Home
ಸುದ್ದಿಜಾಲ

BSNL ಸಿಲ್ವರ್ ಜುಬಿಲಿ ಪ್ಲ್ಯಾನ್ ಪರಿಚಯ: ಬೆಚ್ಚಿಬಿದ್ದವು ಖಾಸಗಿ ಟೆಲಿಕಾಂಗಳು!

ಭಾರತ ಸರ್ಕಾರ ನಿಯಮಿತ ಟೆಲಿಕಾಂ ಸಂಸ್ಥೆ BSNL ತನ್ನ ಗ್ರಾಹಕರಿಗೆ ಮತ್ತೊಂದು ಆಕರ್ಷಕವಾಗಿರುವ ಹೊಸ ಪ್ರೀಪೇಯ್ಡ್ ಪ್ಲ್ಯಾನ್ ಒಂದನ್ನು ಇತ್ತೀಚಿಗಷ್ಟೇ ಪರಿಚಯಿಸಿದೆ. ದೇಶದ ಖಾಸಾಗಿ ಟೆಲಿಕಾಂ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ, BSNL ಸಂಸ್ಥೆಯು ಅತ್ಯಂತ ಕಡಿಮೆ ಬೆಲೆಗೆ ಪ್ರತಿ ದಿನ 2.5GB ಹೊಂದಿರುವ ಈ ರೀಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸಿದ್ದು, ಸಿಲ್ವರ್ ಜುಬಿಲಿ ಎಂದು ಹೆಸರಿಸಲಾದ ಈ ವಿಶೇಷ ಪ್ಲ್ಯಾನ್ ಸೀಮಿತ ಕಾಲ ಮಾತ್ರ ಲಭ್ಯವಿರಲಿದೆ ಎಂದು ತಿಳಿಸಿದೆ. ಹಾಗಾದರೆ, ಹೊಸ BSNL, ಸಿಲ್ವರ್ ಜುಬಿಲಿ ಪ್ರೀಪೇಯ್ಡ್ ಪ್ಲ್ಯಾನ್ ಹೇಗಿದೆ ಎಂಬುದನ್ನು ನೋಡೋಣ ಬನ್ನಿ.

BSNL ನಿಂದ ಹೊಸ ಆಫರ್: ಸಿಲ್ವರ್ ಜುಬಿಲಿ
BSNL ಪರಿಚಯಿಸಿರುವ ಹೊಸ ಸಿಲ್ವರ್ ಜುಬಿಲಿ ರೀಚಾರ್ಜ್ ಯೋಜನೆಯು 225 ರೂ.ಗಳಿಗೆ ಬಂದಿದೆ. ಈ ಯೋಜನೆಯು 225 ರೂ.ಗೆ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಈ ವ್ಯಾಲಿಡಿಟಿಯಲ್ಲಿ ಪ್ರತಿದಿನವೂ 2.5GB 4G ಡೇಟಾವನ್ನು ಒದಗಿಸುತ್ತದೆ. ಇದರ ಜೊತೆಗೆ ಎಲ್ಲ ಜಾಲಗಳಿಗೆ ಅನಿಯಮಿತ ಸ್ಥಳೀಯ ಮತ್ತು STD ಕರೆಗಳು ಉಚಿತವಾಗಿವೇ. ಇಷ್ಟೇ ಅಲ್ಲದೆ, ಪ್ರತಿದಿನ 100 SMS ಗಳು ಕೂಡ ದೊರೆಯಲಿವೆ. ಡೇಟಾ ಮಿತಿ ಮುಗಿದ ನಂತರ ವೇಗ 40kbps ಕ್ಕೆ ಇಳಿಯಲಿದ್ದು, ರೀಚಾರ್ಜ್ ಸೇರಿದಂತೆ ಸಾಮಾನ್ಯ ಕೆಲಸಗಳಿಗೂ ಸಹ ಈ ಡೇಟಾವನ್ನು ಬಳಸಬಹುದು.

BSNL ಸಿಲ್ವರ್ ಜುಬಿಲಿ ಪ್ಲ್ಯಾನ್ ಪರಿಚಯ: ಬೆಚ್ಚಿಬಿದ್ದವು ಖಾಸಗಿ ಟೆಲಿಕಾಂಗಳು!

ಸಿಲ್ವರ್ ಜುಬಿಲಿ FTTH ಪ್ಲ್ಯಾನ್: ಬ್ರಾಡ್‌ಬ್ಯಾಂಡ್ ಆಫರ್
ಈ ಪ್ರೀಪೇಯ್ಡ್ ಪ್ಲ್ಯಾನ್ ಜೊತೆಗೆ, BSNL ತನ್ನ ಬ್ರಾಡ್‌ಬ್ಯಾಂಡ್ ಗ್ರಾಹಕರಿಗಾಗಿಯೂ ಸಹ 625 ರೂ. ಪ್ಲ್ಯಾನ್ ಅನ್ನು ಸಹ ಬಿಡುಗಡೆ ಮಾಡಿದೆ. ಈ FTTH ಪ್ಲ್ಯಾನ್‌ನಲ್ಲಿ 70Mbps ವೇಗದಲ್ಲಿ 2500GB ಡೇಟಾ ದೊರೆಯುತ್ತದೆ. ಜೊತೆಗೆ, 600 ಕ್ಕೂ ಹೆಚ್ಚು ಲೈವ್ ಟಿವಿ ಚಾನಲ್‌ಗಳು, 127 ಪ್ರೀಮಿಯಂ ಚಾನಲ್‌ಗಳುಮತ್ತು Hotstar ಮತ್ತು SonyLIV OTT ಸಬ್ಸ್ಕ್ರಿಪ್ಷನ್ ದೊರೆಯಲಿವೆ. ಇದರಿಂದ ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮನರಂಜನೆ ಮತ್ತು ಇಂಟರ್ನೆಟ್ ಎರಡನ್ನೂ ಒಂದೇ ಪ್ಲ್ಯಾನ್‌ನಲ್ಲಿ ಪಡೆಯಲು ಸಾಧ್ಯವಾಗಲಿದೆ ಎಂದು BSNL ಸಂಸ್ಥೆ ತಿಳಿಸಿದೆ.

ರೀಚಾರ್ಜ್ ಹೇಗೆ? ಇಲ್ಲಿದೆ ಸರಳ ವಿಧಾನ
ಪ್ರಸ್ತುತ BSNL ಗ್ರಾಹಕರು ಅಧಿಕೃತ BSNL ವೆಬ್‌ಸೈಟ್ ಅಥವಾ Selfcare ಆಪ್ ಮೂಲಕ ನೇರವಾಗಿ ಈ ಯೋಜನೆಗಳಿಗೆ ರೀಚಾರ್ಜ್ ಮಾಡಬಹುದು. ಹೊಸ ಗ್ರಾಹಕರಿಗೆ ಹತ್ತಿರದ BSNL ರಿಟೇಲ್ ಅಂಗಡಿಗಳು ಮತ್ತು BSNL ಸಾಮಾನ್ಯ ಸೇವಾ ಕೇಂದ್ರಗಳಲ್ಲಿ SIM ಮತ್ತು ಆಕ್ಟಿವೇಶನ್ ಸೌಲಭ್ಯಗಳು ಲಭ್ಯವಿರುತ್ತವೆ. ಈ ಕೇಂದ್ರಗಳಲ್ಲಿ ಈಗ SIM issuance, recharge, bill payment-all in one place ಸೇವೆಯನ್ನು BSNL ನೀಡುತ್ತಿದೆ. ಇದರಿಂದ, ನಿಮ್ಮ ಎಲ್ಲಾ ಸೇವೆಗಳು ಸರಾಗವಾಗಿ ನಡೆಯುವ ಭರವಸೆಯನ್ನು BSNL ತಂದಿದೆ.

TRAI ವರದಿಗಳ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ BSNL ಮತ್ತೆ ಕೆಲವು ಗ್ರಾಹಕರನ್ನು ಕಳೆದುಕೊಂಡಿತ್ತು. ಇದನ್ನು ಬದಲಾಯಿಸಲು ಕಂಪನಿ ನಿರಂತರವಾಗಿ ಹೊಸ ಆಫರ್‌ಗಳನ್ನು ಪರಿಚಯಿಸುತ್ತಿದ್ದು, ಹೆಚ್ಚು ಮೌಲ್ಯ ನೀಡುವ ಪ್ಲ್ಯಾನ್‌ಗಳ ಮೂಲಕ ಬಳಕೆದಾರರನ್ನು ಮರುಸೆಳೆಯಲು ಪ್ರಯತ್ನಿಸುತ್ತಿದೆ.ಇದೇ ಸಮಯದಲ್ಲಿ, Airtel ರೂ. 189 ಪ್ಲ್ಯಾನ್ ಅನ್ನು ತೆಗೆದುಹಾಕಿ ರೂ. 199 ಅನ್ನು ಮಿನಿಮಮ್ ರೀಚಾರ್ಜ್ ಆಗಿ ಮಾಡಿರುವುದು ಮಾರುಕಟ್ಟೆಯಲ್ಲೇ ಬದಲಾವಣೆಯ ಸಂದೇಶ ನೀಡಿದೆ. ಬಜೆಟ್ ಒಳಗೆ ಸ್ಮಾರ್ಟ್ ಪ್ಲ್ಯಾನ್ ಹುಡುಕುವವರಿಗೆ BSNL ಇನ್ನು ಒಂದೇ ಉತ್ತರವಾಗಬಹುದು.ಏನಂತಿರಾ?, ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ

Best Mobiles in India

English summary
The new Silver Jubilee recharge plan introduced by BSNL has come at Rs 225. This plan has a validity of 30 days for Rs 225 and provides 2.5GB 4G data every day during this validity.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+