Home
ಸುದ್ದಿಜಾಲ

AI tools of 2023: 2023ರಲ್ಲಿ ಟೆಕ್‌ ವಲಯದ ದಿಕ್ಕನ್ನೇ ಬದಲಾಯಿಸಿದ AI ಟೂಲ್‌ಗಳು!

ಇನ್ನೇನು ಕೆಲವೇ ದಿನಗಳಲ್ಲಿ 2024 ಕಾಲಿಡಲಿದ್ದೇವೆ, ಈ ಹಾದಿಯಲ್ಲಿ 2023ರಲ್ಲಿ ಏನೆಲ್ಲಾ ಆಯ್ತು ಅಂತಾ ಮೆಲಕುಹಾಕುವುದು ಸಾಮಾನ್ಯ. ಅದರಲ್ಲೂ 2023ರಲ್ಲಿ ಟೆಕ್ನಾಲಜಿ ವಲಯ ಸಾಕಷ್ಟು ಹೊಸತನಕ್ಕೆ ಕಾರಣವಾಗಿದೆ. ಅದರಲ್ಲಿ ಈ ವರ್ಷವನ್ನು ಕೃತಕ ಬುದ್ಧಿಮತ್ತೆಯ ವರ್ಷ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಷ್ಟರ ಮಟ್ಟಿಗೆ ಎಐ ಟೆಕ್ನಾಲಜಿ ಈ ವರ್ಷ ಸದ್ದು ಮಾಡಿದೆ.

ಹೌದು, AI ಆವಿಷ್ಕಾರಕ್ಕೆ 2023 ಒಂದು ಹೆಗ್ಗುರುತು ವರ್ಷ ಎಂದು ಹೇಳಬಹುದು. ಎಐ ಗೆ ಸಂಬಂಧಿಸಿದಂತೆ ಹಲವು ಮಹತ್ತರವಾದ ಬದಲಾವಣೆಗಳನ್ನು ಈ ವರ್ಷ ಕಂಡಿದೆ. ಅದರಲ್ಲಿಯೂ ಅತ್ಯಂತ ಸಂಕೀರ್ಣ ವಿಷಯಗಳ ಕುರಿತು ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುವ AI ಚಾಟ್‌ಬಾಟ್‌ಗಳವರೆಗೆ ಈ ವರ್ಷ ಬದಲಾವಣೆಯನ್ನು ಕಂಡಿದೆ. ಹಾಗಾದ್ರೆ 2023ರಲ್ಲಿ AI ವಲಯದಲ್ಲಿ ಏನೆಲ್ಲಾ ನಡೆಯಯಿತು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

AI tools of 2023: 2023ರಲ್ಲಿ ಟೆಕ್‌ ವಲಯದ ದಿಕ್ಕನ್ನೇ ಬದಲಾಯಿಸಿದ AI ಟೂಲ್‌ಗಳು

2023 ರಲ್ಲಿ AI ಟೆಕ್ನಾಲಜಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ಅದರಲ್ಲೂ ನಮ್ಮ ನಿಮ್ಮೆಲ್ಲರ ನಿರೀಕ್ಷೆಗೂ ಮೀರಿದ ಎಐ ಚಾಟ್‌ಬಾಟ್‌, OpenAI ನ ChatGPT ಮತ್ತು ಆಂಥ್ರೊಪಿಕ್ಸ್ ಕ್ಲೌಡ್‌ನಂತಹ ಹೆಚ್ಚು ಅತ್ಯಾಧುನಿಕ ಭಾಷಾ ಮಾದರಿಗಳು ಹೊಸ ದಿಕ್ಕನ್ನು ತೋರಿಸಿವೆ. ಮಾನವ ಕುಲ ಹಾಗೂ ತಾಂತ್ರಿಕತೆಯಲ್ಲಿ ಮನುಷ್ಯನನ್ನೇ ಸೋಲಿಸುವ ಎಐ ಟೆಕ್ನಾಲಜಿಬ ಹಲವು ಉಪಯೋಗಗಳ ಸೂಚನೆ ನೀಡಿದೆಯಾದರೂ ಹಲವು ವಲಯಗಳಲ್ಲಿ ಮಾನವ ಉದ್ಯೋಗ ಕಡಿತದ ಸೂಚನೆ ನೀಡಿದ್ದು ಕೂಡ ಒಂದು ಆತಂಕಕ್ಕೆ ಕಾರಣವಾಗಿದೆ. ಇದೆಲ್ಲದರ ನಡುವೆಯೂ ಈ ವರ್ಷ ಎಐ ಟೆಕ್ನಾಲಜಿಯ ದಿಕ್ಕನ್ನೆ ಬದಲಾಯಿಸಿದ ವರ್ಷವೆಂದು ಹೇಳಬಹುದಾಗಿದೆ.

ChatGPT
OpenAI ಸಂಸ್ಥೆಯ ನವೆಂಬರ್ 2022 ರಲ್ಲಿ ತನ್ನ ಸಂವೇದನಾಶೀಲ ಚಾಟ್‌ಬಾಟ್ ChatGPT ಅನ್ನು ಅನಾವರಣಗೊಳಿಸಿತು. ಯಾವುದೇ ಪ್ರಶ್ನೆಗೂ ಕ್ಷಣಾರ್ಧದಲ್ಲಿ ಉತ್ತರಿಸುವ ಈ ಎಐ 2023ರಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿತ್ತು. ಅಲ್ಲದೆ ಹಲವು ವಲಯಗಳಲ್ಲಿ ಚಾಟ್‌ಜಿಪಿಟಿ ಬಳಕೆಗೆ ಬಂದಿದ್ದು, ಇದರ ಸಾಧನೆಗೆ ಹಿಡಿದ ಕೈ ಗನ್ನಡಿಯಾಗಿದೆ. ಇದರ ಅಸಾಧಾರಣ ಸಾಮರ್ಥ್ಯಗಳಿಂದ ಜಗತ್ತನ್ನು ಬೆರಗುಗೊಳಿಸಿದೆ. ಚಾಟ್ ಜನರೇಟಿವ್ ಪ್ರಿ ಟ್ರೈನ್ಡ್ ಟ್ರಾನ್ಸ್‌ಫಾರ್ಮರ್ (ChatGPT) OpenAI ನ ಸ್ವಾಮ್ಯದ ದೊಡ್ಡ ಭಾಷಾ ಮಾದರಿಯನ್ನು (LLM), GPT-ಸರಣಿಯನ್ನು ಬಳಸಿಕೊಳ್ಳುತ್ತದೆ.

AI tools of 2023: 2023ರಲ್ಲಿ ಟೆಕ್‌ ವಲಯದ ದಿಕ್ಕನ್ನೇ ಬದಲಾಯಿಸಿದ AI ಟೂಲ್‌ಗಳು

ಬಿಂಗ್ AI ಚಾಟ್
ಮೈಕ್ರೋಸಾಫ್ಟ್ ಪರಿಚಯಿಸಿದ ಬಿಂಗ್ ಎಐ ಚಾಟ್, ಬಿಂಗ್ ಸರ್ಚ್ ಎಂಜಿನ್‌ನ ಅತ್ಯಾಧುನಿಕ ವೈಶಿಷ್ಟ್ಯವಾಗಿದೆ. ಇದು GPT-4 ನಿಂದ ಚಾಲಿತವಾಗಿದ್ದು, ಸಂವಾದಾತ್ಮಕ ಸಂವಹನಗಳಿಗಾಗಿ AI ಅನ್ನು ಬಳಸುತ್ತದೆ. Bing AI ಚಾಟ್ ವಿಷಯ ರಚನೆ, ಕಲ್ಪನೆ ರಚನೆ ಮತ್ತು ಚಿತ್ರ ರಚನೆಯಂತಹ ಕಾರ್ಯಗಳ ವಿಂಗಡಣೆಯನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ Bing AI Chat ಬಳಕೆದಾರರಿಂದ ಮಾನವ-ರೀತಿಯ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದು ಎಲ್ಲರಿಂದ ಪ್ರಶಂಸೆಗೆ ಒಳಗಾಗಿದೆ.

AI tools of 2023: 2023ರಲ್ಲಿ ಟೆಕ್‌ ವಲಯದ ದಿಕ್ಕನ್ನೇ ಬದಲಾಯಿಸಿದ AI ಟೂಲ್‌ಗಳು

ರನ್‌ವೇ Gen-2
ರನ್‌ವೇ ಅಭಿವೃದ್ಧಿಪಡಿಸಿದ Gen-2 ಗೂಗಲ್‌ನಿಂದ ಬೆಂಬಲಿತವಾದ ಹೊಸ ಎಐ ಆಗಿದೆ. ಈ ತಂತ್ರಜ್ಞಾನವು ಈಗಾಗಲೇ ಮನರಂಜನಾ ಉದ್ಯಮವನ್ನು ಪ್ರಭಾವಿಸಿದೆ, ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಹಾಲಿವುಡ್ ಚಲನಚಿತ್ರ 'ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್' ನಲ್ಲಿ ಅದರ ಬಳಕೆಯಿಂದ ಪ್ರದರ್ಶಿಸಲ್ಪಟ್ಟಿದೆ. ಇದರಲ್ಲಿ ಇದು ಅದ್ಭುತವಾದ ದೃಶ್ಯ ಪರಿಣಾಮಗಳನ್ನು ರಚಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ಹೇಳಲಾಗಿದೆ. ಅಂದರೆ ರನ್‌ವೇ Gen-2 ವಿವಿಧ ಇನ್‌ಪುಟ್‌ಗಳಿಂದ ವೀಡಿಯೊಗಳನ್ನು ರಚಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಕೂಡ ಇದೇ ವರ್ಷ ಎಂಟ್ರಿ ನೀಡಿದ್ದು, ಈ ವರ್ಷ ಎಐನ ಉತ್ಕೃಷ್ಟ ವರ್ಷ ಎನ್ನುವುದಕ್ಕೆ ಉದಾಹರಣೆಯಾಗಿದೆ.

Best Mobiles in India

English summary
AI tools of 2023: Most promising AI tools that emerged over the years
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+