ಏರ್‌ಸೆಲ್‌ನಿಂದ ರೂ 333 ಕ್ಕೆ ಅತ್ಯದ್ಭುತ ಅಫರ್

By: Shwetha PS

ಜಿಯೋ ತನ್ನ ಧಮಾಕಾ ಆಫರ್ ಅನ್ನು ಬಳಕೆದಾರರಿಗೆ ಪ್ರಸ್ತುತಪಡಿಸುವುದಕ್ಕೆ ಸರಿಯಾಗಿ ಇತರ ಟೆಲಿಕಾಮ್ ಕಂಪೆನಿಗಳಾದ ಏರ್‌ಟೆಲ್, ವೊಡಾಫೋನ್, ಐಡಿಯಾ ಕೂಡ ಸ್ಪರ್ಧೆಯ ಮುಂಚೂಣಿಯಲ್ಲಿದೆ. ಈಗ ಏರ್‌ಸೆಲ್ ಕೂಡ ಸ್ಪರ್ಧೆಯಲ್ಲಿ ತಾನೂ ಹಿಂದಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದು ಕರ್ನಾಟಕದ ಗ್ರಾಹಕರಿಗೆ ರೂ 333 ರ ಹೊಸ ಟಾರಿಫ್ ಪ್ಲಾನ್ ಅನ್ನು ಘೋಷಿಸಿದೆ.

ಏರ್‌ಸೆಲ್‌ನಿಂದ ರೂ 333 ಕ್ಕೆ ಅತ್ಯದ್ಭುತ ಅಫರ್

ಏರ್‌ಸೆಲ್‌ನ ಹೊಸ ಯೋಜನೆಯ ಪ್ರಕಾರ 30 ಜಿಬಿ ಇರುವ 3ಜಿ ಡೇಟಾವನ್ನು 30 ದಿನಗಳಿಗಾಗಿ ಏರ್‌ಸೆಲ್ ನೀಡುತ್ತಿದ್ದು ದಿನದ ಯಾವುದೇ ಮಿತಿಗಳನ್ನು ಇದು ಹೊಂದಿಲ್ಲ. ಏರ್‌ಸೆಲ್ ಗ್ರಾಹಕರು ತಮ್ಮ ಬಳಿ ಇರುವ 2ಜಿ, 3ಜಿ ಮತ್ತು 4ಜಿ ಫೋನ್‌ಗಳಲ್ಲಿ ಕೂಡ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದ್ದು ತಮ್ಮ ಪ್ರದೇಶದಲ್ಲಿ ದೊರಕುತ್ತಿರುವ ಅತ್ಯುತ್ತಮ ಆಫರ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!
ಕರ್ನಾಟಕದ ಏರ್‌ಸೆಲ್ ಮುಖ್ಯಸ್ಥ, ವ್ಯಾಪಾರ ಮುಖ್ಯಸ್ಥರಾಗಿರುವ ಕಾನ್ವಾರ್‌ಬೀರ್ ಸಿಂಗ್ ಹೇಳುವಂತೆ ಭಾರತದಲ್ಲಿರುವ ನಮ್ಮ ಏರ್‌ಸೆಲ್ ಗ್ರಾಹಕರು ರೂ 333 ಕ್ಕೆ ಯಾವುದೇ ಅಡೆತಡೆ ಇಲ್ಲದೆ ಇಂಟರ್ನೆಟ್ ಬಳಕೆಯನ್ನು ಮಾಡಬಹುದಾಗಿದೆ, ಅನಿಯಮಿತವಾಗಿ ವೀಡಿಯೊಗಳ ವೀಕ್ಷಣೆ, ಚಲನಚಿತ್ರಗಳ ಡೌನ್‌ಲೋಡ್, ಸುದ್ದಿ ನೋಡುವಿಕೆ ಮತ್ತು ಮನರಂಜನೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

ರೂ 333 ರ ಆಫರ್ ಅನ್ನು 2ಜಿ, 3ಜಿ, 4ಜಿ ಹೀಗೆ ಯಾವುದೇ ಮಾಡೆಲ್‌ನ ಸೆಟ್ ಉಳ್ಳವರು ತಮ್ಮ ಡಿವೈಸ್‌ನಲ್ಲಿ ಪಡೆದುಕೊಳ್ಳಬಹುದಾಗಿದ್ದು, ಮಾರುಕಟ್ಟೆಯಲ್ಲಿ ಈ ಆಫರ್ ಈಗ ಬಿಸಿ ದೋಸೆಯಂತೆ ಮಾರಾಟವಾಗುತ್ತಿದೆ ಎಂದವರು ಹರ್ಷ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ತಾನೇ ಕಂಪೆನಿಯು ಹೆಚ್ಚು ಆರ್ಥಿಕವಾಗಿ ಲಾಭ ಹೊಂದಿರುವ ಮತ್ತು ಕೈಗೆಟಕುವ ಮೊದಲ ರಿಚಾರ್ಜ್ ಕೂಪನ್ ಅನ್ನು ರೂ 348 ಕ್ಕೆ ಪ್ರಸ್ತುಪಡಿಸಿದ್ದು ಯುಪಿ (ಉತ್ತರ ಪ್ರದೇಶದ) ಗ್ರಾಹಕರು ಈ ಕೊಡುಗೆ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಈ ಹೊಸ ಯೋಜನೆಯು ಅನಿಯಮಿತ ಕರೆಗಳನ್ನು ಒದಗಿಸುತ್ತಿದ್ದು (ಲೋಕಲ್ ಮತ್ತು ಎಸ್‌ಟಿಡಿ) 84 ದಿನಗಳಿಗಾಗಿ 3 ಜಿ ಡೇಟಾದ 1 ಜಿಬಿಯನ್ನು ನೀಡಲಿದೆ. ಏರ್‌ಸೆಲ್‌ನ ಯಾವುದೇ ಗ್ರಾಹಕರು ತಮ್ಮ ಹ್ಯಾಂಡ್‌ಸೆಟ್‌ನಲ್ಲಿ ಯೋಜನೆಯನ್ನು ಪಡೆದುಕೊಳ್ಳಬಹುದಾಗಿದೆ.

ಇದೇ ಸಮಯದಲ್ಲಿ ರಿಲಾಯನ್ಸ್ ಜಿಯೋ ಪ್ರಿಪೈಡ್ ಹಾಗೂ ಪೋಸ್ಟ್‌ಪೇಡ್ ಪ್ಲಾನ್‌ಗಳನ್ನು ಪ್ರಸ್ತುತಪಡಿಸಿದ್ದು, ಸಮ್ಮರ್ ಸರ್‌ಪ್ರೈಸ್ ಮತ್ತು ಧನ್ ಧನಾ ಆಫರ್‌ ಇನ್ನೇನು ಮುಗಿಯುವ ಹಂತದಲ್ಲಿದೆ. ಇನ್ನಷ್ಟು ಆಫರ್‌ಗಳನ್ನು ಪಡೆದುಕೊಳ್ಳಲು ಬಳಕೆದಾರರು ರಿಚಾರ್ಜ್ ಮಾಡಬೇಕಾಗಿದೆ.Read more about:
English summary
The new plan will offer unlimited calls (Local & STD) and 1GB of 3G data per day for 84 days.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot