ಕುತೋಹಲ ಸುದ್ದಿ!..ಇನ್ಮುಂದೆ ಭೂಕಂಪನ ಆಗುವ ಮೊದಲೇ ಹೇಳಲಿದೆ 'ತಂತ್ರಜ್ಞಾನ'!!

|

ಮನುಷ್ಯನ ನಾಗರಿಕತೆಯನ್ನು ಅನಾದಿ ಕಾಲದಿಂದಲೂ ಕಾಡುತ್ತಿರುವ ಭೂಕಂಪನ ವಿದ್ಯಮಾನ ಯಾವಾಗಲೂ ನಡೆಯುತ್ತಲೇ ಇದೆ. ಯಾವಾಗ ಎಲ್ಲಿ ಭೂಕಂಪ ಆಗಿಬಿಡಬಹುದೋ ಎಂಬ ಭಯ ಎಲ್ಲರಿಗೂ ಕಾಡುತ್ತಿರುತ್ತದೆ. ಅದರಲ್ಲೂ ದೊಡ್ಡ ದೊಡ್ಡ ನಗರಗಳ ಮಧ್ಯೆ ಬೃಹತ್ ಕಟ್ಟಡಗಳ ನಡುವೆ ವಾಸಿಸುತ್ತಿರುವ ನಗರ ಸಮಾಜವೊಂದಕ್ಕಂತೂ ಭಯ ಇನ್ನೂ ಹೆಚ್ಚು. ಏಕೆಂದರೆ, ಮನುಕುಲ ಈಗಾಗಲೇ ಸಾವಿರಾರು ಭೂಕಂಪನದ ಕರಾಳತೆಯನ್ನು ಕಂಡಿದೆ.

ಭೂಗರ್ಭದಲ್ಲಿ ಪಲ್ಲಟಗೊಳ್ಳುವ ಬೃಹತ್ ಶಿಲಾಪದರಗಳ ಸ್ಥಿತಿ, ಅಲ್ಲಿ ಅಡಗಿರುವ ವಾಯುವಿನ ಒತ್ತಡದ ಏರುಪೇರು, ಲಾವಾರಸದ ಚಟುವಟಿಕೆಗಳಿಂದಾಗಿ ಭೂಮಿ ನಡುಗುತ್ತಿದಿರುತ್ತದೆ. ನಮ್ಮ ದೇಶದಲ್ಲಿ ಇಂತಹ ಭೂಕಂಪನಗಳ ಪ್ರಮಾಣ ಕಡಿಮೆ ಇದ್ದರೆ, ಜಪಾನ್‌ನಂತಹ ದೇಶದಲ್ಲಿ ವರ್ಷದಲ್ಲಿ ಆಗುವಂತಹ ಭೂಕಂಪನಗಳಿಗೆ ಲೆಕ್ಕವಿಡಲು ಸಾಧ್ಯವೇ ಇಲ್ಲ ಎಂಬುದು ನಿಮಗೆ ಗೊತ್ತಿದ್ದರೆ ಒಳ್ಳೆಯದು.

ಕುತೋಹಲ ಸುದ್ದಿ!..ಇನ್ಮುಂದೆ ಭೂಕಂಪನ ಆಗುವ ಮೊದಲೇ ಹೇಳಲಿದೆ 'ತಂತ್ರಜ್ಞಾನ'!!

ಇಂತಹ ಭೂಕಂಪನಗಳು ಯಾವಾಗಲಾದರೂ ಆಗಿಬಿಡಬಹುದು ಎಂಬುದು ನಿಮ್ಮ ಭಯ ಅಲ್ಲವೇ?. ಆದರೆ, ಚಿಂತಿಸಬೇಡಿ. ಇನ್ಮುಂದೆ ಬಂದೆರಗುವ ಭೂಕಂಪಗಳ ಬಗ್ಗೆ ನಾವು ಮೊದಲೇ ತಿಳಿಯಬಹುದು. ಭೂಕಂಪನಗಳ ಆಗಮನವನ್ನು ಮೊದಲೇ ಊಹಿಸಲು ಈಗ ತಂತ್ರಜ್ಞಾನದ ಸಹಾಯದಿಂದ ಸಾಧ್ಯವಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಹಾಗಾದರೆ, ಏನಿದು ಕುತೋಹಲ ಸುದ್ದಿ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಭೂಕಂಪನವನ್ನು ಮೊದಲೇ ತಿಳಿಯಬಹುದು!

ಭೂಕಂಪನವನ್ನು ಮೊದಲೇ ತಿಳಿಯಬಹುದು!

ಹೌದು, ಇಂತಹ ಒಂದು ಸುದ್ದಿ ನಿಮಗೆ ಆಶ್ಚರ್ಯವೆನಿಸಬಹುದು. ಆದರೆ, ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ, ವಿಶ್ವದ ವಿವಿಧ ಪ್ರದೇಶಗಳಲ್ಲಿ ನಡೆಯಬಹುದಾದ ಭೂಕಂಪಗಳನ್ನು ಊಹಿಸುವ ಪ್ರಯತ್ನ ನಡೆದಿದೆ. ಒಮ್ಮೆಗೇ ಬಂದೆರಗುವ ಭೂಕಂಪಗಳ ನಾಡಿಮಿಡಿತವನ್ನು ಲೆಕ್ಕಹಾಕಿ, ಅವುಗಳ ಆಗಮನವನ್ನು ಮುಂದಾಗಿ ಊಹಿಸಲು ಕೃತಕ ಬುದ್ಧಿಮತ್ತೆಯನ್ನು (ಎಐ) ಭೂವಿಜ್ಞಾನಿಗಳು ಮತ್ತು ತಂತ್ರಜ್ಞರು ಉಪಯೋಗಿಸುತ್ತಿದ್ದಾರೆ.

ಭೂಕಂಪನ ತಿಳಿಯಲು ಕೃತಕ ಬುದ್ಧಿಮತ್ತೆ

ಭೂಕಂಪನ ತಿಳಿಯಲು ಕೃತಕ ಬುದ್ಧಿಮತ್ತೆ

ಭೂವಿಜ್ಞಾನದ ಪ್ರಕಾರ ಸಾಕಷ್ಟು ಸುಭದ್ರ ಎನಿಸಿರುವ ಸ್ಥಳಗಳಲ್ಲೂ ಬೃಹತ್ ಭೂಕಮಂಪಗಳು ಆಗಾಗ ನಡೆಯುತ್ತಲೇ ಇರುವುದರಿಂದ ಇದಕ್ಕೆ ಮುನ್ಸೂಚನಾ ವಿಜ್ಞಾನವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ವಿಜ್ಞಾನಿಗಳು ಪ್ರಯತ್ನಿಸುತ್ತಲೇ ಇದ್ದಾರೆ. ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮೊದಲಾದ ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಹೆಚ್ಚು ಪರಿಚಿತವಾಗಿರುವ ಕೃತಕ ಬುದ್ಧಿಮತ್ತೆಯಿಂದ ಈಗ ಭೂಕಂಪನವನ್ನು ಮೊದಲೇ ತಿಳಿಯಬಹುದು ಎಂದು ವಿಜ್ಞಾನಿಗಳು ಆಶಾವಾದ ವ್ಯಕ್ತಪಡಿಸಿದ್ದಾರೆ.

ಕೃತಕ ಬುದ್ಧಿಮತ್ತೆ ಹೇಗೆ ಸಹಕಾರಿ?

ಕೃತಕ ಬುದ್ಧಿಮತ್ತೆ ಹೇಗೆ ಸಹಕಾರಿ?

ಭೂವಿಜ್ಞಾನಿಗಳು ಪ್ರಸ್ತುತ ಭೂಕಂಪಗಳನ್ನು ಊಹಿಸಲು ಸೆಸ್ಮಿಕ್ ವಲಯದ ಚಟುವಟಿಕೆಯ ಈ ಹಿಂದಿನ ಅಂಕಿಅಂಶಗಳನ್ನು ಅವಲಂಬಿಸಿದ್ದಾರೆ. ನೂರಾರು ವರ್ಷಗಳ ಭೂಕಂಪಗಳ ಕಲೆಹಾಕಿ, ಅದನ್ನು ವಿಶ್ಲೇಷಿಸಿದಾಗ ಸುಮಾರಾಗಿ ನಿಖರ ಎನ್ನಬಹುದಾದ ಊಹೆಯನ್ನು ನೀಡುತ್ತಿದ್ದಾರೆ. ಆದರೆ, ಅವರು ನೀಡಿದ ಮುನ್ಸೂಚನೆಗಳ ಸ್ಪಷ್ಟತೆ ಮತ್ತು ನಿಖರತೆ ಇನ್ನೂ ಉನ್ನತ ಮಟ್ಟ ತಲುಪಿಲ್ಲ. ಹಾಗಾಗಿ, ಇದನ್ನು ಅರಿಯಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೊರೆಹೋಗಿದ್ದಾರೆ.

ಹೇಗೆ ತಿಳಿಯಲಿದೆ ಕಂಪನದ ಮುನ್ಸೂಚನೆ?

ಹೇಗೆ ತಿಳಿಯಲಿದೆ ಕಂಪನದ ಮುನ್ಸೂಚನೆ?

ಈ ಮೊದಲು ತಿಳಿಸಿದ ಭೂಮಿಯ ಸೆಸ್ಮಿಕ್ ಅಂಕಿ ಅಂಶಗಳನ್ನು ಕಲೆಹಾಕಿ, ಅದನ್ನು ಕೃತಕ ಬುದ್ಧಿಮತ್ತೆಯ ಮೂಲಕ ವಿಶ್ಲೇಷಿಸುವ ಮೂಲಕ, ಸೆಸ್ಮಿಕ್ ವಲಯಗಳ ಮುಂದಿನ ಏರುಪೇರುಗಳನ್ನು ಕರಾರುವಕ್ಕಾಗಿ ಊಹಿಸಲು ಸಾಧ್ಯ ಎಂಬ ಆತ್ಮವಿಶ್ವಾಸವನ್ನು ಹಲವು ವಿಜ್ಞಾನಿಗಳು ಮತ್ತು ತಂತ್ರಜ್ಞರು ವ್ಯಕ್ತಪಡಿಸಿದ್ದಾರೆ. ವಿಜ್ಞಾನಿಗಳು ನೀಡಿದ ಮುನ್ಸೂಚನೆಗಳ ಸ್ಪಷ್ಟತೆ ಮತ್ತು ನಿಖರತೆ ಇನ್ನೂ ಉನ್ನತ ಮಟ್ಟ ತಲುಪಲು ಈ ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.

ಕೃತಕ ಬುದ್ದಿಮತ್ತೆ ಕಾರ್ಯ ಹೀಗಿದೆ!

ಕೃತಕ ಬುದ್ದಿಮತ್ತೆ ಕಾರ್ಯ ಹೀಗಿದೆ!

ಸೆಸ್ಮಿಕ್ ದುರಂತಗಳ ಭೂಪಟವೊಂದನ್ನು ಸಿದ್ಧಪಡಿಸಿ, ಹಳೆಯ ಸಾವಿರಾಗು ಭೂಕಂಪಗಳ ಅಂಕಿಅಂಶಗಳನ್ನು ಅಲ್ಲಿ ದಾಖಲಿಸಿ ಆ ಅಂಕಿ ಅಂಶಗಳನ್ನು ಕೃತಕಬುದ್ಧಿಮತ್ತೆಯ ಮೂಲಕ ವಿಶ್ಲೇಷಿಸಿ ಮುಂದಿನ ಭೂಕಂಪಗಳನ್ನು ಇನ್ನಷ್ಟು ಖಚಿತವಾಗಿ ಊಹಿಸಬಹುದು ಎಂಬ ವಿಶ್ವಾಸವನ್ನು ಅಮೆರಿಕಾದ ಕೆಲವು ತಂತ್ರಜ್ಞರು ವ್ಯಕ್ತಿಪಡಿಸಿದ್ದಾರೆ. ತನಗೆ ಒದಗಿಸಿದ ಅಂಕಿಅಂಶಗಳನ್ನು ಆಧರಿಸಿ, ತನ್ನಷ್ಟಕ್ಕೆ ಕೆಲವು ಸಮಸ್ಯೆಗಳನ್ನು ಪರಿಹರಿಸಬಲ್ಲ ಹಾಗೂ ಕೆಲವು ವಿಚಾರಗಳನ್ನು ತಾನೇ ಕಲಿಯಬಲ್ಲ ಈ ತಂತ್ರಜ್ಞಾನ ಈಗ ವಿಜ್ಞಾನಿಗಳ ಆಶಾವಾದವಾಗಿದೆ.

ಊಹೆಯೂ ಸಮರ್ಪಕ!

ಊಹೆಯೂ ಸಮರ್ಪಕ!

ತನ್ನಲ್ಲಿ ಅಡಕಗೊಳಿಸಿರುವ ನೂರಾರು ವರ್ಷಗಳ ಸೆಸ್ಮಿಕ್ ಅಂಕಿಅಂಶಗಳನ್ನು ಈ ಕೃತಕ ಬುದ್ಧಿಮತ್ತೆ ಹೆಚ್ಚು ವಿಶ್ಲೇಷಣೆ ನಡೆಸುತ್ತದೆ. ಇದರಿಂದ ದೊರೆಯುವ ಉತ್ತರ ಕೂಡ ಹೆಚ್ಚು ಸಮರ್ಪಕವಾಗಿರುತ್ತದೆ. ಇದಿರಿಂದ ಒಂದು ಪಟ್ಟಣ ಪ್ರದೇಶದ ಸೆಸ್ಮಿಕ್ ವಲಯಗಳ ಅಂಕಿಅಂಶಗಳ ವಿಶ್ಲೇಷಣೆಯ ಸಹಾಯದಿಂದ, ಅಲ್ಲಿ ಕಟ್ಟಬಹುದಾದ ಮನೆ, ಯಾವ ಮಟ್ಟದ ಭೂಕಂಪ ನಿರೋಧಕ ತಂತ್ರಜ್ಞಾನವನ್ನು ಅಳವಡಿಸಬೇಕು ಮತ್ತು ಮುಂದೆ ಯಾವ ನಿರ್ಣಯ ಕೈಗೊಳ್ಳಬೇಕು ಎಂಬುದು ಸ್ಪಷ್ಟವಾಗಿ ತಿಳಿಯಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Most Read Articles
Best Mobiles in India

English summary
Using the same tools we use for voice detection, scientists are uncovering tiny earthquakes hidden in the data. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more