೊಂದು ಬೇಜವಾಬ್ದಾರಿ ಹೇಳಿಕೆ, ನಾನು ಈ ಬಗ್ಗೆ ಆಶಾವಾದಿ ಎಂದಿದ್ದರು. ಇದಕ್ಕೆ ಎಲಾನ್ ಮಸ್ಕ್ ಜುಕರ್‌ಬರ್ಗ್‌ಗೆ ವಿಷಯ ಜ್ಞಾನವಿಲ್ಲ' ಎಂದಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ನಮ್ಮನ್ನು ಮುಗಿಸಲಿದೆಯೇ ತಂತ್ರಜ್ಞಾನ!?

ನಮ್ಮನ್ನು ಮುಗಿಸಲಿದೆಯೇ ತಂತ್ರಜ್ಞಾನ!?

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಭಿವೃದ್ದಿಯಾದರೆ ಭವಿಷ್ಯದಲ್ಲಿ ಆಗಬಹುದಾದ ಪರಿಣಾಮಗಳನ್ನು ಬಹುತೇಕ ತಂತ್ರಜ್ಞಾನ ದಿಗ್ಗಜರು ಭಯದಿಂದ ನೋಡುತ್ತಿದ್ದಾರೆ. ಯಂತ್ರಗಳು ತಾವೇ ಸ್ವತಹಃ ನಿರ್ಣಯ ಕೈಗೊಳ್ಳುವುದರಿಂದ ಭವಿಷ್ಯದಲ್ಲಿ ಮಾನವನನ್ನು ನಿರ್ನಾಮ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ.!

Most Read Articles
Best Mobiles in India

English summary
Artificial intelligence researchers want to bring in emotional quotient to the machines along with the general intelligence. Let us look at pros and cons.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more