Subscribe to Gizbot

ಐಫೋನ್‌ 5 ಬಿಡುಗಡೆ ಮಾಡಿದ ಪ್ರಿಯಾಮಣಿ

Posted By: Vijeth
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್‌ 5 ಬಿಡುಗಡೆ ಮಾಡಿದ ಪ್ರಿಯಾಮಣಿ

ಐಫೋನ್‌ 5 ಬಿಡುಗಡೆ ಸಮಾರಂಭ

ಐಫೋನ್‌ 5 ಬಿಡುಗಡೆ ಸಮಾರಂಭ
ಐಫೋನ್‌ 5 ಬಿಡುಗಡೆ ಮಾಡಿದ ಪ್ರಿಯಾಮಣಿ

ಐಫೋನ್‌ 5 ಬಿಡುಗಡೆ ಸಮಾರಂಭ

ಐಫೋನ್‌ 5 ಬಿಡುಗಡೆ ಸಮಾರಂಭ
ಐಫೋನ್‌ 5 ಬಿಡುಗಡೆ ಮಾಡಿದ ಪ್ರಿಯಾಮಣಿ

ಐಫೋನ್‌ 5 ಬಿಡುಗಡೆ ಸಮಾರಂಭ

ಐಫೋನ್‌ 5 ಬಿಡುಗಡೆ ಸಮಾರಂಭ
ಐಫೋನ್‌ 5 ಬಿಡುಗಡೆ ಮಾಡಿದ ಪ್ರಿಯಾಮಣಿ

ಐಫೋನ್‌ 5 ಬಿಡುಗಡೆ ಸಮಾರಂಭ

ಐಫೋನ್‌ 5 ಬಿಡುಗಡೆ ಸಮಾರಂಭ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಆಪಲ್‌ ಸಂಸ್ಥೆಯ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್‌ ಆದಂತಹ ಐಫೋನ್ 5 ನವೆಂಬರ್‌ 2 ರ ಶುಕ್ರವಾರ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದೆ. ಆರನೇ ತಲೆಮಾರಿನ ಸ್ಮಾರ್ಟ್‌ಫೋನ್‌ ಎಂದೇ ಖ್ಯಾತಿ ಪಡೆದಿರುವ ಐಫೋನ್‌ 5 ಭಾರತದಲ್ಲಿನ ಪ್ರಮುಖ ನಾಲ್ಕು ನಗರಗಳಾದ ನವದೆಹಲಿ (ಡಿಎಲ್‌ಎಫ್‌ ಪ್ಲಾಜಾ), ಗುರ್ಗಾಂವ್‌ (ಗಲ್ಲೇರಿಯಾ ಡಿಎಲ್‌ಎಫ್‌ ಫೇಸ್‌ 2), ಮುಂಬೈ (ಇನೊರ್‌ಬಿಟ್‌ ಮಾಲ್‌) ಹಾಗೂ ಬೆಂಗಳೂರು (ಯುಬಿ ಸಿಟಿ) ನಗರಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲಾಯಿತು.

ಬೆಂಗಳೂರಿನ ವಿಠಲ್‌ ಮಲ್ಯಾ ರಸ್ತೆಯಲ್ಲಿರುವ ಯು.ಬಿ ಸಿಟಿಯಲ್ಲಿ ನಡೆದ ಆಪಲ್‌ ಐಫೋನ್‌ 5 ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ಆಗಮಿಸಿದಂತಹ ಮೋಹಕ ಚೆಲುವೆ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ ನೂತನ ಸ್ಮಾರ್ಟ್‌ಫೋನ್‌ ಬಿಡಿಗಡೆ ಮಾಡಿದರು. ಈ ಸಂದರ್ಭದಲ್ಲಿ ಭಾರತೀ ಏರ್ಟೆಲ್‌ ಸಂಸ್ಥೆಯ ಕರ್ನಾಟಕದ ವಿಭಾಗೀಯ ಮುಖ್ಯಸ್ಥರಾದ ರೋಹಿತ್‌ ಮಲ್ಹೋತ್ರಾ ಉಪಸ್ಥಿತರಿದ್ದರು.

ಆಪಲ್‌ ಸಂಸ್ಥೆಯ ನೂತನ ಐಫೋನ್‌ 5 ಸ್ಮಾರ್ಟ್‌ಫೋನ್‌ನ 16ಜಿಬಿ, 32ಜಿಬಿ ಹಾಗೂ 64ಜಿಬಿ ಮಾದರಿಗಳು ಕ್ರಮವಾಗಿ ರೂ. 45,500, ರೂ. 52,500 ಹಾಗೂ ರೂ. 59,500 ದರದಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಯಿತು. ಸಮಾರಂಭದಲ್ಲಿನ ವಿಶೇಷತೆ ಏನೆಂದರೆ ನೂತನ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ 32 ಹಾಗೂ 64 ಜಿಬಿ ಮಾದರಿಯ ಸ್ಮಾರ್ಟ್‌ಫೋನ್ಸ್‌ಗಳು ಸಂಪೂರ್ಣ ಖಾಲಿಯಾಗಿ ಹೋದವು. ಇದಲ್ಲದೆ ನೂತನ ಸ್ಮಾರ್ಟ್‌ಫೋನ್‌ ಖರೀದಿಗಾಗಿ ವಿಶೇಷ ಕೂಪನ್‌ ಕೂಡ ವಿತರಿಸಲಾಗಿತ್ತು ಈ ಕೂಪನ್‌ ಹೊಂದಿದವರು ಮಾತ್ರವಷ್ಟೇ ಐಫೋನ್‌ ಖರೀದಿಸುವ ಅವಕಾಷ ನೀಡಲಾಗಿತ್ತು.

ಕೊನೆಗೂ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ ನೂತನ ಆಪಲ್‌ ಐಫೋನ್‌ 5 ಸ್ಮಾರ್ಟ್‌ಫೋನ್‌ನ ವಿಶೇಷತೆ ಹೀಗಿದೆ.

 • 8-MP ಕ್ಯಾಮೆರಾ ಹಾಗೂ a 5-ಎಲಿಮೆಂಟ್‌ ಲೆನ್ಸ್‌ ಸೇರಿದಂತೆ f/2.4 ಅಪೇಚರ್‌.

 • ಕ್ಯಾಮೆರಾ ಲೆನ್ಸ್‌ಗಳಿಗೆ ಸಪೈರ್‌ ಕವರ್‌ನ ರಕ್ಷಣೆ.

 • ಆಪರೇಟಿಂಗ್‌ ಸಿಸ್ಟಂ: iOS (6)

 • 4-ಇಂಚಿನ ರೆಟಿನಾ ದರ್ಶಕ ಹಾಗೂ 16:9 ಆಸ್ಪೆಕ್ಟ್ಸ್‌ನ ಅಂತರ.

 • 1136 ಬೈ 640 ಪಿಕ್ಸೆಲ್‌ ರೆಸೆಲ್ಯೂಷನ್‌.

 • 7.6mm ಸ್ಲಿಮೆಸ್ಟ್‌ ಐಫೊನ್‌.

 • 4G ಕನೆಕ್ಟಿವಿಟಿ.

 • ನೂತನ A6 ಪ್ರೊಸೆಸರ್.

 • ದ್ವಿಗುಣ ಗ್ರಾಫಿಕ್ಸ್‌ ಸಾಮರ್ತ್ಯ.

 • 1024 MB RAM.

 • 16 GB ಬಿಲ್ಟ್‌ಇನ್‌ ಸ್ಟೋರೇಜ್‌.

 • 3G ಹಾಗೂ Wi-Fi.

 • Li-Po 1440 mAh ಸ್ಟ್ಯಾಂಡರ್ಡ್‌ ಬ್ಯಾಟರಿ.
Read In English...

ಫೋಟೋ ಗ್ಯಾಲರೀ...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot