23 ರೂಪಾಯಿಗೆ 28 ದಿನಗಳ ಅವಧಿ ಹೆಚ್ಚಿಸಿಕೊಳ್ಳಲು ಏರ್‌ಟೆಲ್ ಆಫರ್!
ಏರ್ ಟೆಲ್ 23 ರುಪಾಯಿ ರೀಚಾರ್ಜ್ ಪ್ಯಾಕ್ ನ್ನು ಡಿಸೈನ್ ಮಾಡಿ ಬಿಡುಗಡೆಗೊಳಿಸಿದ್ದು ಇದು ಪ್ರೀಪೇಯ್ಡ್ ಚಂದಾದಾರರ ವ್ಯಾಲಿಡಿಟಿಯನ್ನು 28 ದಿನಗಳ ಅವಧಿಗೆ ಮುಂದೂಡಿಕೊಳ್ಳಲು ತಯಾರಿಸಿರುವ ಹೊಸ ಪ್ಯಾಕ್ ಆಗಿದೆ. ಈ ಹೊಸ ರೀಚಾರ್ಜ್ ಏರ್ ಟೆಲ್ ನ ಸ್ಮಾರ್ಟ್ ರೀಚಾರ್ಜ್ ಫೋರ್ಟ್ ಫೋಲಿಯೋದಲ್ಲಿ ಬರುತ್ತದೆ ಮತ್ತು ಇದನ್ನು ಪ್ಲಾನ್ ವೋಚರ್ 23 ಎಂದು ಕರೆಯಲಾಗಿದೆ.

ಡಾಟಾ ಬೆನಿಫಿಟ್ ಇಲ್ಲದ ಪ್ಲಾನ್:
ಸ್ಮಾರ್ಟ್ ರೀಚಾರ್ಜ್ ಕೆಟಗರಿಯಲ್ಲಿರುವ ಇತರೆ ಆಯ್ಕೆಗಳಂತೆ ರುಪಾಯಿ 23 ರ ರೀಚಾರ್ಜ್ ಯಾವುದೇ ರೀತಿಯ ಡಾಟಾ ಅಥವಾ ವಾಯ್ಸ್ ಬೆನಿಫಿಟ್ ಗಳನ್ನು ನೀಡುವುದಿಲ್ಲ ಆದರೆ ಅದರ ಬದಲಾಗಿ ಚಂದಾದಾರರಿಗೆ ತಮ್ಮ ಪ್ರೀಪೇಯ್ಡ್ ಅಕೌಂಟಿನ ಅವಧಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ನೆರವಾಗುತ್ತದೆ.

ವಾಯ್ಸ್ ಕರೆಗಳಿಗೆ ಪ್ರತಿ ಸೆಕೆಂಡ್ ಗೆ 2.5ಪೈಸೆ:
ಹೊಸ ರುಪಾಯಿ 23 ರ ರೀಚಾರ್ಜ್ ಆಯ್ಕೆಯಲ್ಲಿ ಸ್ಥಳೀಯ ಮತ್ತು ಎಸ್ ಟಿಡಿ ವಾಯ್ಸ್ ಕರೆಗಳಿಗೆ 2.5 ಪೈಸೆ ಪ್ರತಿ ಸೆಕೆಂಡ್ ಗೆ ಮತ್ತು ಸ್ಥಳೀಯ ಎಸ್ಎಂಎಸ್ ಗಳಿಗೆ ಒಂದು ರುಪಾಯಿ ಮತ್ತು ರಾಷ್ಟ್ರೀಯ ಎಸ್ಎಂಎಸ್ ಗಳಿಗೆ 1.5 ರುಪಾಯಿ ನಿಗದಿಸಲಾಗಿದೆ. ಇದೆಲ್ಲವೂ ಕೂಡ 28 ದಿನಗಳ ಅವಧಿಗೆ ಲಭ್ಯವಾಗುತ್ತದೆ.

ಕೇವಲ ಅವಧಿ ಹೆಚ್ಚಿಸಿಕೊಳ್ಳಲು ಇರುವ ಹೊಸ ಪ್ಯಾಕ್:
ಮುಖ್ಯವಾಗಿ ಈ ರೀಚಾರ್ಜ್ ಪ್ಯಾಕ್ ನಲ್ಲಿ ಯಾವುದೇ ಡಾಟಾ ಬೆನಿಫಿಟ್ ಇರುವುದಿಲ್ಲ. ಅದಕ್ಕಾಗಿ ನೀವು ಸಪರೇಟ್ ಡಾಟಾ ಪ್ಯಾಕ್ ನ್ನು ಖರೀದಿಸಬೇಕು ಅಥವಾ ನಿಮ್ಮ ಪ್ರಮುಖ ಅಕೌಂಟ್ ನಲ್ಲಿ ಬ್ಯಾಲೆನ್ಸ್ ನ್ನು ಡಾಟಾ ಆಕ್ಸಿಸ್ ಗಾಗಿ ಹೊಂದಿರಬೇಕಾಗುತ್ತದೆ. ಅಷ್ಟೇ ಅಲ್ಲ ಯಾವುದೇ ರೀತಿಯ ಟಾಕ್ ಟೈಮ್ ಕೂಡ ನಿಮಗೆ ಇದರಲ್ಲಿ ಲಭ್ಯವಾಗುವುದಿಲ್ಲ. ಕೇವಲ ಅವಧಿಯನ್ನು ಹೆಚ್ಚಿಸಿಕೊಳ್ಳಬಹುದೇ ಹೊರತು ಮೈನ್ ಬ್ಯಾಲೆನ್ಸ್ ಗಾಗಿ ನೀವು ಹೆಚ್ಚಿನ ಮೊತ್ತವನ್ನು ಸಪರೇಟ್ ಆಗಿ ರೀಚಾರ್ಜ್ ಮಾಡಬೇಕಾಗುತ್ತದೆ.

ಎಲ್ಲಿ ಖರೀದಿಸಬಹುದು?
ಏರ್ ಟೆಲ್. ಇನ್ ಅಥವಾ ಮೈ ಏರ್ ಟೆಲ್ ಆಪ್ ಮೂಲಕ ನೀವು ಈ 23 ರುಪಾಯಿಯ ರೀಚಾರ್ಜ್ ಪ್ಯಾಕ್ ನ್ನು ಖರೀದಿ ಮಾಡಬಹುದು. ಟೆಲಿಕಾಂಟಾಕ್ ಫಸ್ಟ್ ಈ ಹೊಸ ರೀಚಾರ್ಜ್ ಆಯ್ಕೆಯ ಬಗ್ಗೆ ಮೊದಲು ವರದಿ ಮಾಡಿದೆ. ಇದಕ್ಕೂ ಮುನ್ನ ಹೊಸ ರೀಚಾರ್ಜ್ ಗೆ ಸ್ಮಾರ್ಟ್ ರೀಚಾರ್ಜ್ ರೇಂಜ್ ನಲ್ಲಿ 25 ರುಪಾಯಿಯ ರೀಚಾರ್ಜ್ ಆಯ್ಕೆಯನ್ನು ಕೂಡ ಏರ್ ಟೆಲ್ ನೀಡಿತ್ತು.

ಗ್ರಾಹಕರಿಗಾಗಿ ಇನ್ನೊಂದಿಷ್ಟು ಆಯ್ಕೆಗಳು:
ಒಂದು ವೇಳೆ ನೀವು 23 ರುಪಾಯಿಯ ರೀಚಾರ್ಜ್ ಆಯ್ಕೆಯನ್ನು ಪಡೆಯಲು ಇಚ್ಛೆಪಡದೇ ಇದ್ದಲ್ಲಿ ನಿಮಗೆ ಏರ್ ಟೆಲ್ ಇನ್ನೊಂದು ಆಯ್ಕೆಯನ್ನು ನೀಡುತ್ತದೆ ಅದುವೇ ರುಪಾಯಿ 35 ರ ರೀಚಾರ್ಜ್. ಇದರಲ್ಲಿ 26.66 ರುಪಾಯಿ ಟಾಕ್ ಟೈಮ್ ಜೊತೆಗೆ 100ಎಂಬಿ ಡಾಟಾ 28 ದಿನಗಳ ಅವಧಿಗೆ ಲಭ್ಯವಾಗುತ್ತದೆ. ಇದು ಕೂಡ ಸ್ಮಾರ್ಟ್ ರೀಚಾರ್ಜ್ ರೇಂಜ್ ನಲ್ಲಿಯೇ ಇದೆ.
ಈ ಲೈನ್ ಅಪ್ ರುಪಾಯಿ 245 ರ ರೀಚಾರ್ಜ್ ಆಯ್ಕೆಯವರೆಗೆ ತಲುಪುತ್ತದೆ. ರುಪಾಯಿ 245 ರ ರೀಚಾರ್ಜ್ ಆಯ್ಕೆಯು 245 ರುಪಾಯಿಯ ಟಾಕ್ ಟೈಮ್, ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳು ಮತ್ತು ಲ್ಯಾಂಡ್ ಲೈನ್ ವಾಯ್ಸ್ ಕರೆಗಳು 30 ಪೈಸೆ ಪ್ರತಿ ನಿಮಿಷಕ್ಕೆ ನೀಡುತ್ತದೆ ಮತ್ತು 2ಜಿಬಿ ಡಾಟಾವನ್ನು 84 ದಿನಗಳ ಅವಧಿಗೆ ನೀಡುತ್ತದೆ.

ಕೆಲವೇ ಸರ್ಕಲ್ ನಲ್ಲಿ ಲಭ್ಯ:
ಆದರೆ ಈ ಸ್ಮಾರ್ಟ್ ರೀಚಾರ್ಜ್ ಆಯ್ಕೆಯು ಕೆಲವು ಆಯ್ದ ಸರ್ಕಲ್ ಗಳಲ್ಲಿ ಮಾತ್ರವೇ ಲಭ್ಯವಿದೆ. ಆದರೆ ಮುಂದಿನ ದಿನಗಳಲ್ಲಿ ಏರ್ ಟೆಲ್ 23 ರುಪಾಯಿ ಈ ಹೊಸ ರೀಚಾರ್ಜ್ ಆಯ್ಕೆಯನ್ನು ಎಲ್ಲಾ ಸರ್ಕಲ್ ಗಳಲ್ಲಿಯೂ ತರಲಿದೆ ಎನ್ನಲಾಗಿದೆ.
ಫೆಬ್ರವರಿಯಲ್ಲಿ ಏರ್ ಟೆಲ್ 23 ರುಪಾಯಿಯ ರೀಚಾರ್ಜ್ ಆಯ್ಕೆಯನ್ನು ಬಿಡುಗಡೆಗೊಳಿಸಿತ್ತು ಮತ್ತು ಅದರಲ್ಲಿ ಅನಿಯಮಿತ ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳು, ಜೊತೆಗೆ ರೋಮಿಂಗ್ ಕರೆಗಳು, 200ಎಂಬಿ ಡಾಟಾ, 100ಎಸ್ಎಂಎಸ್ ಉಚಿತ ಪ್ರತಿದಿನ ವನ್ನು ಎರಡು ದಿನಗಳ ವ್ಯಾಲಿಡಿಟಿಗಾಗಿ ಬಿಡುಗಡೆಗೊಳಿಸಿತ್ತು. ಕಂಪೆನಿಯು 23 ರುಪಾಯಿ ರೀಚಾರ್ಜ್ ನ 9 ಪ್ಯಾಕ್ ಗಳನ್ನು ಇದೇ ರೀತಿಯ ಬೆನಿಫಿಟ್ ಗಳಲ್ಲಿ ಆದರೆ 100ಎಂಬಿ ಡಾಟ್ ಮತ್ತು ಒಂದು ದಿನದ ಅವಧಿಯನ್ನು ಹೊರತುಪಡಿಸಿ ನೀಡಿತ್ತು. ಇದೀಗ ಹೊಸ ಪ್ಲಾನ್ ನ್ನು ಬಿಡುಗಡೆಗೊಳಿಸಿರುವ ಏರ್ ಟೆಲ್ ಮಾರ್ಕೆಟಿಂಗ್ ಗಾಗಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತದೆ ಎಂಬುದು ಮಾತ್ರ ಸುಳ್ಳಲ್ಲ.


Click it and Unblock the Notifications








