ಜಿಯೋ ಯೂಸ್ ಮಾಡ್ತಿಲ್ಲಾ ಅಂದ್ರೆ ಏರ್‌ಸೆಲ್ ಸಿಮ್ ಖರೀದಿಸಿ!! ಏಕೆ?
ಈ ಆಫರ್‌ಗಳು 3G ಗ್ರಾಹಕರಿಗೆ ವರವಾಗಿದೆ.
ಏರ್‌ಸೆಲ್ ಎಂಬ ಟೆಲಿಕಾಂ ಕಂಪೆನಿ ಇತ್ತು ಎಂದೇ ಮರೆತು ಹೋಗಿರುವಾಗ ಏರ್‌ಸೆಲ್ ಕಂಪೆನಿ ನೀಡುವ ಆಫರ್‌ಗಳು ಮತ್ತೆ ಮತ್ತೆ ಏರ್‌ಸೆಲ್ ಕಂಪೆನಿಯನ್ನು ನೆನಪುಮಾಡಿಕೊಳ್ಳುವಂತೆ ಮಾಡುತ್ತವೆ.! ಈಗ ನೆನಪಾಗಲು ಕಾರಣ ಒಂದು ಅತ್ಯುತ್ತಮ ಆಫರ್.!!
ವೊಡಾಫೋನ್ ಇತ್ತೀಚಿಗಷ್ಟೆ ಸೂಪರ್ ನೈಟ್ ಪ್ಯಾಕ್ ಬಿಡುಗಡೆ ಮಾಡಿತ್ತು. ಅದರ ಹಿಂದೆಯೆ ಹೇಳ ಹೆಸರಿಲ್ಲದಂತಾಗಿರುವ ಏರ್‌ಸೆಲ್ ಕಂಪೆನಿ ಇದೀಗ 'ಗುಡ್‌ಮಾರ್ನಿಂಗ್ ಪ್ಯಾಕ್' ಬಿಡುಗಡೆ ಮಾಡಿದೆ. ಈ ಆಫರ್ ಮೂಲಕ ಕೇವಲ ಮೂರು ರೂಪಾಯಿಗಳಿಗೆ 1GB 3G ಡೇಟಾ ಪಡೆಯಬಹುದಾಗಿದೆ!!

ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೂ ಈ ಆಫರ್ ಲಭ್ಯವಿದ್ದು, ಕೇವಲ 3 ರೂಪಾಯಿಗಳಲ್ಲಿ ಸಂಪೂರ್ಣ ಎರಡು ಗಂಟೆಗಳ ಕಾಲ ಡೇಟಾ ಬಳಕೆ ಮಾಡಬಹುದಾಗಿದೆ.!! ಹಾಗಾಗಿ, ಇದೊಮದು ಉತ್ತಮ ಡೆಟಾ ಪ್ಯಾಕ್ ಆಗಿದ್ದು, ಏರ್‌ಸೆಲ್ ಗ್ರಾಹಕರು ಉಪಯೋಗಿಸಿಕೊಳ್ಳಬಹುದು.!!

99 ರೂಪಾಯಿಗೆ 15 GB ಡೇಟಾ ಸಹ ನೀಡಿದ್ದು, ಈ ಆಫರ್‌ಗಳು 3G ಗ್ರಾಹಕರಿಗೆ ವರವಾಗಿದೆ ಎನ್ನಬಹುದು. ಏಕೆಂದರೆ ಜಿಯೋ ಬಳಕೆ ಮಾಡುತ್ತಿಲ್ಲದವರು ಏರ್‌ಸೆಲ್ ಬಳಕೆ ಮಾಡಿ ಉತ್ತಮ ಡೇಟಾ ಪಡೆಯಬಹುದು. ಇನ್ನು ಯಾವುದೇ ಟೆಲಿಕಾಂ ಕಂಪೆನಿ ಕೂಡ 3G ಗ್ರಾಹಕರಿಗೆ ಇಂತಹ ಆಫರ್ ನಿಡಿಲ್ಲ.!!


Click it and Unblock the Notifications