Home
ಸುದ್ದಿಜಾಲ

Airtel: ಅಗ್ಗದ ಬೆಲೆ, 3GB ಡೇಟಾ, ಅನ್‌ಲಿಮಿಟೆಡ್‌ ಕಾಲ್ಸ್‌.. ಹೊಸ ಏರ್‌ಟೆಲ್ ಪ್ಲಾನ್‌ಗಳಿವು! ಇಲ್ಲಿದೆ ಸಂಪೂರ್ಣ ಪಟ್ಟಿ

Airtel prepaid recharge plans 2025: ಇವು ಏರ್‌ಟೆಲ್‌ನ ಹೊಸ ಪ್ಲಾನ್‌ಗಳು. ಕಂಪನಿಯು 28 ದಿನಗಳ ವ್ಯಾಲಿಡಿಟಿಯೊಂದಿಗೆ ಈ ರೀಚಾರ್ಜ್‌ ಯೋಜನೆಗಳನ್ನು ಪರಿಸಯಿಸಿದೆ. ಹೌದು, ಏರ್‌ಟೆಲ್ ತನ್ನ ಪ್ರಿಪೇಯ್ಡ್ ಗ್ರಾಹಕರ ವಿವಿಧ ಅಗತ್ಯಗಳಿಗೆ ಅನುಗುಣವಾಗಿ ಹಲವು ಯೋಜನೆಗಳನ್ನು ತಂದಿದೆ. ಇವುಗಳಲ್ಲಿ 28 ದಿನಗಳ ವ್ಯಾಲಿಡಿಟಿ ಯೋಜನೆಗಳು ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿವೆ. ಈ ಜನಪ್ರಿಯ ಯೋಜನೆಗಳು ಬಳಕೆದಾರರಿಗೆ ಹೆಚ್ಚು ಪ್ರಯೋಜನಕಾರಿಯಾಗಿವೆ. ಪ್ರತಿ ತಿಂಗಳು ನಿಗದಿತ ಬಜೆಟ್‌ನಲ್ಲಿ ಕರೆ, ಡೇಟಾ ಮತ್ತು ಎಸ್‌ಎಂಎಸ್ ಸೌಲಭ್ಯಗಳನ್ನು ಪಡೆಯಲು ಬಯಸುವ ಬಳಕೆದಾರರಿಗೆ ಈ ಯೋಜನೆಗಳು ಉತ್ತಮ ಆಯ್ಕೆಯಾಗಿವೆ.

ಬಹುತೇಕ ಏರ್‌ಟೆಲ್ ಬಳಕೆದಾರರು ಈ ಯೋಜನೆಗಳನ್ನು ಇಷ್ಟಪಡುತ್ತಾರೆ. ಕಾರಣ ಅವು ತುಂಬಾ ದುಬಾರಿಯಲ್ಲ. ದೀರ್ಘಾವಧಿಯ ರೀಚಾರ್ಜ್‌ನ ತೊಂದರೆ ಇರುವುದಿಲ್ಲ. ನೀವು ಒಂದು ತಿಂಗಳಿಗೆ ಸಮತೋಲಿತ ಮತ್ತು ನಿಮ್ಮ ಬಜೆಟ್‌ಗೆ ತಕ್ಕಂತೆ ಪ್ರಿಪೇಯ್ಡ್ ಪ್ಲಾನ್ ಹುಡುಕುತ್ತಿದ್ದರೆ, ಏರ್‌ಟೆಲ್‌ನ 28 ದಿನಗಳ ವ್ಯಾಲಿಡಿಟಿಯ ಈ ಯೋಜನೆಗಳು (Airtel Recharge Plan 28 Days) ನಿಮಗೆ ಉತ್ತಮ ಆಯ್ಕೆಯಾಗಿವೆ. ಈ ಪಟ್ಟಿಯಲ್ಲಿರುವ ಟಾಪ್ ಯೋಜನೆಗಳು ಮತ್ತು ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

Airtel: ಹೊಸ ಏರ್‌ಟೆಲ್ ಪ್ಲಾನ್‌ಗಳಿವು! ಅಗ್ಗದ ಬೆಲೆ, 3GB ಡೇಟಾ.. ಪಟ್ಟಿ ನೋಡಿ

28 ದಿನಗಳ ಹೊಸ ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌ಗಳಿವು

1. ರೂ. 199 ರೀಚಾರ್ಜ್ ಯೋಜನೆ

2GB ಡೇಟಾ, ಅನಿಯಮಿತ ಕರೆ, ಪ್ರತಿದಿನ 100 ಎಸ್‌ಎಂಎಸ್, ವ್ಯಾಲಿಡಿಟಿ 28 ದಿನಗಳು.

2. ರೂ. 299 ರೀಚಾರ್ಜ್ ಯೋಜನೆ

ಪ್ರತಿದಿನ 1GB ಡೇಟಾ, ಅನಿಯಮಿತ ಕರೆ, ಪ್ರತಿದಿನ 100 ಎಸ್‌ಎಂಎಸ್, 28 ದಿನಗಳ ವ್ಯಾಲಿಡಿಟಿ.

3. ರೂ. 301 ರೀಚಾರ್ಜ್ ಯೋಜನೆ

3 ತಿಂಗಳು ಜಿಯೋ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ, ಪ್ರತಿದಿನ 1GB ಡೇಟಾ, ಪ್ರತಿದಿನ 100 ಎಸ್‌ಎಂಎಸ್, ಉಚಿತ ಕರೆ, ವ್ಯಾಲಿಡಿಟಿ 28 ದಿನಗಳು.

4. ರೂ. 349 ರೀಚಾರ್ಜ್ ಯೋಜನೆ

ಪ್ರತಿದಿನ 1.5GB ಡೇಟಾ, ಅನಿಯಮಿತ ಕರೆ, ಪ್ರತಿದಿನ 100 ಎಸ್‌ಎಂಎಸ್, 28 ದಿನಗಳ ವ್ಯಾಲಿಡಿಟಿ.

5. ರೂ. 398 ರೀಚಾರ್ಜ್ ಯೋಜನೆ

ಪ್ರತಿದಿನ 2GB ಡೇಟಾ, ಅನಿಯಮಿತ ಕರೆ, ಪ್ರತಿದಿನ 100 ಎಸ್‌ಎಂಎಸ್, 28 ದಿನಗಳ ವ್ಯಾಲಿಡಿಟಿ

6. ರೂ. 409 ರೀಚಾರ್ಜ್ ಯೋಜನೆ

ಪ್ರತಿದಿನ 2.5GB ಡೇಟಾ, ಅನಿಯಮಿತ ಕರೆ, ಪ್ರತಿದಿನ 100 ಎಸ್‌ಎಂಎಸ್, 28 ದಿನಗಳ ವ್ಯಾಲಿಡಿಟಿ.

7. ರೂ. 449 ರೀಚಾರ್ಜ್ ಯೋಜನೆ

ಪ್ರತಿದಿನ 3GB ಡೇಟಾ, ಅನಿಯಮಿತ ಕರೆ, ಏರ್‌ಟೆಲ್ ಎಕ್ಸ್‌ಟ್ರೀಮ್, ಪ್ರತಿದಿನ 100 ಎಸ್‌ಎಂಎಸ್, 28 ದಿನಗಳ ವ್ಯಾಲಿಡಿಟಿ.

8. ರೂ. 549 ರೀಚಾರ್ಜ್ ಯೋಜನೆ

ಪ್ರತಿದಿನ 3GB ಡೇಟಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ, ಅನಿಯಮಿತ ಕರೆ, ಪ್ರತಿದಿನ 100 ಎಸ್‌ಎಂಎಸ್, 28 ದಿನಗಳ ವ್ಯಾಲಿಡಿಟಿ.

ಏರ್‌ಟೆಲ್ ತನ್ನ ಗ್ರಾಹಕರಿಗೆ ನೆಟ್‌ವರ್ಕ್ ಕವರೇಜ್ ನಕ್ಷೆಯಲ್ಲಿ 2G, 4G ಮತ್ತು 5G ಸಂಪರ್ಕ ಪರಿಶೀಲಿಸುವ ಆಯ್ಕೆ ನೀಡಿದೆ. ನೀವು ಏರ್‌ಟೆಲ್ ಸಿಮ್ ಬಳಸುತ್ತಿದ್ದೀರಾ ಅಂದುಕೊಳ್ಳಿ. ನಿಮ್ಮ ಪ್ರದೇಶದಲ್ಲಿ ನೆಟ್‌ವರ್ಕ್ ಎಷ್ಟು ಪ್ರಬಲವಾಗಿದೆ ಎಂದು ತಿಳಿಯಲು ಬಯಸಿದರೆ, ನೀವು ಸುಲಭವಾಗಿ ಪರಿಶೀಲಿಸಬಹುದು. ಇದಕ್ಕಾಗಿ ನೀವು airtel.in/wirelesscoverage ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ನಿಮ್ಮ ಪ್ರದೇಶದಲ್ಲಿ ಲಭ್ಯವಿರುವ ನೆಟ್‌ವರ್ಕ್ ವ್ಯಾಪ್ತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು. ಈ ಮೂಲಕ ನಿಮಗೆ ಯಾವ ನೆಟ್‌ವರ್ಕ್ ಉತ್ತಮ ಎಂದು ತಿಳಿಯಬಹುದು.

28 ದಿನಗಳ ಏರ್‌ಟೆಲ್ ರೀಚಾರ್ಜ್ ಯೋಜನೆಗಳ ಪ್ರಯೋಜನಗಳು

ಏರ್‌ಟೆಲ್ 199 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆ

ಏರ್‌ಟೆಲ್ 199 ರೂ. ರೀಚಾರ್ಜ್ ಯೋಜನೆಯು ಅತ್ಯಂತ ಮೂಲಭೂತ ರೀಚಾರ್ಜ್ ಆಗಿದೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಇದು ಬಳಕೆದಾರರಿಗೆ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಧ್ವನಿ ಕರೆಗಳು (ಸ್ಥಳೀಯ / ಎಸ್‌ಟಿಡಿ), ನಿತ್ಯ 100 ಎಸ್‌ಎಂಎಸ್, 2 GB ಡೇಟಾ, ಉಚಿತ ವಿಂಕ್ ಮ್ಯೂಸಿಕ್‌ ಚಂದಾದಾರಿಕೆ ಮತ್ತು ಉಚಿತ ಹಲೋಟ್ಯೂನ್ಸ್‌ ಪ್ರವೇಶ ಒದಗಿಸುತ್ತದೆ.

ಏರ್‌ಟೆಲ್ 299 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆ

ಏರ್‌ಟೆಲ್ 299 ರೂ. ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರು ಪ್ರತಿದಿನ 1GB ಡೇಟಾವನ್ನು ಪಡೆಯಬಹುದು. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದಲ್ಲದೆ, ಉಳಿದ ಪ್ರಯೋಜನಗಳು 179 ರೂ. ಪ್ರಿಪೇಯ್ಡ್ ಪ್ಯಾಕ್‌ನಂತೆಯೇ ಇರುತ್ತವೆ. ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಧ್ವನಿ ಕರೆಗಳು (ಸ್ಥಳೀಯ / ಎಸ್‌ಟಿಡಿ), ನಿತ್ಯ 100 ಎಸ್‌ಎಂಎಸ್, 2 GB ಡೇಟಾ, ಉಚಿತ ವಿಂಕ್ ಮ್ಯೂಸಿಕ್‌ ಚಂದಾದಾರಿಕೆ ಮತ್ತು ಉಚಿತ ಹಲೋಟ್ಯೂನ್ಸ್‌ ಪ್ರವೇಶ ನೀಡುತ್ತದೆ.

ಏರ್‌ಟೆಲ್‌ನ 301 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆ

ಏರ್‌ಟೆಲ್‌ನ 301 ರೂ. ರೀಚಾರ್ಜ್ ಯೋಜನೆಯು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 1GB ಡೇಟಾ ಸಿಗುತ್ತದೆ. ಇದು 3 ತಿಂಗಳವರೆಗೆ ಉಚಿತ ಜಿಯೋ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ನೀಡುತ್ತದೆ. ಅಲ್ಲದೆ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್ ಸೌಲಭ್ಯ ಪಡೆಯಬಹುದು.

ಏರ್‌ಟೆಲ್ 349 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆ

ಏರ್‌ಟೆಲ್ 349 ರೂ. ರೀಚಾರ್ಜ್ ಯೋಜನೆಯು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್ ಪ್ರತಿದಿನ 1.5GB ಡೇಟಾವನ್ನು ನೀಡುತ್ತದೆ. ಇದಲ್ಲದೆ, ಈ ರೀಚಾರ್ಜ್ ಪ್ಲಾನ್ ಅನಿಯಮಿತ ಧ್ವನಿ ಕರೆಗಳು, ಪ್ರತಿದಿನ 100 ಎಸ್‌ಎಂಎಸ್‌ಗಳು, ಎಕ್ಸ್‌ಟ್ರೀಮ್ ಮೊಬೈಲ್ ಪ್ಯಾಕ್ ಮತ್ತು ವಿಂಕ್ ಮ್ಯೂಸಿಕ್‌ಗೆ ಉಚಿತ ಪ್ರವೇಶವನ್ನು ಸಹ ನೀಡುತ್ತದೆ.

ಏರ್‌ಟೆಲ್‌ನ 398 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆ

ಏರ್‌ಟೆಲ್‌ನ 398 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದು 28 ದಿನಗಳ ಜಿಯೋಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಸೌಲಭ್ಯ ನೀಡುತ್ತದೆ. ಈ ಯೋಜನೆಯು ಪ್ರತಿದಿನ 2GB ಡೇಟಾ, ಉಚಿತ ಅನಿಯಮಿತ ಕರೆ ಮತ್ತು ನಿತ್ಯ 100 ಎಸ್‌ಎಂಎಸ್‌ (SMS) ಸೌಲಭ್ಯ ಸಹ ನೀಡುತ್ತದೆ.

ಏರ್‌ಟೆಲ್ 409 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆ

ಏರ್‌ಟೆಲ್ 409 ರೂ. ರೀಚಾರ್ಜ್ ಯೋಜನೆಯು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್ ನಿತ್ಯ 2.5GB ಡೇಟಾವನ್ನು ನೀಡುತ್ತದೆ. ಇದಲ್ಲದೆ, ರೀಚಾರ್ಜ್ ಅನಿಯಮಿತ ಧ್ವನಿ ಕರೆಗಳು, ಪ್ರತಿದಿನ 100 ಎಸ್‌ಎಂಎಸ್‌, ಎಕ್ಸ್‌ಟ್ರೀಮ್ ಮೊಬೈಲ್ ಪ್ಯಾಕ್ ಮತ್ತು ಉಚಿತ ವಿಂಕ್ ಮ್ಯೂಸಿಕ್‌ಗೆ ಪ್ರವೇಶವನ್ನು ಸಹ ನೀಡುತ್ತದೆ.

ಏರ್‌ಟೆಲ್ 449 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆ

ಏರ್‌ಟೆಲ್ 449 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಡೇಟಾ ವಿಷಯದಲ್ಲಿ ಇನ್ನೂ ಉತ್ತಮವಾಗಿದೆ. ಈ ಪ್ಲಾನ್‌ ಮೂಲಕ ಬಳಕೆದಾರರು ನಿತ್ಯ 3GB ಡೇಟಾವನ್ನು ಪಡೆಯುತ್ತಾರೆ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದಲ್ಲದೆ, ಈ ಯೋಜನೆಯು ಉಚಿತ ಧ್ವನಿ ಕರೆಗಳು, ನಿತ್ಯ 100 ಎಸ್‌ಎಂಎಸ್‌ ಮತ್ತು ವಿಂಕ್ ಮ್ಯೂಸಿಕ್ ಹಾಗೂ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮೊಬೈಲ್ ಆಪ್‌ ಸೇರಿದಂತೆ ಸ್ಟ್ರೀಮಿಂಗ್ ಸೇವೆಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.

ಏರ್‌ಟೆಲ್ 549 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆ

ಏರ್‌ಟೆಲ್ 549 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಈ ಪ್ಲಾನ್ ನಿತ್ಯ 3GB ಡೇಟಾ ಸೌಲಭ್ಯ ಒದಗಿಸುತ್ತದೆ. ಇದಲ್ಲದೆ, ಈ ರೀಚಾರ್ಜ್ ಯೋಜನೆಯು ಅನಿಯಮಿತ ಧ್ವನಿ ಕರೆಗಳು, ಪ್ರತಿದಿನ 100 ಎಸ್‌ಎಂಎಸ್, ಎಕ್ಸ್‌ಟ್ರೀಮ್ ಮೊಬೈಲ್ ಪ್ಯಾಕ್ ಮತ್ತು ಉಚಿತ ವಿಂಕ್ ಮ್ಯೂಸಿಕ್‌ಗೆ ಪ್ರವೇಶವನ್ನು ಸಹ ನೀಡುತ್ತದೆ. ಇದರೊಂದಿಗೆ 3 ತಿಂಗಳವರೆಗೆ ಜಿಯೋಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆ ಲಭ್ಯವಿದೆ.

Best Mobiles in India

English summary
Airtel 28 days validity prepaid recharge plans 2025: check prices, Offers, data, validity and more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+