Home
ಸುದ್ದಿಜಾಲ

ಜಸ್ಟ್ 10 ರೂ.! Jio, Airtel, Vi ಪ್ಲಾನ್‌ಗಳು; 5G ವೇಗದ ಇಂಟರ್ನೆಟ್.. JioHotstar ಉಚಿತ.. ಯಾವುದು ಬೆಸ್ಟ್​?

ನಿಮಗೆ ದುಬಾರಿ ಡೇಟಾ ಪ್ಲಾನ್‌ಗಳು ಬೇಡವೇ? ಹಾಗಿದ್ರೆ, ಈ ಮೂರು ಅನ್‌ಲಿಮಿಟೆಡ್ 5G ಡೇಟಾ ಯೋಜನೆಗಳೇ ನಿಮಗೆ ಅತ್ಯುತ್ತಮ ಆಯ್ಕೆ. ಹೌದು, 5G ಬಂದ ಬಳಿಕ ಇಂಟರ್ನೆಟ್ ಜಗತ್ತು ಸಂಪೂರ್ಣವಾಗಿ ಬದಲಾಗಿದೆ. ಪ್ರಸ್ತುತ, ಬಳಕೆದಾರರು ತಂಬಾ ವೇಗದ ಇಂಟರ್ನೆಟ್ ಬಯಸುತ್ತಿದ್ದಾರೆ. ಇತ್ತ, ಟೆಲಿಕಾಂ ಕಂಪನಿಗಳು ಸಹ ಇದಕ್ಕೆ ಹೊರತಾಗಿಲ್ಲ. ಜಿಯೋ, ಏರ್‌ಟೆಲ್ ಮತ್ತು ವಿಐ ಕಂಪನಿಗಳು ತನ್ನ ಗ್ರಾಹಕರಿಗೆ ಕೈಗೆಟುಕುವ ಪ್ರಿಪೇಯ್ಡ್ ಯೋಜನೆಗಳನ್ನು (Affordable Recharge Plans) ಪರಿಚಯಿಸಿವೆ. ಈ ಪ್ಲಾನ್‌ನಲ್ಲಿ ಹೆಚ್ಚುವರಿ ಶುಲ್ಕವಿಲ್ಲದೆ, ಅನ್‌ಲಿಮಿಟೆಡ್ 5G ಡೇಟಾ ಲಭ್ಯವಿದೆ. ಬನ್ನಿ, ಈ ಯೋಜನೆಯ ಬೆಲೆ, ಪ್ರಯೋಜನಗಳು ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.

ನೀವು 5G ಫೋನ್ ಬಳಸುತ್ತಿದ್ದರೆ, ನಾವು ತಿಳಿಸುವ ಮೂರು ರೀಚಾರ್ಜ್ ಯೋಜನೆಗಳನ್ನು ಯಾವುದೇ ಸಂದೇಹವಿಲ್ಲದೆ ಆಯ್ಕೆ ಮಾಡಿಕೊಳ್ಳಬಹುದು. ಈ ಯೋಜನೆಗಳು ಡೇಟಾವನ್ನು ಮಾತ್ರವಲ್ಲದೆ ಧ್ವನಿ ಕರೆ​ ಮತ್ತು ಎಸ್‌ಎಂಎಸ್‌ (ಮೆಸೇಜ್)​ ಸೌಲಭ್ಯಗಳನ್ನು ಸಹ ನೀಡುತ್ತವೆ. ನಿಮಗೆ ಸಂಪೂರ್ಣ ಪ್ಯಾಕೇಜ್ ಒದಗಿಸುತ್ತವೆ. ಈ ಪೈಕಿ ವಿಐ 299 ರೂ. ಅಗ್ಗದ ಯೋಜನೆ, ಜಿಯೋ 349 ರೂ. ಯೋಜನೆ ಮತ್ತು ಏರ್‌ಟೆಲ್‌ನ 379 ರೂ. ಪ್ರಿಪೇಯ್ಡ್ ಯೋಜನೆ ಒಂದಾಗಿದೆ. ನೀವು ದಿನಕ್ಕೆ ಕೇವಲ 10 ರೂ. ನಿಂದ 13 ರೂ. ವೆಚ್ಚದಲ್ಲಿ ಡೇಟಾ, ಅನ್​ಲಿಮಿಟೆಡ್ ಕರೆ, ಎಸ್‌ಎಂಎಸ್ ​ಮತ್ತು ಹಲವು ಪ್ರಯೋಜನಗಳನ್ನು ಪಡೆಯಬಹುದು.

ಜಸ್ಟ್ 10 ರೂ.! Jio, Airtel, Vi ಪ್ಲಾನ್‌ಗಳು; 5G ವೇಗದ ಡೇಟಾ.. ಯಾವುದು ಬೆಸ್ಟ್

ವಿಐ 299 ರೂ. ಅಗ್ಗದ ಯೋಜನೆ

ಕೈಗೆಟುಕುವ ಪ್ರಿಪೇಯ್ಡ್ ಯೋಜನೆಗಳಲ್ಲಿ ವಿಐನ 299 ರೂ. ಪ್ಲಾನ್ ಒಂದಾಗಿದೆ. ವೋಡಾಫೋನ್​ ಐಡಿಯಾ (Vi) ತನ್ನ ಬಳಕೆದಾರರನ್ನು ಆಕರ್ಷಿಸಲು ಈ ಅಗ್ಗದ ಯೋಜನೆಯನ್ನು ಪ್ರಾರಂಭಿಸಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಯೋಜನೆಯಲ್ಲಿ ಪ್ರತಿದಿನ 1GB ಡೇಟಾ ಲಭ್ಯವಿದೆ. ಹಾಗೆಯೇ ಅನ್​ಲಿಮಿಟೆಡ್ ಧ್ವನಿ ಕರೆ ಮತ್ತು 100 ಎಸ್‌ಎಂಎಸ್‌ ಸೌಲಭ್ಯ ಒಳಗೊಂಡಿದೆ. ಕಂಪನಿಯು 5G ಬಳಕೆದಾರರಿಗೆ ಫ್ರೀ ಅನ್​ಲಿಮಿಟೆಡ್​ 5G ಡೇಟಾವನ್ನು ಸಹ ನೀಡುತ್ತಿದೆ. ಪ್ರಸ್ತುತ ಈ ಸೌಲಭ್ಯ ಮುಂಬೈನಲ್ಲಿ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಇದನ್ನು ದೆಹಲಿ, ಕರ್ನಾಟಕ, ಪಂಜಾಬ್ ಮತ್ತು ಇತರ ರಾಜ್ಯಗಳಲ್ಲಿಯೂ ಬಿಡುಗಡೆ ಮಾಡಲಾಗುವುದು. ಈ ಪ್ಲಾನ್ ಜೊತೆಗೆ ಕಂಪನಿಯು 'ವಿಐ ಗ್ಯಾರಂಟಿ' ಯೋಜನೆಯಡಿಯಲ್ಲಿ 130GB ವರೆಗೆ ಬೋನಸ್ ಡೇಟಾ ನೀಡುತ್ತಿದೆ.

ಜಿಯೋ 349 ರೂ. ಪ್ರಿಪೇಯ್ಡ್ ಪ್ಲಾನ್

ಜಿಯೋ ಕಂಪನಿಯು 349 ರೂ.ಗಳ ಪ್ರಿಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್ ಪ್ರತಿದಿನ 2GB ಡೇಟಾ ಸೌಲಭ್ಯ ನೀಡಲಿದೆ. ಇದರೊಂದಿಗೆ ಅನ್‌ಲಿಮಿಟೆಡ್ ಧ್ವನಿ ಕರೆ​ ಮತ್ತು 100 ಎಸ್‌ಎಂಎಸ್ ಸೌಲಭ್ಯ ನೀಡಲಾಗುವುದು. ಈ ಪ್ಲಾನ್‌ನಲ್ಲಿ 5G ಬಳಕೆದಾರರಿಗೆ ಫ್ರೀ ಅನ್​ಲಿಮಿಟೆಡ್​ 5G ಡೇಟಾ ಸಿಗುತ್ತದೆ. ಇದರ ಲಾಭ ಪಡೆಯಲು ನಿಮ್ಮ ಮೊಬೈಲ್ ಮತ್ತು ನೀವು ಇರುವ ಸ್ಥಳದಲ್ಲಿ 5G ನೆಟ್‌ವರ್ಕ್‌ ಲಭ್ಯ ಇರಬೇಕು. ಕಂಪನಿಯು ಈ ಯೋಜನೆಯಲ್ಲಿ ಕೆಲವು ಉತ್ತಮ ಪ್ರಯೋಜನಗಳನ್ನು ನೀಡುತ್ತಿದೆ. ಜಿಯೋಟಿವಿ ಮತ್ತು ಜಿಯೋಸಿನಿಮಾಗೆ ಉಚಿತ ಪ್ರವೇಶ ಪಡೆಯಬಹುದು. ಜಿಯೋಕ್ಲೌಡ್‌ನಲ್ಲಿ 50GB ಉಚಿತ ಸ್ಟೋರೇಜ್​ ಮತ್ತು 90 ದಿನಗಳ ಉಚಿತ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆ ಸಹ ಲಭ್ಯವಿದೆ.

ಜಸ್ಟ್ 10 ರೂ.! Jio, Airtel, Vi ಪ್ಲಾನ್‌ಗಳು; 5G ವೇಗದ ಡೇಟಾ.. ಯಾವುದು ಬೆಸ್ಟ್

ಏರ್‌ಟೆಲ್‌ನ 379 ರೂ. ಪ್ರಿಪೇಯ್ಡ್ ಯೋಜನೆ

ಏರ್‌ಟೆಲ್ ತನ್ನ ಬಳಕೆದಾರರಿಗಾಗಿ ಹಲವು ಕೈಗೆಟುಕುವ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿದೆ. ಈ ಪೈಕಿ 379 ರೂ.ಗಳ ಪ್ರಿಪೇಯ್ಡ್ ಪ್ಲಾನ್ ಸಹ ಒಂದಾಗಿದೆ. ಈ ಯೋಜನೆಯು 30 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್‌ನಲ್ಲಿ ನಿತ್ಯ 2GB ಹೈ ಸ್ಪೀಡ್ ಡೇಟಾ ಸಿಗುತ್ತದೆ. ಜೊತೆಗೆ ಅನ್​ಲಿಮಿಟೆಡ್ ಧ್ವನಿ ಕರೆ (ವಾಯ್ಸ್​ ಕಾಲ್)​ ಮತ್ತು 100 ಎಸ್‌ಎಂಎಸ್ ಸೌಲಭ್ಯ ಒದಗಿಸಲಾಗುತ್ತದೆ. ನೀವು 5G ಫೋನ್ ಬಳಸುತ್ತಿರಬೇಕು ಮತ್ತು ನೀವು ಇರುವ ಸ್ಥಳದಲ್ಲಿ 5G ನೆಟ್‌ವರ್ಕ್ ಲಭ್ಯವಿರಬೇಕು. ಆಗ ನೀವು ಉಚಿತ ಅನ್​ಲಿಮಿಟೆಡ್​ 5G ಡೇಟಾದ ಪ್ರಯೋಜನವನ್ನು ಪಡೆಯಬಹುದು.

Best Mobiles in India

English summary
Affordable Recharge Plans 2025: airtel vs jio vs vi cheapest 5g data plans details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+