Subscribe to Gizbot

ಏರ್‌ಟೆಲ್‌ ಮೇಲೆ ಹೇರಲಾಗಿದ್ದ ಇ–ಕೆವೈಸಿ ರದ್ದು ಆದೇಶ ವಾಪಸ್!!..ಗ್ರಾಹಕರು ನಿರಾಳ!!

Written By:

ಆಧಾರ್ ಕಾಯ್ದೆ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ, ಭಾರತದ ಪ್ರಮುಖ ಟೆಲಿಕಾಂ ಭಾರ್ತಿ ಏರ್‌ಟೆಲ್‌ ಮೇಲೆ ಹೇರಲಾಗಿದ್ದ ಇ-ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಪರವಾನಗಿ ರದ್ದು ಆದೇಶವನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಐಡಿಎಐ) ಹಿಂದಕ್ಕೆ ಪಡೆದಿದೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ.!

ಆಧಾರ್ ಕಾಯ್ದೆ ಅನ್ವಯ ಮೂರು ತಿಂಗಳಿಗೆ ಒಮ್ಮೆ ಸಮಗ್ರ ವರದಿಯನ್ನು ನೀಡಬೇಕು. ಯುಐಡಿಎಐ ನೀಡುವ ನಿರ್ದೇಶನಕ್ಕೆ ಬದ್ಧವಾಗಿರಬೇಕು ಎನ್ನುವ ಷರತ್ತುಗಳೊಂದಿಗೆ ಏರ್‌ಟೆಲ್‌ಗೆ ಇ-ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಬಳಸಲು ಅನುಮತಿ ನೀಡಲಾಗಿದೆ. ಹಾಗಾಗಿ, ಏರ್‌ಟೆಲ್ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡಲು ಮತ್ತೆ ಚಾಲನೆ ಸಿಗಲಿದೆ.!

ಏರ್‌ಟೆಲ್‌ ಮೇಲೆ ಹೇರಲಾಗಿದ್ದ ಇ–ಕೆವೈಸಿ ರದ್ದು ಆದೇಶ ವಾಪಸ್!!

ಏರ್‌ಟೆಲ್ ಸಂಸ್ಥೆಯು ನಿಯಮಗಳನ್ನು ಪಾಲಿಸಿದ್ದು, ನಿರಂತರವಾಗಿ ಪ್ರಾಧಿಕಾರಕ್ಕೆ ಮಾಹಿತಿ ನೀಡಿದೆ. ಹೀಗಾಗಿ ಮೊಬೈಲ್‌ ಸಂಖ್ಯೆಗೆ ಆಧಾರ್‌ ಜೋಡಣೆಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ. ಆದರೆ, ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌ನ 'ಇ-ಕೆವೈಸಿ' ರದ್ದು ಆದೇಶವನ್ನು ಹಿಂದಕ್ಕೆ ಪಡೆದಿಲ್ಲವೆಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಇದರಿಂದಾಗಿ, ಏರ್‌ಟೆಲ್ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡಲು ಮತ್ತೆ ಚಾಲನೆ ಸಿಗಲಿದೆಯಾದರೂ, ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌ನ 'ಇ-ಕೆವೈಸಿ' ರದ್ದು ಆದೇಶವನ್ನು ಹಿಂದಕ್ಕೆ ಪಡೆದಿಲ್ಲವಾದುದರಿಂದ, ಆಧಾರ್ ಸಂಖ್ಯೆ ಬಳಸಿ ಏರ್‌ಟೆಲ್‌ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಯಾವುದೇ ಹೊಸ ಖಾತೆ ತೆರೆಯಲೂ ಆಗುವುದಿಲ್ಲ ಎಂದು ತಿಳಿದುಬಂದಿದೆ.!

ಏರ್‌ಟೆಲ್‌ ಮೇಲೆ ಹೇರಲಾಗಿದ್ದ ಇ–ಕೆವೈಸಿ ರದ್ದು ಆದೇಶ ವಾಪಸ್!!

ಮೊಬೈಲ್‌ ಸಂಖ್ಯೆಗೆ ಆಧಾರ್ ಜೋಡಿಸುವಾಗ ಗ್ರಾಹಕರಿಗೆ ತಿಳಿಸದೇ ಪೇಮೆಂಟ್ಸ್ ಬ್ಯಾಂಕ್‌ ಖಾತೆಯನ್ನೂ ತೆರೆಯಲಾಗುತ್ತಿದೆ ಎಂಬ ಆಧಾರ್‌ ಕಾಯ್ದೆ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ, 'ಯುಐಡಿಎಐ' 2017ರ ಡಿಸೆಂಬರ್‌ 16 ರಂದು ಏರ್‌ಟೆಲ್ ಮತ್ತು ಏರ್‌ಟೆಲ್‌ ಪೇಮೆಂಟ್ಸ್ ಬ್ಯಾಂಕ್‌ನ ಇ-ಕೆವೈಸಿ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದು ಮಾಡಿತ್ತು.

English summary
Bharti Airtel’s authorisation to conduct Aadhaar-based electronic verification of its mobile subscribers has been restored, but that of its. payments bank remains suspended. . to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot