IMC 2023: ಏರ್‌ಟೆಲ್ ನಡೆಗೆ ಜಿಯೋ ಕಂಗಾಲು! ಏನಿದು ಒನ್ ವೆಬ್ ಸ್ಯಾಟಲೈಟ್ ಸರ್ವಿಸಸ್!
ದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯನ್ ಮೊಬೈಲ್ ಕಾಂಗ್ರೆಸ್ 2023 ಈವೆಂಟ್‌ನಲ್ಲಿ ಏರ್‌ಟೆಲ್ ಮಹತ್ವದ ಘೋಷಣೆ ಮಾಡಿದೆ. ದೇಶದಲ್ಲಿ ತನ್ನ 5G ನೆಟ್‌ವರ್ಕ್ ವಿಸ್ತರಣೆಯ ಬಗ್ಗೆ ಮಹತ್ವದ ವಿಚಾರಗಳನ್ನು ಬಾರ್ತಿ ಎಂಟರ್‌ಪ್ರೈಸಸ್ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ಒನ್ ವೆಬ್ ಸ್ಯಾಟಲೈಟ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಹೌದು, ಇಂಡಿಯನ್ ಮೊಬೈಲ್ ಕಾಂಗ್ರೆಸ್ 2023 ಈವೆಂಟ್‌ನಲ್ಲಿ ಏರ್‌ಟೆಲ್ ಟೆಲಿಕಾಂ ಒನ್ ವೆಬ್ ಸ್ಯಾಟಲೈಟ್ ಬಗ್ಗೆ ಘೋಷಣೆ ಮಾಡಿದೆ. ಈ ಮೂಲಕ ಭಾರತದಲ್ಲಿ 5G ಕ್ರಾಂತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಸೂಚನೆಯನ್ನು ಏರ್‌ಟೆಲ್ ನೀಡಿದೆ. ಅಲ್ಲದೆ ಭಾರತಿ ಏರ್‌ಟೆಲ್ ಮಾರ್ಚ್ 2024 ರ ವೇಳೆಗೆ ತನ್ನ 5G ನೆಟ್‌ವರ್ಕ್‌ನೊಂದಿಗೆ ಇಡೀ ಭಾರತವನ್ನು ಆವರಿಸಲಿದೆ ಎಂದು ಹೇಳಿದೆ. ಅಷ್ಟಕ್ಕೂ ಒನ್ ವೆಬ್ ಸ್ಯಾಟಲೈಟ್ ಅಂದ್ರೆ ಏನು? ಇದರಿಂದಾಗುವ ಲಾಭವೇನು? ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್ ಟೆಲಿಕಾಂ ಭಾರತದ ಟೆಲಿಕಾಂ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದೆ ಎಂದು ಮಿತ್ತಲ್ ಹೇಳಿದ್ದಾರೆ. ಅಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದ ದೃಷ್ಟಿಯನ್ನು ಪೂರೈಸಲು ಕಂಪನಿಯು ತನ್ನ ಬೆಂಬಲವನ್ನು ಮುಂದುವರೆಸಿದೆ ಎಂದಿದ್ದಾರೆ. ಇದಲ್ಲದೆ ದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳನ್ನು ಸಂಪರ್ಕಿಸಲು ಒನ್‌ವೆಬ್ ಸ್ಯಾಟ್‌ಲೈಟ್ ಅನ್ನು ಅಳವಡಿಸಿರುವುದಾಗಿ ಏರ್‌ಟೆಲ್ ಹೇಳಿಕೊಂಡಿದೆ.
ಇದಲ್ಲದೆ ಏರ್‌ಟೆಲ್ ಟೆಲಿಕಾಂ ಮಾರ್ಚ್ 2024 ರ ವೇಳೆಗೆ ಇಡೀ ದೇಶದಲ್ಲಿ 5G ಅನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ಏರ್‌ಟೆಲ್ ಈಗಾಗಲೇ ತನ್ನ 5G ಸೇವೆಗಳನ್ನು ಭಾರತದಾದ್ಯಂತ 5,000 ಪಟ್ಟಣಗಳು ಮತ್ತು ಸುಮಾರು 20,000 ಹಳ್ಳಿಗಳಲ್ಲಿ ಜಾರಿಗೆ ತಂದಿರುವುದಾಗಿಯು ಹೇಳಿಕೊಂಡಿದೆ. ಇನ್ನು ಭಾರತದಲ್ಲಿ 5G ನೆಟ್‌ವರ್ಕ್ ಅನ್ನು ವೇಗವಾಗಿ ಪಸರಿಸುವಲ್ಲಿ ಏರ್‌ಟೆಲ್ ಕಂಪನಿಯು ವೇಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.

ಬರಲಿದೆ OneWeb ಸ್ಯಾಟ್‌ಲೈಟ್ ಕಮ್ಯೂನಿಕೇನ್ ಟೆಕ್ನಾಲಜಿ
ಇನ್ನು ದೇಶದಾದ್ಯಂತ ಎಲ್ಲಾ ಗ್ರಾಮಗಳನ್ನು ಸಂಪರ್ಕದೊಂದಿಗೆ ಒಳಗೊಳ್ಳುವ ಸಲುವಾಗಿ, ಯುಟೆಲ್‌ಸ್ಯಾಟ್ ಒನ್‌ವೆಬ್ ಸಮೂಹ ಅನುಷ್ಠಾನ ಮಾಡುವ ಬಗ್ಗೆ ಏರ್‌ಟೆಲ್ ಹೇಳಿಕೊಂಡಿದೆ. ಅಲ್ಲದೆ ಇದರಲ್ಲಿ ಭಾರ್ತಿ ಏರ್‌ಟೆಲ್ ಅತಿದೊಡ್ಡ ಪಾಲನ್ನು ಹೊಂದಿದೆ. ಇದಕ್ಕಾಗಿ ಕಳೆದ ವರ್ಷ, ಏರ್‌ಟೆಲ್ 72 ಉಪಗ್ರಹಗಳನ್ನು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೊಂದಿಗೆ ಸಹಕರಿಸಿದೆ. ಇದು ಒನ್‌ವೆಬ್ ಉಪಗ್ರಹ ಸಂವಹನವನ್ನು ಬಳಸುವುದಕ್ಕೆ ನಿರ್ಣಾಯಕವಾಗಿದೆ.
ಇನ್ನು ಒನ್‌ವೆಬ್ ಸಮೂಹವ ನವೆಂಬರ್ 2023 ರಿಂದ ಕಷ್ಟಕರ ಪ್ರದೇಶಗಳಲ್ಲಿಯೂ ಸಹ 5G ನೆಟ್‌ವರ್ಕ್ ಕನೆಕ್ಟಿವಿಟಿಯನ್ನು ಬಳಸುವುದಕ್ಕೆ ಅನುಮತಿಸುತ್ತದೆ. ಈ ಉದ್ದೇಶಕ್ಕಾಗಿ ಏರ್‌ಟೆಲ್ ಗುಜರಾತ್‌ನ ಮೆಹ್ಸಾನಾದಲ್ಲಿ ಸ್ಯಾಟಲೈಟ್ ಗ್ರೌಂಡ್ ಸ್ಟೇಷನ್ ಅನ್ನು ಸ್ಥಾಪಿಸಿದೆ.

ಏನಿದು OneWeb Constellation?
ಇದು Eutelsat OneWeb ಯುಟೆಲ್‌ಸ್ಯಾಟ್ ಗ್ರೂಪ್‌ನ ಭಾಗವಾಗಿದೆ. ಇದರಿಂದ ದೂರದ ಪ್ರದೇಶಗಳಲ್ಲಿಯು ಸಹ ಹೆಚ್ಚಿನ ವೇಗದ, ಲೋ ಲೇಟಿನ್ಸಿಯ ನೆಟ್‌ವರ್ಕ್ ಕನೆಕ್ಟಿವಿಟಿಯನ್ನು ನೀಡಲಿದೆ. ಭಾರ್ತಿ ಏರ್‌ಟೆಲ್ ಯುಟೆಲ್‌ಸ್ಯಾಟ್ ಒನ್‌ವೆಬ್‌ನ ಅತಿದೊಡ್ಡ ಷೇರುದಾರ ಆಗಿ ಗುರುತಿಸಿಕೊಂಡಿದೆ. ಇದರಿಂದ OneWeb Constellation ಏರ್‌ಟೆಲ್ 5G ನೆಟ್‌ವರ್ಕ್ ವೇಗವಾಗಿ ಹರಡುವುದಕ್ಕೆ ಸಹಕಾರಿಯಾಗಲಿದೆ.
ಯುಟೆಲ್‌ಸ್ಯಾಟ್ ಒನ್‌ವೆಬ್‌ನ ವೆಬ್‌ಸೈಟ್ ಹೇಳಿಕೊಂಡಿರುವಂತೆ ಇದು 36 ಭೂಸ್ಥಿರ ಉಪಗ್ರಹಗಳ ಫ್ಲೀಟ್ ಮತ್ತು 600 ಕ್ಕೂ ಹೆಚ್ಚು ಉಪಗ್ರಹಗಳ ಲೋ ಅರ್ಥ್ ಆರ್ಬಿಟ್ ಅರ್ಥ್ (LEO) ಸಮೂಹವನ್ನು ಹೊಂದಿದೆ. ಇದು ಮೊಬೈಲ್ ಕನೆಕ್ಟಿವಿಟಿ, ಫಿಕ್ಸೆಡ್ ಕನೆಕ್ಟಿವಿಟಿ ಮತ್ತು ಸರ್ಕಾರಿ ಸೇವೆಗಳ ಉನ್ನತ-ಬೆಳವಣಿಗೆಯ ಸಂಪರ್ಕ ಮಾರುಕಟ್ಟೆಗಳ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡಲಿದೆ.


Click it and Unblock the Notifications








