ಏರ್‌ಟೆಲ್‌ನಿಂದ ದೇಶದಾದ್ಯಂತ ಅನ್‌ಲಿಮಿಟೆಡ್ ಉಚಿತ ಕರೆ ಆಫರ್ ಪ್ರಕಟಣೆː ಕಂಪ್ಲೀಟ್ ಡೀಟೇಲ್ಸ್

By Suneel
|

ಎಲ್ಲಾ ಟೆಲಿಕಾಂ ಆಪರೇಟರ್‌ಗಳು ಸಹ ರಿಲಾಯನ್ಸ್ ಜಿಯೋಗೆ ಪೈಪೋಟಿ ನೀಡಲು ಯತ್ನಿಸುತ್ತಿವೆ. ದೇಶದ ನಂಬರ್‌ ಒನ್‌ ಟೆಲಿಕಾಂ ಆಪರೇಟರ್‌ ಹೆಗ್ಗಳಿಗೆ ಪಡೆದ ಏರ್‌ಟೆಲ್‌ ಸಹ ಕೊನೆಗೂ ಒಂದು ತೀರ್ಮಾನಕ್ಕೆ ಬಂದು ಅನ್‌ಲಿಮಿಟೆಡ್ ಉಚಿತ ಕರೆ ಆಫರ್ ಅನ್ನು ಎರಡು ವಿಶೇಷ ಪ್ಯಾಕ್‌ಗಳ ಮೂಲಕ ಇಂದು ಪ್ರಕಟಣೆ ಮಾಡಿದೆ. ಏರ್‌ಟೆಲ್‌ ಇಂದು ಹಲವು ಸೇವೆಗಳನ್ನು ನೀಡುವ ಎರಡು ಉತ್ತಮ ಆಫರ್‌ ಪ್ಯಾಕ್‌ಗಳನ್ನು ಪ್ರಕಟಣೆ ಮಾಡಿದ್ದು, ರೂ.145 ಮತ್ತು ರೂ.345 ರ ಈ ಪ್ಯಾಕ್‌ಗಳು ಪ್ರಿಪೇಡ್‌ ಗ್ರಾಹಕರಿಗಾಗಿವೆ. ಇದರಲ್ಲಿ ಒಂದು ಪ್ಲಾನ್ ದೇಶದಾದ್ಯಂತ ಅನ್‌ಲಿಮಿಟೆಡ್ ಉಚಿತ ಕರೆ ಆಫರ್ ನೀಡುತ್ತಿದೆ.

ಏರ್‌ಟೆಲ್‌ನಿಂದ ದೇಶದಾದ್ಯಂತ ಅನ್‌ಲಿಮಿಟೆಡ್ ಉಚಿತ ಕರೆ ಆಫರ್ ಪ್ರಕಟಣೆː ಡೀಟೇಲ್ಸ್ǃ


ಏರ್‌ಟೆಲ್‌ ರೂ.145 ಮತ್ತು ರೂ.345 ರ ಪ್ಯಾಕ್‌ಗಳಲ್ಲಿ ನೀಡಲಿರುವ ಆಫರ್‌ಗಳೇನು ಮತ್ತು ರಿಲಾಯನ್ಸ್ ಜಿಯೋ ಟ್ಯಾರಿಫ್‌ ಪ್ಲಾನ್‌ಗಿಂತ ಈ ಪ್ಯಾಕ್‌ಗಳು ಹೇಗೆ ವಿಭಿನ್ನವಾಗಿದೆ ಎಂಬುದನ್ನು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ಬಿಎಸ್‌ಎನ್‌ಎಲ್‌ನಿಂದ ರೂ.149 ಕ್ಕೆ ಅನ್‌ಲಿಮಿಟೆಡ್ ವಾಯ್ಸ್ ಕರೆ ಆಫರ್, 300MB ಡೇಟಾ!

 ರೂ.145 ಪ್ಯಾಕ್‌

ರೂ.145 ಪ್ಯಾಕ್‌

ಏರ್‌ಟೆಲ್‌ನ ರೂ.145 ರ ಪ್ಯಾಕ್‌ ಅಡಿಯಲ್ಲಿ ಗ್ರಾಹಕರು ಅನ್‌ಲಿಮಿಟೆಡ್ ಸ್ಥಳೀಯ ಮತ್ತು ಎಸ್‌ಟಿಡಿ ಏರ್‌ಟೆಲ್‌ ಟು ಏರ್‌ಟೆಲ್‌ ಕರೆ ಜೊತೆಗೆ 300MB 4G ಡೇಟಾ ಪಡೆಯಬಹುದು. ಜೊತೆಗೆ ಈ ಪ್ಯಾಕ್‌ನಲ್ಲಿ ಹೆಚ್ಚುವರಿಯಾಗಿ 50MB ಡೇಟಾವನ್ನು ಬೇಸಿಕ್ ಮೊಬೈಲ್‌ ಬಳಸುವವರು ಪಡೆಯುತ್ತಾರೆ. ಈ ಪ್ಯಾಕ್‌ನ ವ್ಯಾಲಿಡಿಟಿ 28 ದಿನಗಳು. ಆದರೆ ಇದೇ ಸೇವೆಗೆ ರಿಲಾಯನ್ಸ್ ಜಿಯೋ ರೂ.149 ಚಾರ್ಜ್‌ ಮಾಡುತ್ತದೆ. ಜಿಯೋ ಉಚಿತ ಸೇವೆ ಮುಗಿದ ಮೇಲೆ ಮಾರ್ಚ್‌ 31 ರ ನಂತರ ಜಿಯೋ ಗ್ರಾಹಕರು ರೂ.149 ಅನ್ನು ಈ ಸೇವೆಗೆ ಪಾವತಿಸಿದರೆ, ಏರ್‌ಟೆಲ್‌ ಬಳಕೆದಾರರು ಈಗಿನಿಂದಲೇ ಜಿಯೋಗಿಂತಲೂ 4 ರೂಪಾಯಿ ಕಡಿಮೆ ನೀಡಿ ಸೇವೆ ಪಡೆಯಬಹುದು.

 ರೂ.345 ಪ್ಯಾಕ್‌

ರೂ.345 ಪ್ಯಾಕ್‌

ಏರ್‌ಟೆಲ್‌ನ ಈ ಪ್ಯಾಕ್ ಅನ್‌ಲಿಮಿಟೆಡ್ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳನ್ನು ಭಾರತದಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಕರೆ ಮಾಡಲು ಅವಕಾಶ ನೀಡುವುದಲ್ಲದೇ ಜೊತೆಗೆ 1GB 4G ಡೇಟಾ ಆಫರ್ ಮಾಡುತ್ತದೆ. ರೂ.145 ಪ್ಯಾಕ್‌ ರೀತಿಯಲ್ಲಿಯೇ ಏರ್‌ಟೆಲ್‌ನ ರೂ.345 ಪ್ಯಾಕ್‌ ಬೇಸಿಕ್ ಮೊಬೈಲ್ ಬಳಕೆದಾರರಿಗೆ ಹೆಚ್ಚುವರಿ 50MB ಡೇಟಾ ನೀಡುತ್ತದೆ. ಏರ್‌ಟೆಲ್‌ನ ಈ ಪ್ಯಾಕ್‌ ಸಹ 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೋಮಿಂಗ್ ದರಗಳು

ರೋಮಿಂಗ್ ದರಗಳು

ಏರ್‌ಟೆಲ್‌ನ ಮೇಲಿನ ಎರಡು ಪ್ಲಾನ್‌ಗಳಲ್ಲಿ ಯಾವ ರೀತಿ ರೋಮಿಂಗ್ ಪ್ಲಾನ್‌ ಸಿಗಲಿದೆ ಎಂಬುದನ್ನು ತಿಳಿಯಬೇಕೆ?. ಏರ್‌ಟೆಲ್‌ ಈ ಎರಡು ಪ್ಯಾಕ್‌ಗಳಲ್ಲಿಯೂ ರೋಮಿಂಗ್‌ ಕರೆಗಳು ಉಚಿತವಾಗಿರುವುದಿಲ್ಲ. ಕರೆ ದರ ಅಪ್ಲೇ ಆಗುತ್ತದೆ.

ಇತ್ತೀಚೆಗಿನ ಬೆಸ್ಟ್‌ ಆಫರ್ ?

ಇತ್ತೀಚೆಗಿನ ಬೆಸ್ಟ್‌ ಆಫರ್ ?

ಇತ್ತೀಚೆಗೆ ರಿಲಾಯನ್ಸ್ ಕಂಮ್ಯೂನಿಕೇಷನ್ ರೂ.149 ರ ಪ್ಲಾನ್ ಅನ್ನು ಪ್ರಕಟಣೆ ಮಾಡಿತ್ತು. ಈ ಪ್ಲಾನ್ ಸಹ ಅನ್‌ಲಿಮಿಟೆಡ್ ಕರೆಯನ್ನು ದೇಶದಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ನಿರ್ವಹಿಸಲು ಅವಕಾಶ ನೀಡಿತ್ತು. ಬಿಎಸ್‌ಎನ್‌ಎಲ್‌ ಕೂಡ ಅನ್‌ಲಿಮಿಟೆಡ್ ಉಚಿತ ಕರೆ ನೀಡುವ ಅತೀ ಕಡಿಮೆ ಬೆಲೆಯ ಪ್ಯಾಕ್‌ಗಳನ್ನು ಪ್ರಕಟಿಸುವ ಬಗ್ಗೆ ಹೇಳಿದೆ.

ಏರ್‌ಟೆಲ್‌

ಏರ್‌ಟೆಲ್‌

ಭಾರತದ ವಿಶಾಲ ನೆಟ್‌ವರ್ಕ್ ಟೆಲಿಕಾಂ ಆಪರೇಟರ್ ಏರ್‌ಟೆಲ್ ಈ ಮೇಲಿನ ಪ್ಲಾನ್‌ ಅನ್ನು ಇಂದು ಪ್ರಕಟಣೆ ಮಾಡಿದೆ. ಶೀಘ್ರದಲ್ಲಿ ಇತರೆ ಟೆಲಿಕಾಂ ಆಪರೇಟರ್‌ಗಳು ಇಂತಹ ಸಮಾನ ಪ್ಲಾನ್‌ಗಳನ್ನು ಪ್ರಕಟಗೊಳಿಸುವ ನಿರೀಕ್ಷೆ ಇದೆ. ಮಾಹಿತಿಗಾಗಿ ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Airtel announces unlimited free calling across India; announces 2 new packs. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X