ಏರ್‌ಟೆಲ್‌ನ ಈ ಪ್ಲಾನ್‌ ರೀಚಾರ್ಜ್‌ ಮಾಡಿಸಿದ್ರೆ ಸಿಗಲಿದೆ ಉಚಿತ ಡಿಟಿಎಚ್‌ ಸೇವೆ!

|

ಟೆಲಿಕಾಂ ವಲಯದಲ್ಲಿ ಖಾಸಗಿ ಕಂಪೆನಿಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಗ್ರಾಹಕರನ್ನು ತಮ್ಮತ್ತ ಸೆಳೆಯಲು ಕಡಿಮೆ ಬೆಲೆಯಲ್ಲಿ ಅಧಿಕ ಡೇಟಾ ನೀಡುವ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿವೆ. ಅಲ್ಲದೆ ಡಿಟಿಎಚ್‌ ಸೇವೆ ನೀಡುವಲ್ಲಿಯೂ ಸೈ ಎನಿಸಿಕೊಂಡಿವೆ. ಈ ಪೈಕಿ ಏರ್‌ಟೆಲ್‌ ತನ್ನ ಬಳಕೆದಾರರಿಗೆ ಈ ವರ್ಷದ ಆರಂಭದಲ್ಲಿ ಏರ್‌ಟೆಲ್‌ ಬ್ಲ್ಯಾಕ್‌ ಪ್ಲಾನ್‌ ಲಾಂಚ್‌ ಮಾಡಿತ್ತು. ಈ ಪ್ಲಾನ್‌ ಆಲ್ ಇನ್ ಒನ್ ಆಗಿದ್ದು, ಒಂದೇ ಬಿಲ್‌ನಲ್ಲಿ ಫೈಬರ್, ಡಿಟಿಎಚ್ ಮತ್ತು ಮೊಬೈಲ್ ಸೇವೆಗಳನ್ನು ನೀಡಲಿದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ತನ್ನ ಏರ್‌ಟೆಲ್‌ ಬ್ಲ್ಯಾಕ್‌ ಪ್ಲಾನ್‌ನಲ್ಲಿ ಎಲ್ಲಾ ಸೇವೆಗಳನ್ನು ಒಂದೇ ಬಿಲ್‌ನಲ್ಲಿ ನೀಡಲಿದೆ. ಇದೀಗ ಏರ್‌ಟೆಲ್‌ ತನ್ನ ಏರ್‌ಟೆಲ್‌ ಬ್ಲ್ಯಾಕ್‌ ಪ್ಲಾನ್‌ ಅನ್ನು ಹೆಚ್ಚಿನ ಗ್ರಾಹಕರು ಬಳಸುವುದಕ್ಕೆ ಪ್ರೇರೆಪಿಸಲು ಹೊಸ ಹೆಜ್ಜೆಯನ್ನು ಇಟ್ಟಿದೆ. ಇದಕ್ಕೆ ಅನುಗುಣವಾಗಿ ಹೊಸದಾಗಿ ಏರ್‌ಟೆಲ್‌ ಬ್ಲಾಕ್‌ ಯೋಜನೆಗೆ ಚಂದದಾರಾಗುವವರಿಗೆ ಉಚಿತವಾಗಿ ಡಿಟಿಎಚ್‌ ಸೇವೆ ನೀಡಲು ಮುಂದಾಗಿದೆ. ಹಾಗಾದ್ರೆ ಏರ್‌ಟೆಲ್‌ ಬ್ಲ್ಯಾಕ್‌ ಪ್ಲಾನ್‌ನಲ್ಲಿ ಉಚಿತವಾಗಿ ಡಿಟಿಎಚ್‌ ಸೇವೆ ಪಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌

ಏರ್‌ಟೆಲ್‌ ತನ್ನ ಏರ್‌ಟೆಲ್‌ ಬ್ಲ್ಯಾಕ್‌ ಪ್ಲಾನ್‌ಗೆ ಚಂದದಾರರಿಗೆ 465ರೂ, ಮೌಲ್ಯದ ಡಿಟಿಎಚ್‌ ಸೇವೆಯನ್ನು ಉಚಿತವಾಗಿ ನೀಡಲು ಮುಂದಾಗಿದೆ. ಏರ್‌ಟೆಲ್‌ನ ವೆಬ್‌ಸೈಟ್ ಈಗಾಗಲೇ ಅಸ್ತಿತ್ವದಲ್ಲಿರುವ ಪ್ಲಾನ್‌ಗಳಲ್ಲಿ ಯಾವುದೇ ಪ್ಲಾನ್‌ ಅನ್ನು ಬಳಕೆದಾರರು ಪಡೆದುಕೊಂಡರೆ 30 ದಿನಗಳ ಉಚಿತ ಸಮಯವನ್ನು ಸಹ ನೀಡಲಾಗುತ್ತದೆ ಎಂದು ಹೇಳಿಕೊಂಡಿದೆ. ಇನ್ನು ಈ ಪ್ಲಾನ್‌ಗಳು 998ರೂ, ಗಳಿಂದ 2099ರೂ, ವರೆಗೆ ಇರುತ್ತದೆ. ಏರ್‌ಟೆಲ್‌ ಬಳಕೆದಾರರು ಈ ಸೇವೆ ಪಡೆದುಕೊಳ್ಳಬೇಕಾದರೆ ತಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನಮೂದಿಸುವ ಮೂಲಕ ಉಚಿತ ಸೇವೆ ಪಡೆದುಕೊಳ್ಳಲು ಅರ್ಹರಾಗಿದ್ದಾರೆಯೇ ಎಂದು ಏರ್‌ಟೆಲ್ ವೆಬ್‌ಸೈಟ್‌ನಲ್ಲಿ ಚೆಕ್‌ ಮಾಡಬಹುದಾಗಿದೆ.

ಏರ್‌ಟೆಲ್‌

ಇನ್ನು ಈ ಏರ್‌ಟೆಲ್‌ ಬ್ಲ್ಯಾಕ್‌ ಪ್ಲಾನ್‌ ತನ್ನ ಬಳಕೆದಾರರಿಗೆ ಎಲ್ಲಾ ಬಿಲ್‌ ಪಾವತಿ ದಿನಾಂಕಗಳನ್ನು ಮ್ಯಾನೇಜ್‌ ಮಾಡಲಿದೆ. ಇದಕ್ಕಾಗಿ ಕಸ್ಟಮರ್‌ ಕೇರ್‌ IVR ಗಳನ್ನು ನ್ಯಾವಿಗೇಟ್ ಮಾಡಲು ಅವಕಾಶ ನೀಡಲಿದೆ. ಕಸ್ಟಮರ್‌ ಕೇರ್‌ಗೆ ಕರೆ ಮಾಡಿದ 60 ಸೆಕೆಂಡುಗಳಲ್ಲಿ ಚಾರ್ಜ್ ಸರ್ವಿಸ್ ವಿಸಿಟ್ಸ್ ಮಾಡಲು ಅನುವು ಮಾಡಿಕೊಡಲಿದೆ. ಇನ್ನು ಏರ್‌ಟೆಲ್‌, ಬಿಲ್‌ ಪಾವತಿಸದ ಸಮಯದಲ್ಲಿ ಟಿವಿ ಸೇವೆಯನ್ನು ಕಡಿತಗೊಳಿಸುವುದಿಲ್ಲ ಮತ್ತು ಗ್ರಾಹಕರಿಗೆ ತಡೆರಹಿತ ಟಿವಿ ವೀಕ್ಷಣೆಯನ್ನು ಆನಂದಿಸಲು ಅವಕಾಶ ಮಾಡಿಕೊಡುತ್ತದೆ, ಏಕೆಂದರೆ ಡಿಟಿಎಚ್‌ ಅನ್ನು ಬಿಲ್‌ ಸೇವೆಯಾಗಿ ನೀಡಲಾಗುತ್ತದೆ. ಏರ್‌ಟೆಲ್ ಬ್ಲಾಕ್ ಬಳಕೆದಾರರಿಗೆ ಪ್ರತಿ ಸೇವೆಗೆ ಸೂಕ್ತವಾದ ಯೋಜನೆಗಳನ್ನು ಕಸ್ಟಮೈಸ್ ಮಾಡಲಿದೆ ನಂತರ ಅವುಗಳನ್ನು ಒಂದೇ ಬಿಲ್‌ನಲ್ಲಿ ನೀಡಲಿದೆ.

ಏರ್‌ಟೆಲ್

ಈ ಸೇವೆಯಲ್ಲಿ ಬಳಕೆದಾರರು 2 ಅಥವಾ ಅದಕ್ಕಿಂತ ಹೆಚ್ಚಿನ ಏರ್‌ಟೆಲ್ ಸೇವೆಗಳನ್ನು ಒಟ್ಟುಗೂಡಿಸಬಹುದು. ಅಂದರೆ ಫೈಬರ್, ಡಿಟಿಎಚ್, ಮೊಬೈಲ್ ಪ್ಲಾನ್‌ ಎಲ್ಲವನ್ನು ಏರ್‌ಟೆಲ್ ಬ್ಲ್ಯಾಕ್ ಪ್ಲಾನ್‌ ಮೂಲಕ ಒಂದೇ ಬಿಲ್‌ನಲ್ಲಿ ಪಡೆದುಕೊಳ್ಳಬಹುದು. ಇದರಿಂದ ನೀವು ಪಡೆದುಕೊಳ್ಳುವ ಸೇವೆಗಳಿಗೆ ಪ್ರತ್ಯೇಕವಾಗಿ ಬಿಲ್‌ ಕಟ್ಟಬೇಕಾದ ಅನಿವಾರ್ಯತೆ ಬರುವುದಿಲ್ಲ. ಇನ್ನು ಏರ್‌ಟೆಲ್ ಕೂಡ ಈವರೆಗೆ ವೆಬ್‌ಸೈಟ್‌ನಲ್ಲಿ ನಾಲ್ಕು ಪ್ಲಾನ್‌ಗಳನ್ನು ಪಟ್ಟಿ ಮಾಡಿದೆ. ಬಳಕೆದಾರರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಪ್ಲಾನ್‌ಗಳನ್ನು ಕಸ್ಟಮೈಸ್ ಮಾಡಬಹುದಾಗಿದೆ.

Best Mobiles in India

English summary
Airtel is rolling out a new plan to encourage more customers to subscribe to Airtel Black.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X