ಡಯಾಬಿಟಿಸ್‌ ಪರೀಕ್ಷಿಸಲು ಕೃತಕ ಬುದ್ದಿಮತ್ತೆ ನೆರವು..! ಟೆಸ್ಟ್‌ಗೆ ರಕ್ತ ಬೇಕಿಲ್ಲ..!

By GizBot Bureau
|

ಕೃತಕ ಬುದ್ದಿ ಮತ್ತೆಯ ಸಹಾಯದಿಂದ ಸಾಕಷ್ಟು ತಂತ್ರಜ್ಞಾನಗಳು ಅಭಿವೃದ್ಧಿಯನ್ನು ಪಡಿಸಲಾಗುತ್ತಿದೆ. ಇದರಿಂದಾಗಿ ಮಾನವ ಹಲವು ಕಾರ್ಯಗಳು ಸುಲಭವಾಗತ್ತಿದೆ. ಇದೇ ಮಾದರಿಯಲ್ಲಿ ವೈದ್ಯಕೀಯ ಲೋಕವು ಸಹ ಕೃತಕ ಬುದ್ದಿ ಮತ್ತೆಯನ್ನು ಬಳಕೆ ಮಾಡಿಕೊಂಡು ಮಾನವ ಆರೋಗ್ಯ ಸುಧಾರಣೆಗೆ ಸಾಕಷ್ಟು ಸಹಾಯವನ್ನು ಮಾಡಲು ಸಂಶೋಧನೆಯನ್ನು ಕೈಗೊಳ್ಳಲಾಗುತ್ತಿದೆ.

ಇದೇ ಮಾದರಿಯಲ್ಲಿ ಮನುಕುಲದ ಅತೀ ದೊಡ್ಡ ಆರೋಗ್ಯದ ಸಮಸ್ಯೆಯಾಗಿರುವ ಬ್ಲಡ್ ಶುಗರ್ ಅನ್ನು ಅಳತೆ ಮಾಡಲು ಇದುವರೆಗೂ ಸಾಕಷ್ಟು ದೊಡ್ಡ ಪ್ರಮಾಣದ ಸಂಶೋಧನೆಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ ಮಾದರಿಯಲ್ಲಿ ಈಗ ಬ್ಲಡ್ ಶುಗರ್ ಅನ್ನು ಮಾಪನ ಮಾಡಲು ಸುಲಭ ಯೋಜನೆಯೊಂದು ರೂಪಿಸಲಾಗಿದ್ದು, ಇದಕ್ಕಾಗಿ ಕೃತಕ ಬುದ್ದಿ ಮತ್ತೆಯ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಡಯಾಬಿಟಿಸ್‌ ಪರೀಕ್ಷಿಸಲು ಕೃತಕ ಬುದ್ದಿಮತ್ತೆ ನೆರವು..!

ಈ ಮೊದಲು ಮನೆಯಲ್ಲಿಯೇ ಬ್ಲಡ್ ಶುಗರ್ ಅನ್ನು ಅಳತೆ ಮಾಡಿಕೊಳ್ಳಲು ಸಾಕಷ್ಟು ಸುಲಭವಾದ ವಸ್ತುವೊಂದನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಅದಕ್ಕಾಗಿ ಬೆರಳು ತುದಿಯ ರಕ್ತವನ್ನು ನೀಡಬೇಕಾಗಿತ್ತು, ಆದರೆ ಕೃತಕ ಬುದ್ದಿ ಮತ್ತೆಯ ಸಹಾಯದಿಂದ ನಿರ್ಮಾಣವಾಗಿರುವ ಹೊಸದೊಂದು ಸಾಧನವು ಯಾವುದೇ ರೀತಿಯಲ್ಲಿ ರಕ್ತವನ್ನು ಮುಟ್ಟದೆ ನಿಮ್ಮ ಬೆರಳು ಮೇಲೆ ಇಟ್ಟರೆ ಸಾಕು ಬ್ಲಡ್ ಶುಗರ್ ಪ್ರಮಾಣವನ್ನು ತೋರಿಸಿಕೊಡಲಿದೆ.

ಈ ಹೊಸ ಸಂಶೋಧನೆಯನ್ನು ಗೂಗಲ್ ನೊಂದಿಗೆ ಸೇರಿಕೊಂಡು ಜರ್ಮನಿಯ ಹಾರ್ಡವಡ್ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವು ಅಭಿವೃದ್ಧಿಪಡಿಸಿದ್ದು, ಮುಂದಿನ ದಿನಗಳಲ್ಲಿ ಬ್ಲಡ್ ಶುಗರ್ ಸಮಸ್ಯೆಯಿಂದ ತೊಂದರೆಯನ್ನು ಅನುಭವಿಸುತ್ತಿರುವವರಿಗೆ ಇದೊಂದು ವರದಾನವಾಗಲಿದ್ದು, ನಿತ್ಯ ಮನೆಯಲ್ಲಿ ಶುಗರ್ ಟೆಸ್ಟ್ ಮಾಡಿಸುವವರಿಗೆ ಇದು ಸಹಾಯವನ್ನು ಮಾಡಲಿದೆ.

ಡಯಾಬಿಟಿಸ್‌ ಪರೀಕ್ಷಿಸಲು ಕೃತಕ ಬುದ್ದಿಮತ್ತೆ ನೆರವು..!

ಸಾಧನದೊಂದಿಗೆ ಆಪ್ ಲಿಂಕ್ ಮಾಡಿಕೊಳ್ಳುವ ಹೊಸ ವಿಧಾನವನ್ನು ಕಂಡು ಹಿಡಿಯಲಾಗಿದ್ದು, ಇದರಿಂದಾಗಿ ನಿಮ್ಮ ನಿತ್ಯದ ಶುಗರ್ ಪ್ರಮಾಣದ ಮೇಲೆ ಸರಿಯಾದ ನಿಗಾವನ್ನು ವಹಿಸಬಹುದಾಗಿದೆ. ಇದರಿಂದಾಗಿ ವಿಶ್ವದಲ್ಲಿಯೇ ಅತೀ ಹೆಚ್ಚು ಮಂದಿ ಬಳಲುತ್ತಿರುವ ಸಮಸ್ಯೆಗೆ ಪರಿಹಾರವು ದೊರೆಯಲಿದೆ. ಶೀಘ್ರವೇ ಈ ಹೊಸ ಸಾಧನವು ಮಾರುಕಟ್ಟೆಗೆ ಲಾಂಚ್ ಆಗಲಿದೆ. ಇದರಿಂದಾಗಿ ದೊಡ್ಡ ಪ್ರಮಾಣದ ಸಮಸ್ಯೆಗೆ ಪರಿಹಾರವು ದೊರೆಯಲಿದೆ.

ಭಾರತದಲ್ಲಿಯೂ ಸಹ ಬ್ಲಡ್ ಶುಗರ್ ಸಮಸ್ಯೆಯಿಂದ ಬಳಲುತ್ತಿರುವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿದೆ. ಈ ಹೊಸ ಸಂಶೋಧನೆಯಿಂದಾಗಿ ಟೆಕ್ನಾಲಜಿಯ ಸಹಾಯದಿಂದ ಪರಿಹಾರವನ್ನು ಪಡೆಯಬಹುದಾಗಿದೆ. ಶೀಘ್ರವೇ ಇದು ಬಳಕೆಗೆ ದೊರೆಯಲಿದೆ ಎನ್ನಲಾಗಿದ್ದು, ಕೊಂಚ ಪ್ರಮಾಣದಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗಬಹುದು.

Best Mobiles in India

English summary
AI to now help you monitor blood sugar levels. to know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X