ಏರ್‌ಸೆಲ್‌ನಿಂದ ರೋಮಿಂಗ್‌ಗೆ ಗುಡ್‌ಬೈ
ಏರ್‌ಸೆಲ್ ಮೊಬೈಲ್ ಗ್ರಾಹಕರಿಗೆ ಗುಡ್‌ನ್ಯೂಸ್. ಏರ್‌ಸೆಲ್ ಮೊಬೈಲ್ ನೆಟ್‌ವರ್ಕ್ ಹೊಂದಿರುವ ಗ್ರಾಹಕರಿಗೆ ಇನ್ನು ಮುಂದೆ ರೋಮಿಂಗ್ ಕಿರಿಕಿರಿ ಇಲ್ಲ. ಏರ್‌ಸೆಲ್ ಕಂಪೆನಿ 'ಒಂದು ದೇಶ ಒಂದೇ ದರ' ಯೋಜನೆಯನ್ನು ಪ್ರಕಟಿಸುವ ಮೂಲಕ ರೋಮಿಂಗ್‌ಗೆ ಗುಡ್‌ಬೈ ಹೇಳಿದೆ.
ಒಂದು ದೇಶ ಒಂದೇ ದರ ಯೋಜನೆಯಲ್ಲಿ ಏನು ವಿಶೇಷತೆಯಿದೆ.?
ಈ ಹಿಂದೆ ಹೋಮ್ ಸರ್ಕಲ್‌ನಲ್ಲಿ ಮತ್ತು ರೋಮಿಂಗ್‌ನಲ್ಲಿ ಲೋಕಲ್ ಮತ್ತು ಎಸ್‌ಟಿಡಿ ದರ ವೈತ್ಯಾಸವಿತ್ತು. ಆದ್ರೆ ಈಗ ನೀವು ಹೋಮ್‌ಸರ್ಕಲ್ ಮತ್ತು ರೋಮಿಂಗ್‌ನಲ್ಲಿ ಒಂದೇ ದರದಲ್ಲಿ ಕರೆ ಮಾಡಬಹುದು. ಹಾಗಾಗಿ ಈಗ ನೀವು ಒಂದು ಸೆಕೆಂಡ್‌ಗೆ ಒಂದು ಪೈಸೆ ಖರ್ಚು ಮಾಡಿ ರೋಮಿಂಗ್ ಕಾಲ್ ಮಾಡಬಹುದು. ಅದರಲ್ಲೂ ಒಳಬರುವ ರೋಮಿಂಗ್ ಕಾಲ್ ಸಂಪೂರ್ಣ ಉಚಿತ ಎಂದು ಏರ್‌ಸೆಲ್ ತಿಳಿಸಿದೆ.

ಹೋಮ್ ಸರ್ಕಲ್ ಆಧಾರದ ಮೇಲೆ ಏರ್‌ಸೆಲ್ ಈ ಪ್ಯಾಕ್‌ನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದಲ್ಲಿ 26 ರೂಪಾಯಿ ದೆಹಲಿಯಲ್ಲಿ ಈ ಪ್ಲ್ಯಾನ್‌ಗೆ 39 ರೂಪಾಯಿ ನಿಗದಿ ಮಾಡಿದೆ.
ದೇಶವ್ಯಾಪಿ 'ಎಂಎನ್‌ಪಿ' ಸೌಲಭ್ಯ,'ಒಂದು ದೇಶ- ಒಂದು ಲೈಸೆನ್ಸ್', 'ಒಂದು ದೇಶ ಉಚಿತ ರೋಮಿಂಗ್' ಸೌಲಭ್ಯ ಜಾರಿಗೆ ತರಲಾಗುವುದು ಎಂದು ಟೆಲಿಕಾಂ ಸಚಿವ ಕಪಿಲ್ ಸಿಬಲ್ ಕಳೆದ ಸೆಪ್ಟಂಬರ್‌ನಲ್ಲಿ ಸುಳಿವು ನೀಡಿದ್ದರು. ಈ ಹಿನ್ನೆಲೆಯಲ್ಲಿ ಒಂದು ದೇಶ ಉಚಿತ ರೋಮಿಂಗ್ ಯೋಜನೆ ಅನುಷ್ಠಾನಕ್ಕೆ ತಂದ ಮೊದಲ ಕಂಪೆನಿ ಎಂಬ ಹೆಗ್ಗಳಿಕೆಯನ್ನು ಏರ್‌ಸೆಲ್ ತನ್ನದಾಗಿಸಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications