Home
ಸುದ್ದಿಜಾಲ

IPL ಆರಂಭಕ್ಕೆ ಒಂದು ದಿನ ಮೊದಲು ಏರ್‌ಟೆಲ್, VI ನಿಂದ ಹೊಸ ರೀಚಾರ್ಜ್ ಪ್ಲಾನ್ಸ್ ರಿಲೀಸ್!

ಭಾರತೀಯರ ಕ್ರೀಡಾ ಹಬ್ಬ ಎಂದೇ ಕರೆಸಿಕೊಳ್ಳುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಆರಂಭಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (Vi) ಎರಡೂ ಕಂಪೆನಿಗಳು ತಮ್ಮ ಗ್ರಾಹಕರಿಗೆ ಸಂತೋಷದ ಸುದ್ದಿ ನೀಡಿವೆ. ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ 2025 ಸೀಸನ್‌ಗೆ ಮುಂಚಿತವಾಗಿ ಆಯ್ದ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳಲ್ಲಿ ಹೊಸ ಮನರಂಜನಾ ಪ್ರಯೋಜನಗಳನ್ನು ಘೋಷಿಸಿದ್ದು, ಈ ಎರಡೂ ಟೆಲಿಕಾಂ ಪೂರೈಕೆದಾರರು ಹೊಸ ಆಡ್-ಆನ್ ಪ್ಯಾಕ್‌ಗಳನ್ನು ಪರಿಚಯಿಸಿವೆ. ಜಿಯೋ ತನ್ನ ಗ್ರಾಹಕರಿಗೆ ಐಪಿಎಲ್ ವೀಕ್ಷಿಸಲು ನೆರವಾಗುವಂತಹ ರೀಚಾರ್ಜ್ ಯೋಜನೆಗಳನ್ನು ಒದಗಿಸಿತ್ತು. ಇದೀಗ ಜಿಯೋವನ್ನು ಹಿಂಬಾಲಿಸಿರುವ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಎರಡೂ ಕಂಪೆನಿಗಳು ಕೂಡ ವಿಶೇಷವಾದ ಜಿಯೋಹಾಟ್‌ಸ್ಟಾರ್‌ ಚಂದಾದಾರಿಕೆಯ ಕ್ರಿಕೆಟ್ ಪ್ಯಾಕ್‌ಗಳನ್ನು ಬಿಡುಗಡೆಗೊಳಿಸಿವೆ.

ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯೊಂದಿಗೆ ಏರ್‌ಟೆಲ್, ವೊಡಾಫೋನ್ ಐಡಿಯಾ ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್‌ಗಳು

ಏರ್‌ಟೆಲ್ ತನ್ನ ಗ್ರಾಹಕರಿಗೆ ಜಿಯೋಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆಯೊಂದಿಗೆ ಎರಡು ಹೊಸ ಕ್ರಿಕೆಟ್ ಪ್ಯಾಕ್‌ಗಳನ್ನು ಹೊರತಂದಿದೆ. ಇದರಲ್ಲಿ ಮೊದಲನೆಯದಾಗಿ, ಏರ್‌ಟೆಲ್ ಗ್ರಾಹಕರು 100 ರೂ. ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್ ಖರೀದಿಸುವ ಮೂಲಕ 30 ದಿನಗಳ ಮಾನ್ಯತೆಯೊಂದಿಗೆ ಒಟ್ಟು 5GB ಡೇಟಾವನ್ನು ಮತ್ತು ಜಿಯೋಹಾಟ್‌ಸ್ಟಾರ್‌ OTT ಸ್ಟ್ರೀಮಿಂಗ್ ಸೇವೆಗೆ ಉಚಿತ ಪ್ರವೇಶವನ್ನು ಪಡೆಯಲಿದ್ದಾರೆ. ಹಾಗೆಯೇ, ಏರ್‌ಟೆಲ್‌ನ ಮತ್ತೊಂದು 195 ರೂ. ಯೋಜನೆಯು 15GB ಡೇಟಾವನ್ನು ಜೊತೆಗೆ 90 ದಿನಗಳ ಚಂದಾದಾರಿಕೆಯನ್ನು ನೀಡುತ್ತದೆ. ಈ ಎರಡೂ ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್‌ಗಳು ಕೇವಲ ಡೇಟಾ ವೋಚರ್‌ಗಳಾಗಿವೆ ಮತ್ತು ಕರೆ ಮಾಡುವ ಪ್ರಯೋಜನಗಳನ್ನು ಹೊಂದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಹೀಗಾಗಿ, ಏರ್‌ಟೆಲ್ ಗ್ರಾಹಕರು ಸಕ್ರಿಯ ಬೇಸ್ ರೀಚಾರ್ಜ್ ಪ್ಯಾಕ್ ಹೊಂದಿರಬೇಕಾಗುತ್ತದೆ.

ಇತ್ತ ವೊಡಾಫೋನ್ ಐಡಿಯಾ (Vi) ಕೂಡ ಈಗ ಜಿಯೋಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆಯೊಂದಿಗೆ ಒಂದು ಡೇಟಾ ವೋಚರ್ ಮತ್ತು ಎರಡು ಸ್ವತಂತ್ರ ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್‌ಗಳನ್ನು ಘೋಷಿಸಿದೆ. ನೀವು ವೊಡಾಫೋನ್ ಐಡಿಯಾ ಗ್ರಾಹಕರಾಗಿದ್ದರೆ, IPL 2025 ಅನ್ನು ವೀಕ್ಷಿಸಲು ಅತ್ಯಂತ ಕೈಗೆಟುಕುವ ಮಾರ್ಗವೆಂದರೆ 101 ರೂ. ಗಳ ಡೇಟಾ ವೋಚರ್ ಪಡೆಯಬಹುದು. ಈ ಯೋಜನೆಯು ನಿಮಗೆ ಮೂರು ತಿಂಗಳ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯ ಜೊತೆಗೆ, ಇದು 30 ದಿನಗಳ ಮಾನ್ಯತೆಯ ಅವಧಿಯೊಂದಿಗೆ 5GB ಡೇಟಾವನ್ನು ಸಹ ನೀಡುತ್ತದೆ. ಇದಕ್ಕೂ ಕೂಡ ಸಕ್ರಿಯ ಬೇಸ್ ರೀಚಾರ್ಜ್ ಪ್ಯಾಕ್ ಹೊಂದಿರಬೇಕಾಗುತ್ತದೆ.

IPL ಆರಂಭಕ್ಕೆ ಒಂದು ದಿನ ಮೊದಲು ಏರ್‌ಟೆಲ್, VIನಿಂದ ರೀಚಾರ್ಜ್ ಪ್ಲಾನ್ಸ್ ರಿಲೀಸ್!

ವೊಡಾಫೋನ್ ಐಡಿಯಾ ಗ್ರಾಹಕರಿಗೆ ಸಿಹಿಸುದ್ದಿ ಏನೆಂದರೆ, ಡೇಟಾ ವೋಚರ್‌ಗಳು ಮಾತ್ರವಲ್ಲದೆ, ಪರ್ಯಾಯವಾಗಿ 239 ರೂ. ಮತ್ತು 399 ರೂ. ಪ್ಯಾಕ್‌ಗಳೊಂದಿಗೆ ರೀಚಾರ್ಜ್ ಮಾಡಬಹುದು ಮತ್ತು ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆಯಬಹುದು. ವೊಡಾಫೋನ್ ಐಡಿಯಾ ಗ್ರಾಹಕರು 239 ರೂ. ರೀಚಾರ್ಜ್ ಪ್ಯಾಕ್‌ನಲ್ಲಿ ಅನಿಯಮಿತ ಕರೆ, 2GB ಡೇಟಾ, 300 SMS ಮತ್ತು 28 ದಿನಗಳ ಜಿಯೋಹಾಟ್‌ಸ್ಟಾರ್‌ನಂತಹ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಹಾಗೆಯೇ, ಮತ್ತೊಂದು 399 ರೂ. ಯೋಜನೆಯಲ್ಲಿ ಅನಿಯಮಿತ ಕರೆ, ದಿನಕ್ಕೆ 2GB ಡೇಟಾ, ದಿನಕ್ಕೆ 100 SMS ಜೊತೆಗೆ 28 ದಿನಗಳ ಅವಧಿಯ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡಲಾಗುತ್ತಿದೆ. ಈ ಎರಡೂ ಯೋಜನೆಗಳು ಸ್ವತಂತ್ರ ಪ್ಯಾಕ್‌ಗಳಾಗಿದ್ದು, ಇವು ಕಾರ್ಯನಿರ್ವಹಿಸಲು ಸಕ್ರಿಯ ಬೇಸ್ ಯೋಜನೆಯ ಅಗತ್ಯವಿಲ್ಲ.

ಈ ಮೇಳಿನ ಎಲ್ಲಾ ಯೋಜನೆಗಳ ಮೂಲಕ ನೀವು ಜಿಯೋಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ಗಳ ವಿಲೀನದ ನಂತರ ಭಾರತದಲ್ಲಿ ಇತ್ತೀಚೆಗೆ ಪ್ರಾರಂಭಿಸಲಾದ ಸ್ಟ್ರೀಮಿಂಗ್ ಸೇವೆಯಾದ ಜಿಯೋಹಾಟ್‌ಸ್ಟಾರ್‌ಗೆ ಚಂದಾದಾರಿಕೆಯನ್ನು ಪಡೆಯಬಹುದು. ಇದರಿಂದ ಮುಂಬರುವ ಐಪಿಎಲ್ ಪಂದ್ಯಗಳನ್ನು ಮತ್ತು ಇತರ ಚಲನಚಿತ್ರಗಳು, ಪ್ರದರ್ಶನಗಳು, ಅನಿಮೆ ಮತ್ತು ಸಾಕ್ಷ್ಯಚಿತ್ರಗಳೊಂದಿಗೆ ತಮ್ಮ ಮೊಬೈಲ್ ಮತ್ತು ಟಿವಿಯಲ್ಲಿ 4K ನಲ್ಲಿ ಸ್ಟ್ರೀಮ್ ಮಾಡಬಹುದು.

Best Mobiles in India

English summary
Airtel has launched two new cricket packages that include a complimentary subscription to JioHotstar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+