ದನಗಳಿಗೂ ಬಂತು ಫಿಟ್ನೆಸ್ ಟ್ರ್ಯಾಕರ್ !

|

ಇದುವರೆಗೂ ಮನುಷ್ಯರು ತಮ್ಮ ಜೀವನಶೈಲಿಯನ್ನು ಉತ್ತಮವಾಗಿಟ್ಟುಕೊಳ್ಳಬೇಕು ಮತ್ತು ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬ ದೃಷ್ಟಿಯಲ್ಲಿ ಹಲವು ಟೆಕ್ ಫರ್ಮ್ ಗಳು ತಮ್ಮದೇ ಆದ ಫಿಟ್ನೆಸ್ ಟ್ರ್ಯಾಕರ್ ಗಳನ್ನು ಬಿಡುಗಡೆಗೊಳಿಸಿದೆ. ಆದರೆ ಇದೀಗ ಅವರು ಇನ್ನೂ ಮುಂದುವರಿದಿದ್ದಾರೆ ಎಂದು ಅನ್ನಿಸುತ್ತದೆ. ಅಂದರೆ ತಾಂತ್ರಿಕವಾಗಿ ಮುಂದುವರಿದಿರುವುದಲ್ಲ ಬದಲಾಗಿ ಗ್ರಾಹಕರ ದೃಷ್ಟಿಕೋನದಲ್ಲಿ ಬದಲಾಗುತ್ತಿದ್ದಾರೆ. ಹೌದು ಇಷ್ಟು ದಿನ ಮನುಷ್ಯರಿಗೆ ಸೀಮಿತವಾಗಿದ್ದ ಈ ಫಿಟ್ನೆಸ್ ಟ್ರ್ಯಾಕರ್ ಗಳು ಇದೀಗ ದನಗಳಿಗೂ ಬಂದಿದೆ!

ಸ್ಮಾರ್ಟ್ ವಾಚ್ ನಂತೆ ಕೆಲಸ:

ಸ್ಮಾರ್ಟ್ ವಾಚ್ ನಂತೆ ಕೆಲಸ:

ಇದು ಬಹಳ ಕುತೂಹಲಕಾರಿ ಎಂದು ನಿಮಗೆ ಅನ್ನಿಸಬಹುದು. ಆದರೆ ಕೆಲವು ಆಸ್ಟ್ರೇಲಿಯಾದ ವಿಜ್ಞಾನಿಗಳು ಹೊಸ ಫಿಟ್ನೆಸ್ ಟ್ರ್ಯಾಕರ್ ನ್ನು ದನಗಳಿಗಾಗಿ ತಯಾರಿಸಿದ್ದಾರೆ. ಇದು ಫಿಟ್ನೆಸ್ ಟ್ರ್ಯಾಕರ್ ಮಾತ್ರವೇ ಅಲ್ಲ ಬದಲಾಗಿ CNET ವರದಿ ಕೂಡ ನೀಡುತ್ತದೆ. ಸ್ಮಾರ್ಟ್ ವಾಚ್ ಗಳಿಂದ ಯಾವ ರೀತಿಯ ಡಾಟಾಗಳು ನಮಗೆ ಲಭ್ಯವಾಗುತ್ತದೆಯೋ ಅದೇ ರೀತಿಯ ವರದಿ ಇದರಲ್ಲೂ ಲಭ್ಯವಾಗುತ್ತದೆ.

ದನದ ಕಿವಿಗೆ ಅಳವಡಿಕೆ:

ದನದ ಕಿವಿಗೆ ಅಳವಡಿಕೆ:

ಈ ಸ್ಮಾರ್ಟ್ ಇಯರ್ ಟ್ಯಾಗ್ ನ್ನು CSIRO (Commonwealth Scientific and Industrial Research Organisation)ವಿಜ್ಞಾನಿಗಳು ತಯಾರಿಸಿದ್ದು ಅದನ್ನು Ceres ಟ್ಯಾಗ್ ಎಂದು ಹೆಸರಿಸಲಾಗಿದೆ. ಇದರ ಪ್ರಮುಖ ಉದ್ದೇಶ ಅವರ ಹಸುಗಳನ್ನು ರೈತರು ಎಲ್ಲಿ ಹೋಗಿದೆ, ಎಲ್ಲಿ ಮೇಯುತ್ತಿದೆ ಎಂದು ಜಿಪಿಎಸ್ ಅನೇಬಲ್ ಆಗಿರುವ ಟ್ಯಾಗ್ ಮೂಲಕ ಕಂಡುಹಿಡಿಯಬಹುದಾಗಿದೆ.

ದನ ಮೇಯುವ ಸ್ಥಳ ತಿಳಿಸುತ್ತದೆ:

ದನ ಮೇಯುವ ಸ್ಥಳ ತಿಳಿಸುತ್ತದೆ:

ಜಿಪಿಎಸ್ ಸೇರಿದಂತೆ ಕಿವಿಗೆ ಹೊಸ ಟ್ಯಾಗ್ ಹಾಕಿರುವ ದನಗಳಲ್ಲಿ ಆಕ್ಸಲರೋಮೀಟರ್ ಕೂಡ ಅಳವಡಿಸಲಾಗಿರುತ್ತದೆ. ಹಾಗಾಗಿ ದನಗಳ ಬಗ್ಗೆ ಯಾವುದೇ ಕೆಟ್ಟ ಚಟುವಟಿಕೆ ನಡೆದರೆ ಕೂಡಲೇ ಅದು ರೈತರಿಗೆ ತಿಳಿದುಬಿಡುತ್ತದೆ.

ಹಸುವಿಗೆ ಹುಷಾರಿಲ್ಲದೇ ಇರುವುದನ್ನೂ ತಿಳಿಸುತ್ತದೆ:

ಹಸುವಿಗೆ ಹುಷಾರಿಲ್ಲದೇ ಇರುವುದನ್ನೂ ತಿಳಿಸುತ್ತದೆ:

CIRO ವೆಬ್ ಸೈಟ್ ಮಾಹಿತಿ ನೀಡುವಂತೆ ಈ ಹೊಸ ತಂತ್ರಜ್ಞಾನದ ಮೂಲಕ ಅಂದರೆ ದನದ ಕಿವಿಗಳಿಗೆ ಹಾಕುವ ಹೊಸ ಟ್ಯಾಗ್ ನ ಮೂಲಕ ಇದು ಗ್ರಾಹಕರಿಗೆ ಸ್ಮಾರ್ಟ್ ವಾಚ್ ನಂತೆಯೇ ಕಾರ್ಯ ನಿರ್ವಹಿಸುತ್ತದೆ. ರೈತರ ದನಗಳು ಎಲ್ಲಿ ಹುಲ್ಲನ್ನು ಮೇಯುತ್ತಿದೆ? ಒಂದು ವೇಳೆ ದನಕರುಗಳು ತಪ್ಪಿಸಿಕೊಂಡಿದ್ದರೆ, ಕಳುವಾದರೆ ಟ್ರ್ಯಾಕ್ ಮಾಡಲು ಅನುಕೂಲ ಮಾಡುತ್ತದೆ. ಅಷ್ಟೇ ಯಾಕೆ ಕೆಲವು ನಡೆಯಬಾರದ ಘಟನೆಗಳು ಪ್ರಾಣಿಗಳಲ್ಲಿ ನಡೆಯುತ್ತಿದ್ದರೆ ಕೂಡ ತಿಳಿಸುತ್ತದೆ . ಜೊತೆಗೆ ಪ್ರಾಣಿಗಳಿಗೆ ಗಾಯವಾದರೆ ಅಥವಾ ಅದು ಹೆರಿಗೆ ನೋವು ಅನುಭವಿಸಲು ಪ್ರಾರಂಭಿಸಿದರೆ ಇತ್ಯಾದಿಗಳ ಸೂಚನೆಯನ್ನು ಕೂಡ ಈ ಟ್ಯಾಗ್ ನೀಡುತ್ತದೆ.

ಒಂದು ದನದ ಆಯಸ್ಸಿಗಿಂತ ಹೆಚ್ಚು ವರ್ಷ ಬಾಳಿಕೆ:

ಒಂದು ದನದ ಆಯಸ್ಸಿಗಿಂತ ಹೆಚ್ಚು ವರ್ಷ ಬಾಳಿಕೆ:

ಆಸ್ಟ್ರೇಲಿಯಾದ ವಾತಾವರಣದಲ್ಲಿ ಒಂದು ದನವು ಬದುಕುಳಿಯುವ ಸಮಯಕ್ಕಿಂತ ಹೆಚ್ಚಿನ ಆಯಸ್ಸನ್ನು ಈ ಟ್ಯಾಗ್ ಹೊಂದಿರುತ್ತದೆ ಎಂದು ತಿಳಿಸಲಾಗಿದೆ. CSIRO ಮತ್ತು Ceres ಟ್ಯಾಗ್ ಎರಡೂ ಕೂಡ

ಫ್ಯೂಚರ್ ಪ್ಲಾನ್:

ಫ್ಯೂಚರ್ ಪ್ಲಾನ್:

ಬೇರೆಬೇರೆ ವೇರಿಯಂಟ್ ನ ಟ್ಯಾಗ್ ಗಳನ್ನು ಭವಿಷ್ಯದಲ್ಲಿ ಬಿಡುಗಡೆಗೊಳಿಸಲು ಪ್ಲಾನ್ ಮಾಡುತ್ತಿದೆ. ಕೆಲವು ಗಾತ್ರದಲ್ಲಿ ಚಿಕ್ಕದಾಗಿದ್ದು ಕಡಿಮೆ ತೂಕದ್ದು ಕೂಡ ಆಗಿರಬಹುದು. ಟೆಂಪರೇಚರ್ ಸೆನ್ಸರ್ ನ್ನು ಕೂಡ ಅಳವಡಿಸಿ ರೈತರಿಗೆ ಪ್ರಾರಂಭಿಕ ಹಂತದ ಸೂಚನೆ ನೀಡುವುದು ಸೇರಿದಂತೆ ಹಲವು ವೈಶಿಷ್ಟ್ಯತೆಗಳನ್ನು ಇದರಲ್ಲಿ ಸೇರಿಸುವುದಕ್ಕೆ ಕಂಪೆನಿ ಚಿಂತನೆ ನಡೆಸುತ್ತಿದೆ.

ಆದರೆ ಇದು ಆಸ್ಟ್ರೇಲಿಯಾಕ್ಕೆ ಮಾತ್ರ ಸೀಮಿತವೇ ಅಥವಾ ಇತರೆ ದೇಶಗಳಲ್ಲೂ ಬರಲಿದೆಯಾ ಎಂಬ ಬಗ್ಗೆ ಇನ್ನೂ ತಿಳಿದಿಲ್ಲ. ಅದರಲ್ಲಿ ಭಾರತವೂ ಕೂಡ ಈ ತಂತ್ರಜ್ಞಾನಕ್ಕೆ ಕಾತರವಾಗಿರುವುದರಲ್ಲಿ ಸಂಶಯವಿಲ್ಲ. ಏನಂತೀರಿ ಕಮೆಂಟ್ ಮಾಡಿ ತಿಳಿಸಿ..

Most Read Articles
Best Mobiles in India

Read more about:
English summary
After humans, there’s a ‘fitness tracker’ for cows

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more