3ಜಿ ತಂತ್ರಜ್ಞಾನಕ್ಕೆ ಫುಲ್ ಸ್ಟಾಪ್?!..ವಿಶ್ವದಲ್ಲೇ ಏರ್‌ಟೆಲ್‌ನ ಮೊದಲ ಹೆಜ್ಜೆ?

|

ಜಾಗತಿಕವಾಗಿ 3ಜಿ ತಂತ್ರಜ್ಞಾನವನ್ನು ಹೊರಹಾಕಿದ ವಿಶ್ವದ ಮೊದಲ ಟೆಲಿಕಾಂ ಆಪರೇಟರ್ ಆಗಿ ಏರ್‌ಟೆಲ್ ಹೊರಹೊಮ್ಮಿದೆಯೇ?. ಹೌದು, ಎನ್ನುತ್ತಿವೆ ವರದಿಗಳು.! ಕೋಲ್ಕತ್ತಾದಲ್ಲಿ 3ಜಿ ಸೇವೆಗಳನ್ನು ಹಂತಹಂತವಾಗಿ ಕೊನೆಗೊಳಿಸುವ ಕ್ರಮವನ್ನು ಏರ್‌ಟೆಲ್ ಪ್ರಾರಂಭಿಸಿದ್ದು, ಕೋಲ್ಕತ್ತಾದಲ್ಲಿ 3ಜಿ ಗ್ರಾಹಕರಿಗೆ ಸೇವೆಗಳನ್ನು ನೀಡಲು ಬಳಸಲಾಗಿದ್ದ 900 ಮೆಗಾಹರ್ಟ್ಸ್ ಸ್ಪೆಕ್ಟ್ರಮ್ ಅನ್ನು ಈಗ 4ಜಿ ಸೇವೆಗಳಿಗೆ ಅಪ್‌ಡೇಟ್ ಮಾಡುತ್ತಿದೆ. ಗ್ರಾಹಕರು ತಕ್ಷಣ 4ಜಿ ಇಂಟರ್ನೆಟ್ ಸೇವೆಗೆ ಬದಲಾಗುವಂತೆ ಅದು ತನ್ನ ಗ್ರಾಹಕರನ್ನು ಪ್ರೋತ್ಸಾಹಿಸುತ್ತಿದೆ.

3ಜಿ ತಂತ್ರಜ್ಞಾನಕ್ಕೆ ಫುಲ್ ಸ್ಟಾಪ್?!..ವಿಶ್ವದಲ್ಲೇ ಏರ್‌ಟೆಲ್‌ನ ಮೊದಲ ಹೆಜ್ಜೆ?

ದೇಶದಲ್ಲಿರುವ ಅತ್ಯುತ್ತಮ 4ಜಿ ಆಪರೇಟರ್‌ಗಳಲ್ಲಿ ಒಂದಾಗಿರುವ ಏರ್‌ಟೆಲ್ ತನ್ನ ಸೇವೆಗಳನ್ನು ಸುಧಾರಿಸಲು ಸಲುವಾಗಿ 3ಜಿ ಸೇವೆಗಳನ್ನು ಸ್ಥಗಿತಗೊಳಿಸುವ ಕಾರ್ಯಕ್ಕೆ ಚಾಲನೆನೀಡಿದೆ. ಶುಕ್ರವಾರ ಕೋಲ್ಕತಾದಲ್ಲಿ 3ಜಿ ಸೇವೆಯನ್ನು ಸ್ಧಗಿತಗೊಳಿಸಿಸುವ ಬಗ್ಗೆ ಹೇಳಿರುವ ಏರ್‌ಟೆಲ್, ಅದಕ್ಕಾಗಿ ಬಳಸುತ್ತಿದ್ದ 900MHz ಸ್ಪೆಕ್ಟ್ರಂ ಅನ್ನು 4ಜಿ ಸೇವೆಗಾಗಿ ಮರುರೂಪಿಸಲಾಗುತ್ತಿದೆ ಎಂದು ತಿಳಿಸಿದೆ. ಇದರೊಂದಿಗೆ 2011ರಲ್ಲಿ ಭಾರತದಲ್ಲಿ ಚಾಲನೆಗೆ ಬಂದಿದ್ದ 3ಜಿ ತಂತ್ರಜ್ಞಾನವು ಅತ್ಯಂತ ವೇಗವಾಗಿ ತೆರೆಮರೆಗೆ ಸರಿಯುವ ಲಕ್ಷಣಗಳು ಗೋಚರಿಸತೊಡಗಿದೆ.

ಆಧುನಿಕ ಜಗತ್ತು 5G ತಂತ್ರಜ್ಞಾನಕ್ಕಾಗಿ ಸಿದ್ಧವಾಗುತ್ತಿದೆ. ಆದರೆ, ಪ್ರಸ್ತುತ ದೇಶದ ಟೆಲಿಕಾಂ ಮಾರುಕಟ್ಟೆ 4ಜಿ ಸಾಧನಗಳ ಕಡೆಗೆ ಅಗಾಧವಾಗಿ ಆಕರ್ಷಿತವಾಗಿದೆ. ಬಹುತೇಕ ಎಲ್ಲಾ ಟೆಲಿಕಾಂ ಕಂಪೆನಿಗಳು ಈಗ ಅತ್ಯಾಕರ್ಷಕ ಯೋಜನೆಗಳು ಮತ್ತು ಬೆಲೆಗಳೊಂದಿಗೆ ಗ್ರಾಹಕರನ್ನು ಗೆಲ್ಲಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿವೆ. ಈ ಸಮಯದಲ್ಲಿ ಏರ್‌ಟೆಲ್ ಬಹುಶಃ ಜಾಗತಿಕವಾಗಿ 3 ಜಿ ತಂತ್ರಜ್ಞಾನವನ್ನು ಹೊರಹಾಕಿದ ವಿಶ್ವದ ಮೊಟ್ಟಮೊದಲ ಮೊದಲ ಟೆಲಿಕಾಂ ಆಪರೇಟರ್ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

3ಜಿ ತಂತ್ರಜ್ಞಾನಕ್ಕೆ ಫುಲ್ ಸ್ಟಾಪ್?!..ವಿಶ್ವದಲ್ಲೇ ಏರ್‌ಟೆಲ್‌ನ ಮೊದಲ ಹೆಜ್ಜೆ?

ಉತ್ತಮ ಗುಣಮಟ್ಟದ ಸೇವೆಯ ಅನುಭವದೊಂದಿಗೆ ಗ್ರಾಹಕರಿಗೆ ಗುಣಮಟ್ಟದ ಸೇವೆ ಸಲ್ಲಿಸುವತ್ತ ಗಮನಹರಿಸಿದ್ದೇವೆ. ಹಾಗಾಗಿ, ಭಾರತದಾದ್ಯಂತ 3ಜಿ ಸ್ಪೆಕ್ಟ್ರಮ್ ಅನ್ನು 4Gಗೆ ಹಂತ ಹಂತವಾಗಿ ನಿಯೋಜಿಸಲು ನಾವು ಯೋಜಿಸಿದ್ದೇವೆ ಎಂದು ಭಾರ್ತಿ ಏರ್‌ಟೆಲ್ ಮುಖ್ಯ ತಾಂತ್ರಿಕ ಅಧಿಕಾರಿ ರಣದೀಪ್ ಶೇಖನ್ ತಿಳಿಸಿದ್ದಾರೆ. ಇನ್ನು ಮುಂದಿನ ಆರು ತಿಂಗಳಲ್ಲೇ ಏರ್‌ಟೆಲ್ ತನ್ನ 3ಜಿ ಸೇವೆಯನ್ನು ಸ್ಥಗಿತಗೊಳಿಸಿ, ಎಲ್ಲ ಗ್ರಾಹಕರೂ 4ಜಿ ಸೇವೆ ಬಳಸುವಂತೆ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ.

ಶಾಕಿಂಗ್ ನ್ಯೂಸ್!..ವಾಟ್ಸ್ಆಪ್ ಬ್ಯಾನ್?..ಸರ್ಕಾರವೇ ತರುತ್ತಿದೆ ಹೊಸ ಆಪ್!ಶಾಕಿಂಗ್ ನ್ಯೂಸ್!..ವಾಟ್ಸ್ಆಪ್ ಬ್ಯಾನ್?..ಸರ್ಕಾರವೇ ತರುತ್ತಿದೆ ಹೊಸ ಆಪ್!

ಇದರೊಂದಿಗೆ, 2011ರಲ್ಲಿ ಭಾರತದಲ್ಲಿ ಚಾಲನೆಗೆ ಬಂದಿದ್ದ 3ಜಿ ತಂತ್ರಜ್ಞಾನವು ಅತ್ಯಂತ ವೇಗವಾಗಿ ತೆರೆಮರೆಗೆ ಸರಿಯುವ ಲಕ್ಷಣಗಳು ಗೋಚರಿಸತೊಡಗಿದೆ. 4ಜಿ ಇಂಟರ್ನೆಟ್ ವೇಗಕ್ಕೆ ಭಾರತದ ಟೆಲಿಕಾಂ ಪ್ರಪಂಚ ಈಗಾಗಲೇ ಬಿರುಗಾಳಿ ಬೀಸಿದಂತೆ ಬದಲಾಗಿದೆ. ವಿಶ್ವದಲ್ಲೇ ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಡೇಟಾ ದೊರೆಯುತ್ತಿದೆ ಮತ್ತು ಹೆಚ್ಚು ಡೇಟಾ ಬಳಕೆ ಮಾಡುತ್ತಿರುವ ರಾಷ್ಟ್ರ ಕೂಡ ಭಾರತವೇ ಆಗಿದೆ. ಇನ್ನು 4ಜಿಗಾಗಿ ಉತ್ತಮ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ಟೆಲಿಕಾಂ ಮತ್ತಷ್ಟು ಅಭಿವೃದ್ದಿಯನ್ನು ಕಾಣಲಿದೆ ಎಂದು ಹೇಳಬಹುದು.

Best Mobiles in India

English summary
we plan to re-farm all of our 3G spectrum across India and deploy it for 4G in a phased manner. Also, it complements the smartphone ecosystem, which has now gravitated overwhelmingly towards 4G only devices," said Randeep Sekhon, CTO - Bharti Airtel. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X