ಕೆಂಗಣ್ಣು ಬೀರಿದ ಕೇಂದ್ರ ಸರ್ಕಾರ..ವಾಷಿಂಗ್ ಮೆಶಿನ್, ಪ್ರಿಡ್ಜ್ ಖರೀದಿಗೆ ಇದು ಲಾಸ್ಟ್ ಚಾನ್ಸ್!

|

ಸತತವಾಗಿ ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ನಿಯಂತ್ರಿಸುವ ಸಲುವಾಗಿ ಸಾರ್ವಜನಿಕರ ಮೇಲೆ ಸರ್ಕಾರ ಗಧಾಪ್ರಹಾರ ಮಾಡಿದೆ. ವಿದೇಶದಿಂದ ಆಮದಾಗುವ ಏರ್‌ ಕಂಡೀಶನರ್, ರೆಫ್ರಿಜರೇಟರ್ ಸಹಿತ 19 ಸಾಮಗ್ರಿ ಗಳ ಆಮದು ಸುಂಕವನ್ನು ಏರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಈ ಎಲ್ಲ ವಸ್ತುಗಳ ದರ ಶೀಘ್ರವೇ ಏರಿಕೆಯಾಗಲಿದೆ.!

ಎಲೆಕ್ಟ್ರಾನಿಕ್ ಉದ್ಯಮ ತಜ್ಞರ ನಿರೀಕ್ಷೆಯನ್ನು ಮೀರಿ ಸರ್ಕಾರವು ವಿದೇಶದಿಂದ ಆಮದಾಗುವ 19 ಎಲೆಕ್ಟ್ರಾನಿಕ್ ಸಾಮಗ್ರಿಗಳ ವಸ್ತುಗಳ ಮೇಲೆ ಆಮದು ಸುಂಕ ದ್ವಿಗುಣಗೊಳಿಸಿದೆ. ಹಾಗಾಗಿ, ಇನ್ಮುಂದೆ ದೇಶಕ್ಕೆ ಆಮದಾಗುವ ವಾಷಿಂಗ್ ಮೆಶಿನ್‌ಗಳು, ಸ್ಪೀಕರುಗಳು, ಮನೆ ಸಾಮಗ್ರಿಗಳು, ಕೆಲವು ಪ್ಲಾಸ್ಟಿಕ್‌ ಸಾಮಗ್ರಿಗಳು ಮತ್ತು ಸೂಟ್‌ಕೇಸ್‌ಗಳು ಇನ್ಮುಂದೆ ದುಬಾರಿಯಾಗಲಿವೆ.

ಕೆಂಗಣ್ಣು ಬೀರಿದ ಸರ್ಕಾರ..ವಾಷಿಂಗ್ ಮೆಶಿನ್, ಪ್ರಿಡ್ಜ್ ಖರೀದಿಗೆ ಲಾಸ್ಟ್ ಚಾನ್ಸ್!

ಇನ್ನೊಂದು ವಾರದ ಒಳಗಾಗಿ ಹಳೆಯ ದರದಲ್ಲೇ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಗ್ರಾಹಕರು ಖರೀದಿಸಬಹುದು. ನಂತರ ಆಮದು ದರ ಸುಂಕ ಹೆಚ್ಚಳವಾಗುವುದರಿಂದ ಎಲ್ಲಾ ಎಲೆಕ್ಟ್ರಾನಿಕ್ ಸಂಸ್ಥೆಗಳು ಕೂಡ ಬೆಲೆ ಏರಿಕೆ ಮಾಡಬೇಕಾಗುತ್ತದೆ. ಸರ್ಕಾರದ ಈ ನಿರ್ಧಾರದಿಂದ ಆನ್‌ಲೈನ್‌ ಮಾರುಕಟ್ಟೆಯ ಮೇಲೂ ಸಹ ತಟ್ಟಲಿದೆ ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ದೀಪಾವಳಿ ಹಬ್ಬದ ವೇಳೆಗೆ ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಖರೀದಿಸುವ ಅಭಿಲಾಷೆ ಹೊಂದಿದ್ದ ಗ್ರಾಹಕರು ಈಗಲೇ ಅವುಗಳನ್ನು ಖರೀದಿಸುವುದು ಉತ್ತಮ. ಇಲ್ಲವಾದರೆ, ಇನ್ನೊಂದು ವಾರದ ಒಳಗಾಗಿ ಏರ್‌ ಕಂಡೀಶನರ್, ರೆಫ್ರಿಜರೇಟರ್ ಸಹಿತ 19 ಸಾಮಗ್ರಿ ಗಳ ವಸ್ತುಗಳ ಬೆಲೆ ಶೇ. 10 ರಿಂದ 20 ಪರ್ಸೆಂಟ್ ವರೆಗೂ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಕೆಂಗಣ್ಣು ಬೀರಿದ ಸರ್ಕಾರ..ವಾಷಿಂಗ್ ಮೆಶಿನ್, ಪ್ರಿಡ್ಜ್ ಖರೀದಿಗೆ ಲಾಸ್ಟ್ ಚಾನ್ಸ್!

ಇನ್ನು ಆನ್‌ಲೈನ್‌ ಮಾರಾಟದ ದೈತ್ಯ ಸಂಸ್ಥೆಗಳಾದ ಅಮೆಝಾನ್ ಮತ್ತು ಫ್ಲಿಪ್ಕಾರ್ಟ್ ವರ್ಷಕ್ಕೊಮ್ಮೆ ಮಾತ್ರ ಆಯೋಜಿಸುವ ಭಾರಿ ರಿಯಾಯಿತಿ ಮಾರಾಟದ ದಿನಗಳು ಮತ್ತೆ ಬಂದಿವೆ. ಸೆಪ್ಟೆಂಬರ್‌ ಕೊನೆಯ ವಾರ ಅಥವಾ ಅಕ್ಟೋಬರ್‌ ಮೊದಲ ಬಾರ ಮೂರರಿಂದ ನಾಲ್ಕು ದಿನಗಳ ಕಾಲ ಆಯೋಜಿಸುವ ಬಿಗ್ ಸೇಲ್‌ಗಳಲ್ಲಿ ಬೆಲೆ ಹೆಚ್ಚಳವಾಗದು ಎಂದು ಹೇಳಲಾಗುತ್ತಿದೆ.

ಓದಿರಿ: ಗೂಗಲ್​ಗೆ ಇಪ್ಪತ್ತರ ಸಂಭ್ರಮ..ಚಕ್ರಾಧಿಪತ್ಯ ಸಾಧಿಸಿದ ಕಂಪೆನಿಯ ರೋಚಕ ವಿಷಯಗಳು!!

Best Mobiles in India

Read more about:
English summary
In a move to stabilise the falling rupee and check current account deficit, the government today (September 26) announced hiked customs duties on 19 items . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X