ಏರ್ ಸೆಲ್ ನಿಂದ ಆಚ್ಚರಿ ಆಫರ್: ಏನದು..?

By: Precilla Dias

ಟೆಲಿಕಾಂ ವಲಯದಲ್ಲಿ ಸದ್ಯ ದರ ಸಮರವೂ ಹೆಚ್ಚು ಸದ್ದು ಮಾಡುತ್ತಿದ್ದು, ಜಿಯೋ ಮಾದರಿಯಲ್ಲೇ ಗ್ರಾಹಕರನ್ನು ಸೆಳೆಯುವ ಸಲುವಾಗಿ ಆಕರ್ಷಕ ಆಫರ್ ಗಳನ್ನು ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಏರ್ ಸೆಲ್ ತನ್ನ ಗ್ರಾಹಕರಿಗೆ ಹೊಸ ಆಫರ್ ಒಂದನ್ನು ನೀಡಲಾಗಿದೆ.

ಏರ್ ಸೆಲ್ ನಿಂದ ಆಚ್ಚರಿ ಆಫರ್: ಏನದು..?

ಏರ್ ಸೆಲ್ 'ಡೇಟಾ ಆನ್ ಡಿಮಾಂಡ್’ ಎಂಬ ಹೊಸದೊಂದು ಸ್ಕಿಮ್ ನೀಡುತ್ತಿದ್ದು, ಇದು ಕೋಲ್ಕತ್ತಾ, ವೆಸ್ಟ್ ಬೆಂಗಾಲ್, ಬಿಹಾರ್, ಓಡಿಸಾ, ಅಸ್ಸಾಂ ಮತ್ತು ನಾರ್ಥ್ ಇಸ್ಟ್ ಸರ್ಕಲ್ ಗಳಿಗೆ ಈ ಆಫರ್ ಲಭ್ಯವಿದೆ.

ಈ ಹೊಸ ಆಫರ್ ನಲ್ಲಿ ಏರ್ ಸೆಲ್ ಗ್ರಾಹಕರಿಗೆ ತಮ್ಮಗೆ ಬೇಕಾದ ಸಮಯದಲ್ಲಿ ಡೇಟಾವನ್ನು ಬಳಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲು ಮುಂದಾಗಿದೆ. ಅಲ್ಲದೇ ಕೇಲವು ದಿನಕ್ಕೆ ಒಂದು ಗಂಟೆ ಉಚಿತ ಡೇಟಾವನ್ನು ನೀಡಲು ಮುಂದಾಗಿದೆ.

ಏರ್ ಸೆಲ್ ನಿಂದ ಆಚ್ಚರಿ ಆಫರ್: ಏನದು..?

ರೂ.9ಗೆ ತಮಗೆ ಬೇಕಾದ ಸಮಯದಲ್ಲಿ ಒಂದು ಗಂಟೆಗಳ ಕಾಲ ಒಂದು GB ಡೇಟಾವನ್ನು ಪಡೆಯಬಹುದಾಗಿದೆ. ಇದು ಪ್ರತಿ ನಿತ್ಯ ಹೆಚ್ಚಿನ ಡೇಟಾವನ್ನು ಬಳಸುವವರಿಗಾಗಿಯೇ ನೀಡಲಾಗಿದೆ ಎನ್ನಲಾಗಿದೆ.

ಇದರೊಂದಿಗೆ ಏರ್ ಸೆಲ್ ಇನ್ನೇರಡು ಪ್ಲಾನ್ ಗಳನ್ನು ನೀಡದ್ದು, ರೂ.65 ಮತ್ತು ರೂ.98 ಗಳಿಗೆ ಹೆಚ್ಚಿನ ಡೇಟಾವನ್ನು ನೀಡುತ್ತಿದೆ. ರೂ.65ರಲ್ಲಿ ಗ್ರಾಹಕರಿಗೆ ಏರ್ ಸೆಲ್ 1GB 3G ಡೇಟಾವನ್ನು ಪಡೆಯಬಹುದಾಗಿದ್ದು, ಇದು ನಾಲ್ಕು ದಿನ ವ್ಯಾಲಿಡಿಟಿಯನ್ನು ಹೊಂದಿರಲಿದೆ. ಅಲ್ಲದೇ ಆನ್ ಡಿಮೆಂಡ್ ಮೂಲಕ 1 GB ಡೇಟಾವನ್ನು ಒಂದು ಗಂಟೆಗೆ ಪಡೆಯಬಹುದಾಗಿದೆ.

ಇದೇ ಮಾದಿರಿಯಲ್ಲಿ ರೂ.98ಗೆ 5GB 3G ಡೇಟಾವನ್ನು ಗ್ರಾಹಕರಿಗೆ ನೀಡಲಿದೆ. ಇದಲ್ಲದೇ ಗ್ರಾಹಕರಿಗೆ ಆನ್ ಡಿಮೆಂಡ್ ಮೂಲಕ ಒಂದು GB ಡೇಟಾವನ್ನು ಪಡೆಯಬಹುದಾಗಿದೆ. ಇದನ್ನು ಪಡೆದುಕೊಳ್ಳುವ ಸಲುವಾಗಿ USSD *121*62# ಡಯಲ್ ಮಾಡಬೇಕಾಗಿದೆ.

English summary
Telecom company Aircel today has come up with a new scheme called 'Data on Demand" for the users in Kolkata, West Bengal, Bihar, Odisha and North East & Assam.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot