Home
ಸುದ್ದಿಜಾಲ

AI+ ಪಲ್ಸ್ ಮತ್ತು ನೋವಾ: ಜುಲೈ 8 ರಂದು ಬಿಡುಗಡೆ, ಈ 5G ಫೋನ್‌ಗಳ ಬೆಲೆ ₹5,000!

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆ ಸೃಷ್ಟಿಸಲು NxtQuantum Shift Technologies ಕಂಪನಿಯು ಸಜ್ಜಾಗಿದೆ. ರಿಯಲ್‌ಮಿ ಇಂಡಿಯಾದ ಮಾಜಿ ಸಿಇಒ ಮಾಧವ್ ಶೇಠ್ ಸ್ಥಾಪಿಸಿರುವ ಈ ಹೊಸ ಕಂಪನಿಯು, AI+ ಬ್ರ್ಯಾಂಡ್ ಅಡಿಯಲ್ಲಿ AI+ ಪಲ್ಸ್ ಮತ್ತು AI+ ನೋವಾ 5G ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಇದೇ ಜುಲೈ 8 ರಂದು ಪರಿಚಯಿಸುತ್ತಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ದೇಶದಲ್ಲಿ ಕೇವಲ ₹5,000 ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿವೆ ಎಂದು ಖಚಿತವಾಗಿದೆ.

ಹೌದು, ಮಾಧವ್ ಶೇಠ್ ಅವರ ಹೊಸ ಕಂಪನಿಯು ಅತ್ಯಂತ ಕೈಗೆಟುಕುವ AI-ಚಾಲಿತ 5G ಸ್ಮಾರ್ಟ್‌ಫೋನ್‌ಗಳನ್ನು ಒದಗಿಸುವ ಮೂಲಕ ದೇಶದ ಮಾರುಕಟ್ಟೆಯಲ್ಲಿ ಹೊಸ ಪರಿಕಲ್ಪನೆ ರೂಪಿಸಲು ಸಜ್ಜಾಗಿದೆ. AI+ ಪಲ್ಸ್ ಮತ್ತು AI+ ನೋವಾ ಫೋನ್‌ಗಳು ಫ್ಲಿಪ್‌ಕಾರ್ಟ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಾಗಲಿದ್ದು, ಈಗಾಗಲೇ ಮೀಸಲಾದ ಮೈಕ್ರೋಸೈಟ್‌ಗಳು ಲೈವ್ ಆಗಿವೆ. ಈ ಫೋನ್‌ಗಳು ಜುಲೈ 8 ರಂದು ಮಧ್ಯಾಹ್ನ 12:30 IST ಕ್ಕೆ ಭಾರತದಲ್ಲಿ ಬಿಡುಗಡೆಗೊಳ್ಳಲಿವೆ. ಈ ಕುರಿತ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

AI+ ಪಲ್ಸ್ ಮತ್ತು AI+ ನೋವಾ 5G:ಪ್ರಮುಖ ವೈಶಿಷ್ಟ್ಯಗಳು ಮತ್ತು ಲಭ್ಯತೆ
AI+ ಪಲ್ಸ್ ಮತ್ತು AI+ ನೋವಾ 5G ಎರಡೂ ಸ್ಮಾರ್ಟ್‌ಫೋನ್‌ಗಳು ಬಳಕೆದಾರರಿಗೆ ಹಲವು ಆಯ್ಕೆಗಳನ್ನು ನೀಡುವ ನಿಟ್ಟಿನಲ್ಲಿ ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರುತ್ತವೆ: ಕಪ್ಪು, ನೀಲಿ, ಹಸಿರು, ಗುಲಾಬಿ ಮತ್ತು ನೇರಳೆ. ಕ್ಯಂಎರಾ ವಿಷಯದಲ್ಲಿ, ಎರಡೂ ಮಾದರಿಗಳು ಆಯತಾಕಾರದ ಮಾಡ್ಯೂಲ್‌ಗಳಲ್ಲಿ ಅಳವಡಿಸಲಾಗಿರುವ 50MP ಡ್ಯುಯಲ್ ಹಿಂಬದಿಯ ಕ್ಯಾಮೆರಾಗಳನ್ನು ಒಳಗೊಂಡಿವೆ ಎಂದು ತಿಳಿಸಲಾಗಿದೆ.

AI+ ಪಲ್ಸ್ ಮತ್ತು ನೋವಾ: ಜುಲೈ 8 ರಂದು ಬಿಡುಗಡೆ, ಈ 5G ಫೋನ್‌ಗಳ ಬೆಲೆ ₹5,000!

ಇವುಗಳಲ್ಲಿ, AI+ ನೋವಾ 5G ಫೋನ್ ಮುಂಭಾಗದಲ್ಲಿ, ಸೆಲ್ಫಿ ಕ್ಯಾಮೆರಾವನ್ನು ಇರಿಸಲು ವಾಟರ್‌ಡ್ರಾಪ್ ನಾಚ್ ಹೊಂದಿರುವ ಫ್ಲಾಟ್ ಡಿಸ್ಪ್ಲೇಯನ್ನು ಕಾಣಬಹುದು. ಬ್ಯಾಟರಿ ವಿಭಾಗದ ಬಗ್ಗೆ ಹೇಳುವುದಾದರೆ, AI+ ನೋವಾ 5G 5,000mAh ಬ್ಯಾಟರಿಯನ್ನು ಹೊಂದಿದ್ದು, ದೀರ್ಘಕಾಲದ ಬಳಕೆಯನ್ನು ಖಚಿತಪಡಿಸುತ್ತದೆ. ಅಲ್ಲದೆ, ಇದು 1TB ವರೆಗೆ ವಿಸ್ತರಿಸಬಹುದಾದ ಸಂಗ್ರಹಣೆಯನ್ನು ಬೆಂಬಲಿಸುತ್ತದೆ.

ಇದಲ್ಲದೆ, ಸೋರಿಕೆಗಳ ಪ್ರಕಾರ AI+ ನೋವಾ 5G ಡ್ಯುಯಲ್ ಸಿಮ್‌ಗೆ ಬೆಂಬಲ ನೀಡಲಿದ್ದು, 6GB RAM ಮತ್ತು 128GB ಆಂತರಿಕ ಸಂಗ್ರಹಣೆಯನ್ನು ನೀಡಲಿದೆ. ಇದು ಕೈಗೆಟುಕುವ ಬೆಲೆಯಲ್ಲಿ ಪ್ರಬಲ ಕಾರ್ಯಕ್ಷಮತೆಯನ್ನು ನಿರೀಕ್ಷಿಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಲಿದೆ. ಮಾರಾಟದ ದಿನಾಂಕ ಮತ್ತು ಬ್ಯಾಂಕ್ ಆಫರ್‌ಗಳಂತಹ ವಿವರಗಳು ಜುಲೈ 8 ರ ಅಧಿಕೃತ ಬಿಡುಗಡೆ ದಿನದಂದು ಬಹಿರಂಗವಾಗಲಿವೆ.

'ಭಾರತದಿಂದ, ಎಲ್ಲರಿಗೂ' - ಸ್ವದೇಶಿ ಸ್ಪರ್ಶ
AI+ ಬ್ರ್ಯಾಂಡ್ ತನ್ನ "ಭಾರತದಿಂದ, ಎಲ್ಲರಿಗೂ" ಎಂಬ ಹೊಸ ಟ್ಯಾಗ್‌ಲೈನ್‌ಗೆ ಬದ್ಧವಾಗಿದೆ. ಈ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿಯೇ ವಿನ್ಯಾಸಗೊಳಿಸಲಾಗಿದ್ದು, ಯುನೈಟೆಡ್ ಟೆಲಿಲಿಂಕ್ಸ್‌ನ ಪಾಲುದಾರಿಕೆಯೊಂದಿಗೆ ಭಾರತದಲ್ಲಿಯೇ ಜೋಡಿಸಲಾಗುತ್ತಿದೆ. ವಿಶೇಷವಾಗಿ, ಈ ಸಾಧನಗಳು NxtQuantum OS ನಲ್ಲಿ ಕಾರ್ಯನಿರ್ವಹಿಸುತ್ತವೆ, ಇದು ಭಾರತದಲ್ಲಿಯೇ ವಿನ್ಯಾಸಗೊಳಿಸಿ ಮತ್ತು ಅಭಿವೃದ್ಧಿಪಡಿಸಲಾದ ಸ್ವದೇಶಿ ಆಪರೇಟಿಂಗ್ ಸಿಸ್ಟಮ್ ಆಗಿದೆ. ಈ ಕ್ರಮವು ಸ್ಥಳೀಯ ಉತ್ಪಾದನೆ ಮತ್ತು ನಾವೀನ್ಯತೆಗೆ ಬ್ರ್ಯಾಂಡ್‌ನ ಬದ್ಧತೆಯನ್ನು ತೋರಿಸುತ್ತದೆ. ನೀವು ಕೂಡ ಕಡಿಮೆ ಬಜೆಟ್‌ನಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಹುಡುಕುತ್ತಿರುವಿರಾ? AI+ ಪಲ್ಸ್ ಮತ್ತು AI+ ನೋವಾ 5G ಬಗ್ಗೆ ನಿಮ್ಮ ನಿರೀಕ್ಷೆಗಳೇನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ. ಮತ್ತು ಸಂಪೂರ್ಣ ಟೆಕ್ ಸುದ್ದಿ ಮತ್ತು ಟಿಪ್ಸ್‌ಗಳಿಗಾಗಿ ಕನ್ನಡ ಗಿಜ್‌ಬಾಟ್ ನಲ್ಲಿ ಯಾವಾಗಲೂ ಲೈವ್ ಆಗಿರಿ.

Best Mobiles in India

English summary
The AI+ Pulse and AI+ Nova 5G are scheduled to launch in India on July 8. After their release, both smartphones will be available exclusively on Flipkart.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+