ಚೀನಾ ಮತ್ತು ಪಾಕಿಸ್ತಾನಕ್ಕೆ ಭಯ ಹುಟ್ಟಿಸಿದೆ 'ಅಗ್ನಿ-5' ಕ್ಷಿಪಣಿಯಲ್ಲಿನ ತಂತ್ರಜ್ಞಾನ!!

  ಚೀನಾ ಸೇರಿದಂತೆ ಏಷ್ಯಾ ಖಂಡದಲ್ಲಿರುವ ಎಲ್ಲಾ ದೇಶಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಅಗ್ನಿ-5 ಖಂಡಾಂತರ ಕ್ಷಿಪಣಿ ಸೇನೆಯ ಬತ್ತಳಿಕೆ ಸೇರಲು ಸಜ್ಜಾಗಿದೆ. ನ್ಯೂಕ್ಲಿಯರ್ ಅಣ್ವಸ್ತ್ರಗಳ ಸಿಡಿತಲೆಯನ್ನು ಹೊತ್ತು 5000 ಕಿ.ಮೀ. ದೂರದ ಗುರಿಯನ್ನೂ ಕರಾರುವಕ್ಕಾಗಿ ಹೊಡೆದುರುಳಿಸಬಲ್ಲ ಈ ಕ್ಷಿಪಣಿಯ ಪರೀಕ್ಷೆಯನ್ನು ಒಡಿಶಾ ಕರಾವಳಿಯಲ್ಲಿರುವ ಅಬ್ದುಲ್‌ ಕಲಾಂ ದ್ವೀಪದಲ್ಲಿ ಸೋಮವಾರ ಯಶಸ್ವಿಯಾಗಿ ನಡೆಸಲಾಗಿದ್ದು, 'ಅಗ್ನಿ-5'ರ ಯಶಸ್ವಿ ಪರೀಕ್ಷೆಯಿಂದ ಭಾರತದ ರಕ್ಷಣಾ ವ್ಯವಸ್ಥೆಗೆ ಇನ್ನಷ್ಟು ಬಲ ಬಂದಂತಾಗಿದೆ.

  ಚೀನಾ ಮತ್ತು ಪಾಕಿಸ್ತಾನಕ್ಕೆ ಭಯ ಹುಟ್ಟಿಸಿದೆ 'ಅಗ್ನಿ-5' ಕ್ಷಿಪಣಿಯ ತಂತ್ರಜ್ಞಾನ!!

  ಅಮೆರಿಕ, ಚೀನಾ, ರಷ್ಯಾ, ಫ್ರಾನ್ಸ್‌ ಹಾಗೂ ಉತ್ತರ ಕೊರಿಯಾ ಬಳಿ ಮಾತ್ರ ಇರುವಂತಹ ಖಂಡಂತಾರ ಕ್ಷಿಪಣಿಗಳಿಗೆ ಸೆಡ್ಡು ಹೊಡೆಯುವಂತೆ ಅಗ್ನಿ 5 ಕ್ಷಿಪಣಿ ತಯಾರಾಗಿದೆ. ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಅಗ್ನಿ-5 ಖಂಡಾಂತರ ಕ್ಷಿಪಣಿ ನವನವೀನ ತಂತ್ರಜ್ಞಾನ ಬಳಸಿಕೊಂಡು ಚಲನೆಯ ವೇಗ ಹಾಗೂ ದಾಳಿ ಸಾಮರ್ಥ್ಯ‌ ಹೆಚ್ಚಿಸಿಕೊಂಡಿದೆ. ಪಥ ನಿರ್ದೇಶನ ವ್ಯವಸ್ಥೆ, ಅಣ್ವಸ್ತ್ರ ಸಿಡಿತಲೆ ಮತ್ತು ಎಂಜಿನ್‌ ಅಭಿವೃದ್ಧಿಯಲ್ಲಿ ನೂತನ ತಂತ್ರಜ್ಞಾನದ ಕೊಡುಗೆ ಬಹುಪಾಲಿದೆ.

  ಚೀನಾ ಮತ್ತು ಪಾಕಿಸ್ತಾನಕ್ಕೆ ಭಯ ಹುಟ್ಟಿಸಿದೆ 'ಅಗ್ನಿ-5' ಕ್ಷಿಪಣಿಯ ತಂತ್ರಜ್ಞಾನ!!

  ಹಾಗಾಗಿ, ಇಂದಿನ ಲೇಖನದಲ್ಲಿ ಭಾರತದ ಬತ್ತಳಿಕೆಯಲ್ಲಿರುವ ಬ್ರಹ್ಮಾಸ್ತ್ರ ಅಗ್ನಿ-5 ಖಂಡಾಂತರ ಕ್ಷಿಪಣಿ ಬಗ್ಗೆ ಹೆಚ್ಚಿನ ಪರಿಚಯವನ್ನು ಮಾಡಿಕೊಡುತ್ತಿದ್ದೇವೆ. 17.5ಮೀ ಎತ್ತರ, 2 ಮೀ ಅಗಲ, 50 ಟನ್ ತೂಕವನ್ನು ಹೊಂದಿರುವ ಅಗ್ನಿ-5 1500 ಕೆಜಿ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿರುವ ಅಗ್ನಿ-5 ಖಂಡಾಂತರ ಕ್ಷಿಪಣಿಯು ಯಾವ ತಂತ್ರಜ್ಞಾನವನ್ನು ಹೊಂದಿದೆ? ನೆರೆ ರಾಷ್ಟ್ರಗಳಿಗೆ ಭಯ ಉಂಟಾಗಿರುವುದೇಕೆ ಎಂಬುದನ್ನು ಮುಂದೆ ತಿಳಿಯಿರಿ.!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಖಂಡಾಂತರ ಕ್ಷಿಪಣಿ ಅಗ್ನಿ-5

  ಭಾರತದ ಬಳಿ ಅಗ್ನಿ -1 ( 700 ಕಿ.ಮೀ)ಅಗ್ನಿ -2 (2,000 ಕಿ.ಮೀ), ಅಗ್ನಿ -3 ಮತ್ತು ಅಗ್ನಿ- 4 (2500 ದಿಂದ 3500 ಕಿ.ಮೀ) ಸುಧಾರಿತ ರೂಪವೇ ಅಗ್ನಿ-5 ಕ್ಷಿಪಣಿಯಾಗಿದೆ. ಅಗ್ನಿ-5 ನವನವೀನ ತಂತ್ರಜ್ಞಾನ ಬಳಸಿಕೊಂಡು ಚಲನೆಯ ವೇಗ ಹಾಗೂ ದಾಳಿ ಸಾಮರ್ಥ್ಯ‌ ಹೆಚ್ಚಿಸಿಕೊಂಡಿದೆ. ಅಗ್ನಿ-5'ರ ಯಶಸ್ವಿ ಪರೀಕ್ಷೆಯಿಂದ ಭಾರತದ ರಕ್ಷಣಾ ವ್ಯವಸ್ಥೆಗೆ ಇನ್ನಷ್ಟು ಬಲ ಬಂದಂತಾಗಿದೆ

  ಅಗ್ನಿ-5 ಕ್ಷಿಪಣಿ ಸಾಮರ್ಥ್ಯ!

  17.5ಮೀ ಎತ್ತರ, 2 ಮೀ ಅಗಲ, 50 ಟನ್ ತೂಕವನ್ನು ಹೊಂದಿರುವ ಅಗ್ನಿ-5 1500 ಕೆಜಿ ಅಣ್ವಸ್ತ್ರ ಸಿಡಿತಲೆ ಹೊತ್ತು ತನ್ನ ಇಂಜಿನ್ ಸಾಮರ್ಥ್ಯದಲ್ಲಿಯೇ ಚೀನಾದ ಬೀಜಿಂಗ್‌, ಶಾಂಘೈ ನಗರ ಹಾಗೂ ಹಾಂಕಾಂಗ್ ರಾಷ್ಟ್ರವನ್ನೂ ತಲುಪಬಲ್ಲ ಸಾಮರ್ಥ್ಯ‌ವನ್ನು ಹೊಂದಿದೆ. ಅಗ್ನಿ -5 ಕ್ಷಿಪಣಿಗಿದೆ ಎಂದರೆ ಇದರ ತಂತ್ರಜ್ಞಾನದ ಬಗ್ಗೆ ಆಶ್ಚರ್ಯವಾಗದೇ ಇರದು.

  10 ಮೀ.ಗಿಂತ ಕಡಿಮೆ ನಿಖರತೆ!

  ಅಗ್ನಿ-5 ಖಂಡಾಂತರ ಕ್ಷಿಪಣಿ 5,000 ಕಿಲೋಮೀಟರ್ (3,100 ಮೈಲಿ) ವರೆಗೆ 8,000 ಕಿಲೋಮೀಟರ್ (5,000 ಮೈಲಿ)ದೂರದವರಗ ಪ್ರತಿ ಸೆಕೆಂಡ್‌ಗೆ 5 ರಿಂದ 6 ಕಿಲೋಮೀಟರ್ ವೇಗದಲ್ಲಿ ದಾಳಿ ಮಾಡುತ್ತಿದೆ. ಇದರ ಮತ್ತೊಂದು ವಿಶೇಷತೆ ಎಂದರೆ, ಸಾವಿರಾರು ಕಿಲೋಮೀಟರ್ ದಾಳಿ ಮಾಡಲಿರುವ ಇದರ ಗುರಿ 10 ಮೀ.ಗಿಂತ ಕಡಿಮೆ ಇರಲಿದೆ.

  ಅತ್ಯಾಧುನಿಕ ತಂತ್ರಜ್ಞಾನ

  ಅಗ್ನಿ ಸರಣಿಯ ಕ್ಷಿಪಣಿಗಳಲ್ಲೇ ‘ಅಗ್ನಿ-5' ಅತ್ಯಂತ ಅತ್ಯಾಧುನಿಕವಾದುದ್ದಾಗಿದೆ. ಪಥದರ್ಶಕ, ಪಥ ನಿರ್ದೇಶನ ವ್ಯವಸ್ಥೆ, ಸಿಡಿತಲೆ ಮತ್ತು ಎಂಜಿನ್‌ ಅಭಿವೃದ್ಧಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಬಳಸಲಾಗಿದೆ. ಕ್ಷಿಪಣಿ ಪರೀಕ್ಷೆಯ ಸಂದರ್ಭದಲ್ಲಿ ದೇಶಿಯವಾಗಿ ಅಭಿವೃದ್ಧಿ ಪಡಿಸಿರುವ ಹಲವು ತಂತ್ರಜ್ಞಾನಗಳನ್ನೂ ಪರೀಕ್ಷಿಸಲಾಗಿದೆ.

  ಸೂಕ್ಷ್ಮ ಪಥದರ್ಶಕ ವ್ಯವಸ್ಥೆ!

  ಅತ್ಯಂತ ಹೆಚ್ಚು ನಿಖರವಾಗಿ ಗುರಿಯನ್ನು ತೋರಿಸುವ ರಿಂಗ್‌ ಲೇಸರ್‌ ಜೈರೊ ಬೇಸ್ಡ್‌ ಇನರ್ಷಿಯಲ್ ನೇವಿಗೇಷನ್‌ ಸಿಸ್ಟಮ್‌ ಮತ್ತು ಅತ್ಯಾಧುನಿಕವಾದ ಸೂಕ್ಷ್ಮ ಪಥದರ್ಶಕ ವ್ಯವಸ್ಥೆಗಳನ್ನು 'ಅಗ್ನಿ-5' ಕ್ಷಿಪಣಿಯಲ್ಲಿ ಅಳವಡಿಸಲಾಗಿದೆ. ಕ್ಷಿಪಣಿಯು ನಿಖರವಾಗಿ ಗುರಿ ತಲುಪಿಸುಯಲ್ಲಿ ಈ ತಂತ್ರಜ್ಞಾನಗಳು ನೆರವಾಗಿವೆ.

  ಮೂರು ಹಂತಗಳ ಎಂಜಿನ್‌

  ನೆಲದಿಂದ ನೆಲಕ್ಕೆ ಚಿಮ್ಮುವ 'ಅಗ್ನಿ-5' ಕ್ಷಿಪಣಿ ಮೂರು ಹಂತಗಳ ಎಂಜಿನ್‌ ತಂತ್ರಜ್ಞಾನವನ್ನು ಹೊಂದಿದೆ. ಈ ಎಂಜಿನ್‌ಗಳ ಸಹಾಯದದಿಂದ ನಭಕ್ಕೆ ಚಿಮ್ಮಿದ ಕ್ಷಿಪಣಿಯು ನಿಗದಿ ಪಡಿಸಲಾಗಿದ್ದ ಎಲ್ಲ ಗುರಿಗಳನ್ನು ಯಾವುದೇ ಅಡೆ ತಡೆಗಳಿಲ್ಲದೆ ತಲುಪಿದೆ. ಇದು ಏಷ್ಯಾ, ಯುರೋಪ್ ಖಂಡಗಳ ಎಲ್ಲ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ.

  ವಾಹಕದಿಂದ ದಾಳಿ ನಡೆಸಬಹುದು

  ಉಡಾವಣಾ ವಾಹನದಲ್ಲಿ ಅಳವಡಿಸಲಾಗಿರುವ ಸಿಲಿಂಡರ್ ಆಕಾರದ ದೊಡ್ಡ ಕೊಳವೆಯಲ್ಲಿ ‘ಅಗ್ನಿ-5' ಕ್ಷಿಪಣಿಯನ್ನು ಇಡಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಕ್ಷಿಪಣಿ ಉಡಾವಣೆಗೆ ಸಿದ್ಧತೆ ನಡೆಸಬಹುದು ಮತ್ತು ಕ್ಷಿಪಣಿ ಹೊತ್ತೊಯ್ಯುವ ವಾಹನ ಹೋಗುವ ಸ್ಥಳಗಳಿಂದಲೇ ಕ್ಷಿಪಣಿ ದಾಳಿ ನಡೆಸಬಹುದು.

  ಕಂಪ್ಯೂಟರ್‌ ತಂತ್ರಾಶ

  ಅಗ್ನಿ-5' ಕ್ಷಿಪಣಿಯಲ್ಲಿ ಅತಿ ವೇಗದ ಕಂಪ್ಯೂಟರ್‌ ಮತ್ತು ದೋಷಗಳನ್ನು ಸರಿಪಡಿಸಬಲ್ಲ ತಂತ್ರಾಶವು ಕ್ಷಿಪಣಿಯನ್ನು ನಿರ್ದಿಷ್ಟ ಗುರಿಯೆಡೆಗೆ ಸಾಗಿಸಿದೆ. ಈ ಕ್ಷಿಪಣಿಯಲ್ಲಿನ ಕಂಪ್ಯೂಟರ್ ಸಾಮರ್ಥ್ಯದ ಬಗೆಗಿನ ಮಾಹಿತಿಗಳು ಸಿಕ್ಕಿಲ್ಲವಾದರೂ, ಚೀನಾ ಮತ್ತು ಪಾಕಿಸ್ತಾನಕ್ಕೆ ಭಯ ಹುಟ್ಟಿಸಿರುವ ತಂತ್ರಜ್ಞಾನವಂತೂ ಇದಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  After series of successfull tests over the years, the first batch of intercontinental ballistic missile (ICBM) Agni- 5 will soon be inducted into the India's Strategic Forces Command (SFC).
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more