ಲಾವಾ ಫೀಚರ್ ಫೋನ್ ಬಳಕೆದಾರರಿಗೆ ಏರ್ಸೆಲ್ನಿಂದ ಭರ್ಜರಿ ಆಫರ್!
ಏರ್ಸೆಲ್ ಮತ್ತು ಲಾವಾ ಮೊಬೈಲ್ಸ್ ಜೊತೆಯಾಗಿ ಬಂಡಲ್ಡ್ ಆಫರ್ ನೀಡುತ್ತಿದ್ದು, ಲಾವಾ ಫೀಚರ್ ಫೋನ್ ಮೇಲೆ 100% ಕ್ಯಾಶ್ಬ್ಯಾಕ್ ಜೊತೆಗೆ ಏರ್ಸೆಲ್ ತನ್ನ ರೂ 153/- ರ ಪ್ಯಾಕ್ ಮೂಲಕ ಅನಿಯಮಿತ ವಾಯ್ಸ್ ಕರೆಗಳು, 2G ಡೇಟಾ,SMS ಮತ್ತು ಮ್ಯೂಸಿಕ್ ನೀಡು
ಟೆಲಿಕಾಮ್ ಆಪರೇಟರ್ ಏರ್ಸೆಲ್ ಲಾವಾ ಮೊಬೈಲ್ಸ್ ನ ಸಹಭಾಗಿತ್ವದಲ್ಲಿ ನೀಡಲಿದೆ ಲಾವಾ ಫೀಚರ್ ಫೋನ್ ಬಳಕೆದಾರರಿಗೆ ಭರ್ಜರಿ ಬಂಡಲ್ಡ್ ಆಫರ್.

ಲಾವಾ ಮೊಬೈಲ್ಸ್ ಜೊತೆಗಿನ ಸಹಭಾಗಿತ್ವದ ಕುರಿತು ಮಾತನಾಡಿದ ಏರ್ಸೆಲ್ ನ ಚೀಫ್ ಮಾರ್ಕೆಟಿಂಗ್ ಆಫೀಸರ್, ಆನುಪಮ್ ವಾಸುದೇವ್ " ನಾವು ನಮ್ಮ ಗ್ರಾಹಕರಿಗೆ ಈ ರೀತಿಯ ನೂತನ ಮತ್ತು ಅಮೂಲ್ಯ ಕೊಡುಗೆಯೊಂದನ್ನು ನೀಡಲು ಬಹಳ ಉತ್ಸುಕರಾಗಿದ್ದೇವೆ.ಗ್ರಾಹಕರಿಗೆ ಸದಾ ಉತ್ತಮ ಕೊಡುಗೆಗಳನ್ನು ನೀಡುವುದೇ ಏರ್ಸೆಲ್ ನ ಗುರಿಯಾಗಿದ್ದು, ಈ ಸಲುವಾಗಿ ನಾವು ಈ ಉದ್ಯಮದ ದಿಗ್ಗಜರೊಂದಿಗೆ ಕೈಜೋಡಿಸಲು ಸದಾ ಪ್ರಯತ್ನಿಸುತ್ತಿರುತ್ತೇವೆ" ಎಂದು ಹೇಳಿದರು.
" ಏರ್ಸೆಲ್ ಮತ್ತು ಲಾವಾ ಮೊಬೈಲ್ಸ್ ಜೊತೆಯಾಗಿ ನೀಡುತ್ತಿರುವ ಈ ಬಂಡಲ್ಡ್ ಆಫರ್ ನಲ್ಲಿ ಗ್ರಾಹಕರು ತಮ್ಮ ಸಾಧನದ ಮೇಲೆ ವ್ಯಯಿಸಿರುವ ಮೊತ್ತವನ್ನು ಶೇಕಡಾ 100% ಹಿಂಪಡೆಯುವ ಅವಕಾಶವಿದೆ. ಅಲ್ಲದೆ ಇದರೊಂದಿಗೆ ಏರ್ಸೆಲ್ ನ ಅನಿಯಮಿತ ವಾಯ್ಸ್ ಕರೆ, ಡೇಟಾ, SMS ಮತ್ತು ಮ್ಯೂಸಿಕ್ ನ ಲಾಭವನ್ನೂ ಪಡೆಯಬಹುದು. ಏರ್ಸೆಲ್ ತಮ್ಮ ಗ್ರಾಹಕರಿಗೆ ಮೊಬೈಲ್ ಕನೆಕ್ಟಿವಿಟಿ ಯ ಸಂಪೂರ್ಣ ಸೇವೆಯನ್ನು ಉತ್ತಮ ಬೆಲೆಯಲ್ಲಿ ನೀಡಲು ಸದಾ ಪ್ರಯತ್ನಿಸುತ್ತದೆ" ಎಂದು ವಾಸುದೇವ್ ತಿಳಿಸಿದ್ದಾರೆ.
ಲಾವಾ ದ ಈ ಹೊಸ ಫೀಚರ್ ಫೋನ್ ಖರೀದಿಸಿದರೆ 24 ತಿಂಗಳಲ್ಲಿ ಅದರ ಬೆಲೆಯ 100% ರಷ್ಟು ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶವಿದೆ. ಅಲ್ಲದೆ ಗ್ರಾಹಕರು ಏರ್ಸೆಲ್ ನ ರೂ 153 ಪ್ಯಾಕ್ ಬಳಸುವ ಮೂಲಕ ಅನಿಯಮಿತ ವಾಯ್ಸ್ ಕರೆಗಳು, 2G ಡೇಟಾ,SMS ಮತ್ತು ಮ್ಯೂಸಿಕ್ ನ ಲಾಭವನ್ನೂ ಪಡೆದುಕೊಳ್ಳಬಹುದು.
ಈ ಹೊಸ ಡಿವೈಸ್ ನ ಬೆಲೆ ಕೇವಲ ರೂ 850. ಇದರ ಇನ್ನೊಂದು ವಿಶೇಷತೆಯೆಂದರೆ ಏರ್ಸೆಲ್ ಇದರ ಸಿಮ್ ಸ್ಲಾಟ್ ಅನ್ನು ಲಾಕ್ ಮಾಡದೇ ಇರುವುದು. ಹೀಗಾಗಿ ಗ್ರಾಹಕರು ಏರ್ಸೆಲ್ ನ ಹೊರತಾಗಿ ಬೇರೆ ಮೊಬೈಲ್ ಆಪರೇಟರ್ ಗಳ ಸಿಮ್ ಅನ್ನು ಕೂಡ ಇಲ್ಲಿ ಬಳಸಬಹುದಾಗಿದೆ.
ಈ ಬಂಡಲ್ಡ್ ಆಫರ್ ನ ಪ್ರೀ-ಬುಕಿಂಗ್ ಈಗಾಗಲೇ ಏರ್ಸೆಲ್ ನ ವೆಬ್ಸೈಟ್ ನಲ್ಲಿ ಲಭ್ಯವಿದ್ದು ಹೊಸ ಡಿವೈಸ್ಗಳು 2 ವಾರಗಳ ಕಾಲ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.
ಗೌರವ್ ನಿಗಮ್, ಸೀನಿಯರ್ ವಿಪಿ, ಹೆಡ್ ಆಫ್ ಪ್ರಾಡಕ್ಟ್, ಲಾವಾ ಇಂಟರ್ನ್ಯಾಶನಲ್ ಹೀಗೆ ಹೇಳಿದ್ದಾರೆ "ನಮ್ಮ ಗ್ರಾಹಕರಿಗೆ ಅತ್ಯುತ್ತಮ 2G ಅನುಭವ ನೀಡುವ ಸಲುವಾಗಿ ಏರ್ಸೆಲ್ ಜೊತೆಗಿನ ನಮ್ಮ ಸಹಭಾಗಿತ್ವದ ಕುರಿತು ನಾವು ಬಹಳ ಉತ್ಸುಕರಾಗಿದ್ದೇವೆ. ಈ ಸಹಭಾಗಿತ್ವದ ಫಲವಾದ ಲಾವಾದ ಹೊಸ ಫೀಚರ್ ಫೋನ್ ಮೇಲೆ ರೂ 850 ಕ್ಯಾಶ್ ಬ್ಯಾಕ್ ಪಡೆಯುವ ಮೂಲಕ ಗ್ರಾಹಕರಿಗೆ ಈ ಫೋನ್ ಉಚಿತವಾಗಿ ಲಭಿಸಿದಂತಾಗಿದೆ. ನಾವು ಉತ್ತಮ ಸಾಧನಗಳು ಮತ್ತು ಸೇವೆ ನೀಡುವ ಮೂಲಕ ಗ್ರಾಹಕರೊಂದಿಗೆ ವಿಶ್ವಾಸಾರ್ಹ ಸಂಬಂಧವನ್ನು ಹೊಂದಲು ಬಯಸುತ್ತೇವೆ. ಏರ್ಸೆಲ್ ನೊಂದಿಗಿನ ನಮ್ಮ ಸಹಭಾಗಿತ್ವ ಕೂಡ ನಮ್ಮ ಬ್ರ್ಯಾಂಡ್ ಕುರಿತು ಗ್ರಾಹಕರ ನಂಬಿಕೆ ಹೆಚ್ಚಿಸುವ ಪ್ರಯತ್ನವಾಗಿದೆ. ಎಲ್ಲಾ ಗ್ರಾಹಕರೂ ಕೈಗೆಟಕುವ ಬೆಲೆಯಲ್ಲಿ ತಂತ್ರಜ್ಞಾನದ ಲಾಭ ಪಡೆಯುವಂತಾಗಬೇಕು ಎನ್ನುವುದು ನಮ್ಮ ಆಶಯ".


Click it and Unblock the Notifications








